Homeಮುಖಪುಟಕೊರೊನ ವಿರುದ್ಧ ಹೋರಾಡುವ ವಾರಿಯರ್‌ಗಳಿಗೆ 1 ಕೋಟಿ ರೂ ವಿಮೆ: ಕೇಜ್ರಿವಾಲ್

ಕೊರೊನ ವಿರುದ್ಧ ಹೋರಾಡುವ ವಾರಿಯರ್‌ಗಳಿಗೆ 1 ಕೋಟಿ ರೂ ವಿಮೆ: ಕೇಜ್ರಿವಾಲ್

- Advertisement -
- Advertisement -

ಕೊರೊನಾ ವೈರಸ್ ರೋಗಿಗಳನ್ನು ನಿಭಾಯಿಸುವಾಗ ಒಂದು ವೇಳೆ ಅವರಿಗೂ ಸೋಂಕು ತಗುಲಿ ಆರೋಗ್ಯ ಕಾರ್ಯಕರ್ತರು ಮೃತಪಟ್ಟರೆ, ಅವರ ಕುಟುಂಬಗಳಿಗೆ 1 ಕೋಟಿ ರೂ. ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಕೊರೊನಾ ರೋಗಿಗಳ ಆರೈಕೆಯಲ್ಲಿ ತೊಡಗಿರುವ ವೈದ್ಯರು, ದಾದಿಯರು, ಅರೆವೈದ್ಯರು, ತಂತ್ರಜ್ಞರು ಮತ್ತು ಇತರ ಆರೋಗ್ಯ ರಕ್ಷಣಾ ವೃತ್ತಿಪರರು 50 ಲಕ್ಷ ರೂ.ಗಳ ವಿಶೇಷ ವಿಮಾ ರಕ್ಷಣೆಯನ್ನು ಪಡೆಯಲಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ ಕೆಲ ದಿನಗಳ ನಂತರ ಅರವಿಂದ್ ಕೇಜ್ರಿವಾಲ್ ಅವರ ಪ್ರಕಟಣೆ ಹೊರಬಿದ್ದಿದೆ.

“ಕೊರೊನ ರೋಗಿಗಳಿಗೆ ಸೇವೆ ಸಲ್ಲಿಸುವಾಗ ನೈರ್ಮಲ್ಯ ಕಾರ್ಮಿಕರು, ವೈದ್ಯರು ಅಥವಾ ದಾದಿಯರು ಸೇರಿದಂತೆ ಯಾರಾದರೂ ಪ್ರಾಣ ಕಳೆದುಕೊಂಡರೆ, ಅವರ ಕುಟುಂಬಕ್ಕೆ ಅವರ ಸೇವೆಗೆ ಸಂಬಂಧಿಸಿದಂತೆ 1 ಕೋಟಿ ರೂ. ನೀಡಲಾಗುವುದು” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ.

“ಇದನ್ನು ಜಾರಿಗೊಳಿಸುವಾಗ ಅವರು ಖಾಸಗಿ ಅಥವಾ ಸರ್ಕಾರಿ ವಲಯದವರೇ ಎಂಬುದು ಅಪ್ರಸ್ತುತವಾಗುತ್ತದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರಾಜ್ಯದ ಕೊರೊನ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಾವಿರಾರು ರಾಜ್ಯ ಸರ್ಕಾರಿ ನೌಕರರಿಗೆ ವಿಮೆಯನ್ನು ಉತ್ತರಾಖಂಡ ಸರ್ಕಾರ ಸಹ ಘೋಷಿಸಿದೆ. ಮಾರಣಾಂತಿಕ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರವು ತಮ್ಮ ಪಾತ್ರಕ್ಕಾಗಿ ‘ಕೋವಿಡ್ ವಾರಿಯರ್ಸ್’ ಎಂದು ಗುರುತಿಸಲ್ಪಟ್ಟ ಆರೋಗ್ಯ, ನೈರ್ಮಲ್ಯ, ಪೊಲೀಸ್ ಮತ್ತು ಮಾಧ್ಯಮ ಸಿಬ್ಬಂದಿ ಸೇರಿದಂತೆ 68,457 ಉದ್ಯೋಗಿಗಳಿಗೆ ತಲಾ 4 ಲಕ್ಷ ರೂ. ವಿಮೆ ನೀಡಲಾಗುವುದು ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...