Homeಮುಖಪುಟನಮಾಜ್ ವೇಳೆ ಮಸೀದಿ ಮುಂದೆ ಮೈಕ್‌ ಬಳಸಿ ಮೆರವಣಿಗೆ ಮಾಡಿದ ಹಿಂದುತ್ವ ಗುಂಪು: ಕಲ್ಲು ತೂರಾಟ

ನಮಾಜ್ ವೇಳೆ ಮಸೀದಿ ಮುಂದೆ ಮೈಕ್‌ ಬಳಸಿ ಮೆರವಣಿಗೆ ಮಾಡಿದ ಹಿಂದುತ್ವ ಗುಂಪು: ಕಲ್ಲು ತೂರಾಟ

- Advertisement -
- Advertisement -

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಾಲ್ಧಿ ಪಟ್ಟಣದ ಮಸೀದಿಯಲ್ಲಿ ಮುಸ್ಲಿಂ ಸಮುದಾಯದವರು ಮಂಗಳವಾರ ನಮಾಜ್ ಮಾಡುತ್ತಿರುವ ವೇಳೆ ಹಿಂದುತ್ವ ಗುಂಪೊಂದು ಧ್ವನಿವರ್ಧಕದಲ್ಲಿ ಜೋರಾಗಿ ಹಾಡು ಹಾಕಿಕೊಂಡು ಮೆರವಣಿಗೆ ಹೊರಟಿದ್ದರು. ಇದರಿಂದ ಎರಡೂ ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಈ ಬಗ್ಗೆ ಮಾತನಾಡಿದ   ಪೊಲೀಸ್ ವರಿಷ್ಠಾಧಿಕಾರಿ ಎಂ ರಾಜ್‌ಕುಮಾರ್ ಅವರು, ಈ ಹಿಂಸಾಚಾರದಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಗಲಭೆ ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ ಮತ್ತು 45 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಜಲಗಾಂವ್‌ನಿಂದ ನಾಸಿಕ್ ಜಿಲ್ಲೆಯ ವಾಣಿಗೆ ತೆರಳುತ್ತಿದ್ದ ಹಿಂದುತ್ವವಾದಿಗಳ ಧಾರ್ಮಿಕ ಮೆರವಣಿಗೆಯು ಪಾಲ್ಧಿ ಗ್ರಾಮವನ್ನು ಹಾದುಹೋದಾಗ ಈ ಘಟನೆ ಸಂಭವಿಸಿದೆ. ಮಸೀದಿಯ ಮುಂದೆ ಜೋರಾಗಿ ಸಂಗೀತ ನುಡಿಸುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ವಾಗ್ವಾದ ನಡೆದಿದೆ. ಇದು ಜಗಳ ಮುಂದುವರೆದು ಕಲ್ಲು ತೂರಾಟಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

”ಮೆರವಣಿಗೆಯು ಮಸೀದಿಯನ್ನು ದಾಟುವವರೆಗೂ ಧ್ವನಿವರ್ಧಕವನ್ನು ಸ್ಥಗಿತಗೊಳಿಸಿದ್ದರು. ಮಸೀದಿಯನ್ನು ದಾಟಿದ ನಂತರ ಸಂಗೀತವನ್ನು ಮರುಪ್ರಾರಂಭಿಸಿದರು, ಆದರೂ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು” ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಕೂಡಲೇ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಎಫ್‌ಐಆರ್‌ಗಳಲ್ಲಿ ಒಂಬತ್ತು ಹಿಂದೂಗಳು ಮತ್ತು 63 ಮುಸ್ಲಿಮರನ್ನು ಹೆಸರಿಸಲಾಗಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂಸಾಚಾರದ ಸಮಯದಲ್ಲಿ ಆ ಪ್ರದೇಶದ ಮುಸ್ಲಿಮರ ಮನೆಗಳನ್ನು ಲೂಟಿ ಮಾಡಲಾಗಿದೆ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.

ಕಳೆದೆರಡು ತಿಂಗಳುಗಳಿಂದ ಮಹಾರಾಷ್ಟ್ರದ ಹಲವು ನಗರಗಳಲ್ಲಿ ನಡೆದ ರ್ಯಾಲಿಗಳಲ್ಲಿ ಹಿಂದುತ್ವ ಗುಂಪುಗಳು ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದವು, ಅದೇ ರೀತಿ ಜಲಗಾಂವ್‌ನಲ್ಲೂ ಹಿಂದುತ್ವ ಗುಂಪುಗಳು ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದವು.

ಜಲಗಾಂವ್‌ನಲ್ಲಿ ನಡೆದ ಇಂತಹ ರ್ಯಾಲಿಯಲ್ಲಿ, ಸುದರ್ಶನ ನ್ಯೂಸ್ ಸಂಪಾದಕ ಸುರೇಶ್ ಚವ್ಹಾಂಕೆ ಅವರು “ಲವ್ ಜಿಹಾದ್” ವಿರುದ್ಧ ಕಾನೂನು ಜಾರಿಯಾಗಬೇಕು ಎಂದು ಹೇಳಿದ್ದರು. ಮಸೀದಿ ಮತ್ತು ಮದರಸಾಗಳಲ್ಲಿ ಮುಸ್ಲಿಂ ಹುಡುಗರಿಗೆ ನಮ್ಮ ಹಿಂದು ಸಹೋದರಿಯರನ್ನು ಹೇಗೆ ಮರುಳು ಮಾಡಬೇಕೆಂದು ಕಲಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...