Homeಮುಖಪುಟ23 ಜಿಲ್ಲೆಗಳಿಗೆ ಸಚಿವ ಸ್ಥಾನ: 8 ಜಿಲ್ಲೆಗಳಿಗಿಲ್ಲ ಪ್ರಾತಿನಿಧ್ಯ

23 ಜಿಲ್ಲೆಗಳಿಗೆ ಸಚಿವ ಸ್ಥಾನ: 8 ಜಿಲ್ಲೆಗಳಿಗಿಲ್ಲ ಪ್ರಾತಿನಿಧ್ಯ

- Advertisement -
- Advertisement -

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್‌ ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು ಸಿಎಂ ಸೇರಿ ಒಟ್ಟು 34 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ ರಾಜ್ಯದ 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಿಗೆ ಮಾತ್ರವೇ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಕ್ಕಿದ್ದು, ಉಳಿದ ಎಂಟು ಜಿಲ್ಲೆಗಳು ಸಚಿವ ಸ್ಥಾನ ಸಿಕ್ಕಿಲ್ಲ.

ಬೆಂಗಳೂರು ನಗರ ಜಿಲ್ಲೆಯ ಆರು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಮೈಸೂರು ಎರಡನೇ ಸ್ಥಾನದಲ್ಲಿದ್ದು, ಸಿದ್ದರಾಮಯ್ಯ ಅವರಲ್ಲದೇ ಇನ್ನೂ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ.

ತುಮಕೂರು, ವಿಜಯಪುರ, ಕಲಬುರಗಿ, ಬೀದರ್ ಮತ್ತು ಬೆಳಗಾಂ ಜಿಲ್ಲೆಗಳ ತಲಾ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. 16 ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.

ಕೋಲಾರ, ಹಾಸನ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರ, ವಿಜಯನಗರ ಜಿಲ್ಲೆಗಳಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ.

ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ನತ್ತ ವಲಸೆ ಬಂದಿರುವ ಹಲವರಿಗೆ ಸಚಿವ ಸ್ಥಾನ ನೀಡಿಲ್ಲ. ಪ್ರಮುಖವಾಗಿ ಬಿಜೆಪಿಯಿಂದ ಬಂದ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ, ಅಶೋಕ್‌ ರೈ ಸೇರಿದಂತೆ ಹಲವರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಜೆಡಿಎಸ್‌ನಿಂದ ಕೆ.ಎಂ ಶಿವಲಿಂಗೇಗೌಡ, ಗುಬ್ಬಿ ಶ್ರೀನಿವಾಸ್‌ ಸೇರ್ಪಡೆಯಾಗಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಎಲ್ಲರಿಗು ಸಚಿವ ಸ್ಥಾನ ನೀಡುವುದು ಕಷ್ಟವಾದ್ದರಿಂದ ಇವರೆಲ್ಲರೂ ಸಚಿವ ಸ್ಥಾನಿಂದ ವಂಚಿತರಾಗಿದ್ದಾರೆ.

ಇನ್ನು ಸಚಿವ ಸ್ಥಾನ ಸಿಗದವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಮುಖಂಡರು ಸಮಾಧಾನ ಮಾಡಲು ಯತ್ನಿಸುತ್ತಿದ್ದಾರೆ.

ನೂತನ ಸಚಿವರ ಪಟ್ಟಿ

ಸಿದ್ದರಾಮಯ್ಯ: ಮೈಸೂರು

ಡಿ.ಕೆ ಶಿವಕುಮಾರ್: ರಾಮನಗರ

ಕೆ.ಎಚ್ ಮುನಿಯಪ್ಪ: ಬೆಂಗಳೂರು ಗ್ರಾಮಾಂತರ

ಡಾ.ಜಿ ಪರಮೇಶ್ವರ್: ತುಮಕೂರು

ಸತೀಶ್ ಜಾರಕಿಹೊಳಿ: ಬೆಳಗಾಂ

ಪ್ರಿಯಾಂಕ್ ಖರ್ಗೆ: ಕಲಬುರಗಿ

ರಾಮಲಿಂಗಾರೆಡ್ಡಿ: ಬೆಂಗಳೂರು ನಗರ

ಜಮೀರ್ ಅಹ್ಮದ್ ಖಾನ್: ಬೆಂಗಳೂರು ನಗರ

ಕೆ.ಜೆ ಜಾರ್ಜ್: ಬೆಂಗಳೂರು ನಗರ

ಎಂ.ಬಿ ಪಾಟೀಲ್: ವಿಜಯಪುರ

ಎಚ್.ಕೆ.ಪಾಟೀಲ- ಗದಗ

ಕೃಷ್ಣ ಬೈರೇಗೌಡ- ಬೆಂಗಳೂರು ನಗರ

ಎನ್.ಚಲುವರಾಯಸ್ವಾಮಿ- ಮಂಡ್ಯ

ಕೆ.ವೆಂಕಟೇಶ್‌- ಮೈಸೂರು

ಡಾ.ಎಚ್‌.ಸಿ.ಮಹದೇವಪ್ಪ- ಮೈಸೂರು

ಈಶ್ವರ ಖಂಡ್ರೆ- ಬೀದರ್

ಕೆ.ಎನ್‌.ರಾಜಣ್ಣ- ತುಮಕೂರು

ದಿನೇಶ್‌ ಗುಂಡೂರಾವ್‌- ಬೆಂಗಳೂರು ನಗರ

ಶರಣಬಸಪ್ಪ ದರ್ಶನಾಪುರ- ಯಾದಗಿರಿ

ಶಿವಾನಂದ ಪಾಟೀಲ- ವಿಜಯಪುರ

ಆರ್.ಬಿ.ತಿಮ್ಮಾಪುರ- ಬಾಗಲಕೋಟ

ಎಸ್‌.ಎಸ್‌.ಮಲ್ಲಿಕಾರ್ಜುನ- ದಾವಣಗೆರೆ

ಶಿವರಾಜ ತಂಗಡಗಿ- ಕೊಪ್ಪಳ

ಶರಣ ಪ್ರಕಾಶ ಪಾಟೀಲ- ಕಲಬುರಗಿ

ಮಂಕಾಳ ಸುಬ್ಬ ವೈದ್ಯ- ಉತ್ತರ ಕನ್ನಡ

ಲಕ್ಷ್ಮಿ ಹೆಬ್ಬಾಳ್ಕರ್- ಬೆಳಗಾಂ

ರಹೀಂ ಖಾನ್‌- ಬೀದರ್

ಡಿ.ಸುಧಾಕರ್‌- ಚಿತ್ರದುರ್ಗ

ಸಂತೋಷ್‌ ಎಸ್‌.ಲಾಡ್‌- ಧಾರವಾಡ

ಎನ್‌.ಎಸ್.ಬೋಸರಾಜು- ರಾಯಚೂರು

ಬೈರತಿ ಸುರೇಶ್‌- ಬೆಂಗಳೂರು ನಗರ

ಮಧು ಬಂಗಾರಪ್ಪ- ಶಿವಮೊಗ್ಗ

ಡಾ.ಎಂ.ಸಿ.ಸುಧಾಕರ್‌- ಚಿಕ್ಕಬಳ್ಳಾಪುರ

ಬಿ.ನಾಗೇಂದ್ರ- ಬಳ್ಳಾರಿ

ಇದನ್ನೂ ಓದಿ: ಕರಾವಳಿ ಕೋಮುಹತ್ಯೆಗಳ ತನಿಖೆಗೆ ಎಸ್‌ಐಟಿ ರಚಿಸಿ: ರಮಾನಾಥ್ ರೈ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...