Homeಮುಖಪುಟಕೇರಳ: ಸ್ವಿಗ್ಗಿ ಕೆಲಸಗಾರರಿಂದ ಮುಂದುವರಿದ ಮುಷ್ಕರ; ಬೇಡಿಕೆಗೆ ಸ್ಪಂದಿಸುವುದೇ ಕಂಪೆನಿ?

ಕೇರಳ: ಸ್ವಿಗ್ಗಿ ಕೆಲಸಗಾರರಿಂದ ಮುಂದುವರಿದ ಮುಷ್ಕರ; ಬೇಡಿಕೆಗೆ ಸ್ಪಂದಿಸುವುದೇ ಕಂಪೆನಿ?

- Advertisement -
- Advertisement -

ಕೇರಳದ ಕೊಚ್ಚಿಯಲ್ಲಿ 5,000 ಸ್ವಿಗ್ಗಿ ಉದ್ಯೋಗಿಗಳು ಹೆಚ್ಚಿನ ಸಂಭಾವನೆ ಮತ್ತು ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳಿಗಾಗಿ ಒತ್ತಾಯಿಸಿ ಮುಷ್ಕರ ನಡೆಸಿ 11 ದಿನಗಳು ಕಳೆದಿವೆ.

ಜಿಲ್ಲಾ ಕಾರ್ಮಿಕ ಅಧಿಕಾರಿಗಳು ನಡೆಸಿದ ಮಾತುಕತೆಗಳು ಮುರಿದು ಬಿದ್ದಿವೆ. ಸ್ವಿಗ್ಗಿಯು ತನ್ನ ಕಾರ್ಮಿಕರಿಗೆ ಸ್ಥಿರ ಮತ್ತು ವಿಶ್ವಾಸಾರ್ಹ ಆದಾಯದ ಅವಕಾಶಗಳನ್ನು ನೀಡುವುದಾಗಿ ಹೇಳುತ್ತಿದೆ. ಆದರೆ ಕಾರ್ಮಿಕರ ಪ್ರಮುಖ ಬೇಡಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಭರವಸೆಯನ್ನು ನೀಡುತ್ತಿಲ್ಲ.

“ನಾನು ಬೆಳಿಗ್ಗೆ 8 ಗಂಟೆಗೆ ಅಪ್ಲಿಕೇಶನ್‌ಗೆ ಲಾಗಿನ್ ಆಗಿ, ಒಂಬತ್ತುವರೆವರೆಗೆ ಆರ್ಡರ್‌ಗಳನ್ನು ತೆಗೆದುಕೊಂಡರೆ, ನಾನು ಗಳಿಸುವ ಮೊತ್ತ ಗರಿಷ್ಠ 900 ರೂ. ಆಗಿರುತ್ತದೆ. ಅದರಲ್ಲಿ 400 ರೂ ಪೆಟ್ರೋಲ್‌ಗೆ ಹೋಗುತ್ತದೆ” ಎಂದು ಸ್ವಿಗ್ಗಿ ಡೆಲಿವರಿ ಪಾಲುದಾರರಾಗಿ ಅರೆಕಾಲಿಕ ಕೆಲಸ ಮಾಡುವ 27 ವರ್ಷದ ಬೆಸಿಲ್ ಎಲ್ಡೋ ಹೇಳುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“14 ಅಥವಾ 15 ಗಂಟೆಗಳ ಕಾಲ ಓಡಾಡಿದ ಬಳಿಕ, ಒಬ್ಬ ಉದ್ಯೋಗಿ ಕೇವಲ 300-400 ರೂ. ಗಳಿಸುತ್ತಾನೆ” ಎಂದು ವಿಷಾದಿಸುತ್ತಾರೆ ಬೆಸಿಲ್‌.

ಕೊಚ್ಚಿಯಲ್ಲಿರುವ ಸ್ವಿಗ್ಗಿ ಕಾರ್ಮಿಕರಿಗೆ ಪ್ರಸ್ತುತ ಪ್ರತಿ ಕಿ.ಮೀ.ಗೆ 5 ರೂ. ನೀಡಲಾಗುತ್ತಿದೆ. “ಆರ್ಡರ್‌ಗಳು ಕಡಿಮೆಯಾಗುತ್ತಿವೆ, ಆದರೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಇದರಿಂದಾಗಿ ಪ್ರತಿ ಕಿ.ಮೀಗೆ 8 ರೂ.ಗೆ ಹೆಚ್ಚಿಸಬೇಕು” ಎಂದು ಸ್ವಿಗ್ಗಿ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನೊಂದಿಗೆ ಸಂಯೋಜಿತವಾಗಿರುವ ‘ಫುಡ್ ಆನ್‌ಲೈನ್ ಡೆಲಿವರಿ ವರ್ಕರ್ಸ್ ಅಸೋಸಿಯೇಷನ್ (FODW) ಅಕ್ಟೋಬರ್ 31ರಂದು ಕೊಚ್ಚಿಯಲ್ಲಿರುವ ಸ್ವಿಗ್ಗಿ ಉದ್ಯೋಗಿಗಳ ಕಚೇರಿಗೆ ಪತ್ರ ಬರೆಯಿತು. “ಉದ್ಯೋಗದಲ್ಲಿನ ಅನ್ಯಾಯ, ಪಾವತಿ ರಚನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ” ಕುರಿತು ಪತ್ರದಲ್ಲಿ ಉಲ್ಲೇಖಿಸಲಾಯಿತು.

