Homeಮುಖಪುಟಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ಲಾಕ್‌ಡೌನ್‌: ತುತ್ತು ಅನ್ನಕ್ಕಾಗಿ ಗುಳೆ ಹೊರಟವರ ಕತೆ

ರಣವೀರ್ ಸಿಂಗ್ ಎಂಬ 29ರ ಯುವಕ ತನ್ನೂರಿಗೆ ನಡೆಯುತ್ತಲೇ ಪ್ರಾಣಬಿಟ್ಟ ಕಣ್ಣೀರ ಕಥೆಯನ್ನು ಕಣ್ಮುಂದೆ ಕಟ್ಟಿಕೊಡುವ ಲೇಖನ

- Advertisement -
- Advertisement -

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಕಳೆದ ದಿನ ತನ್ನ ಅಧಿಕೃತ ನಿವಾಸದಲ್ಲಿ ‘ರಾಮಾಯಣ’ ಧಾರವಾಹಿ ನೋಡಿ ಆನಂದಿಸುತ್ತಿದ್ದಾಗಲೇ, ರಣವೀರ್ ಸಿಂಗ್ ಎಂಬ ಯುವಕ ದೆಹಲಿಯ ಸರಹದ್ದು ದಾಟಿಯಾಗಿರಬೇಕು. ರಾಷ್ಟ್ರದ ರಾಜಧಾನಿಯಲ್ಲಿ ದಿನಗೂಲಿಗಾಗಿ ರೆಸ್ಟೋರೆಂಟ್‌ಗಳಲ್ಲಿ ಡೆಲಿವರಿ ಏಜೆಂಟ್ ಕೆಲಸ ಮಾಡುವ ಒಬ್ಬ ಸಾಮಾನ್ಯ ವ್ಯಕಿಯಾಗಿದ್ದ ರಣವೀರ್.

ಕೋವಿಡ್-19ರ ಹಿನ್ನೆಲೆಯಲ್ಲಿ, ಪ್ರತ್ಯೇಕವಾದ ಪೂರ್ವ ತಯಾರಿಗಳಿಲ್ಲದೆ ಮಾರ್ಚ್ 24 ಕ್ಕೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೂರು ವಾರಗಳ ಲಾಕ್‌ಡೌನ್ ಘೋಷಿಸಿದಾಗ, ಬೀದಿಗೆ ಬಿದ್ದ ಸಾವಿರಾರು ಜನರ ಪೈಕಿ ಅವನೂ ಒಬ್ಬ.

ಅತ್ತ ದುಡಿಮೆಯೂ, ಇತ್ತ ಆಹಾರವೂ ಇಲ್ಲದೆ ದೆಹಲಿಯಲ್ಲಿ ಕೂಡುವುದು ಕಷ್ಟಸಾಧ್ಯವೆಂಬುದನ್ನು ಅರಿತ ರಣವೀರ್, ಮಧ್ಯ ಪ್ರದೇಶದ ಮೊರೋನಾ ಜಿಲ್ಲೆಯ ತನ್ನ ಹುಟ್ಟೂರಿಗೆ ಹಿಂತಿರುಗಲು ತೀರ್ಮಾನಿಸಿದ. 200 ಕಿ.ಮೀ.ಗಿಂತಲೂ ಹೆಚ್ಚು ದೂರದ ಪ್ರದೇಶವದು. ಇತರ ಸಂಪರ್ಕ ವ್ಯವಸ್ಥೆಗಳಿಲ್ಲದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಹಾಗೇ ಮರುದಿನ ರಾತ್ರಿ ಹೊತ್ತಲ್ಲಿ, ಕುಡಿಯಲು ನೀರೂ ಕೂಡಾ ಜೊತೆಗಿಲ್ಲದೆ ನಡೆಯಲು ಆರಂಭಿಸಿದ.

ಅದಾಗಲೇ ರಣವೀರ್ ಸುಮಾರು 100 ಕಿ.ಮೀ ದೂರವನ್ನು ಬರಿಗಾಲಲ್ಲೇ ಕ್ರಮಿಸಿಯಾಗಿತ್ತು. ಇದರ ನಡುವೆ ಯಾರೋ ದಾರಿ ನಡುವೆ ಸಿಕ್ಕ ವ್ಯಾಪಾರಿಯೋರ್ವರು ಕೊಟ್ಟ ಚಹಾ ಮತ್ತು ಬಿಸ್ಕತ್ತು ಮಾತ್ರವಾಗಿತ್ತು ದಾರಿಯುದ್ದಕ್ಕೂ ಆಹಾರ. ನಡೆದಾಡಿ ಬಳಲಿದ ಆ 29ರ ಹರೆಯದ ಯುವಕ, ತನ್ನ ಗ್ರಾಮ ತಲುಪುವುದಕ್ಕಿಂತಲೂ ಬಹಳ ದೂರದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದನೆಂದಾಗಿತ್ತು ವರದಿ.

