Homeಮುಖಪುಟಮುಸ್ಲಿಂ ಯುವಕರ ಮೇಲೆ ಪಾಕ್ ಪರ ಸಂಭ್ರಮಾಚರಣೆ ಆರೋಪ: ಜೈಲು, ದೌರ್ಜನ್ಯದ 6 ವರ್ಷಗಳ ಬಳಿಕ...

ಮುಸ್ಲಿಂ ಯುವಕರ ಮೇಲೆ ಪಾಕ್ ಪರ ಸಂಭ್ರಮಾಚರಣೆ ಆರೋಪ: ಜೈಲು, ದೌರ್ಜನ್ಯದ 6 ವರ್ಷಗಳ ಬಳಿಕ ಕೇಸ್‌ ‘ಕಟ್ಟುಕಥೆ’ ಎಂದು ತೀರ್ಪು ನೀಡಿದ ಕೋರ್ಟ್‌

- Advertisement -
- Advertisement -

ಕ್ರಿಕೆಟ್‌ ಪಂದ್ಯದಲ್ಲಿ ಪಾಕ್‌ ವಿಜಯವನ್ನು ಸಂಭ್ರಮಾಚಣೆ ನಡೆಸಿದ್ದಾರೆ ಎಂದು ಆರೋಪಿಸಿ 17 ಮಂದಿ ಮುಸ್ಲಿಮರ ಮೇಲೆ ಆರೋಪ ಹೊರಿಸಲಾಗಿದ್ದ 6 ವರ್ಷಗಳ ಬಳಿಕ ಮಧ್ಯಪ್ರದೇಶದ ನ್ಯಾಯಾಲಯವು ಇದನ್ನು ಕಟ್ಟುಕಥೆ ಎಂದು ಕರೆದಿದ್ದು, ಈ ಕುರಿತು ಸಾಕ್ಷಿಯನ್ನು ನೀಡಿದ ಹಿಂದೂ ದೂರುದಾರರು ನಮ್ಮನ್ನು ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯಿಸಲಾಗಿತ್ತು ಎಂದು ಹೇಳಿದ್ದಾರೆ.

ಘಟನೆಯಲ್ಲಿ ಬಂಧಿತರು ಅಕ್ಟೋಬರ್ 2023ರಲ್ಲಿ ಬಿಡುಗಡೆಯಾಗಿದ್ದರು , ಪೊಲೀಸ್ ಕಸ್ಟಡಿಯಲ್ಲಿ ತಮ್ಮನ್ನು ಥಳಿಸಲಾಯಿತು ಮತ್ತು ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಕರಣದ ಓರ್ವ ಆರೋಪಿ ಘಟನೆಯಿಂದ ನೊಂದು 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಧ್ಯಪ್ರದೇಶದ ಮೊಹದ್ ಗ್ರಾಮದ ನಿವಾಸಿಗಳು ಈಗ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯುತ್ತಿದ್ದರೆ ವೀಕ್ಷಿಸಲು ಹಿಂದೇಟು ಹಾಕುತ್ತಿದ್ದಾರೆ. 18 ಜೂನ್ 2017ರಂದು ಲಂಡನ್‌ನ ಓವಲ್ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನದ ನಡುವಿನ ಪಂದ್ಯದ ವೇಳೆ ನಡೆದ ಕರಾಳ ಘಟನೆ ಅವರ ಜೀವನದಿಂದ ಇಂದು ಕೂಡ ಮಾಸಿ ಹೋಗಿಲ್ಲ. ಭಾರತವು ಚಾಂಪಿಯನ್ ಟ್ರೋಫಿ ಫೈನಲ್‌ನಲ್ಲಿ ಸೋತ ಬಳಿಕ ಗ್ರಾಮದ ನಿವಾಸಿಗಳು ಸಿಹಿ ಹಂಚಿ, ಪಾಕ್ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ವ್ಯಾಪಕವಾಗಿ ವದಂತಿ ಹಬ್ಬಿತ್ತು. ಇದರ ಮುಂದುವರಿದ ಭಾಗವಾಗಿ 17 ಮಂದಿ ಮತ್ತು ಇಬ್ಬರು ಬಾಲಕರ ಮೇಲೆ ಭಾರತೀಯ ದಂಡ ಸಂಹಿತೆ, 1860ರ ಅಡಿಯಲ್ಲಿ ದೇಶದ್ರೋಹ ಮತ್ತು ಕ್ರಿಮಿನಲ್ ಪಿತೂರಿಯಡಿ ಮೊಕದ್ದಮೆ ದಾಖಲಿಸಲಾಗಿತ್ತು. ಆ ಬಳಿಕ ದೇಶದ್ರೋಹದ ಪ್ರಕರಣವನ್ನು ಕೈಬಿಟ್ಟು, ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

