Homeಮುಖಪುಟಗಲ್ಲು ಶಿಕ್ಷೆ ಪ್ರಕರಣ: ಯೆಮೆನ್‌ಗೆ ತೆರಳಲು ನರ್ಸ್‌ ನಿಮಿಷಾ ತಾಯಿಗೆ ಸಿಗದ ಅನುಮತಿ

ಗಲ್ಲು ಶಿಕ್ಷೆ ಪ್ರಕರಣ: ಯೆಮೆನ್‌ಗೆ ತೆರಳಲು ನರ್ಸ್‌ ನಿಮಿಷಾ ತಾಯಿಗೆ ಸಿಗದ ಅನುಮತಿ

- Advertisement -
- Advertisement -

ಯೆಮೆನ್‌ನಲ್ಲಿ ಕೊಲೆ ಪ್ರಕರಣವೊಂದರಲ್ಲಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು. ಮಗಳನ್ನು ಗಲ್ಲುಶಿಕ್ಷೆಯಿಂದ ಪಾರು ಮಾಡಲು ಯೆಮೆನ್‌ಗೆ ತೆರಳಿ 2017ರಲ್ಲಿ ತನ್ನ ಮಗಳಿಂದ ಹತ್ಯೆಗೀಡಾದ ಯೆಮೆನ್ ಪ್ರಜೆಯ ಕುಟುಂಬದೊಂದಿಗೆ ಮಾತುಕತೆ ನಡೆಸಲು ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಅವರು ಬಯಸಿದ್ದರು. ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆ ದೇಶಕ್ಕೆ ಹೋಗುವುದು ಸೂಕ್ತವಲ್ಲ ಎಂದು ಅವರಿಗೆ ತಿಳಿಸಿದ್ದು, ಮಗಳನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಮುಂದಾಗಿದ್ದ ತಾಯಿಗೆ ನಿರಾಶೆಯಾಗಿದೆ.

ಕಳೆದ ತಿಂಗಳು ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಅವರ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಒಂದು ವಾರದೊಳಗೆ ಈ ಕುರಿತು ಪ್ರತಿಕ್ರಿಯಿಸುವಂತೆ ಸಚಿವಾಲಯಕ್ಕೆ ಸೂಚಿಸಿತ್ತು. ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರಿಯಾ ಅವರ 10 ವರ್ಷದ ಮಗಳು ಸೇರಿದಂತೆ ತಾಯಿ ಪ್ರೇಮಾ ಕುಮಾರಿ ಮತ್ತು ಇತರ ನಾಲ್ವರು ಯೆಮನ್‌ಗೆ ಪ್ರಯಾಣಕ್ಕೆ ಅನುಮತಿ ಕೋರಿ ಸಚಿವಾಲಯಕ್ಕೆ ದಾಖಲೆಗಳನ್ನು ಸಲ್ಲಿಸಿದ್ದರು.

ಡಿ.1ರಂದು ಸಚಿವಾಲಯದ ಗಲ್ಫ್ ವ್ಯವಹಾರಗಳ ನಿರ್ದೇಶಕ ತನುಜ್ ಶಂಕರ್ ಪ್ರತಿಕ್ರಿಯಿಸಿದ್ದು, ಈ ಕುರಿತು  ಸಚಿವಾಲಯವು ಎಚ್ಚರಿಕೆಯಿಂದ ನಡೆಯುತ್ತಿದೆ. ಪ್ರಕ್ಷುಬ್ಧ ಪರಿಸ್ಥಿತಿಗಳಿಂದಾಗಿ ಆ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಜಿಬೌಟಿಗೆ ಸ್ಥಳಾಂತರಿಸಲಾಗಿದೆ. ಆದ್ದರಿಂದ ನಾವು ನಿಮ್ಮ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ರಾಜತಾಂತ್ರಿಕ ಉಪಸ್ಥಿತಿಯನ್ನು ಹೊಂದಿಲ್ಲ. ಇದಲ್ಲದೆ ಸನಾದಲ್ಲಿ ಪ್ರಸ್ತುತ ಯಾವುದೆ ಔಪಚಾರಿಕ ಸಂಬಂಧಗಳನ್ನು ಸ್ಥಾಪಿಸಲಾಗಿಲ್ಲ. ಇತ್ತೀಚಿಗೆ ಪ್ರಾದೇಶಿಕ ಬೆಳವಣಿಗೆಗಳು ಹೆಚ್ಚು ಸವಾಲಾಗಿವೆ ಮತ್ತು ಪ್ರಯಾಣದ ಸುರಕ್ಷತೆಯು ಮುಖ್ಯವಾಗಿದೆ ಎಂದು ನಿಮಗೆ ತಿಳಿದಿರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಧ್ಯ ಯೆಮೆನ್‌ಗೆ ಹೋಗುವುದು ಸೂಕ್ತವಲ್ಲ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನಿಮಿಷಾ ಪ್ರಿಯಾ ತನ್ನ ವ್ಯಾಪಾರ ಪಾಲುದಾರ ತಲಾಲ್ ಅಬ್ದೋ ಮಹದಿ ಹತ್ಯೆಗೆ ಸಂಬಂಧಿಸಿದಂತೆ 2017 ರಿಂದ ಯೆಮೆನ್ ಜೈಲಿನಲ್ಲಿದ್ದಾರೆ. ನ್ಯಾಯಾಲಯವು 2020ರಲ್ಲಿ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಶನಲ್ ಆಕ್ಷನ್ ಕೌನ್ಸಿಲ್‌ನ ಉಪಾಧ್ಯಕ್ಷೆ ಮತ್ತು ದೆಹಲಿ ಮೂಲದ ವಕೀಲೆ ದೀಪಾ ಜೋಸೆಫ್ ಅವರು ತಮ್ಮ ಕುಟುಂಬದೊಂದಿಗೆ ಯೆಮೆನ್‌ಗೆ ಹೋಗಲು ಪ್ರಯತ್ನಿಸಿದ್ದರು. ಆದರೆ ಕೇಂದ್ರ ಸರಕಾರದ ಬೆಂಬಲವಿಲ್ಲದೆ ನಮಗೆ ಸಂತ್ರಸ್ತನ ಕುಟುಂಬದ ಜೊತೆ ಮಾತುಕತೆಗೆ ಸಾಧ್ಯವಿಲ್ಲ. ಅವಕಾಶ ನಿರಾಕರಣೆಯಿಂದ ಮುಂದಿನ ಕ್ರಮದ ಬಗ್ಗೆ ಯೋಚಿಸಬೇಕಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ದುಂಡಾ ಜಾತಿ ಹಿಂಸಾಚಾರ: ದಲಿತರಿಗೆ ನ್ಯಾಯ ಒದಗಿಸಲು ವಿಫಲವಾಗಿದ್ದ ಬಿಜೆಪಿ ಸರಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...