ಪ್ರತಿ ವಾರ ಇನ್‌ಸೆನ್‌ಟೀವ್ಸ್‌ ನೀಡಬೇಕು. ವಾರದಲ್ಲಿ ಕನಿಷ್ಠ ಎರಡು ದಿನ ರಜೆ, ಭವಿಷ್ಯ ನಿಧಿ ಪ್ರಯೋಜನ, ಪಾವತಿ ರಚನೆಯಲ್ಲಿ ಕಾರ್ಮಿಕರ ಅನುಮತಿ, ಎರಡೂವರೆಗೆ ಕಿಮಿಗೆ 35 ರೂಪಾಯಿ ಪಾವತಿ- ಸೇರಿದಂತೆ ಮೊದಲಾದ ಬೇಡಿಕೆಗಳನ್ನು ಇಡಲಾಯಿತು.

ನವೆಂಬರ್ 12ರಂದು, ಕೊಚ್ಚಿಯ ಮರೈನ್ ಡ್ರೈವ್ ಬಳಿಯ ಸ್ವಿಗ್ಗಿ ಕಚೇರಿಗೆ ಡೆಲಿವರಿ ಪಾರ್ಟ್‌ನರ್‌‌‌ ತೆರಳಿ ಕಂಪನಿಯ ಅಧಿಕಾರಿಗಳ ಜೊತೆ ಮಾತನಾಡಿದರು. ಸಭೆಯಲ್ಲಿ ಆಪರೇಷನ್ ಮ್ಯಾನೇಜರ್‌ ಸೇರಿದಂತೆ ಸ್ವಿಗ್ಗಿಯ ನಾಲ್ವರು ಅಧಿಕಾರಿಗಳು ಭಾಗವಹಿಸಿದ್ದರು. ಕೆಲವು ಬೇಡಿಕೆಗಳನ್ನು ಅಂಗೀಕರಿಸುವುದಾಗಿ ಹೇಳಿದ ಕಂಪನಿಯು ಪ್ರಮುಖ ಬೇಡಿಕೆಯಾದ ಪಾವತಿ ಹೆಚ್ಚಳವನ್ನು ಒಪ್ಪಲಿಲ್ಲ.

ನಂತರ ನವೆಂಬರ್ 14ರಂದು ಮುಷ್ಕರ ಪ್ರಾರಂಭವಾಯಿತು. ಅಂದು ರಾತ್ರಿ 11 ಗಂಟೆ ಸುಮಾರಿಗೆ ಮುಷ್ಕರ ನಿರತ ಕಾರ್ಮಿಕರು ಮತ್ತು ಸ್ವಿಗ್ಗಿ ಅಧಿಕಾರಿಗಳ ನಡುವೆ ಜಿಲ್ಲಾ ಕಾರ್ಮಿಕ ಅಧಿಕಾರಿ ಸಭೆ ಆಯೋಜಿಸಿದ್ದರು. “ನಾವು 2.5 ಕಿಮೀಗೆ 34 ರೂ ಕೇಳಿದ್ದೇವೆ” ಎಂದು ಹಾಜರಿದ್ದ ಬೇಸಿಲ್ ಹೇಳಿದರು. ಕಾರ್ಮಿಕ ಅಧಿಕಾರಿ ಪ್ರತಿ ನಾಲ್ಕು ಕಿ.ಮೀ.ಗೆ 30 ರೂ. ನೀಡುವುದಾಗಿ ಹೇಳಿದರು. ಕಾರ್ಮಿಕರ ಬೇಡಿಕೆಯನ್ನು ಸ್ವಿಗ್ಗಿ ತಿರಸ್ಕರಿಸಿತು ಮತ್ತು ಮುಷ್ಕರ ಮುಂದುವರೆಯಿತು.

