Homeಮುಖಪುಟಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಸಿಬಿಐ'ನಿಂದ ಚಾರ್ಜ್‌ಶೀಟ್ ಸಲ್ಲಿಕೆ

ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಸಿಬಿಐ’ನಿಂದ ಚಾರ್ಜ್‌ಶೀಟ್ ಸಲ್ಲಿಕೆ

- Advertisement -
- Advertisement -

ಮಣಿಪುರದ ಕಾಂಗೊಕ್ಸಿ ಪ್ರದೇಶಕ್ಕೆ ಸೇರಿದ ಮೂವರು ಬುಡಕಟ್ಟು ಮಹಿಳೆಯರನ್ನು ಮೇ 4 ರಂದು ಅವರ ಕೆಲಸದ ಸ್ಥಳದಿಂದ ಅಪಹರಿಸಿ, ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಬೆತ್ತಲೆ ಮೆರವಣಿಗೆ ಮಾಡಿದ್ದ ಪ್ರಕರಣದಲ್ಲಿ ಕಾನೂನು ಸಂಘರ್ಷ ಎದುರಿಸುತ್ತಿರುವ ಬಾಲಕ ಮತ್ತು ಇತರ 6 ಜನರ ವಿರುದ್ಧ ಸಿಬಿಐ ಸೋಮವಾರ ದೋಷಾರೋಪ ಪಟ್ಟಿಯನ್ನು ದಾಖಲಿಸಿದೆ. ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಕಿರುಕುಳ ನೀಡುತ್ತಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕರಣ ವ್ಯಾಪಕ ಗಮನ ಸೆಳೆದಿತ್ತು.

ಮಣಿಪುರ ಜನಾಂಗೀಯ ಸಂಘರ್ಷ ಪೀಡಿತ ಕಾಂಗೊಕ್ಸಿ ಜಿಲ್ಲೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ನಡೆದಿದ್ದ ಕೃತ್ಯದ ವಿಡಿಯೊ ಜುಲೈ ತಿಂಗಳಲ್ಲಿ ಬಯಲಾಗಿತ್ತು. ದೇಶದಾದ್ಯಂತ ಈ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐ ವಹಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಸುಪ್ರೀಂ ಕೋರ್ಟ್‌ನ ಆದೇಶದಂತೆ ಗುವಾಹಟಿಯ ಸಿಬಿಐ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ಮುಂದೆ ಇಂದು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.

ದೋಷಾರೋಪ ಪಟ್ಟಿ ಪ್ರಕಾರ, ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 900- 1000 ಜನರಿದ್ದ ಗುಂಪು ಹಿಂಸಾಚಾರ ಪೀಡಿತ ಕಾಂಗೊಕ್ಸಿ ಜಿಲ್ಲೆಯ ಫೈನೊಮ್ ಗ್ರಾಮದಲ್ಲಿ ದಾಂದಲೆ ನಡೆಸಿ ಮನೆಗಳಿಗೆ ಬೆಂಕಿ ಹಚ್ಚಿ, ಲೂಟಿ ಮಾಡಿದೆ. ಗ್ರಾಮಸ್ಥರ ಮೇಲೆ ಹಲ್ಲೆ ಕೊಲೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ ಎಂದು ಸಿಬಿಐ ಉಲ್ಲೇಖಿಸಿದೆ.

ಜುಲೈ 19 ರಂದು, ಸಾಮಾಜಿಕ ಮಾಧ್ಯಮದಲ್ಲಿ 30-ಸೆಕೆಂಡ್‌ಗಳ ವೀಡಿಯೊ ವೈರಲ್ ಆಗಿತ್ತು. ಇದು ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡುವಾಗ ಪುರುಷರ ಗುಂಪೊಂದು ವಿಕೃತಿ ಮೆರೆಯುತ್ತಿರುವುದನ್ನು ಆ ವಿಡಿಯೋ ತೋರಿಸುತ್ತದೆ.

ಮೇ 18 ರಂದು ದಾಖಲಾದ ಎಫ್‌ಐಆರ್‌ನಲ್ಲಿ ಮಹಿಳೆಯರನ್ನು ಕುಕಿ ಎಂದು ಗುರುತಿಸಲಾಗಿದೆ ಮತ್ತು ಜನಸಮೂಹವು ಮೈತಿ ಸಮುದಾಯದವರು ಎಂದು ಹೇಳಿದರು.

ಜುಲೈ 20 ರಂದು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು, ಒಬ್ಬ ಆರೋಪಿಯನ್ನು ಜುಲೈ 22 ರಂದು ಮತ್ತು ಆರನೇ ಆರೋಪಿಯನ್ನು ಜುಲೈ 23 ರಂದು ಮತ್ತು 7 ನೇ ಆರೋಪಿಯನ್ನು ಜುಲೈ 24 ರಂದು ಬಂಧಿಸಲಾಯಿತು ಮತ್ತು ಆನಂತರ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಯಿತು.

ಮಣಿಪುರ ಪೊಲೀಸರ ವಿರುದ್ಧ ನಿಷ್ಕ್ರಿಯ ಆರೋಪದ ನಂತರ ಜುಲೈ 21 ರಂದು ಸಿಬಿಐ ತನಿಖೆಯನ್ನು ವಹಿಸಿಕೊಂಡಿದೆ.

ಸೋಮವಾರದ ಸಿಬಿಐ ತನ್ನ ಹೇಳಿಕೆ ಬಿಡುಗಡೆ ಮಾಡಿದ್ದು, ”ಘಟನೆಯಲ್ಲಿ ಈ ಆರೋಪಿಗಳು ಭಾಗಿಯಾಗಿರುವುದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಇತರ ಅಂಶಗಳ ಜೊತೆಗೆ ಅಪರಾಧಗಳಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಗುರುತಿಸುವಿಕೆ ಸೇರಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ” ಎಂದು ತಿಳಿಸಿದೆ.

ಮೇ 3 ರಿಂದ ರಾಜ್ಯದಲ್ಲಿ ನಡೆದ ಜನಾಂಗೀಯ ಘರ್ಷಣೆಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿರುವ 27 ಎಫ್‌ಐಆರ್‌ಗಳಲ್ಲಿ ಇದು ಮೊದಲ ಚಾರ್ಜ್‌ಶೀಟ್ ಆಗಿದೆ. 27 ಪ್ರಕರಣಗಳಲ್ಲಿ 19 ಮಹಿಳೆಯರ ವಿರುದ್ಧದ ಅಪರಾಧಗಳಾಗಿವೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಮಣಿಪುರಕ್ಕಿಂತ ಇಸ್ರೇಲ್ ಮೇಲೆಯೇ ಹೆಚ್ಚು ಆಸಕ್ತಿ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀವು ಕಾನೂನಿಗಿಂತ ಮೇಲಲ್ಲ: ಜಾರಿ ನಿರ್ದೇಶನಾಲಯಕ್ಕೆ ತರಾಟೆಗೆ ತೆಗೆದುಕೊಂಡ ದೆಹಲಿ ಹೈಕೋರ್ಟ್‌

0
ಜಾರಿ ನಿರ್ದೇಶನಾಲಯವು (ಇಡಿ) ಕಾನೂನಿನ ಚೌಕಟ್ಟಿಗೆ ಒಳಪಟ್ಟಿದೆ ಮತ್ತು ಸಾಮಾನ್ಯ ನಾಗರಿಕರ ವಿರುದ್ಧ ಬಲಪ್ರದರ್ಶನ ಮಾಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದು, ನೀವು ಕಾನೂನಿಗಿಂತ ಮೇಲಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮಧ್ಯಂತರ...