Homeಮುಖಪುಟಮರಾಠ ಮೀಸಲಾತಿ: ಸಿಎಂಗೆ ವರದಿ ಸಲ್ಲಿಸಿದ ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗ

ಮರಾಠ ಮೀಸಲಾತಿ: ಸಿಎಂಗೆ ವರದಿ ಸಲ್ಲಿಸಿದ ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗ

- Advertisement -
- Advertisement -

ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮರಾಠಾ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ತನ್ನ ವರದಿಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಶುಕ್ರವಾರ ಸಲ್ಲಿಸಿದೆ. ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಸುನಿಲ್ ಶುಕ್ರೆ ಅವರು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ ವರದಿಯನ್ನು ಸಲ್ಲಿಸಿದರು.

ಫೆಬ್ರವರಿ 20 ರಂದು ಕರೆದಿರುವ ವಿಶೇಷ ವಿಧಾನಸಭೆ ಅಧಿವೇಶನ ಹಾಗೂ ಸಂಪುಟ ಸಭೆಯಲ್ಲಿ ವರದಿ ಮಂಡಿಸಲಾಗುವುದು ಎನ್ನಲಾಗಿದೆ.

ಸಮೀಕ್ಷಾ ವರದಿ ಸ್ವೀಕರಿಸಿದ ಸಿಎಂ ಶಿಂಧೆ, ‘ಸಮೀಕ್ಷೆ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿ, ಅದರ ಆಧಾರದ ಮೇಲೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಇದೇ ವಿಷಯವಾಗಿ ಫೆ.20ಕ್ಕೆ ವಿಶೇಷ ವಿಧಾನಸಭೆ ಅಧಿವೇಶನವನ್ನು ಈಗಾಗಲೇ ಘೋಷಿಸಲಾಗಿದೆ’ ಎಂದರು.

‘ಈ ಸಮೀಕ್ಷೆ ಕಾರ್ಯವು ಪೂರ್ಣಗೊಂಡಿರುವ ರೀತಿಯನ್ನು ನೋಡಿದರೆ, ನಮ್ಮ ಸರ್ಕಾರವು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿಯನ್ನು ಸಂವಿಧಾನ ಮತ್ತು ಕಾನೂನಿನ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುತ್ತದೆ. ಒಬಿಸಿ ಮೀಸಲಾತಿಯನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ. ಬೇರೆ ಯಾವುದೇ ಸಮುದಾಯಕ್ಕೆ ಯಾವುದೇ ಹಾನಿಯಾಗದಂತೆ ಮರಾಠ ಮೀಸಲಾತಿ ನೀಡಬಹುದು’ ಎಂದು ಹೇಳಿದ್ದಾರೆ.

‘ಮರಾಠ (ಸಮುದಾಯ)ಕ್ಕೆ ಶಾಶ್ವತ ಮೀಸಲಾತಿ ಕಲ್ಪಿಸುವ ವಿಶ್ವಾಸ ನಮಗಿದೆ’ ಎಂದು ಸಿಎಂ ಶಿಂಧೆ ಹೇಳಿದ್ದಾರೆ.
ಕೋಟಾ ಕಾರ್ಯಕರ್ತ ಮನೋಜ್ ಜಾರ್ನಾಗೆ ಉಪವಾಸ ಕೈಬಿಡುವಂತೆ ಸಿಎಂ ಏಕನಾಥ್ ಶಿಂಧೆ ಒತ್ತಾಯಿಸಿದ್ದಾರೆ.

‘ಮರಾಠಾ ಮೀಸಲಾತಿ ವಿಚಾರದಲ್ಲಿ ಸರ್ಕಾರ ಈಗಾಗಲೇ ಸಂಪೂರ್ಣ ಸ್ಪಷ್ಟನೆ ನೀಡಿತ್ತು. ಶುಕ್ರೆ ಸಮಿತಿ ವರದಿ ಆಧರಿಸಿ ಮರಾಠಾ ಮೀಸಲಾತಿಯನ್ನು ಮುಂದಕ್ಕೆ ತೆಗೆದುಕೊಳ್ಳುತ್ತೇವೆ. ಕುಂಬಿ ದಾಖಲಾತಿ ವಿಚಾರದಲ್ಲಿ ಮೀಸಲಾತಿ ವಿಚಾರವನ್ನು ಈಗಾಗಲೇ ಮುಂದಿಟ್ಟುಕೊಂಡು ಈಗಾಗಲೇ ಕೆಲಸ ನಡೆಯುತ್ತಿದೆ’ ಎಂದರು.

‘ಮನೋಜ್ ಜಾರ್ನಾ ಉಪವಾಸ ಮುಂದುವರಿಸುವ ಅಗತ್ಯವಿಲ್ಲ. ಅವರು ತಮ್ಮ ಉಪವಾಸವನ್ನು ಹಿಂಪಡೆಯುವಂತೆ ನಾವು ವಿನಂತಿಸುತ್ತೇವೆ; ಬೇಡಿಕೆಗಳನ್ನು ಈಡೇರಿಸಲು ಸರ್ಕಾರವು ತನ್ನ ಕೆಲಸವನ್ನು ಸಕಾರಾತ್ಮಕವಾಗಿ ಮಾಡುತ್ತಿದೆ’ ಎಂದು ಸಿಎಂ ಶಿಂಧೆ ಹೇಳಿದರು.

ಮರಾಠ ಮೀಸಲಾತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ಒತ್ತಾಯಿಸಿ ಮರಾಠ ಕೋಟಾ ಕಾರ್ಯಕರ್ತ ಮನೋಜ್ ಜರಂಗೆ ಪಾಟೀಲ್ ಅವರು ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಮತ್ತೊಂದು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ ನಂತರ ಈ ಬೆಳವಣಿಗೆ ನಡೆಯುತ್ತಿದೆ.

ಒಂದು ವರ್ಷದೊಳಗೆ ನಾಲ್ಕನೇ ಬಾರಿಗೆ, ಫೆಬ್ರವರಿ 10 ರಂದು ಪಾಟೀಲ್ ತಮ್ಮ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಮೀಸಲಾತಿ ಪಡೆಯಲು ಮರಾಠರನ್ನು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿಸಬೇಕೆಂದು ಒತ್ತಾಯಿಸಿದರು. ಕುಂಬಿ ಮರಾಠರ ‘ರಕ್ತ ಸಂಬಂಧಿಗಳ’ ಕರಡು ಅಧಿಸೂಚನೆಯನ್ನು ಕಾನೂನಾಗಿ ಪರಿವರ್ತಿಸಲು ಅವರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ; ರಾಜ್ಯಪಾಲರ ಬಾಲಿಶ ವರ್ತನೆಗೆ ನಾವು ಹೆದರುವುದಿಲ್ಲ: ಎಂಕೆ ಸ್ಟಾಲಿನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...