Homeಮುಖಪುಟ'INDIA'ವನ್ನು 'ಭಾರತ್' ಎಂದು ಬದಲಿಸುವ NCERT ಪ್ರಸ್ತಾಪ ತಿರಸ್ಕರಿಸಿದ ಕೇರಳ ಸರ್ಕಾರ

‘INDIA’ವನ್ನು ‘ಭಾರತ್’ ಎಂದು ಬದಲಿಸುವ NCERT ಪ್ರಸ್ತಾಪ ತಿರಸ್ಕರಿಸಿದ ಕೇರಳ ಸರ್ಕಾರ

- Advertisement -
- Advertisement -

”ಶಾಲಾ ಪಠ್ಯಪುಸ್ತಕಗಳಲ್ಲಿ ದೇಶದ ಹೆಸರನ್ನು ‘INDIA’ ಬದಲಿಗೆ ‘ಭಾರತ್’ ಎಂದು ಮಾಡಬೇಕು ಎಂಬ ಎನ್‌ಸಿಇಆರ್‌ಟಿ ಉನ್ನತ ಮಟ್ಟದ ಸಮಿತಿಯ ಶಿಫಾರಸನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುವುದಿಲ್ಲ” ಎಂದು ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಗುರುವಾರ ಹೇಳಿದ್ದಾರೆ.

”ಸಂವಿಧಾನದಲ್ಲಿ ಹೇಳಿರುವಂತೆ INDIA ಅಥವಾ ಭಾರತ ಎಂದು ಬಳಸುವ ಹಕ್ಕು ನಾಗರಿಕರಿಗೆ ಇದೆ. ಅವರು ಈಗ ದೇಶದ ಹೆಸರನ್ನು ಭಾರತ ಎಂದು ಮಾತ್ರ ಬಳಸಬೇಕು ಎಂದು ಹೇಳುತ್ತಿರುವುದು ಸಂಕುಚಿತ ರಾಜಕೀಯ, ಇದನ್ನು ಕೇರಳ ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ವಿ ಶಿವನ್‌ಕುಟ್ಟಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

”ಐತಿಹಾಸಿಕ ಸತ್ಯಗಳನ್ನು ತಿರುಚಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಡೆಸುತ್ತಿದೆ” ಎಂದು ಅವರು ಆರೋಪಿಸಿದರು.

”ಮೊದಲು, ಎನ್‌ಸಿಇಆರ್‌ಟಿ ಕೆಲವು ಭಾಗಗಳನ್ನು ತೆಗೆದುಹಾಕಿದ ನಂತರ, ನಾವು ಅವುಗಳನ್ನು ಹೆಚ್ಚುವರಿ ಪಠ್ಯಪುಸ್ತಕಗಳ ಮೂಲಕ ರಾಜ್ಯದಲ್ಲಿ ಕಲಿಸುವ ಪಠ್ಯಕ್ರಮದಲ್ಲಿ ಸೇರಿಸಿದ್ದೇವೆ” ಎಂದು ವಿ ಶಿವನ್‌ಕುಟ್ಟಿ ಹೇಳಿದರು.

”ಎನ್‌ಸಿಇಆರ್‌ಟಿಯು ಅಸಂವಿಧಾನಿಕ, ಅವೈಜ್ಞಾನಿಕ ಮತ್ತು ಇತಿಹಾಸದ ತಿರುಚಿದ ಆವೃತ್ತಿಗಳನ್ನು ಮಕ್ಕಳಿಗೆ ಕಲಿಸಲು ಬಯಸಿದರೆ, ಕೇರಳ ಅದನ್ನು ವಿರೋಧಿಸುತ್ತದೆ” ಎಂದು ಅವರು ಹೇಳಿದರು.

”ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಪ್ರಸ್ತುತ ಬಳಸುತ್ತಿರುವ 44 ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಕೆಲಸವನ್ನು ವಿವರವಾಗಿ ಚರ್ಚಿಸಲು ಕೇರಳ ಸರ್ಕಾರವು ರಾಜ್ಯ ಪಠ್ಯಕ್ರಮ ಸಮಿತಿಯನ್ನು ಕರೆಯಲಿದೆ” ಎಂದು ಶಿವನ್‌ಕುಟ್ಟಿ ಹೇಳಿದರು.

ಇದನ್ನೂ ಓದಿ: ಪಠ್ಯಪುಸ್ತಕಗಳಲ್ಲಿ ‘INDIA ಬದಲಿಗೆ ಭಾರತ’ ಸೇರಿಸಲು NCERT ಶಿಫಾರಸು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...