ನರೇಂದ್ರ ಮೋದಿಯ ಎಂಟು ಗಂಟೆಯ ಘೋಷಣೆಯಿಂದ ಉಂಟಾದ ಆಘಾತದಿಂದಾಗಿ, ಇದರಂತೆಯೇ ಲಕ್ಷಾಂತರ ರಣವೀರ್‌ಗಳು ‘ಕಾಲ್ನಡಿಗೆ’ ಆರಂಭಿಸಿದ ದೃಶ್ಯಗಳನ್ನು ಎಲ್ಲೆಡೆ ಕಂಡಿದ್ದೇವೆ. ನೆರೆಯ ರಾಜ್ಯಗಳಿಂದ ಕೆಲಸ ಹುಡುಕುತ್ತಾ ದೆಹಲಿ ತಲುಪಿದ್ದ ಕಾರ್ಮಿಕರು ಲಾಕ್‌ಡೌನ್‌ ಕಾರಣದಿಂದಾಗಿ ಅವರ ಕುಟುಂಬಗಳೊಂದಿಗೆ ಸಾಲು ಸಾಲಾಗಿ ಗುಳೆ ಹೊರಟಿರುವ ದಯನೀಯ ದೃಶ್ಯಗಳು ದೇಶಕ್ಕೆ ಕೋವಿಡ್ ವೈರಾಣುವಿನಷ್ಟೇ ಭೀತಿಜನಕವಾದುದು.

ದೆಹಲಿ- ಯು.ಪಿ ಗಡಿಭಾಗದ ಗಾಜಿಯಾಬಾದ್‌ನಲ್ಲೂ ಅಂತೆಯೇ ಇನ್ನಿತರ ಪ್ರದೇಶಗಳಲ್ಲೂ ಊರು ಸೇರಲು ಲಾಕ್‌ಡೌನ್ ಉಲ್ಲಂಘಿಸಿ, ಬಸ್ಸಿಗಾಗಿ ಕಾಯುತ್ತಿರುವ ಈ ಜನರ ಗುಂಪು, ಎಲ್ಲಾ ಗಡಿಗಳಲ್ಲೂ ಇದೀಗ ‘ನಿರಾಶ್ರಿತ ವಲಸಿಗರು’  ಎಂಬ ವಿಶೇಷ ಮನ್ನಣೆ ಪಡೆದುಕೊಂಡಿದ್ದಾರೆ.

ಉತ್ತರ ಆಫ್ರಿಕಾದ ಹಾಗೂ ಪಶ್ಚಿಮ ಏಷ್ಯಾದ ಸಂಘರ್ಷ ಭೂಮಿಯಿಂದ ಮುಕ್ತಿ ಹೊಂದಿ, ಯುರೋಪಿಯನ್ ಯೂನಿಯನ್ನಿನ ಪ್ರವೇಶ ಕವಾಟಗಳಾದ ಮಾಸಿಡೋನಿಯ ಹಾಗೂ ಇತರೆಡೆಗಳಲ್ಲಿ ಅಭಯ ಯಾಚಿಸುತ್ತಾ ಕಾದು ನಿಂತಿರುವ ಲಕ್ಷಾಂತರ ಜನರನ್ನು ನೆನೆಪಿಸುತ್ತಿದೆ ಈ ಜನಸಾಗರ. ಜೀವನದ ಹೊಸ ನಿರ್ಣಾಯಕ ದಡವನ್ನು ಸೇರುವ ಆಸೆಯಿಂದ ಯುರೋಪಿನತ್ತ ಹಲವರು ಮೆಡಿಟೆರೇನಿಯನ್ ಸಮುದ್ರವನ್ನು ಈಜುತ್ತಾ ದಾಟಿ ಬಂದರೆ, ಇಲ್ಲಿ ಕಾಲ್ನಡಿಗೆ ಸಂಚಾರ ಎನ್ನುವ ವ್ಯತ್ಯಾಸ ಮಾತ್ರ. ಪಲಾಯನದ ಉದ್ದೇಶ ಮಾತ್ರ ಒಂದೇ. ಒಂದು ಹೊತ್ತಿನ ತುತ್ತು ಅನ್ನ.

