HomeUncategorizedಮಣಿಪುರ ಅಂತಿಮ ಮತದಾರರ ಪಟ್ಟಿ ಪ್ರಕಟ; ಮತದಾರರ ಸಂಖ್ಯೆಯಲ್ಲಿ ಇಳಿಕೆ

ಮಣಿಪುರ ಅಂತಿಮ ಮತದಾರರ ಪಟ್ಟಿ ಪ್ರಕಟ; ಮತದಾರರ ಸಂಖ್ಯೆಯಲ್ಲಿ ಇಳಿಕೆ

- Advertisement -
- Advertisement -

ಸೋಮವಾರ ಪ್ರಕಟವಾದ ಈಶಾನ್ಯ ರಾಜ್ಯದ ಅಂತಿಮ ಮತದಾರರ ಪಟ್ಟಿಯಂತೆ, ಕಳೆದ ಒಂದು ವರ್ಷದಿಂದ ಜನಾಂಗೀಯ ಬೇಗುದಿಯಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಮಹಿಳಾ ಮತದಾರರು ಪುರುಷರಿಗಿಂತ 67,028 ರಷ್ಟು ಹೆಚ್ಚಿದ್ದಾರೆ. 2023ರ ಅಂತಿಮ ಮತದಾರರ ಪಟ್ಟಿಗೆ ಹೋಲಿಸಿದರೆ 31,231 ಮತದಾರರ ಇಳಿಕೆಯನ್ನು ತೋರಿಸಿದೆ. ಎರಡು ವರ್ಷಗಳ ಅಂತಿಮ ಮತದಾರರ ಪಟ್ಟಿಗಳ ಪ್ರಕಾರ 2023ರಲ್ಲಿ ಮತದಾರರ ಸಂಖ್ಯೆ 20,57,854 ಆಗಿದ್ದರೆ, ಅದು ಈಗ 20,26,623 ಆಗಿದೆ.

2024ರ ಅಂತಿಮ ಪಟ್ಟಿಯ ಪ್ರಕಾರ ಮಣಿಪುರದಲ್ಲಿ 9,79,678 ಪುರುಷರು, 10,46,706 ಮಹಿಳೆಯರು ಮತ್ತು 239 ತೃತೀಯಲಿಂಗಿ ಮತದಾರರೊಂದಿಗೆ 20,26,623 ಮತದಾರರು ದಾಖಲಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಪ್ರದೀಪ್ ಕುಮಾರ್ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಸದಾಗಿ ಸೇರ್ಪಡೆಗೊಂಡ ಒಟ್ಟು ಮತದಾರರ ಸಂಖ್ಯೆ 34,700 ಆಗಿದ್ದು, 15,596 ಪುರುಷರು, 19,095 ಮಹಿಳೆಯರು ಮತ್ತು ಒಂಬತ್ತು ತೃತೀಯಲಿಂಗಿ ಮತದಾರರಿದ್ದಾರೆ. ಪರಿಷ್ಕರಣೆ ಅವಧಿಯಲ್ಲಿ 16,509 ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಇಂಫಾಲ್ ಪಶ್ಚಿಮ ಜಿಲ್ಲೆ ಅತಿ ಹೆಚ್ಚು ಮತದಾರರನ್ನು (3,81,005) ದಾಖಲಿಸಿದ್ದು, ನಂತರ ಸ್ಥಾನದಲ್ಲಿ (3,23,844) ಇಂಫಾಲ್ ಪೂರ್ವ ಜಿಲ್ಲೆಯಿದೆ. ಜಿರಿಬಾಮ್ ಜಿಲ್ಲೆ ಅತ್ಯಂತ ಕಡಿಮೆ ಮತದಾರರನ್ನು (30,776) ಹೊಂದಿದೆ.

ಇದನ್ನೂ ಓದಿ; ರಾಜ್ಯದ ಮತದಾರರ ಅಂತಿಮ ಪಟ್ಟಿ ಪ್ರಕಟ: ಮಹಿಳಾ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...