Homeಮುಖಪುಟನೀತಿ ಸಂಹಿತೆ ಜಾರಿಯಾಗಿದ್ದರೂ ರೈಲ್ವೇ ನಿಲ್ಧಾಣದಲ್ಲಿ ರಾರಾಜಿಸುತ್ತಿರುವ ಮೋದಿ ಪೋಸ್ಟರ್‌

ನೀತಿ ಸಂಹಿತೆ ಜಾರಿಯಾಗಿದ್ದರೂ ರೈಲ್ವೇ ನಿಲ್ಧಾಣದಲ್ಲಿ ರಾರಾಜಿಸುತ್ತಿರುವ ಮೋದಿ ಪೋಸ್ಟರ್‌

- Advertisement -
- Advertisement -

ನೀತಿ ಸಂಹಿತೆ ಜಾರಿಯಾಗಿ 48 ಗಂಟೆಗಳು ಕಳೆದರೂ ಪುಣೆ ರೈಲ್ವೇ ನಿಲ್ಧಾಣದಿಂದ ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್‌ಗಳನ್ನು ತೆಗೆದುಹಾಕಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮಾದರಿ ನೀತಿ ಸಂಹಿತೆಯ 48 ಗಂಟೆಗಳ ನಂತರವೂ ಪುಣೆ ರೈಲ್ವೆ ನಿಲ್ದಾಣವು ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್‌ಗಳನ್ನು ತೆಗೆದುಹಾಕಿಲ್ಲ. ಪುಣೆ ನಿಲ್ದಾಣದಲ್ಲಿನ ಪೋಸ್ಟರ್‌ಗಳಲ್ಲಿ ಒಂದನ್ನು ಕಳೆದ ವರ್ಷ G20 ಕಾರ್ಯಕ್ರಮದ ವೇಳೆ ಹಾಕಲಾಗಿದ್ದು, ಇದು ಮೋದಿಯ ಫೋಟೋವನ್ನು ಒಳಗೊಂಡಿವೆ ಮತ್ತು ಇನ್ನೊಂದು ಮೋದಿಯ ಚಿತ್ರದೊಂದಿಗೆ “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಎಂಬ ಘೋಷ ವಾಕ್ಯವನ್ನು ಒಳಗೊಂಡಿವೆ.

ಮೋದಿ ಅವರ ಫೋಟೋಗಳಿರುವ ಕೆಲವು ಪೋಸ್ಟರ್‌ಗಳು ಮತ್ತು ಸೆಲ್ಫಿ ಪಾಯಿಂಟ್‌ಗಳನ್ನು ತೆಗೆದುಹಾಕಲಾಗಿದೆ ಎಂದು ನಿಲ್ದಾಣದ ಅಧಿಕಾರಿಗಳು ಆ ಬಳಿಕ ತಿಳಿಸಿದ್ದಾರೆ. ಈ ವರದಿಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನಲ್ಲಿ ಮಾ.19ರಂದು ಸಂಜೆ 4.12ಕ್ಕೆ ಪ್ರಕಟಿಸಿದೆ ಮತ್ತು ಮರುದಿನದ ಮುದ್ರಣ ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ.

ನೀತಿ ಸಂಹಿತೆ ಏನು ಹೇಳುತ್ತದೆ?

ಚುನಾವಣೆ ದಿನಾಂಕ ಘೋಷಣೆ ಬಳಿಕ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತದೆ, ಮಾ.16ರಂದು ಚುನಾವಣೆ ಘೋಷಿಸಲಾಗಿದ್ದು, ನೀತಿ ಸಂಹಿತೆ ಜಾರಿ ಬಳಿಕ  ಕೇಂದ್ರ, ರಾಜ್ಯ ಸರ್ಕಾರಗಳು ಹೊಸ ಯೋಜನೆಗಳನ್ನು, ಆರ್ಥಿಕ ಅನುದಾನಗಳನ್ನು ಅಥವಾ ಭರವಸೆಗಳನ್ನು ನೀಡುವಂತಿಲ್ಲ, ಯೋಜನೆಗಳ ಆರಂಭ ಅಥವಾ ಶಂಕುಸ್ಥಾಪನೆ ನೆರವೇರಿಸುವುದಕ್ಕೆ ಜನಪ್ರತಿನಿಧಿಗಳಿಗೆ ಅವಕಾಶವಿರುವುದಿಲ್ಲ. ರಸ್ತೆ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯಗಳು ಸೇರಿದಂತೆ  ಭರವಸೆಗಳನ್ನು ಅಭ್ಯರ್ಥಿಗಳಾಗಲಿ ಸರ್ಕಾರಗಳಾಗಲಿ ನೀಡುವಂತಿಲ್ಲ.

