Homeಮುಖಪುಟಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಟ್ರಾನ್ಸ್‌ಜಂಡರ್‌ಗಳಿಗೆ ಮೀಸಲಾತಿ ಒದಗಿಸಿ: ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಟ್ರಾನ್ಸ್‌ಜಂಡರ್‌ಗಳಿಗೆ ಮೀಸಲಾತಿ ಒದಗಿಸಿ: ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

- Advertisement -
- Advertisement -

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಟ್ರಾನ್ಸ್‌ಜಂಡರ್‌ಗಳಿಗೆ ಮೀಸಲಾತಿಯನ್ನು ನೀಡಲು ತಮಿಳುನಾಡು ಸರಕಾರಕ್ಕೆ ಮದ್ರಾಸ್ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ  ಅವರ ಪೀಠ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟ್ರಾನ್ಸ್ ಜಂಡರ್‌ಗಳಿಗೆ  ಮೀಸಲಾತಿ ಒದಗಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸಿ ಮೀಸಲಾತಿಯನ್ನು ನೀಡುವಂತೆ ಸರಕಾರಕ್ಕೆ ಸೂಚಿಸಿದೆ.

ಮೀಸಲಾತಿ ಮೂಲಕ ಟ್ರಾನ್ಸ್‌ಜಂಡರ್  ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮಾತ್ರವಲ್ಲದೆ ಅವರ ಸಕ್ರಿಯ  ಸಹಭಾಗಿತ್ವದ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿದೆ ಎಂದು ಕೋರ್ಟ್ ಹೇಳಿದೆ.

ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಟ್ರಾನ್ಸ್‌ಜಂಡರ್ ಸಮುದಾಯ ಎದುರಿಸುತ್ತಿರುವ ತಾರತಮ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಾಲಯ ಈ  ತೀರ್ಪು ನೀಡಿದೆ. ನ್ಯಾಯಮೂರ್ತಿ ಸುಬ್ರಮಣ್ಯಂ ಅವರು ತಾರತಮ್ಯದ  ಕಿತ್ತೊಗೆಯಲು ಮತ್ತು ಟ್ರಾನ್ಸ್‌ಜಂಡರ್‌ಗಳಿಗೆ ಸಮಾಜದ ಮಖ್ಯ ವಾಹಿನಿಗೆ ತರಲು ಮಹತ್ವದ ಸಮಯ ಇದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೆ ಜಸ್ಟಿಸ್ಎಸ್ ಎಂ ಸುಬ್ರಮಣ್ಯಂ ಅವರು ತಮಿಳುನಾಡು ಪಂಚಾಯತ್ ಕಾಯಿದೆ, 1994 ರ ಮೂಲಕ ನೈನಾರ್ಕುಪ್ಪಂ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರನ್ನು ಪದಚ್ಯುತಗೊಳಿಸಲು ಕ್ರಮಕೈಗೊಳ್ಳುವಂತೆ ಕಡಲೂರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿಯೇ ತೃತೀಯಲಿಂಗಿಗಳಿಗೆ ನಿವೇಶನ ಮಂಜೂರು ಮಾಡುವುದರಿಂದ ಯುವಕರ ಭವಿಷ್ಯದ ಜೀವನಕ್ಕೆ ಧಕ್ಕೆಯಾಗುತ್ತದೆ ಎಂದು ಗ್ರಾ.ಪಂ.ಅಧ್ಯಕ್ಷ ಮೋಹನ್, ಟ್ರಾನ್ಸ್‌ಜಂಡರ್‌ಗಳಿಗೆ ಪಟ್ಟಾ ಮಂಜೂರು ಮಾಡದಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾಡಳಿತ ತನ್ನ ಮನವಿ ಸ್ವೀಕರಿಸಿಲ್ಲ ಮತ್ತು ಟ್ರಾನ್ಸ್‌ಜಂಡರ್‌ಗಳಿಗೆ ಭೂಮಿ  ಹಂಚಿಕೆ ರದ್ದುಗೊಳಿಸುತ್ತಿಲ್ಲ ಎಂದು ಆರೋಪಿಸಿ ಮೋಹನ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ತೀರ್ಪಿನಲ್ಲಿ ಟ್ರಾನ್ಸ್‌ಜಂಡರ್‌ಗಳಿಗೆ  ಅವರ ಅರ್ಹತೆಯ ಆಧಾರದ ಮೇಲೆ ಉಚಿತ ಮನೆ ನಿವೇಶನ ಪಟ್ಟಾ ಮಂಜೂರು ಮಾಡುವಂತೆ ಮತ್ತು ಎಲ್ಲಾ ಧಾರ್ಮಿಕ ಸಂಸ್ಥೆಗಳಲ್ಲಿ ಗ್ರಾಮೋತ್ಸವ, ಸಮಾರಂಭಗಳಲ್ಲಿ ಭಾಗವಹಿಸಲು ಮತ್ತು ಪೂಜೆ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ನ್ಯಾಯಾಧೀಶರು ಸೂಚಿಸಿದರು.

ಟ್ರಾನ್ಸ್‌ಜಂಡರ್‌ಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಥಮಿಕ ಕ್ರಮವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ನೀಡಲು ಎಲ್ಲಾ ಸೂಕ್ತ ಕ್ರಮಗಳನ್ನು ಪ್ರಾರಂಭಿಸಲು ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಲಾಗಿದೆ ಎಂದು ನ್ಯಾಯಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ.

ಇದನ್ನು ಓದಿ: ಭಾರತದ ಕುಸ್ತಿ ಫೆಡರೇಶನ್‌ ಸದಸ್ಯತ್ವವನ್ನು ಅಮಾನತುಗೊಳಿಸಿದ ವಿಶ್ವ ಕುಸ್ತಿ ಸಂಸ್ಥೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...