ನವೆಂಬರ್ 17 ರಂದು, ಸುಮಾರು 300-400 ಸ್ವಿಗ್ಗಿ ಡೆಲಿವರಿ ಪಾರ್ಟ್‌‌ನರ್‌‌ ಮರೈನ್ ಡ್ರೈವ್‌ನಲ್ಲಿ ರ್‍ಯಾಲಿಯನ್ನು ನಡೆಸಿದರು. ನವೆಂಬರ್ 18 ರಂದು, ಎರ್ನಾಕುಲಂ ಪ್ರಾದೇಶಿಕ ಕಾರ್ಮಿಕ ಕಚೇರಿಯಲ್ಲಿ ಸ್ವಿಗ್ಗಿ ಅಧಿಕಾರಿಗಳು ಮತ್ತು ಕಾರ್ಮಿಕರ ನಡುವೆ ಎರಡನೇ ಸಭೆ ನಡೆಯಿತು. ಕಾರ್ಮಿಕರು ಪ್ರತಿ ಮೂರು ಕಿಮೀಗೆ 25 ರೂ ಕೇಳಿದರು. ಆದರೆ ಸ್ವಿಗ್ಗಿ ಕಂಪನಿಯು ಪ್ರತಿ ನಾಲ್ಕು ಕಿಮೀಗೆ 23 ರೂ. ನೀಡುವುದಾಗಿ ಹೇಳಿತು. ಕಾರ್ಮಿಕರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು.

ಮುಷ್ಕರ ಮುಂದುವರಿಯಲಿದೆ ಎಂದು FODW ಕಾರ್ಯದರ್ಶಿ ವಿಪಿನ್ ವಿನ್ಸೆಂಟ್ ‘ನ್ಯೂಸ್‌ಲಾಂಡ್ರಿ’ಗೆ ತಿಳಿಸಿದ್ದಾರೆ. “ನಾವು ಬಹಳ ಸಮಯದಿಂದ ಕಂಪನಿಗೆ ಸೇವೆ ಸಲ್ಲಿಸುತ್ತಿದ್ದೇವೆ” ಎಂದಿದ್ದಾರೆ. “ಡೆಲಿವರಿ ಕೆಲಸಗಾರರು ಈಗ ತಮ್ಮ ಹಕ್ಕುಗಳ ಬಗ್ಗೆ ತಿಳಿದಿದ್ದಾರೆ. ಹೀಗಾಗಿ ನಮ್ಮ ಹಕ್ಕು ಸಿಗುವವರೆಗೂ ಹೋರಾಟ ನಡೆಸುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿರಿ: ಗುಜರಾತ್‌: 2036ರ ಒಲಂಪಿಕ್ಸ್‌ ಆಯೋಜನೆ ಕನಸು ಕಂಡ ಬಿಜೆಪಿ ಪ್ರಣಾಳಿಕೆ

ನವೆಂಬರ್ 25 ರಂದು ಕಾರ್ಮಿಕರು ಎರ್ನಾಕುಲಂ ಜಿಲ್ಲಾಧಿಕಾರಿಗಳಿಗೆ ಮುಷ್ಕರದ ಕಾಲಮಿತಿಯೊಂದಿಗೆ ಪತ್ರವನ್ನು ಸಲ್ಲಿಸಿದರು. “ದಯವಿಟ್ಟು ಮನವಿಯನ್ನು ಸ್ವೀಕರಿಸಿ, ನಾವು ಎತ್ತಿರುವ ಬೇಡಿಕೆಗಳನ್ನು ಪಡೆಯಲು ನಮಗೆ ಸಹಾಯ ಮಾಡಿ” ಎಂದು ಒತ್ತಾಯಿಸಲಾಗಿದೆ. ಸೋಮವಾರ ಮತ್ತೊಂದು ಸಭೆಗೆ ಕಾರ್ಮಿಕ ಕಚೇರಿ ಕರೆದಿದೆ ಎಂದು ಬೆಸಿಲ್ ಮಾಹಿತಿ ನೀಡಿದ್ದಾರೆ.

ಸ್ವಿಗ್ಗಿ, ಜೊಮೊಟೊ, ಊಬರ್‌‌, ಓಲಾ ಥರದ ಆನ್‌ಲೈನ್‌ ಸೇವೆಗಳು ಕೆಲಸಗಾರರ ಹಕ್ಕುಗಳನ್ನು ನಿರ್ಲಕ್ಷಿಸುತ್ತಿರುವ ಕುರಿತು ಮೊದಲಿನಿಂದಲೂ ಆಕ್ಷೇಪಗಳು ಬರುತ್ತಿವೆ. ಸ್ವಿಗ್ಗಿ, ಜೊಮೊಟೊದಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಡೆಲಿವರಿ ಕೆಲಸಗಾರರು ಮಾತನಾಡಲಾರಂಭಿಸಿದ್ದಾರೆ.

ಆ್ಯಪ್ ಆಧಾರಿತ ಕೆಲಸಗಾರರಿಗೆ ಭದ್ರತೆ ನೀಡುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದಿದೆ. ಪ್ರತಿವಾದಿ ಸ್ಥಾನದಲ್ಲಿರುವ ಕೇಂದ್ರ ಸರ್ಕಾರ ಇನ್ನೂ ಈ ವಿಚಾರದಲ್ಲಿ ಅಫಿಡವಿಟ್ ಸಲ್ಲಿಸಿಲ್ಲ.

ವರದಿ ಕೃಪೆ: ನ್ಯೂಸ್‌ ಲಾಂಡ್ರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...