Homeಮುಖಪುಟಲೋಹದ ಲಾಠಿ ಪೋಟೊ ವೈರಲ್: ಇದರ ಬಗ್ಗೆ ದೆಹಲಿ ಪೊಲೀಸರು ಹೇಳಿದ್ದೇನು ಗೊತ್ತೆ?

ಲೋಹದ ಲಾಠಿ ಪೋಟೊ ವೈರಲ್: ಇದರ ಬಗ್ಗೆ ದೆಹಲಿ ಪೊಲೀಸರು ಹೇಳಿದ್ದೇನು ಗೊತ್ತೆ?

- Advertisement -
- Advertisement -

ಲೋಹದ ಕೈಗವಸು ಮತ್ತು ಲೋಹದ ಲಾಠಿ ಹಿಡಿದಿರುವ ಫೋಟೊ ನಿನ್ನೆ ವೈರಲ್ ಆದ ನಂತರ ಇಂದು ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸ್ ಇಲಾಖೆಯ ವಕ್ತಾರರು, ಅಂತಹ ಯಾವ ಉದ್ದೇಶವೂ ಇಲಾಖೆಗಿಲ್ಲ ಎಂದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಫೋಟೊ ಬಿಡುಗಡೆಗೆ ಸಂಬಂಧಿಸಿದಂತೆ ಫೋಟೊದಲ್ಲಿರುವವರಿಗೆ ವಿವರಣೆ ಕೇಳಲಾಗಿದೆ. ಫೋಟೊದಲ್ಲಿರುವ ಪೊಲೀಸರು ದೆಹಲಿಯ ಒಂದು ಭಾಗಕ್ಕೆ ಸೇರಿದವರು ಮತ್ತು ಅವರು ತಾವೆ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಇಲಾಖೆಯಲ್ಲಿ ಅದಕ್ಕೆ ಸಂಬಂಧಿಸಿ ಯಾವುದೇ ಔಪಚಾರಿಕ ಆದೇಶ ಹೊರಡಿಸಿಲ್ಲ ಎಂದು ದೆಹಲಿ ಪೊಲೀಸ್ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಫೋಟೊದಲ್ಲಿರುವುದು ಶಹದಾರಾ ಘಟಕವಾಗಿದ್ದು, ಅವರಿಂದ ವಿವರಣೆ ಕೇಳಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ. ’ಈ ಫೋಟೊಗಳು ದೆಕಲಿಯ ಶಹದಾರಾ ಜಿಲ್ಲೆಗೆ ಸಂಬಂಧಿಸಿವೆ. ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿ ಇಲ್ಲದೇ ಒಬ್ಬ ಸ್ಥಳೀಯ ಅಧಿಕಾರಿ ಈ ಲೋಹದ ಲಾಠಿಗಳಿದೆ ಆರ್ಡರ್ ಮಾಡಿದ್ದರು. ಫೋಟೊದಲ್ಲಿರುವುದು ಅವೇ ಲಾಠಿಗಳು’ ಎಂದು ವಕ್ತಾರ ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಪೊಲೀಸರ ಕೈಗೆ ಲೋಹದ ಲಾಠಿ?: ಇದು ಯಾವುದರ ಸೂಚಕ?

’ಈ ಫೋಟೊ ನೋಡಿದ ಕೂಡಲೇ ಆ ಆಯುಧಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಇಲಾಖೆಗೆ ಇಂತಹ ಆಯುಧಗಳನ್ನು ಪೂರೈಸುವ ಯಾವ ಉದ್ದೇಶವು ಇಲ್ಲ’ ಎಂದು ಅವರು ಹೇಳಿದ್ದಾರೆ.

ನಿನ್ನೆ ಎನ್‌ಡಿಟಿವಿ ವರದಿ ಆಧರಿಸಿ ನಾನುಗೌರಿ.ಕಾಂ ಕೂಡ ಈ ಫೋಟೊ ಪ್ರಕಟಿಸಿ ಇಂತಹ ಆಯುಧಗಳ ಅಗತ್ಯವಿದೆಯೇ ಎಂದು ಪ್ರಶ್ನಿಸಿತ್ತು. ಪೊಲೀಸ್ ಮೂಲಗಳು ಹಂಚಿಕೊಂಡಿದ್ದ ಆ ಫೋಟೋದಲ್ಲಿ, ಪೊಲೀಸರ ಗುಂಪೊಂದು ರಾಷ್ಟ್ರ ರಾಜಧಾನಿಯಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿದ್ದು, ಅವರ ಮುಂಗೈ-ಮಣಿಕಟ್ಟಿನಿಂದ ಮೊಣಕೈಗೆ ಹೊದಿಸುವ ಲೋಹದ ಕೈಗವಸುಗಳಿದ್ದವು.

ದೊಡ್ಡ ರಕ್ಷಣಾತ್ಮಕ ಹೊದಿಕೆ ಅಥವಾ ’ಗಾರ್ಡ್’ ಹೊಂದಿರುವ ಲೋಹದ ಲಾಠಿಯನ್ನೂ ಅವರು ಹಿಡಿದಿದ್ದಾರೆ. ಎದುರಾಳಿಯ ಮೇಲೆ ಸ್ವಿಂಗ್ ಮಾಡುವಾಗ ಎರಡೂ ಮಣಿಕಟ್ಟುಗಳನ್ನು ರಕ್ಷಿಸುವಂತಹ ದೊಡ್ಡದಾದ ಹಿಡಿಕೆಯೂ ಇತ್ತು. ಈ ಆಯುಧಗಳ ವಿವರಗಳ ಬಗ್ಗೆ ದೆಹಲಿ ಪೊಲೀಸರಿಂದ ನಿನ್ನೆಯವರೆಗೆ ಯಾವುದೇ ಅಧಿಕೃತ ದೃಢೀಕರಣವಿರಲಿಲ್ಲ. ಇಂದು ದೆಹಲಿ ಪೊಲೀಸ್ ಇಲಾಖೆ ಇಂತಹ ಆಯುಧಗಳನ್ನು ಬಳಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? 

ವಿಧಾನಸಭಾ ಅಧಿವೇಶನದ ಲೈವ್ ನೋಡಿ►►

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...