Homeಮುಖಪುಟಮಹಾರಾಷ್ಟ್ರ: ಒಂದು ವರ್ಷದಲ್ಲಿ ಎಂಟು ಜಿಲ್ಲೆಗಳ 1,088 ರೈತರು ಆತ್ಮಹತ್ಯೆ

ಮಹಾರಾಷ್ಟ್ರ: ಒಂದು ವರ್ಷದಲ್ಲಿ ಎಂಟು ಜಿಲ್ಲೆಗಳ 1,088 ರೈತರು ಆತ್ಮಹತ್ಯೆ

- Advertisement -
- Advertisement -

2023ರ ಒಂದು ವರ್ಷದಲ್ಲಿ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಎಂಟು ಜಿಲ್ಲೆಗಳಲ್ಲಿ 1,088 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿಭಾಗೀಯ ಆಯುಕ್ತರ ಕಚೇರಿಯ ವರದಿ ಬಹಿರಂಗಪಡಿಸಿದೆ. 2022ಕ್ಕೆ ಹೋಲಿಸಿದರೆ ಈ ಸಂಖ್ಯೆ ಶೇ.65 ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2023 ರಲ್ಲಿ ನಡೆದ 1,088 ಆತ್ಮಹತ್ಯೆಗಳಲ್ಲಿ, ಬೀಡ್‌ನಲ್ಲಿ ಅಂತಹ ಅತಿ ಹೆಚ್ಚು 269 ಸಾವುಗಳು ದಾಖಲಾಗಿವೆ. ನಂತರ, ಛತ್ರಪತಿ ಸಂಭಾಜಿನಗರದಲ್ಲಿ 182, ನಾಂದೇಡ್‌ನಲ್ಲಿ 175, ಧಾರಶಿವ್‌ನಲ್ಲಿ 171 ಮತ್ತು ಪರ್ಭಾನಿಯಲ್ಲಿ 103 ಸಾವುಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ. ಜಲ್ನಾ, ಲಾತೂರ್ ಮತ್ತು ಹಿಂಗೋಲಿಯಲ್ಲಿ ಕ್ರಮವಾಗಿ 74, 72 ಮತ್ತು 42 ಸಾವುಗಳು ಸಂಭವಿಸಿವೆ.

ವರದಿಯ ಪ್ರಕಾರ, ಛತ್ರಪತಿ ಸಂಭಾಜಿನಗರ, ಜಲ್ನಾ, ಬೀಡ್, ಹಿಂಗೋಲಿ, ಧಾರಶಿವ್, ಲಾತೂರ್, ನಾಂದೇಡ್ ಮತ್ತು ಪರ್ಭಾನಿ ಜಿಲ್ಲೆಗಳನ್ನು ಒಳಗೊಂಡಿರುವ ಮರಾಠವಾಡದಲ್ಲಿ 2022 ರಲ್ಲಿ 1,023 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

ಸರ್ಕಾರವು ಪ್ರತಿ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದು, ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ₹ 1 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. 1,088 ಪ್ರಕರಣಗಳಲ್ಲಿ 777 ಪರಿಹಾರಕ್ಕೆ ಅರ್ಹವಾಗಿದ್ದು, ಅದನ್ನು ವಿತರಿಸಲಾಗಿದೆ ಮತ್ತು 151 ಪ್ರಕರಣಗಳು ಪ್ರಸ್ತುತ ವಿಚಾರಣೆ ಹಂತದಲ್ಲಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ; ರಾಹುಲ್ ಗಾಂಧಿಯನ್ನು ರಾವಣನಿಗೆ ಹೋಲಿಸಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...