ಕೊರೊನಾ ಉಲ್ಬಣ: ಮೇ 1ರ ವರೆಗೆ ಮಹಾರಾಷ್ಟ್ರದಲ್ಲಿ ಕರ್ಫ್ಯೂ | Naanu gauri
PC: Eye On Asia

ಈಗಾಗಲೇ ಏಪ್ರಿಲ್ 15 ರಿಂದ ಲಾಕ್‌ಡೌನ್ ರೀತಿಯ ನಿರ್ಬಂಧಗಳು ಜಾರಿಯಲ್ಲಿರುವ ಮಹಾರಾಷ್ಟ್ರದಲ್ಲಿ 15 ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲು ಸರ್ಕಾರವು ಮುಂದಾಗಿದೆ. ಮಂಗಳವಾರ ನಡೆದ ಕ್ಯಾಬಿನೆಟ್ ಸಭೆಯು ಬುಧವಾರ ರಾತ್ರಿಯಿಂದ ಕಟ್ಟುನಿಟ್ಟಾದ ಲಾಕ್‌ಡೌನ್ ವಿಧಿಸಲು ಸರ್ವಾನುಮತದಿಂದ ನಿರ್ಧರಿಸಿದೆ.

ಅಂತಿಮ ಘೋಷಣೆಯನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ಮಾಡಲಿದ್ದಾರೆ ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ತಿಳಿಸಿದ್ದಾರೆ. ಈ ಸಭೆಯ ವೇಳೆ ರಾಜ್ಯ ಮಂಡಳಿಯ 10 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲು ಸಹ ಸಚಿವ ಸಂಪುಟ ನಿರ್ಧರಿಸಿದೆ.

ಇದನ್ನೂ ಓದಿ: ವಿಕಾಸ್ ದುಬೆ ಎನ್‌ಕೌಂಟರ್‌; ಯುಪಿ ಪೊಲೀಸ್‌ಗೆ ಕ್ಲೀನ್‌ ಚಿಟ್‌- ಯಾರೂ ಪುರಾವೆ ನೀಡಿಲ್ಲ!

ರಾಜ್ಯವು ವೈದ್ಯಕೀಯ ಆಮ್ಲಜನಕ ಮತ್ತು ರೆಮ್‌‌ಡೆಸಿವಿರ್ ಚುಚ್ಚುಮದ್ದಿನ ತೀವ್ರ ಕೊರತೆಯನ್ನು ಎದುರಿಸುತ್ತಿದೆ, ಎಲ್ಲಾ ಆಸ್ಪತ್ರೆಗಳ ಹಾಸಿಗೆಗಳು ತುಂಬಿಹೋಗಿವೆ. ನಾವು ಈಗ ಕಾರ್ಯನಿರ್ವಹಿಸದಿದ್ದರೆ, ಕೊರೊನಾ ನಿರ್ವಹಿಸಲು ಕಷ್ಟವಾಗುತ್ತದೆ ಎಂದು ರಾಜೇಶ್‌ ಟೋಪೆ ಹೇಳಿದ್ದಾರೆ.

ರಾಜ್ಯದಲ್ಲಿ ಮಂಗಳವಾರ 62,097 ಹೊಸ ಕೊರೊನಾ ವೈರಸ್ ಪ್ರಕರಣಗಲು ವರದಿಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ 39,60,359 ಜನರಿಗೆ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ಒಂದು ದಿನದಲ್ಲಿ 519 ರೋಗಿಗಳು ಸೋಂಕಿಗೆ ಬಲಿಯಾಗಿದ್ದಾರೆ, ಇದುವರೆಗೂ ರಾಜ್ಯದಲ್ಲಿ ಒಟ್ಟು 61,343 ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೊತೆಗೆ, ಕಳೆದ ಒಂದು ದಿನಗಳಲ್ಲಿ 54,224 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಸೋಂಕಿನಿಂದ ಒಟ್ಟು 32,13,464 ಜನರು ಚೇತರಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದ ಸಕ್ರಿಯ ಕೊರೊನ ಸೋಂಕಿನ ಪ್ರಕರಣಗಳು 6,83,856 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್‌ಗಾಗಿ ರೋಗಿಗಳು ಕಾಯಬೇಕೆಂದು ಹೇಳುತ್ತೀರಾ?: ಕೇಂದ್ರದ ವಿರುದ್ಧ ಕಿಡಿಕಾರಿದ ಹೈಕೋರ್ಟ್

ವಿಡಿಯೊ ನೋಡಿ: ಸಾರಿಗೆ ನೌಕರರು ಸೇರಿದಂತೆ ಯಾರೆಲ್ಲ ಹೋರಾಟ ಮಾಡುತ್ತಿದ್ದಾರೋ ಅವರ ಜತೆ ಕಾಂಗ್ರೆಸ್‌ ನಿಲ್ಲಲಿದೆ: ಡಿಕೆ ಶಿವಕುಮಾರ್‌

LEAVE A REPLY

Please enter your comment!
Please enter your name here