2017ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು, ಹಿಂದೂ ರಾಷ್ಟ್ರೀಯತೆ ಹೆಚ್ಚುತ್ತಿದೆ ಮತ್ತು ರಾಷ್ಟ್ರ ವಿರೋಧಿ ಎಂಬ ಪದವನ್ನು ವಿಮರ್ಶಕರ ವಿರುದ್ಧ, ವಿಶೇಷವಾಗಿ ಮುಸ್ಲಿಮರ ವಿರುದ್ಧ ಮುಕ್ತವಾಗಿ ಬಳಸಲಾಗುತ್ತಿತ್ತು. ಮುಖ್ಯವಾಹಿನಿಯ ಮಾಧ್ಯಮವು ಇಸ್ಲಾಮೋಫೋಬಿಯಾವನ್ನು ಹರಡುತ್ತಿತ್ತು. ಇದರ ಭಾಗವಾಗಿ  ಸುದ್ದಿ ವಾಹಿನಿಗಳು ಪ್ರಕರಣದ ಆರೋಪಿಗಳನ್ನು ‘ದೇಶದ್ರೋಹಿಗಳು’ ಎಂದು ಕರೆದಿವೆ.

ಆ ಘಟನೆಯು ನಮ್ಮ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ಹಳ್ಳಿಗರು ಕ್ರಿಕೆಟ್ ಆಡುವುದಿಲ್ಲ ಅಥವಾ ಟಿವಿ ನೋಡುವುದಿಲ್ಲ ಎಂದು ಗ್ರಾಮದ ಮುಖ್ಯಸ್ಥ ರಫೀಕ್ ತದ್ವಿ ಹೇಳಿದ್ದಾರೆ. 17 ಮಂದಿಯನ್ನು ಬಂಧಿಸಿ, ಜೈಲಿಗೆ ತಳ್ಳಿ, ಥಳಿಸಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ, ಕೋರ್ಟ್‌ಗಳಿಗೆ ಅಲೆದಾಡಿಸಿದ 6 ವರ್ಷಗಳ ಬಳಿಕ 16 ಮಂದಿಯನ್ನು ಮ್ಯಾಜಿಸ್ಟ್ರೇಟ್ ದೇವಂದರ್ ಶರ್ಮಾ ಅವರ ಪೀಠ ಖುಲಾಸೆಗೊಳಿಸಿದೆ. ತಮ್ಮಲ್ಲಿ ಸುಳ್ಳು ಆರೋಪಗಳನ್ನು ಮಾಡುವಂತೆ ಒತ್ತಾಯಿಸಲಾಯಿತು ಎಂದು ದೂರುದಾರರು ಮತ್ತು ಸಾಕ್ಷಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಎಲ್ಲಾ ಪುರಾವೆಗಳು, ವಾದಗಳು ಮತ್ತು ಪ್ರತ್ಯಕ್ಷದರ್ಶಿಗಳ ಸಾಕ್ಷಿಗಳನ್ನು ಪರಿಶೀಲಿಸಿದ ನಂತರ, ಆರೋಪಿಗಳು ಘೋಷಣೆಗಳನ್ನು ಕೂಗಿದರು ಮತ್ತು ಪಟಾಕಿ ಸುಟ್ಟರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಶರ್ಮಾ ಅವರು 9 ಅಕ್ಟೋಬರ್ 2023ರಂದು ನೀಡಿದ ತೀರ್ಪಿನಲ್ಲಿ ಹೇಳಿದ್ದಾರೆ. ಇದಲ್ಲದೆ ಐಪಿಸಿಯ ಸೆಕ್ಷನ್ 153-ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲು ಪುರಾವೆಗಳನ್ನು ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ. ಹೀಗಾಗಿ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಮಾಧ್ಯಮಗಳು ಜೂನ್ 2017ರಲ್ಲಿ ಈ ಘಟನೆಯನ್ನು ವ್ಯಾಪಕವಾಗಿ ಪ್ರಸಾರ ಮಾಡಿದರೂ, ಅವರನ್ನು ದೋಷಮುಕ್ತಗೊಳಿಸಿದ ಅಕ್ಟೋಬರ್ ತೀರ್ಪುನ್ನು ವರದಿ ಮಾಡಿಲ್ಲ. 17 ಅಪರಾಧಿಗಳ ಜೊತೆಗೆ 16 ವರ್ಷ ವಯಸ್ಸಿನ ಇಬ್ಬರು ಅಪ್ರಾಪ್ತರಾದ ಮುಬಾರಿಕ್ ತದ್ವಿ ಮತ್ತು ಜುಬೈರ್ ತದ್ವಿ ಅವರನ್ನು ಜೂನ್ 2022ರಲ್ಲಿ ಬಾಲಾಪರಾಧಿ ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಆದರೆ ಆ ಬಳಿಕ ಅವರು ಶಾಲೆಯನ್ನು ಬಿಟ್ಟಿದ್ದಾರೆ. ಈ ಘಟನೆಯಿಂದ ಇಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರುಬಾಬ್ ನವಾಬ್(40) ಫೆಬ್ರವರಿ 2019ರಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೋರ್ವರಾದ ಮುಕದ್ದರ್ ತಾದ್ವಿ (60) ಅವರು ತಮ್ಮ ಮಗ ಸಿಕಂದರ್ ತಾದ್ವಿ ಬಂಧನದ ಆಘಾತದಿಂದ ನವೆಂಬರ್ 2021ರಲ್ಲಿ ನಿಧನರಾಗಿದ್ದರು.

