Homeಅಂತರಾಷ್ಟ್ರೀಯಇಸ್ರೇಲ್‌ ಪ್ರಜೆಗಳಿಗೆ ಪ್ರವೇಶ ನಿಷೇಧಿಸಿದ ಮಾಲ್ಡೀವ್ಸ್‌

ಇಸ್ರೇಲ್‌ ಪ್ರಜೆಗಳಿಗೆ ಪ್ರವೇಶ ನಿಷೇಧಿಸಿದ ಮಾಲ್ಡೀವ್ಸ್‌

- Advertisement -
- Advertisement -

ಗಾಝಾದಲ್ಲಿ ಹತ್ಯಾಕಾಂಡವನ್ನು ನಡೆಸುತ್ತಿರುವ ಇಸ್ರೇಲ್‌ ವಿರುದ್ಧ ಮಾಲ್ಡೀವ್ಸ್ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದು, ಇಸ್ರೇಲ್‌ ಪ್ರಜೆಗಳಿಗೆ ಮಾಲ್ಡೀವ್ಸ್‌ಗೆ ನಿಷೇಧವನ್ನು ವಿಧಿಸಿದೆ.

ಬಿಳಿ ಮರಳಿನ ಕಡಲತೀರಗಳು ಮತ್ತು ಐಷಾರಾಮಿ ರೆಸಾರ್ಟ್‌ಗಳಿಗೆ ಹೆಸರುವಾಸಿಯಾದ ಹಿಂದೂ ಮಹಾಸಾಗರದ ದ್ವೀಪಸಮೂಹ ಮಾಲ್ಡೀವ್ಸ್‌ ಸತತ 8 ತಿಂಗಳಿನಿಂದ ಗಾಝಾದಲ್ಲಿ ಇಸ್ರೇಲ್‌ ಆಕ್ರಮಣವನ್ನು ಬಲವಾಗಿ ವಿರೋಧಿಸಿದೆ ಮತ್ತು ಅಮಾಯಕ ಪ್ಯಾಲೆಸ್ತೀನ್‌ ನಾಗರಿಕರ ಹತ್ಯಾಕಾಂಡವನ್ನು ಖಂಡಿಸಿದೆ. ಇದೀಗ ಯುದ್ಧ ಬಳಿಕ ಇಸ್ರೇಲ್‌ ಪ್ರಜೆಗಳಿಗೆ ಪ್ರವೇಶ ನಿರಾಕರಿಸಿದ ಜಗತ್ತಿನ ಮೊದಲ ದೇಶ ಮಾಲ್ಡೀವ್ಸ್ ಆಗಿದೆ.

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್ ಮುಯಿಝು ಇಸ್ರೇಲ್‌ ಪಾಸ್‌ಪೋರ್ಟ್‌ಗಳ ಮೇಲೆ ನಿಷೇಧ ಹೇರಲು ನಿರ್ಧರಿಸಿದ್ದಾರೆ ಎಂದು ಅವರ ಕಚೇರಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಹೊಸ ಕಾನೂನು ಯಾವಾಗ ಜಾರಿಗೆ ಬರಲಿದೆ ಎಂಬ ವಿವರಗಳನ್ನು ಕಚೇರಿಯು ಸ್ಪಷ್ಟವಾಗಿ ನೀಡಿಲ್ಲ.

‘ಮಾಲ್ಡೀವಿಯನ್ಸ್ ಇನ್ ಸೋಲಿಡಾರಿಟಿ ವಿಥ್ ಪ್ಯಾಲೆಸ್ತೀನ್‌’ ಎಂಬ ರಾಷ್ಟ್ರೀಯ ನಿಧಿಸಂಗ್ರಹ ಅಭಿಯಾನವನ್ನು ಮುಯಿಝು ಘೋಷಿಸಿದ್ದಾರೆ. ಯುನೈಟೆಡ್ ನೇಷನ್ಸ್ ರಿಲೀಫ್ ಆಂಡ್ ವರ್ಕ್ಸ್ ಏಜೆನ್ಸಿ ಫಾರ್ ಫೆಲೆಸ್ತೀನ್ ರೆಫ್ಯೂಜೀಸ್ ಇನ್ ಈಸ್ಟ್ (UNRWA)ನ ಸಹಕಾರದೊಂದಿಗೆ ನಿಧಿಸಂಗ್ರಹ ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ಫೆಲೆಸ್ತೀನ್‌ಗೆ ಸಹಕಾರ ನೀಡಲು ಮಾಲ್ದೀವ್ಸ್‌ ವಿಶೇಷ ರಾಯಭಾರಿಯನ್ನು ನೇಮಿಸಲಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷ ಸುಮಾರು 11,000 ಇಸ್ರೇಲ್‌ ಪ್ರಜೆಗಳು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು, ಇದು ಮಾಲ್ಡೀವ್ಸ್‌ಗೆ ಆಗಮಿಸಿದ್ದ ಒಟ್ಟು ಪ್ರವಾಸಿಗರ ಶೇಕಡಾ 0.6ರಷ್ಟಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಇಸ್ರೇಲ್‌ ಪ್ರಜೆಗಳ ಸಂಖ್ಯೆ 528ಕ್ಕೆ ಇಳಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 88 ಪ್ರತಿಶತದಷ್ಟು ಕಡಿಮೆಯಾಗಿದೆ.

