Homeಮುಖಪುಟವಕೀಲರ ಸೋಗಿನಲ್ಲಿ ಬಂದು ಸಮಾಜವಾದಿ ಪಕ್ಷದ ನಾಯಕನ ಮೇಲೆ ಶೂ ಎಸೆತ

ವಕೀಲರ ಸೋಗಿನಲ್ಲಿ ಬಂದು ಸಮಾಜವಾದಿ ಪಕ್ಷದ ನಾಯಕನ ಮೇಲೆ ಶೂ ಎಸೆತ

- Advertisement -
- Advertisement -

ಸಮಾಜವಾದಿ ಪಕ್ಷದ(ಎಸ್‌ಪಿ) ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ  ವಕೀಲನಂತೆ ಬಟ್ಟೆ ಧರಿಸಿಕೊಂಡು ಬಂದ ಅಪರಿಚಿತ ಯುವಕನೋರ್ವ ಶೂ ಎಸೆದಿದ್ದು, ಅಲ್ಲಿದ್ದ ಎಸ್ಪಿ ಕಾರ್ಯಕರ್ತರು ಆತನಿಗೆ ಥಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಸಮಾಜವಾದಿ ಪಕ್ಷದ ಒಬಿಸಿ ಸಭೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಸ್ವಾಮಿ ಪ್ರಸಾದ್ ಅವರಿಗೆ ಚಪ್ಪಲಿ ಎಸೆದೆ ಯುವಕನಿಗೆ ಎಸ್ಪಿ ಕಾರ್ಯಕರ್ತರು  ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಶೂ ಎಸೆದ ವ್ಯಕ್ತಿಯನ್ನು ಆಕಾಶ್ ಸೈನಿ ಎಂದು ಗುರುತಿಸಲಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ಎಸ್ಪಿ ಕಾರ್ಯಕರ್ತರು ಆತನನ್ನು ಥಳಿಸಿದ ವಿಡಿಯೋ ಮತ್ತು ದೃಶ್ಯಗಳು ವೈರಲ್ ಆಗಿದೆ.

ಥಳಿತಕ್ಕೊಳಗಾದ ಯುವಕ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಯತ್ನಿಸುವುದು ವೀಡಿಯೊ ತೋರಿಸಿದೆ. ಆತ ಯಾರು ಮತ್ತು ಏಕೆ ಶೂ ಎಸೆದಿದ್ದಾನೆ ಎಂದು ಪ್ರಶ್ನಿಸಿದಾಗ ಸ್ಪಷ್ಟನೆ ನೀಡಲು ಯತ್ನಿಸಿದನಾದರೂ ಪೊಲೀಸರು ಆತನಿಗೆ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದಾರೆ.

ಇತ್ತೀಚೆಗೆ ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಮಚರಿತಮಾನಸ ಕುರಿತು ಹೇಳಿಕೆ ಕೊಟ್ಟು ಸುದ್ದಿಯಾಗಿದ್ದರು.ಸ್ವಾಮಿ ಪ್ರಸಾದ್ ಮೌರ್ಯ ಅವರ ವಿರುದ್ಧ ಕ್ರಮಕ್ಕೆ ಸಾಧುಗಳು ಸೇರಿ ಹಲವರು ಒತ್ತಾಯಿಸಿದ್ದರು.

ಉತ್ತರ ಪ್ರದೇಶದಲ್ಲಿ 2022ರ ವಿಧಾನಸಭಾ ಚುನಾವಣೆಗೆ ಮುನ್ನ ಮೌರ್ಯ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಮೌರ್ಯ ಅವರು ಈ ಹಿಂದೆ ಬಿಜೆಪಿಯಲ್ಲಿದ್ದರು.

ಇದನ್ನು ಓದಿ: ಮುಸ್ಲಿಂ ಆಟೋ ಚಾಲಕನಿಗೆ ಕಿರುಕುಳ ನೀಡಿದ್ದ ರೈಲಿನಲ್ಲಿ ನಾಲ್ವರ ಹಂತಕ RPF ಪೇದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...