Homeಮುಖಪುಟಪಶ್ಚಿಮ ಬಂಗಾಳ: 'ಸರ್ವಧರ್ಮ ಸೌಹಾರ್ದ ರ‍್ಯಾಲಿ' ಆರಂಭಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ: ‘ಸರ್ವಧರ್ಮ ಸೌಹಾರ್ದ ರ‍್ಯಾಲಿ’ ಆರಂಭಿಸಿದ ಮಮತಾ ಬ್ಯಾನರ್ಜಿ

- Advertisement -
- Advertisement -

ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಸಮಾರಂಭ ನಡೆಯುತ್ತಿರುವಾಗಲೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ಮಧ್ಯಾಹ್ನ ಕಲ್ಕತ್ತಾದಲ್ಲಿ ‘ಸರ್ವಧರ್ಮ ಸಮನ್ವಯ ರ‍್ಯಾಲಿ’ಯನ್ನು ಪ್ರಾರಂಭಿಸಿದರು.

ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಮತ್ತು ಪಕ್ಷದ ಮುಖಂಡರೊಂದಿಗೆ, ಕಲ್ಕತ್ತಾದ ಹಜ್ರಾ ಮೋರ್ನಿಂದ ‘ಸಂಗತಿ ಮಾರ್ಚ್’ ಅನ್ನು ಪ್ರಾರಂಭಿಸಿದರು.

ತಮ್ಮ ಎಂದಿನ ಶೈಲಿಯ ಬಿಳಿ ಮತ್ತು ನೀಲಿ ಬಾರ್ಡರ್ ಇರುವ ಕಾಟನ್ ಸೀರೆಯನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡು, ಮಮತಾ ಬ್ಯಾನರ್ಜಿ ರಸ್ತೆಯ ಎರಡೂ ಬದಿಗಳಲ್ಲಿ ಸೇರಿದ್ದ ಜನರತ್ತ ಕೈ ಬೀಸುತ್ತಾ ನಡೆದರು.
ನಗರದ ಪ್ರಸಿದ್ಧ ಕಾಳಿಘಾಟ್ ದೇವಸ್ಥಾನದಲ್ಲಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ ನಂತರ ಅವರು ರ‍್ಯಾಲಿಯನ್ನು ಪ್ರಾರಂಭಿಸಿದರು. ಬೃಹತ್ ಸಮಾವೇಶದೊಂದಿಗೆ ಪಾರ್ಕ್ ಸರ್ಕಸ್ ಮೈದಾನದಲ್ಲಿ ಪಾದಯಾತ್ರೆ ಸಮಾರೋಪಗೊಳ್ಳಲಿದೆ.

ಹಜ್ರಾ ಮೋರ್‌ನಿಂದ ರ‍್ಯಾಲಿಯನ್ನು ಮುನ್ನಡೆಸುತ್ತಿದ್ದಾರೆ, ಈ ಸಂದರ್ಭದಲ್ಲಿ ಅವರು ಮಸೀದಿಗಳು ಸೇರಿದಂತೆ ವಿವಿಧ ಧರ್ಮಗಳನ್ನು ಪ್ರತಿನಿಧಿಸುವ ವಿವಿಧ ಪೂಜಾ ಸ್ಥಳಗಳಿಗೆ, ಚರ್ಚುಗಳು ಮತ್ತು ಗುರುದ್ವಾರಗಳಿಗೆ ಭೇಟಿ ನೀಡಲಿದ್ದಾರೆ.

ಈ ಹಿಂದೆ ರಾಮ ಮಂದಿರದ ಘಟನೆಯ ಬಗ್ಗೆ ಬಿಜೆಪಿಯನ್ನು ಟೀಕಿಸಿದ್ದ ಮಮತಾ ಬ್ಯಾನರ್ಜಿ, “ಲೋಕಸಭಾ ಚುನಾವಣೆಯ ಹಿಂದಿರುವ ಗಿಮಿಕ್ ಶೋ” ಎಂದು ಟೀಕಿಸಿದ್ದರು. ‘ಲೋಕಸಭೆ ಚುನಾವಣೆಗೆ ಮುನ್ನ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡುವ ಮೂಲಕ ಬಿಜೆಪಿ ಗಿಮಿಕ್ ಶೋನಲ್ಲಿ ತೊಡಗಿದೆ. ಇತರ ಸಮುದಾಯಗಳನ್ನು ಹೊರಗಿಡುವ ಹಬ್ಬಗಳನ್ನು ನಾನು ಬೆಂಬಲಿಸುವುದಿಲ್ಲ’ ಎಂದು ಅವರು ಪ್ರತಿಪಾದಿಸಿದ್ದರು.

‘ಎಲ್ಲ ಸಮುದಾಯದ ಜನರನ್ನು ಕರೆದುಕೊಂಡು ಹೋಗುವ ಮತ್ತು ಒಗ್ಗಟ್ಟಿನ ಬಗ್ಗೆ ಮಾತನಾಡುವ ಹಬ್ಬಗಳನ್ನು ನಾನು ನಂಬುತ್ತೇನೆ. ಬಿಜೆಪಿ ಇದನ್ನು (ರಾಮಮಂದಿರ ಉದ್ಘಾಟನೆ) ನ್ಯಾಯಾಲಯದ ಸೂಚನೆಯ ಮೇರೆಗೆ ಮಾಡುತ್ತಿದೆ. ಆದರೆ ಅದನ್ನು ಗಿಮಿಕ್ ಪ್ರದರ್ಶನವಾಗಿ ಲೋಕಸಭೆ ಚುನಾವಣೆಗೆ ಮುನ್ನ ಮಾಡುತ್ತಿದೆ’ ಎಂದು ಅವರು ಟೀಕಿಸಿದ್ದರು.

ಬಿಜೆಪಿ ವಿರುದ್ಧ ಅಭಿಷೇಕ್ ಬ್ಯಾನರ್ಜಿ ವಾಗ್ದಾಳಿ:

ದ್ವೇಷ ಮತ್ತು ಹಿಂಸಾಚಾರದ ಮೇಲೆ ನಿರ್ಮಿಸಲಾದ ಆರಾಧನಾ ಸ್ಥಳವನ್ನು ಒಪ್ಪಿಕೊಳ್ಳಲು ನನ್ನ ಧರ್ಮ ನನಗೆ ಕಲಿಸಿಲ್ಲ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ದ್ವೇಷ, ಹಿಂಸಾಚಾರ ಮತ್ತು ಅಮಾಯಕರ ಶವಗಳ ಮೇಲೆ ನಿರ್ಮಿಸಲಾದ ಮಂದಿರ, ಮಸೀದಿ, ಚರ್ಚ್ ಅಥವಾ ಗುರುದ್ವಾರವೇ ಆಗಿರಲಿ, ಅತಂಹ ಆರಾಧನಾ ಸ್ಥಳವನ್ನು ಒಪ್ಪಿಕೊಳ್ಳಲು ನನ್ನ ಧರ್ಮ ನನಗೆ ಕಲಿಸಿಲ್ಲ’ ಎಂದು ಅಭಿಷೇಕ್ ಬ್ಯಾನರ್ಜಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ; ದ್ವೇಷ, ಹಿಂಸೆಯ ಮೇಲೆ ನಿರ್ಮಾಣವಾದ ಆರಾಧನಾ ಸ್ಥಳವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...