ದೆಹಲಿಯಲ್ಲಿರುವ ಕೂಲಿ ಕಾರ್ಮಿಕರ ಸಂಖ್ಯೆ 20 ಲಕ್ಷಕ್ಕಿಂತಲೂ ಹೆಚ್ಚು. ಲಾಕ್‌ಡೌನ್ ಘೋಷಿಸಿದಾಗ ಇದರಲ್ಲಿ ಹೆಚ್ಚಿನ ಪ್ರಮಾಣದ ಜನರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ದೆಹಲಿ ಸರ್ಕಾರದ ಗಣತಿಯಂತೆ, ಈಗಾಗಲೇ ನಾಲ್ಕು ಲಕ್ಷದಷ್ಟು ಬರುವ ಜನರಿಗಾಗುವಷ್ಟು ಮಾತ್ರ ಆಹಾರ ಮತ್ತು ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲಾಗಿದೆ.  ಕೇಂದ್ರ ಸರಕಾರವೋ ಬಂದ್ ಮಾಡಿ ಅನ್ನೋ ಘೋಷಣೆ ಬಿಟ್ಟು ಕ್ರಿಯಾತ್ಮಕವಾದ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಗುಳೆ ಹೊರಡುವುದು ಸ್ವಾಭಾವಿಕ.

ಸರಕಾರವು ಗುರುತರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವಾಗ, ವಲಸೆ ಕಾರ್ಮಿಕರು ಗುಳೆ ಹೊರಟಿರುವುದರ ಹಿಂದಿನ ಉದ್ದೇಶ ನಿಜವಾಗಿಯೂ ಹಸಿವಿನಿಂದ ಬರುವ ಸಾವುಗಳನ್ನ ಪ್ರತಿರೋಧಿಸುವುದಕ್ಕಾಗಿಯೇ ಆಗಿದೆ. ಈ ಸಾಮೂಹಿಕ ಗುಳೆಯ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿಯಾದಾಗ, ವಲಸಿಗರನ್ನು ಕರೆತರಲು ನೆರೆಯ ರಾಜ್ಯಗಳು ಬಸ್ಸುಗಳನ್ನು ಕಳುಹಿಸಲು ಮುಂದೆ ಬಂದವು.  ಇದು ಬರಿ ದೆಹಲಿಯ ದೃಶ್ಯಗಳಾಗಿವೆ ಅಂದುಕೊಂಡರೆ ಅದು ತಪ್ಪು. ಮುಂಬೈ , ಕಲ್ಕತ್ತಾ, ಚೆನ್ನೈ, ಬೆಂಗಳೂರು ಮುಂತಾದ ಮೆಟ್ರೋ ನಗರಗಳಲ್ಲಿನ ಬೀದಿಗಳಿಂದೆಲ್ಲಾ, ಈ ರೀತಿಯ ಸಾಮೂಹಿಕ ಪಲಾಯನದ ಸುದ್ದಿಗಳು ವರದಿಯಾಗುತ್ತಿವೆ.

ಗಾಜಿಯಾಬಾದ್ ಮತ್ತು ಇತರೆಡೆಗಳಲ್ಲಿ ಬಸ್ಸುಗಳಿಗಾಗಿ ಕಾಯುತಿರುವ ಹಲವರು ಆಡುವ ಮಾತು “ನಮ್ಮಲ್ಲಿ ಹಲವರಿಗೆ ಆಧಾರ್ ನಂತಹ ಯಾವುದೇ ಗುರುತು ಚೀಟಿಗಳಿಲ್ಲ” ಎಂದಾಗಿದೆ. ಅಂದರೆ, ನಾಮಮಾತ್ರವಾದರೂ, ಈ ಸಮಯದಲ್ಲಿ ಸರಕಾರ ನೀಡುವ ಯಾವುದೇ ಸೌಜನ್ಯ ಸವಲತ್ತುಗಳಿಗೆ ಅವರು ಅನರ್ಹರು. ಇವೆಲ್ಲವೂ ವರ್ತಮಾನ ಭಾರತದ ಅವ್ಯವಸ್ಥೆಯ ನೇರನೋಟಗಳಾಗಿವೆ ಎಂಬುದನ್ನು ಮನಗಾಣಬೇಕಿದೆ.

