HomeUncategorizedಮಹಾರಾಷ್ಟ್ರ: ಬಿಜೆಪಿ ರಾಜ್ಯಾಧ್ಯಕ್ಷರ ಜೂಜಾಟದ ಫೋಟೋ ಹಂಚಿಕೊಂಡ ರಾವುತ್: ವಿವಾದ

ಮಹಾರಾಷ್ಟ್ರ: ಬಿಜೆಪಿ ರಾಜ್ಯಾಧ್ಯಕ್ಷರ ಜೂಜಾಟದ ಫೋಟೋ ಹಂಚಿಕೊಂಡ ರಾವುತ್: ವಿವಾದ

- Advertisement -
- Advertisement -

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತ ಸಂಜಯ್ ರಾವುತ್ ಅವರು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಮಕಾವ್‌ನಲ್ಲಿ ಜೂಜಾಟದಲ್ಲಿ ತೊಡಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ವಿವಾದವನ್ನು ಸೃಷ್ಟಿಸಿದೆ.

ಬವಾಂಕುಲೆ ಪೋಟೋಗೆ ಪ್ರತಿಯಾಗಿ ಮುಂಬೈನಲ್ಲಿ ಖ್ಯಾತ ಇಂಗ್ಲಿಷ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಉದ್ಧವ್ ಅವರ ಪುತ್ರ ಆದಿತ್ಯ ಠಾಕ್ರೆ ಗ್ಲಾಸ್ ಹಿಡಿದಿರುವ ಚಿತ್ರವನ್ನು ಹಂಚಿಕೊಂಡು ಬಿಜೆಪಿ ಪ್ರತಿದಾಳಿ ನಡೆಸಿದೆ.

ಮಾಜಿ ಸಚಿವ ಮತ್ತು ಎಂಎಲ್‌ಸಿ ಬವಾಂಕುಲೆ ಅವರ ಫೋಟೋ ಇದೀಗ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ ನಾಯಕರ ಟೀಕೆಗೆ ಕಾರಣವಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಸಂಜಯ್‌ ರಾವತ್‌, ಈ ವ್ಯಕ್ತಿ ಮಕಾವ್‌ನ ಕ್ಯಾಸಿನೊದಲ್ಲಿ ಜೂಜಾಡುತ್ತಿದ್ದಾರೆ. ಫೋಟೋವನ್ನು ಝೂಮ್ ಮಾಡಲು ಪ್ರಯತ್ನಿಸಿ ಅವು ಒಂದೇ ಆಗಿವೆಯೇ? ಚಿತ್ರ ಇನ್ನೂ ಬಾಕಿಯಿದೆ ಎಂದು ಹೇಳಿದರು. ಈ ಜೂಜಾಡುತ್ತಿದ್ದ ವ್ಯಕ್ತಿ ಒಂದೇ ದಿನದಲ್ಲಿ 3.50 ಕೋಟಿ ರೂಪಾಯಿ ಕಳೆದುಕೊಂಡಿದ್ದಾನೆ ಎಂದು ರಾವುತ್ ಹೇಳಿಕೊಂಡಿದ್ದಾರೆ.

ಈ ಬಗ್ಗೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲ್ ಅವರು ಪೋಟೋದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಯುವಕರು ನಿರುದ್ಯೋಗದಿಂದ ತೊಂದರೆಯಿಂದಿದ್ದಾರೆ.  ಹಣದುಬ್ಬರ ಜನರ ಬದುಕನ್ನು ದುಬಾರಿಯಾಗಿಸಿದೆ. ಆದರೆ ಆಡಳಿತಾರೂಢ ಬಿಜೆಪಿಗೆ ಇದು ಯಾವುದೇ ಪರಿಣಾಮ ಬೀರಿಲ್ಲ. ಮಕಾವುನಲ್ಲಿ ಜೂಜಾಟದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಶಿವಸೇನೆ ಸಂಸದ ಸಂಜಯ್ ರಾವತ್ ಫೋಟೋಗಳನ್ನು ಹಾಕಿದ್ದಾರೆ. ಈ ಫೋಟೋ ನಿಜವೇ? ಬವಾಂಕುಲೆ ಜೂಜಾಡುತ್ತಿದ್ದನೇ? ಮತ್ತು ಬವಂಕುಲೆಗೆ ಕೋಟಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ  ಸಂಜಯ್‌ ರಾವುತ್, ನನ್ನ ಬಳಿ ಅವರ 27 ಫೋಟೋಗಳು ಮತ್ತು 5 ವೀಡಿಯೊಗಳಿವೆ. ಆದರೆ ಅವುಗಳನ್ನು ಪ್ರಕಟಿಸಿಲ್ಲ. ನಾನು ಆ ವೀಡಿಯೊಗಳನ್ನು ಸಾರ್ವಜನಿಕಗೊಳಿಸಿದರೆ, ಅದು ಅವರಿಗೆ ಮತ್ತು ಪಕ್ಷಕ್ಕೆ ದೊಡ್ಡ ಮುಜುಗರವನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಬವಾಂಕುಲೆ ಅವರು ಈ ಕುರಿತು ಸ್ಪಷ್ಟೀಕರಣವನ್ನು ನೀಡಿದ್ದು, ನಾನು ಕುಟುಂಬದ ಜೊತೆ ಪ್ರವಾಸದಲ್ಲಿ ಮಕಾವುನದಲ್ಲಿದ್ದೆ. ಇದು ನಾನು ಮಕಾವ್‌ನಲ್ಲಿ ನನ್ನ ಕುಟುಂಬದೊಂದಿಗೆ ಉಳಿದುಕೊಂಡಿರುವ ಹೋಟೆಲ್‌ನ ಪ್ರದೇಶವಾಗಿದೆ. ಹೋಟೆಲ್ ನೆಲ ಮಹಡಿಯಲ್ಲಿ ರೆಸ್ಟೋರೆಂಟ್ ಇದೆ. ನಾನು ರಾತ್ರಿ ಊಟದ ನಂತರ ನನ್ನ ಕುಟುಂಬದೊಂದಿಗೆ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದಾಗ ಯಾರೋ ತೆಗೆದ ಫೋಟೋ ಇದು ಎಂದು ಹೇಳಿದ್ದಾರೆ.

ಇದನ್ನು ಓದಿ: ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಅತಿಥಿ: ವಿವಾದ ಸೃಷ್ಟಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...