Homeಮುಖಪುಟಮೋದಿಯವರ ಶೈಕ್ಷಣಿಕ ಕೊರತೆ ಭಾರತಕ್ಕೆ ಅಪಾಯಕಾರಿ: ಸಿಸೋಡಿಯಾ ಬಹಿರಂಗ ಪತ್ರ

ಮೋದಿಯವರ ಶೈಕ್ಷಣಿಕ ಕೊರತೆ ಭಾರತಕ್ಕೆ ಅಪಾಯಕಾರಿ: ಸಿಸೋಡಿಯಾ ಬಹಿರಂಗ ಪತ್ರ

- Advertisement -
- Advertisement -

ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರು ಶುಕ್ರವಾರ ಬರೆದಿರುವ ಬಹಿರಂಗ ಪತ್ರದಲ್ಲಿ “ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಯ ಕೊರತೆ ಭಾರತಕ್ಕೆ ಅಪಾಯಕಾರಿ” ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವಿಟರ್‌ನಲ್ಲಿ ಪತ್ರವನ್ನು ಹಂಚಿಕೊಂಡಿದ್ದು, “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶಾದ್ಯಂತ 60,000 ಸರ್ಕಾರಿ ಶಾಲೆಗಳನ್ನು ಮುಚ್ಚಿದೆ” ಎಂದು ಮನೀಶ್‌ ಸಿಸೋಡಿಯಾ ಆರೋಪಿಸಿದ್ದಾರೆ.

“[ನರೇಂದ್ರ] ಮೋದಿಯವರಿಗೆ ವಿಜ್ಞಾನ ಅರ್ಥವಾಗುತ್ತಿಲ್ಲ…” ಎಂದು ಸಿಸೋಡಿಯಾ ಆರೋಪಿಸಿದ್ದಾರೆ. “ಅವರಿಗೆ ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ. ಭಾರತದ ಪ್ರಗತಿಗೆ ಒಬ್ಬ ವಿದ್ಯಾವಂತ ಪ್ರಧಾನ ಮಂತ್ರಿ ಇರುವುದು ಅವಶ್ಯ” ಎಂದಿದ್ದಾರೆ.

ದೆಹಲಿ ಕ್ಯಾಬಿನೆಟ್‌ನಲ್ಲಿ ಶಿಕ್ಷಣ ಸಚಿವರಾಗಿದ್ದ ಸಿಸೋಡಿಯಾ ಅವರನ್ನು ಅಕ್ರಮ ಮದ್ಯ ನೀತಿಯಡಿ ಭ್ರಷ್ಟಾಚಾರ ಎಸಗಿದ ಆರೋಪದ ಮೇಲೆ  ಫೆಬ್ರವರಿ 26 ರಂದು ಕೇಂದ್ರೀಯ ತನಿಖಾ ದಳವು ಬಂಧಿಸಿತು. ಅವರು ಬಂಧನದ ನಂತರ ಸಚಿವ ಸಂಪುಟವನ್ನು ತೊರೆದ್ದಾರೆ ಮತ್ತು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ವಿವರಗಳನ್ನು ನೀಡುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದ 2016 ರ ಆದೇಶವನ್ನು ಗುಜರಾತ್ ಹೈಕೋರ್ಟ್ ರದ್ದುಗೊಳಿಸಿದ ಒಂದು ವಾರದ ನಂತರ ಮನೀಶ್ ಸಿಸೋಡಿಯಾ ಅವರ ಪತ್ರ ಬಂದಿದೆ. ಕೇಜ್ರಿವಾಲ್‌ಗೆ 25,000 ರೂಪಾಯಿ ದಂಡವನ್ನೂ ನ್ಯಾಯಾಲಯ ವಿಧಿಸಿದೆ.

1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಲಾ ಪದವಿ ಮತ್ತು 1983 ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನು ಮೋದಿ ಪಡೆದಿದ್ದಾರೆ ಎಂದು ಬಿಜೆಪಿ ಹೇಳುತ್ತದೆ. ಆದರೆ, ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಈ ಪದವಿಗಳು ನಕಲಿ ಎಂದು ಆರೋಪಿಸಿದೆ.

ಸಿಸೋಡಿಯಾ ತಮ್ಮ ಪತ್ರದಲ್ಲಿ ಮೋದಿಯವರ ಕೆಲವು ಮಾತುಗಳನ್ನು ಉಲ್ಲೇಖಿಸಿ ಟೀಕೆಗಳನ್ನು ಮಾಡಿದ್ದಾರೆ.

“ಜಗತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದೆ … ಒಳಚರಂಡಿಯಲ್ಲಿ ಹರಿಯುವ ಕೊಳಕು ಅನಿಲವನ್ನು ಚಹಾ ಅಥವಾ ಆಹಾರವನ್ನು ತಯಾರಿಸಲು ಬಳಸಬಹುದು ಎಂದು ಪ್ರಧಾನಿ ಹೇಳುವುದನ್ನು ಕೇಳಿದಾಗ, ನನ್ನ ಹೃದಯ ಮರುಗುತ್ತದೆ” ಎಂದು ಸಿಸೋಡಿಯಾ ಹೇಳಿದರು. “ಇವರು ಪ್ರಪಂಚದಾದ್ಯಂತ ಹಾಸ್ಯದ ವಿಷಯವಾಗಿದ್ದಾರೆ. ಮೋಡಗಳ ಹಿಂದೆ ಇರುವ ವಿಮಾನವನ್ನು ರಾಡಾರ್‌ಗಳು ಪತ್ತೆ ಹಚ್ಚುವುದಿಲ್ಲ ಎಂದು ಇವರು ಹೇಳಿದಾಗ ಶಾಲಾ ಕಾಲೇಜಿನ ಮಕ್ಕಳು ಇವರನ್ನು ಗೇಲಿ ಮಾಡುತ್ತಾರೆ” ಎಂದಿದ್ದಾರೆ.