ಮಧ್ಯಪ್ರದೇಶ-ಮಹಾರಾಷ್ಟ್ರ ಗಡಿಯಲ್ಲಿರುವ ಮೊಹದ್ ಗ್ರಾಮವು 4,000 ನಿವಾಸಿಗಳಿಗೆ ನೆಲೆಯಾಗಿದೆ, ಬಹುತೇಕವಾಗಿ ಅಂಚಿನಲ್ಲಿರುವ ದಲಿತರು, ಬುಡಕಟ್ಟುಗಳು ಮತ್ತು ಇಸ್ಲಾಂಗೆ ಮತಾಂತರಗೊಂಡ ಭಿಲ್ಲರ ಉಪಜಾತಿಯಾದ ತದ್ವಿ ಭಿಲ್ ಮುಸ್ಲಿಮರು ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ವಾಸಿಸುವ ಬಹುತೇಕ ಎಲ್ಲರೂ ಸಣ್ಣ ರೈತರು ಅಥವಾ ದೈನಂದಿನ ಕೂಲಿ ಕೆಲಸಗಾರರಾಗಿದ್ದಾರೆ.

ಪ್ರಕರಣದಲ್ಲಿ ಆರೋಪಿತ 9 ಮಂದಿ 25ರಿಂದ 60 ವರ್ಷ ವಯಸ್ಸಿನವರು. ಜೂನ್ 2017ರಲ್ಲಿ ಶಹಪುರ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಸಂಜಯ್ ಪಾಠಕ್ ಮತ್ತು ಇತರ ಪೊಲೀಸ್ ಸಿಬ್ಬಂದಿ ನಮ್ಮ ಮೇಲೆ ಒದ್ದು, ನಿಂದಿಸಿ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ತಮ್ಮ ಗಡ್ಡವನ್ನು ಎಳೆದಿದ್ದಾರೆ, ಇದಕ್ಕೆ ವಿರೋಧಿಸಿದರೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸರು ಎರಡು ದಿನ ಆಹಾರ ನೀಡದೆ ದೌರ್ಜನ್ಯ ನಡೆಸಿದ್ದಾರೆ. ಪೊಲೀಸ್ ಠಾಣೆಗೆ ಚಹಾ ನೀಡಲು ಬಂದ ವ್ಯಕ್ತಿ ಕೂಡ ನಮ್ಮನ್ನು ಒದೆಯುತ್ತಿದ್ದರು, ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದರು ಎಂದು 32 ವರ್ಷದ ದೈನಂದಿನ ಕೂಲಿ ಇಮಾಮ್ ತಾದ್ವಿ ಹೇಳಿದ್ದಾರೆ. ನಮಗೆ ಚಿತ್ರಹಿಂಸೆ ನೀಡಲಾಗಿದೆ. ಅವರು ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಮೊದಲು ನಮ್ಮನ್ನು ಥಳಿಸಿದಾಗ ಇಡೀ ಗ್ರಾಮ ನೋಡಿದೆ, ನಾವು ಗಂಭೀರವಾಗಿದ್ದೆವು, ನಮಗೆ ಮ್ಯಾಜಿಸ್ಟ್ರೇಟ್ ಮುಂದೆ ಮಾತನಾಡಲು ಕೂಡ ಸಾಧ್ಯವಾಗಲಿಲ್ಲ. ತಮ್ಮನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತಿತ್ತು ಮತ್ತು ಜೈಲಿನಲ್ಲಿದ್ದಾಗ ಪ್ರತಿದಿನ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಮತ್ತು ನೆಲವನ್ನು ಒರೆಸಲು ಹೇಳುತ್ತಿದ್ದರು ಎಂದು ಪೊಲೀಸ್‌ ದೌರ್ಜನ್ಯದ ಬಗ್ಗೆ ಸಂತ್ರಸ್ತರು ನೋವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ: ಭಾರತದ ಭೂಭಾಗ ಚೀನಾ ಆಕ್ರಮಿಸಿಕೊಂಡಿಲ್ವ? ನೆಲದ ವಾಸ್ತವ ಬಿಚ್ಚಿಡಲು ಗಡಿಯುದ್ದಕ್ಕೂ 10,000 ಜನರಿಂದ ಮೆರವಣಿಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...