ಗೃಹ ಸಚಿವ ಅಮಿತ್ ಶಾ ಘೋಷಿಸಿದ ಎನ್‌ಆರ್‌ಸಿ ದೇಶವ್ಯಾಪಿಯಾಗಿ ಪ್ರಾಬಲ್ಯಕ್ಕೆ ಬಂದರೆ, ಗುರುತು ತೋರಿಸಲು ದಾಖಲೆಗಳಿಲ್ಲದ ಈ ಜನರ ಸ್ಥಿತಿ ಏನಾಗಬಹುದೆಂಬುದು ಈ ಮೂಲಕ ಊಹಿಸಬಹುದಾಗಿದೆ. ಆದ್ದರಿಂದ ಹಲವರ ನಿರೀಕ್ಷಿಸಿದಂತೆ, ಮೋದಿಯ ಲಾಕ್‌ಡೌನ್ ಘೋಷಣೆಯು ಹಳೆಯ ನೋಟು ನಿಷೇಧವನ್ನಲ್ಲ ನೆನೆಪಿಸೋದು. ಬದಲಾಗಿ, ಇನ್ನೇನು ಜಾರಿಗೊಳಿಸಲಿರುವ ಎನ್‌ಆರ್‌ಸಿಯ ಪ್ರತ್ಯಾಘಾತ ಎಂಬಂತೆ, ದೇಶದುದ್ದಕ್ಕೂ ಪ್ರತ್ಯಕ್ಷವಾಗಲು ಸಾಧ್ಯತೆಗಳಿರುವ ಬಹುದೊಡ್ಡ ಸಂಖ್ಯೆಯ  ನಿರಾಶ್ರಿತ ಸಮೂಹಗಳ ಸೂಕ್ತ ಮುನ್ಸೂಚನೆಯೇ ಆಗಿದೆ ಈ ಬಸ್ಸು ಕಾಯುತ್ತಿರುವ ಜನ ಸಮೂಹ ಅನ್ನುವುದು ಸ್ಪಷ್ಟ.

ಈ ಸಾಮೂಹಿಕವಾಗಿ ಗುಳೆ ಹೊರಟವರೊಂದಿಗಿನ ಅಧಿಕಾರಿಗಳ ಮನೋಭಾವ ಕೂಡಾ ಅತ್ಯಂತ ದಯನೀಯವಾದುದು. ಲಾಕ್‌ಡೌನ್ ಅನ್ನುವ ಕಠಿಣ ನಿರ್ಧಾರವನ್ನು ತಳೆದಿದ್ದಕ್ಕಾಗಿ ಜನತೆಯೊಂದಿಗೆ ಕ್ಷಮೆ ಯಾಚಿಸುತ್ತೇನೆ ಎಂದಾಗಿತ್ತು ಕಳೆದೆರಡು ದಿನಗಳ ಹಿಂದಿನ ಮೋದಿಯ ಪ್ರಸ್ತಾವನೆ. ಯಾವುದೇ ಪೂರ್ವ ತಯಾರಿಗಳಿಲ್ಲದೆ, ನಾಲ್ಕು ಗಂಟೆಗಳ ಸಮಯವನ್ನು ಮಾತ್ರ ನೀಡಿ, 130 ಕೋಟಿ ಜನರನ್ನು ನಿರ್ದಾಕ್ಷಿಣ್ಯ ಲಾಕ್‌ಡೌನ್ ನತ್ತ ತಳ್ಳಿಹಾಕಿ, ನಂತರದ ಈ ಕ್ಷಮಾಪಣೆಯಲ್ಲಿ ಯಾವುದೇ ಅರ್ಥವಿಲ್ಲ.

ನೋಟ್ ಬ್ಯಾನ್‌ನ ನಂತರ, 50 ದಿನಗಳ ಸಮಯಾವಕಾಶ ಕೋರಿದ, ಅದೇ ‘ಪ್ರಾಮಾಣ ಕತೆ’ಯಷ್ಟೇ ಈ ಪ್ರಸ್ತಾವನೆಗೂ ಇರುವುದು. ಅಂದು ನೋಟು ಬ್ಯಾನ್‌ನಲ್ಲಿ ಕ್ಯೂ ನಿಂತು ಅಸ್ವಸ್ಥರಾದವರೇ ಇಂದೂ ಬೀದಿಗೆ ಬಂದಿರುವುದು. ಆ ಜನರೊಂದಿಗೆ ‘ಮನೆಯೊಳಗೇ ಕುಳಿತುಕೊಂಡಿರಿ’ ಎಂಬುದಾಗಿದೆ ಈಗಲೂ ನೀಡಿರುವ ಎಚ್ಚರಿಕೆ. ಹಾಗಾದರೆ ಇದಕ್ಕೂ ಮುನ್ನವೇ ಸೂರು ಕಳೆದುಕೊಂಡ ಬಡಜನರು ಎತ್ತ ಹೋಗಬೇಕು..? ಸಂಘರಾಜಕೀಯದ ವಿಷಬೀಜಗಳು ಬಿತ್ತಿದ ರಾಮಾನಂದ ಸಾಗರನ ‘ಸೀರಿಯಲ್ ನಾಸ್ಟಾಲ್ಜಿಯ’ದ ಮೂಲಕ ಜನರ ಹಸಿವು ನೀಗುತ್ತದೆ ಎಂದಾಗಿದೆಯೋ ಈ ಆಡಳಿತಾರೂಢರು ಅಂದ್ಕೊಂಡಿರೋದು…?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...