ಗಾಝಾ ಯುದ್ಧದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಇಸ್ರೇಲ್‌ಗಳಿಗೆ ನಿಷೇಧಿಸುವಂತೆ ಮಾಲ್ಡೀವ್ಸ್‌ನ ವಿರೋಧ ಪಕ್ಷಗಳು ಮತ್ತು ಸರ್ಕಾರದ ಮಿತ್ರಪಕ್ಷಗಳು ಮುಯಿಝು ಮೇಲೆ ಒತ್ತಡ ಹೇರಿದೆ. ಅಕ್ಟೋಬರ್ 7ರಿಂದ ನಡೆದ ಸಂಘರ್ಷದಲ್ಲಿ ಕನಿಷ್ಠ 36,439 ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಮತ್ತು 82,627 ಮಂದಿ ಗಾಯಗೊಂಡಿದ್ದಾರೆ.

1990ರ ದಶಕದ ಆರಂಭದಲ್ಲಿ ಇಸ್ರೇಲ್‌ ಪ್ರವಾಸಿಗರ ಮೇಲಿನ ಹಿಂದಿನ ನಿಷೇಧವನ್ನು ಮಾಲ್ಡೀವ್ಸ್ ತೆಗೆದುಹಾಕಿ  2010ರಲ್ಲಿ ಸಂಬಂಧಗಳನ್ನು ಪುನಃಸ್ಥಾಪಿಸಲು ಮುಂದಾಗಿತ್ತು. ಆದರೆ ಫೆಬ್ರವರಿ 2012ರಲ್ಲಿ ಅಧ್ಯಕ್ಷ ಮೊಹಮ್ಮದ್ ನಶೀದ್ ಅವರ ಸರಕಾರದ ಪತನದ ನಂತರ ಈ ಪ್ರಯತ್ನಗಳು ವಿಫಲವಾಗಿದ್ದವು.

ನಿಷೇಧಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ವಿದೇಶಾಂಗ ಸಚಿವಾಲಯದ ವಕ್ತಾರರು ಪ್ರಸ್ತುತ ಮಾಲ್ಡೀವ್ಸ್‌ನಲ್ಲಿರುವ ನಾಗರಿಕರನ್ನು ನಿರ್ಗಮಿಸುವಂತೆ ಸೂಚಿಸಿದ್ದಾರೆ. ನೀವು ಸಂಕಷ್ಟಕ್ಕೆ ಸಿಲುಕಿದರೆ, ನಮಗೆ ಸಹಾಯ ಮಾಡುವುದು ಮತ್ತೆ ಕಷ್ಟಕರವಾಗಿರುತ್ತದೆ. ಮಾಲ್ಡೀವ್ಸ್‌ನಲ್ಲಿ ಉಳಿದುಕೊಂಡಿರುವ ಇಸ್ರೇಲ್‌ ನಾಗರಿಕರು ತಕ್ಷಣಕ್ಕೆ ಅಲ್ಲಿಂದ ವಾಪಾಸ್ಸಾಗುವಂತೆ ಶಿಫಾರಸು ಮಾಡಲಾಗಿದೆ.

ಇದಲ್ಲದೆ ಇಸ್ರೇಲ್‌ ಪಾಸ್‌ಪೋರ್ಟ್ ಹೊಂದಿರುವವರಿಗೆ ಅಲ್ಜೀರಿಯಾ, ಬಾಂಗ್ಲಾದೇಶ, ಬ್ರೂನಿ, ಇರಾನ್, ಇರಾಕ್, ಕುವೈತ್, ಲೆಬನಾನ್, ಲಿಬಿಯಾ, ಪಾಕಿಸ್ತಾನ, ಸೌದಿ ಅರೇಬಿಯಾ, ಸಿರಿಯಾ ಮತ್ತು ಯೆಮೆನ್‌ಗೆ ಪ್ರವೇಶಕ್ಕೆ ನಿಷೇಧಿಸಲಾಗಿದೆ.

ಇದನ್ನು ಓದಿ: ಸರಿಯಾದ ಸಮಯಕ್ಕೆ ಬಂಧಿಸದ ಕಾರಣ ನೀರವ್ ಮೋದಿ, ಮಲ್ಯ, ಮೆಹುಲ್ ಚೋಕ್ಸಿ ಭಾರತದಿಂದ ಪಲಾಯನ ಮಾಡಿದ್ರು: ಮುಂಬೈ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕುವೈತ್‌ ಅಗ್ನಿ ದುರಂತ: 45 ಭಾರತೀಯರ ಮೃತದೇಹಗಳು ಇಂದು ಕೇರಳಕ್ಕೆ ಆಗಮನ

0
ಎರಡು ದಿನಗಳ ಹಿಂದೆ ಗಲ್ಫ್ ದೇಶದಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಸಾವನ್ನಪ್ಪಿದ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಿಶೇಷ ವಾಯುಪಡೆಯ ವಿಮಾನವು ಕುವೈತ್‌ನಿಂದ ಟೇಕಾಫ್ ಆಗಿದೆ. ವಿಮಾನವು ಕೇರಳದ ಕೊಚ್ಚಿಯಲ್ಲಿ ಬೆಳಿಗ್ಗೆ 11...