Homeಮುಖಪುಟಮಧ್ಯಪ್ರದೇಶ: ರಾಮನವಮಿಯಂದು ದೇವಸ್ಥಾನದ ಬಾವಿಯ ಛಾವಣಿ ಕುಸಿದು 35ಕ್ಕೂ ಹೆಚ್ಚು ಜನ ಸಾವು

ಮಧ್ಯಪ್ರದೇಶ: ರಾಮನವಮಿಯಂದು ದೇವಸ್ಥಾನದ ಬಾವಿಯ ಛಾವಣಿ ಕುಸಿದು 35ಕ್ಕೂ ಹೆಚ್ಚು ಜನ ಸಾವು

- Advertisement -
- Advertisement -

ರಾಮನವಮಿಯ ದಿನ ದೇವಸ್ಥಾನದಲ್ಲಿ ಮೆಟ್ಟಿಲುಬಾವಿಯ ಛಾವಣಿ ಕುಸಿದು 35 ಜನ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಗುರುವಾರ ನಡೆದಿದೆ ಎಂದು ಎಎನ್‌ಐ ವರದಿ ಮಾಡಿದೆ.

ನಗರದ ಬೆಳೇಶ್ವರ ಮಹಾದೇವ್ ಝುಲೆಲಾಲ್ ಮಹದೇವ ದೇವಸ್ಥಾನದಲ್ಲಿ ರಾಮನವಮಿ ಹಿನ್ನೆಲೆ ಹೋಮಹವನ ಪೂಜೆ ನಡೆಯುತ್ತಿತ್ತು. ಈಸಂದರ್ಭದಲ್ಲಿ ಛಾವಣಿ ಕುಸಿದು ದೊಡ್ಡ ಅವಘಟ ಸಂಭವಿಸಿದೆ.

ಈ ದುರ್ಘಟನೆ ಬಗ್ಗೆ ಸ್ಥಳೀಯರು ಮಾತನಾಡಿದ್ದು, ದೇವಸ್ಥಾನದ ಮೆಟ್ಟಿಲು ಬಾವಿಯ ಸಿಮೆಂಟ್ ಕುಸಿದ 40ಕ್ಕೂ ಹೆಚ್ಚು ಭಕ್ತರು ಬಾವಿಯೊಳಗೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ಬಾವಿಗೆ ಬಿದ್ದವರಲ್ಲಿ 35 ಜನರ ಶವ ಹೊರತೆಗೆಯಲಾಗಿದೆ. ಅದರಲ್ಲಿ 11 ಮಹಿಳೆಯರು ಸೇರಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಅನೇಕ ಜನ ಸಾವಿಗೀಡಾಗಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆಂದು ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ: ನಮಾಜ್ ವೇಳೆ ಮಸೀದಿ ಮುಂದೆ ಮೈಕ್‌ ಬಳಸಿ ಮೆರವಣಿಗೆ ಮಾಡಿದ ಹಿಂದುತ್ವ ಗುಂಪು: ಕಲ್ಲು ತೂರಾಟ

ಗುರುವಾರ ರಾಮನವಮಿ ಹಿನ್ನೆಲೆ ದೇವಸ್ಥಾನದಲ್ಲಿ ಅತಿಹೆಚ್ಚು ಜನ ಸೇರಿದ್ದರು. ಜನದಟ್ಟನೆಯ ಭಾರದಿಂದ ಛಾವಣಿ ಕುಸಿದಿದೆ ಭಾರೀ ಕಾಲ್ತುಳಿತದಿಂದಾಗಿ ಮೆಟ್ಟಿಲುಬಾವಿಯ ನೆಲವು ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾವಿಗೆ ಬಿದ್ದವರನ್ನು ಹಗ್ಗ ಮತ್ತು ಏಣಿ ಸಹಾಯದಿಂದ ರಕ್ಷಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

”ಇಂಧೋರ್‌ನಲ್ಲಿ ನಡೆದ ದುರ್ಘಟನೆಯಿಂದ ತುಂಬಾ ನೋವಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ರಾಜ್ಯ ಸರ್ಕಾರವು ತ್ವರಿತ ಗತಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಮುನ್ನಡೆಸುತ್ತಿದೆ. ಎಲ್ಲಾ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗಾಗಿ ನಾನು ಪ್ರಾರ್ಥಿಸಿಕೊಳ್ಳುತ್ತೇನೆ” ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...