Homeಮುಖಪುಟಉತ್ತರಪ್ರದೇಶ: ಸಚಿವರ ಕಾರಿಗೆ ಗೋವುಗಳಿಂದ ಮುತ್ತಿಗೆ ಹಾಕಿಸಿದ ಗ್ರಾಮಸ್ಥರು

ಉತ್ತರಪ್ರದೇಶ: ಸಚಿವರ ಕಾರಿಗೆ ಗೋವುಗಳಿಂದ ಮುತ್ತಿಗೆ ಹಾಕಿಸಿದ ಗ್ರಾಮಸ್ಥರು

- Advertisement -
- Advertisement -

ಪಶು ಚಿಕಿತ್ಸಾಲಯದ ಶಿಲಾನ್ಯಾಸಕ್ಕೆ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಪಶು ಸಂಗೋಪನಾ ಸಚಿವ ಧರ್ಮಪಾಲ್ ಸಿಂಗ್ ಬೆಂಗಾವಲು ಪಡೆ ಎದುರು ಗೋವುಗಳನ್ನು ತಂದು ನಿಲ್ಲಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಘಟನೆಯಿಂದ ಸಚಿವರು ಮುಜುಗರಕ್ಕೆ ಒಳಗಾಗಿದ್ದಾರೆ.

ಉತ್ತರಪ್ರದೇಶಸ ಪಶು ಸಂಗೋಪನಾ  ಸಚಿವರು, ಇಲಾಖೆಯ ಪ್ರಧಾನ ಕಾರ್ಯದರ್ಶಿ ರಜನೀಶ್ ದುಬೆ ಅವರೊಂದಿಗೆ ಆಮ್ಲಾದಲ್ಲಿ ಪಶುವೈದ್ಯಕೀಯ ಪಾಲಿ ಕ್ಲಿನಿಕ್‌ನ ಶಂಕುಸ್ಥಾಪನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಸಿಂಗ್ ಬರೇಲಿ ಜಿಲ್ಲೆಯ ಆಮ್ಲಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಸಚಿವರ ಬೆಂಗಾವಲು ಪಡೆ ಸುಮಾರು 40 ನಿಮಿಷಗಳ ಕಾಲ ನಿಂತಿತ್ತು. ಸ್ಥಳೀಯ ಠಾಣೆಗೆ ಮಾಹಿತಿ ತಲುಪುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ಈ ಪ್ರದೇಶದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಬೆಳೆ ಹಾನಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಸಚಿವರಿಗೆ ಮಾಹಿತಿ ನೀಡಿದರು.

ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಬಿಡಾಡಿ ದನಗಳನ್ನು ಬರದಂತೆ ತಡೆಯಲು  ಹಗಲು-ರಾತ್ರಿ ತಮ್ಮ ಜಮೀನಿನಲ್ಲಿಯೇ ಇರಬೇಕಾಗುತ್ತದೆ ಎಂದು ದೂರಿದರು.

ರಾತ್ರಿಯಲ್ಲಿ ಬೆಳೆಗಳನ್ನು ರಕ್ಷಿಸುವುದು ಅಗ್ನಿಪರೀಕ್ಷೆಯಾಗುವುದರಿಂದ ಚಳಿಗಾಲದಲ್ಲಿ ಸಮಸ್ಯೆ ಜಟಿಲವಾಗುತ್ತದೆ ಎಂದು ದೂರಿದರು. ಸಚಿವರು ಮತ್ತು ಪೊಲೀಸರು ಭರವಸೆ ನೀಡಿದ ನಂತರ ಆಕ್ರೋಶಗೊಂಡ ಗ್ರಾಮಸ್ಥರು ದನಕರುಗಳನ್ನು ಹಿಡಿದುಕೊಂಡು ಸಚಿವರ ಬೆಂಗಾವಲು ಪಡೆ ಮುಂದಕ್ಕೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.

ಕಳೆದ ಜನವರಿಯಲ್ಲಿ, ಬಿಡಾಡಿ ದನಗಳ ಹಾವಳಿಯನ್ನು ವಿರೋಧಿಸಿ ಗ್ರಾಮಸ್ಥರು ಬದೌನ್-ಮೀರತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದನಗಳನ್ನು ಹಿಡಿದು ವಾಹನಗಳ ಸಂಚಾರವನ್ನು ತಡೆದಿದ್ದರು.

ಇದನ್ನು ಓದಿ: ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಆಡಳಿತ ಮಂಡಳಿಯಿಂದ ಕಿರುಕುಳ: ಅಧ್ಯಾಪಕರ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಜಮಿನ್ ನೆತನ್ಯಾಹು ರಾಜೀನಾಮೆಗೆ ಒತ್ತಾಯಿಸಿ ಇಸ್ರೇಲಿನಲ್ಲಿ ಪ್ರತಿಭಟನೆ; ಪೊಲೀಸರೊಂದಿಗೆ ಘರ್ಷಣೆ

0
ಟೆಲ್ ಅವಿವ್‌ನಲ್ಲಿ ಇಸ್ರೇಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಶನಿವಾರ ಘರ್ಷಣೆ ಭುಗಿಲೆದ್ದಿದೆ. ಸಾವಿರಾರು ಜನರು ಸರ್ಕಾರದ ವಿರುದ್ಧ ಪ್ರತಿಭಟಿಸಿ, ಗಾಜಾದಲ್ಲಿನ ಹಮಾಸ್‌ನಿಂದ ಒತ್ತೆಯಾಳುಗಳನ್ನು ಹಿಂದಕ್ಕೆ ಕರೆತರುವಂತೆ ಒತ್ತಾಯಿಸಿದರು. ಇಸ್ರೇಲ್ ಮತ್ತು ಹಮಾಸ್ ನಡುವಿನ...