2018ರಲ್ಲಿ ಮೋದಿಯವರು ನೀಡಿದ ಹೇಳಿಕೆಯನ್ನು ಸಿಸೋಡಿಯಾ ಉಲ್ಲೇಖಿಸಿದ್ದಾರೆ. ಚಹಾ ಮಾರಾಟಗಾರನೊಬ್ಬ ಗಟರ್‌ನಿಂದ ಹೊರಹೊಮ್ಮುವ ಅನಿಲವನ್ನು ಇಂಧನವಾಗಿ ಬಳಸಿರುವ ಬಗ್ಗೆ ಓದಿದ್ದೇನೆ ಎಂದು ಹೇಳಿದ್ದರು. 2019ರ ಸಂದರ್ಶನವೊಂದರಲ್ಲಿ ಬಾಲಾಕೋಟ್ ವೈಮಾನಿಕ ದಾಳಿಯ ಕುರಿತು ಮಾತನಾಡಿದ್ದ ಮೋದಿಯವರು, “ನಮ್ಮ ವಿಮಾನಗಳು ರಾಡಾರ್‌ಗಳಿಂದ ತಪ್ಪಿಸಿಕೊಳ್ಳಲು ಮೋಡಗಳು ಸಹಾಯ ಮಾಡುತ್ತವೆ” ಎಂದು ಹೇಳಿದ್ದರು.

ಇದನ್ನೂ ಓದಿರಿ: ಚುನಾವಣೆ ಎದುರಿಸಲು ಬಿಜೆಪಿ ರೌಡಿಗಳ ಮೊರೆ ಹೋಗುತ್ತಿದೆ: ಕಾಂಗ್ರೆಸ್ ಆರೋಪ

ಇದರ ನಡುವೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, “ಪ್ರಧಾನಿಯವರ ಶೈಕ್ಷಣಿಕ ಅರ್ಹತೆಗಳನ್ನು ಪ್ರಶ್ನಿಸಿ ಸಿಸೋಡಿಯಾ ಅವರು ಬರೆದಿರುವ ಪತ್ರ ವಿಷಾದನೀಯ” ಎಂದಿದೆ.

ದೆಹಲಿ ಬಿಜೆಪಿ ವಕ್ತಾರ ಹರೀಶ್ ಖುರಾನಾ ಪ್ರತಿಕ್ರಿಯಿಸಿ, “ನಾನು ಸಿಸೋಡಿಯಾ ಅವರಿಗೆ ಹೇಳಲು ಬಯಸುತ್ತೇನೆ, ಒಬ್ಬ ವ್ಯಕ್ತಿಯನ್ನು ಅವರ ಪದವಿಗಳ ಆಧಾರದ ಮೇಲೆ ನಿರ್ಣಯಿಸಲಾಗುವುದಿಲ್ಲ, ಆದರೆ ಅವರ ಪ್ರಬುದ್ಧತೆ, ಬುದ್ಧಿವಂತಿಕೆ, ಅವರ ಆಲೋಚನೆ ಮತ್ತು ಸಮಸ್ಯೆಗಳ ಬಗ್ಗೆ ಅವರ ತಿಳಿವಳಿಕೆ ಇದೆಲ್ಲದರ ಮೇಲೆ ನಿರ್ಧರಿಸಲಾಗುತ್ತದೆ” ಎಂದು  ಹೇಳಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ ಖುರಾನಾ ಹೇಳಿದರು.

ಖುರಾನಾ ಅವರು ಸಿಸೋಡಿಯಾ ಅವರ ಶೈಕ್ಷಣಿಕ ಅರ್ಹತೆಗಳನ್ನು ಸಹ ಪ್ರಶ್ನಿಸಿದ್ದಾರೆ.

“ನೀವು ಕೇವಲ ಡಿಪ್ಲೊಮಾ-ಹೋಲ್ಡರ್ ಆಗಿದ್ದೀರಿ ಮತ್ತು ನೀವು ಎಂಎ ಪದವಿಯನ್ನು ಪ್ರಶ್ನಿಸುತ್ತಿದ್ದೀರಿ. ನಿಮಗೆ ಸಮಸ್ಯೆಗಳ ಬಗ್ಗೆ ಬುದ್ಧಿವಂತಿಕೆ ಅಥವಾ ಅಗತ್ಯ ತಿಳುವಳಿಕೆ ಇಲ್ಲ. ದೇಶವು ಹೆಮ್ಮೆಪಡುವ ಮತ್ತು ಜಗತ್ತೇ ಭಾರತವನ್ನು ಗೌರವಿಸಲು ಕಾರಣವಾಗಿರುವ ಪ್ರಧಾನಿಯನ್ನು ಪ್ರಶ್ನಿಸುತ್ತಿದ್ದೀರಾ? ಇದು ನನಗೆ ಆಶ್ಚರ್ಯ ತಂದಿದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. If Modi really uneducated thats fine but now a days Educated are becoming more corrupt and no mercy and no ethics and no value for relationship all frauds created by educated only but uneducated are fare better they have ethics in their life and they give value to relationships

LEAVE A REPLY

Please enter your comment!
Please enter your name here

- Advertisment -

Must Read

ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ತಂದ ಈಶ್ವರಪ್ಪ ಪುತ್ರ ಕಾಂತೇಶ್

0
ಸುದ್ದಿ ವಾಹಿನಿಗಳು ಮತ್ತು ಮುದ್ರಣ ಮಾಧ್ಯಮಗಳು ತನ್ನ ವಿರುದ್ದ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ಮಾಜಿ ಉಪ ಮುಖ್ಯ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಪುತ್ರ...