Homeಮುಖಪುಟಮಣಿಪುರ ಪೊಲೀಸರಿಂದ ಮಹಿಳೆಯರಿಗೆ ಕಿರುಕುಳ, ಹಲ್ಲೆ: ಕುಕಿ ಶಾಸಕರ ಆರೋಪ

ಮಣಿಪುರ ಪೊಲೀಸರಿಂದ ಮಹಿಳೆಯರಿಗೆ ಕಿರುಕುಳ, ಹಲ್ಲೆ: ಕುಕಿ ಶಾಸಕರ ಆರೋಪ

- Advertisement -
- Advertisement -

ರಾಜ್ಯ ಪೊಲೀಸರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ತಮ್ಮ ಸಮುದಾಯಕ್ಕೆ ಸೇರಿದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಣಿಪುರದ ಬಿಜೆಪಿ ಸರ್ಕಾರಕ್ಕೆ ಸೇರಿದ ಎಂಟು ಶಾಸಕರು ಸೇರಿದಂತೆ ಎಲ್ಲಾ 10 ಕುಕಿ ಶಾಸಕರು ಗುರುವಾರ ಆರೋಪಿಸಿದ್ದಾರೆ.

ಮಣಿಪುರ ಪೊಲೀಸ್ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಚಿಂಗ್ತಮ್ ಆನಂದ್ ಅವರನ್ನು ಮೊರೆಹ್ ಪಟ್ಟಣದಲ್ಲಿ ಶಂಕಿತ ಕುಕಿ ಉಗ್ರಗಾಮಿಗಳು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಈ ಆರೋಪಗಳು ಬಂದಿವೆ. ಹತ್ಯೆಯ ಹಿಂದಿರುವವರನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

”ಮಣಿಪುರ ಪೊಲೀಸರು ವಿಶೇಷವಾಗಿ ಕಮಾಂಡೋಗಳು ವೃತ್ತಿಪರವಲ್ಲದ ನಡವಳಿಕೆ ಮತ್ತು ಅಮಾನವೀಯ ಮಿತಿಮೀರಿದ ನಡವಳಿಕೆ ತೋರುತ್ತಿದ್ದಾರೆ” ಎಂದು ಶಾಸಕರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬುಧವಾರ ತೆಂಗನೌಪಾಲ್‌ನ ಸಿನಮ್ ಕುಕಿ ಗ್ರಾಮದ ನಿವಾಸಿಗಳ ಮನೆ, ಆಸ್ತಿ ಮತ್ತು ವಾಹನಗಳನ್ನು ಕಮಾಂಡೋಗಳು ನಾಶಪಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮೊರೆಹ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಲ್ಲಿ, ರಾಜ್ಯ ಪೊಲೀಸರು ಬೆಂಕಿ ಹಚ್ಚುವುದು, ಗುಂಡಿನ ದಾಳಿ ನಡೆಸುವುದು, ನಾಗರಿಕ ಆಸ್ತಿಗಳು, ವಾಹನಗಳು, ಗೃಹೋಪಯೋಗಿ ವಸ್ತುಗಳು, ಬೆಲೆಬಾಳುವ ಆಭರಣಗಳು/ದಾಖಲೆಗಳು/ಚಿನ್ನ/ನಗದು ಸೇರಿದಂತೆ ಲೂಟಿ ಮಾಡುವುದು ಮತ್ತು ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನೈತಿಕ ಸಮಿತಿಯ ಅಧ್ಯಕ್ಷರು ‘ವಸ್ತ್ರಾಪಹರಣ’ಕ್ಕೆ ಒಳಗಾಗಿದ್ದಾರೆ: ಸ್ಪೀಕರ್‌ಗೆ ಮೊಯಿತ್ರಾ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...