Homeಕರ್ನಾಟಕರಾಜ್ಯದ ಮತದಾರರ ಅಂತಿಮ ಪಟ್ಟಿ ಪ್ರಕಟ: ಮಹಿಳಾ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ

ರಾಜ್ಯದ ಮತದಾರರ ಅಂತಿಮ ಪಟ್ಟಿ ಪ್ರಕಟ: ಮಹಿಳಾ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ

- Advertisement -
- Advertisement -

2024ರ ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ರಾಜ್ಯದಲ್ಲಿ ಒಟ್ಟು 5,37,85,815 ಮತದಾರರಿದ್ದು, 2,69,33,750 ಪುರುಷ ಮತದಾರರು ಮತ್ತು 2,68,47,145 ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರು ಇದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಮಹಿಳಾ ಮತದಾರರಿಗೆ ಮತ್ತು ಪುರುಷ ಮತದಾರರಿಗೆ ಅಲ್ಪ ಮಾತ್ರ ವ್ಯತ್ಯಾಸ ಇದೆ. ಮಹಿಳೆಯರು ಸಹ ದೊಡ್ಡ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದು ಸಂತಸದ ವಿಷಯವಾಗಿದೆ ಎಂದು ಹೇಳಿದ್ದಾರೆ.

ಕರಡು ಮತದಾರರ ಪಟ್ಟಿ ಪ್ರಕಾರ ರಾಜ್ಯದಲ್ಲಿ 5.33 ಕೋಟಿ ಮತದಾರರಿದ್ದರು. ಇದೀಗ 4.08 ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ. ಮಹಿಳಾ ಮತದಾರರದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದ್ದು, 2.77 ಲಕ್ಷ ಮತದಾರರು ಅಧಿಕವಾಗಿದ್ದಾರೆ. ಪುರುಷ ಮತದಾರರಲ್ಲಿ 1.30 ಮತ್ತು ಇತರೆ ಮತದಾರರಲ್ಲಿ 24 ಮತದಾರರ ಸಂಖ್ಯೆ ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 100 ವರ್ಷ ಮೇಲ್ಪಟ್ಟ ಶತಾಯುಸಿ ಮತದಾರರ ಸಂಖ್ಯೆಯು 23,377 ಇತ್ತು. ಅಂತಿಮ ಪಟ್ಟಿಯಲ್ಲಿ 100ವರ್ಷ ಮೇಲ್ಪಟ್ಟ ಶತಾಯುಸಿ ಮತದಾರರ ಸಂಖ್ಯೆ 17,937 ಆಗಿದೆ.  80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಕರಡುಪಟ್ಟಿಯಲ್ಲಿ 13.82 ಲಕ್ಷ ಮತದಾರರಿದ್ದರೆ, ಅಂತಿಮ ಮದಾರರ ಪಟ್ಟಿಯಲ್ಲಿ 12.71 ಲಕ್ಷ ಮತದಾರರಿದ್ದಾರೆ. 18-19 ವರ್ಷ ವಯಸ್ಸಿನ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕರಡುಪಟ್ಟಿಯಲ್ಲಿ 6.45 ಲಕ್ಷ ಮತದಾರರಿದ್ದರೆ, ಅಂತಿಮಪಟ್ಟಿಯಲ್ಲಿ 10.34 ಮತದಾರರಿದ್ದಾರೆ. ಒಟ್ಟು.3.88 ಲಕ್ಷ ಮತದಾರರ ಅಧಿಕವಾಗಿದ್ದಾರೆ. ಇದಲ್ಲದೆ 46,501ರಷ್ಟು ಸೇವಾ ಮತದಾರರು, 3,164 ಸಾಗರೋತ್ತರ(ಅನಿವಾಸಿ ಭಾರತೀಯರು) ಮತದಾರರಿದ್ದಾರೆ. 5.62 ಲಕ್ಷ ಮಂದಿ ವಿಕಲಚೇತನ ಮತದಾರರು ಇದ್ದಾರೆ ಎಂದು ತಿಳಿಸಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇ 69.74 ರಷ್ಟು ಮತದಾರರಾಗಿದ್ದಾರೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು 7,17,201 ಮತದಾರರಿದ್ದು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಒಟ್ಟು 1.67,556 ಮತದಾರರಿದ್ದಾರೆ. ಇದಲ್ಲದೆ ಒಟ್ಟು ಮತಗಟ್ಟೆಗಳ ಸಂಖ್ಯೆ 58,834 ಇದೆ.  845 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಲಾಗಿದ್ದು, 552 ಮತಗಟ್ಟೆಗಳು ಹೆಚ್ಚಳವಾಗಿವೆ. ಕಳೆದ 2023ರ ಸಾಲಿನ ವಿಧಾನಸಭೆ ಚುನಾವಣೆ ವೇಳೆ 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಇದಲ್ಲದೆ ಮತದಾರರು ತುರ್ತಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸುವಂತೆ ಚುನಾವಣಾ ಆಯೋಗವು ಮನವಿಯನ್ನು ಮಾಡಿದೆ. ಪತ್ರಿಕಾಗೋಷ್ಟಿಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್ ಹಾಗೂ ಕೂರ್ಮ ರಾವ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನು ಓದಿ: ಗ್ರಹಾಂ ಸ್ಟೇನ್ಸ್ ಮತ್ತು ಇಬ್ಬರು ಮಕ್ಕಳ ‘ಮಿಡ್‌ನೈಟ್‌’ ಮರ್ಡರ್‌ : ಬಲಪಂಥೀಯ ಕ್ರೌರ್ಯಕ್ಕೆ 25 ವರ್ಷ!

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...