Homeಮುಖಪುಟ‘ಭಗವಾನ್ ರಾಮನು ಮಾಂಸಾಹಾರಿ..’; ವಿವಾದ ಹುಟ್ಟುಹಾಕಿದ ಎನ್‌ಸಿಪಿ ನಾಯಕ ಅವ್ಹಾದ್ ಹೇಳಿಕೆ

‘ಭಗವಾನ್ ರಾಮನು ಮಾಂಸಾಹಾರಿ..’; ವಿವಾದ ಹುಟ್ಟುಹಾಕಿದ ಎನ್‌ಸಿಪಿ ನಾಯಕ ಅವ್ಹಾದ್ ಹೇಳಿಕೆ

- Advertisement -
- Advertisement -

ಇದೆ ತಿಂಗಳ 22ರಂದು ಅಯೋಧ್ಯೆಯಲ್ಲಿ ಬೃಹತ್ ರಾಮ ಮಂದಿರದ ಉದ್ಘಾಟನೆಗೆ ಬರದ ಸಿದ್ಧತೆ ನಡೆಯುತ್ತಿದೆ. ಸಮಾರಂಭದಲ್ಲಿ ಯಾರ್ಯಾರು ಭಾಗವಹಿಸುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ಅವರು ‘ಭಗವಾನ್ ರಾಮನು ಮಾಂಸಾಹಾರಿ’ ಎಂದು ನೀಡಿರುವ ಹೇಳಿಕೆ ವಿವಾದವನ್ನು ಹುಟ್ಟುಹಾಕಿದ್ದಾರೆ.

ಎನ್‌ಸಿಪಿಯ ಶರದ್ ಪವಾರ್ ಬಣಕ್ಕೆ ಸೇರಿದ ಅವ್ಹಾದ್ ಅವರು ಬುಧವಾರ ಮಹಾರಾಷ್ಟ್ರದ ಶ್ರೀದಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ.

‘ರಾಮ ಬಹುಜನರಾದ ನಮಗೆ ಸೇರಿದವರು, ಅವರು ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಿದ್ದರು, ಅವರು ಬಹುಜನರು, ಅವರು (ಬಿಜೆಪಿ ಮತ್ತು ಸಂಘಪರಿವಾರ) ಭಗವಾನ್ ರಾಮನ ಉದಾಹರಣೆಯನ್ನು ನೀಡುವ ಮೂಲಕ ಎಲ್ಲರನ್ನು ಸಸ್ಯಾಹಾರಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಭಗವಾನ್ ರಾಮನು ಸಸ್ಯಾಹಾರಿ ಅಲ್ಲ, ಮಾಂಸಾಹಾರಿ. 14 ವರ್ಷಗಳಿಂದ ಕಾಡಿನಲ್ಲಿ ಉಳಿದುಕೊಂಡ ವ್ಯಕ್ತಿ ಸಸ್ಯಾಹಾರವನ್ನು ಹುಡುಕಲು ಅವನು ಎಲ್ಲಿಗೆ ಹೋಗುತ್ತಾನೆ’ ಎಂದು ಅವರು ಪ್ರಶ್ನಿಸಿದರು.

ಈ ತಿಂಗಳ ಅಂತ್ಯದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುವ ಹೊಸ ರಾಮ ಮಂದಿರದ ಮಹಾಮಸ್ತಕಾಭಿಷೇಕದ ಮುನ್ನ ಅವ್ಹಾದ್ ನೀಡಿರು ಹೇಳಿಕೆ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಅವರು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದು, ಕ್ರಮ ತೆಗೆದುಕೊಳ್ಳಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಎನ್‌ಸಿಪಿಯ ಅಜಿತ್ ಪವಾರ್ ಬಣದ ಬೆಂಬಲಿಗರ ದೊಡ್ಡ ಗುಂಪು ಬುಧವಾರ ರಾತ್ರಿ ಅವ್ಹಾದ್ ಅವರ ಮುಂಬೈ ಮನೆಯ ಹೊರಗೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಇಂದು ಬೆಳಿಗ್ಗೆ ಅವ್ಹಾದ್ ಅವರ ಪೋಸ್ಟರ್‌ ಹಿಡಿದು ಬಂದು, ಪದೇ ಪದೇ ಚಪ್ಪಲಿಯಿಂದ ಹೊಡೆದರು.

ಮುಂಜಾಗ್ರತಾ ಕ್ರಮವಾಗಿ ಅವ್ಹಾದ್ ಅವರ ಮನೆ ಮುಂದೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಿಜೆಪಿ ಶಾಸಕ ರಾಮ್ ಕದಂ ನೇತೃತ್ವದಲ್ಲಿ ಪ್ರತಿಭಟನಾಕಾರರು ಸಮೀಪದ ಪೊಲೀಸ್ ಠಾಣೆಗೆ ಮೆರವಣಿಗೆ ನಡೆಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಎನ್‌ಸಿಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದರು.