ಆಡಳಿತ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಸರ್ಕಾರಿ ಅಥವಾ ಸಾರ್ವಜನಿಕ ಉದ್ಯಮಗಳಲ್ಲಿ ತಾತ್ಕಾಲಿಕ ನೇಮಕಾತಿಗಳನ್ನು ಮಾಡುವಂತಿಲ್ಲ, ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಜಾರಿಯಾದರೆ, ಮಂತ್ರಿಗಳು ವಿವೇಚನಾ ನಿಧಿಯಿಂದ ಅನುದಾನ ಅಥವಾ ಪಾವತಿಗಳನ್ನು ಮಂಜೂರು ಮಾಡುವಂತಿಲ್ಲ.

ಮಾದರಿ ನೀತಿ ಸಂಹಿತೆಯ ಜಾರಿಯ ನಂತರ, ಸರ್ಕಾರಿ ಅಧಿಕಾರಿಗಳು ಚುನಾವಣಾ ಕಾರ್ಯಗಳಿಗೆ ಸರ್ಕಾರಿ ಸಂಪನ್ಮೂಲಗಳನ್ನು ಬಳಸುವಂತಿಲ್ಲ ಮತ್ತು ಚುನಾವಣಾ ಪ್ರಚಾರಕ್ಕಾಗಿ ಅಧಿಕೃತ ಯಂತ್ರೋಪಕರಣಗಳು ಅಥವಾ ಸಿಬ್ಬಂದಿಯನ್ನು ಬಳಸುವಂತಿಲ್ಲ, ಅಧಿಕೃತ ವಿಮಾನಗಳು, ವಾಹನಗಳು, ಯಂತ್ರೋಪಕರಣಗಳು ಮತ್ತು ಸಿಬ್ಬಂದಿ ಸೇರಿದಂತೆ ಸರ್ಕಾರಿ ಸಾರಿಗೆಯನ್ನು ಆಡಳಿತ ಪಕ್ಷದ ಹಿತಾಸಕ್ತಿಗೆ ಬಳಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪ್ಲೆಕ್ಸ್‌, ಬ್ಯಾನರ್‌ಗಳ ಮೂಲಕ  ಸರ್ಕಾರಿ ಹಣದಲ್ಲಿ ಜಾಹೀರಾತು ನೀಡುವುದು, ಸಾಧನೆಗಳನ್ನು ಬಿಂಬಿಸುವಂತಹ ಲೇಖನಗಳನ್ನು ಪ್ರಕಟಿಸುವಂತಿಲ್ಲ ಎಂದು ಕೂಡ ಚುನಾವಣಾ ನೀತಿ ಸಂಹಿತೆ ಹೇಳುತ್ತದೆ.

ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಪರಸ್ಪರ ದ್ವೇಷವನ್ನು ಉಂಟುಮಾಡುವ, ವಿವಿಧ ಜಾತಿ ಮತ್ತು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ಕೈಗೊಳ್ಳುವಂತಿಲ್ಲ. ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಯಾವುದೇ ವ್ಯಕ್ತಿಯ ಜಮೀನು, ಕಟ್ಟಡವನ್ನು ಅನುಮತಿಯಿಲ್ಲದೇ ಧ್ವಜ, ಬ್ಯಾನರ್‌, ಸೂಚನೆ ಮತ್ತು ಘೋಷಣೆಗಳನ್ನು ಬರೆಯಲು ಅನುಮತಿ ಇರುವುದಿಲ್ಲ.

ಇದನ್ನು ಓದಿ: ಮೋದಿ ರೋಡ್‌ ಶೋ: ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿಯ ನಿರ್ಲಕ್ಷ್ಯ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಜನರು ನಮಗೆ 56% ಮತ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ..?’; ಅಮಿತ್‌ ಶಾ ವಿರುದ್ಧ...

0
'ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಾರಣ ಅವರು ಅಹಂಕಾರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...