‘ರಾಮನ ಎಲ್ಲ ಭಕ್ತರು ಜಿತೇಂದ್ರ ಅವ್ಹಾದ್ ವಿರುದ್ಧ ಪೊಲೀಸ್ ಕೇಸ್ ದಾಖಲಿಸುತ್ತಾರೆ’ ಎಂದು ಕದಮ್ ಹೇಳಿದರು. ‘ಬಾಳಾಸಾಹೇಬರು ಬದುಕಿದ್ದರೆ ಇಂದಿನ ಸಾಮ್ನಾ ಪತ್ರಿಕೆಯು ರಾಮನನ್ನು ಮಾಂಸಾಹಾರಿ ಎಂದು ಕರೆದವರ ಬಗ್ಗೆ ಕಟುವಾಗಿ ಮಾತನಾಡುತ್ತಿತ್ತು’ ಎಂದು ಶಿವಸೇನೆಯ ಮುಖವಾಣಿಯನ್ನು ಉಲ್ಲೇಖಿಸಿ ಕದಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಆದರೆ ಇಂದಿನ ವಾಸ್ತವ ಏನು? ಭಗವಾನ್ ರಾಮನ ಬಗ್ಗೆ ಯಾರು ಬೇಕಾದರೂ ಟೀಕಿಸಬಹುದು; ಯಾರಾದರೂ ಹಿಂದೂಗಳನ್ನು ಗೇಲಿ ಮಾಡಬಹುದು; ಅವರು ಹೆದರುವುದಿಲ್ಲ. ಅವರು ಮಂಜುಗಡ್ಡೆಯಷ್ಟು ತಣ್ಣಗಿದ್ದಾರೆ. ಆದರೆ, ಚುನಾವಣೆಗಳು ಬಂದರೆ ಅವರು ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ’ ಎಂದು ಬಿಜೆಪಿ ಶಾಸಕ ಟೀಕಿಸಿದ್ದಾರೆ.

ಅವ್ಹಾದ್ ಅವರು ಶ್ರೀರಾಮನ ಬಗ್ಗೆ ಮಾತ್ರ ಮಾತನಾಡಿಲ್ಲ. ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರಿಂದ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

‘ಯಾರು ಏನೇ ಹೇಳಲಿ, ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಗಾಂಧಿ ಮತ್ತು ನೆಹರೂ ಅವರಿಂದ ಎಂಬುದು ಸತ್ಯ. ಗಾಂಧೀಜಿ ಅವರನ್ನು 1947 ರಲ್ಲಿ ಹತ್ಯೆ ಮಾಡಲಾಗಿಲ್ಲ. ಆದರೆ ಅವರ ಮೇಲೆ ಮೊದಲ ದಾಳಿ 1935 ರಲ್ಲಿ ನಡೆಯಿತು, ಎರಡನೆಯದು 1938 ರಲ್ಲಿ ಮತ್ತು ಮೂರನೆಯದು 1942 ರಲ್ಲಿ’ ಎಂದು ಹೇಳಿದರು.

‘ಗಾಂಧಿ ಮೇಲೆ ಅವರು ಅನೇಕ ಬಾರಿ ದಾಳಿ ಮಾಡಿದರು . ಏಕೆಂದರೆ, ಗಾಂಧೀಜಿ ಒಬ್ಬ ವ್ಯಾಪಾರಿ ಮತ್ತು ಒಬಿಸಿ (ಇತರ ಹಿಂದುಳಿದ ವರ್ಗಗಳು) ಆಗಿದ್ದರು. ಇಷ್ಟು ದೊಡ್ಡ ಸ್ವಾತಂತ್ರ್ಯ ಚಳುವಳಿಯ ನಾಯಕ ಒಬಿಸಿ ಎಂಬುದು ಅವರಿಗೆ ( ಆರ್ಎಸ್ಎಸ್) ಸ್ವೀಕಾರಾರ್ಹವಲ್ಲ’ ಎಂದರು.

ಇದನ್ನೂ ಓದಿ; ಖರ್ಗೆ ನೇತೃತ್ವದಲ್ಲಿ ‘ಕೈ’ ಹಿಡಿದ ಶರ್ಮಿಳಾ: ಕಾಂಗ್ರೆಸ್ ಜತೆಗೆ ವೈಎಸ್ಆರ್ ತೆಲಂಗಾಣ ಪಕ್ಷ ವಿಲೀನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...