Homeಕರ್ನಾಟಕಚುನಾವಣೆ ಎದುರಿಸಲು ಬಿಜೆಪಿ ರೌಡಿಗಳ ಮೊರೆ ಹೋಗುತ್ತಿದೆ: ಕಾಂಗ್ರೆಸ್ ಆರೋಪ

ಚುನಾವಣೆ ಎದುರಿಸಲು ಬಿಜೆಪಿ ರೌಡಿಗಳ ಮೊರೆ ಹೋಗುತ್ತಿದೆ: ಕಾಂಗ್ರೆಸ್ ಆರೋಪ

- Advertisement -
- Advertisement -

ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ರೌಡಿ ಶೀಟರ್‌ ಫಯಾಜ್‌ ಚೌಟಿ ಮತ್ತು ಆತನ ಬೆಂಬಲಿಗರೊಂದಿಗೆ ಗುಪ್ತ ಸಭೆ ನಡೆಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಡುತ್ತಿದ್ದಂತೆ ಚುನಾವಣೆ ಎದುರಿಸಲು ಬಿಜೆಪಿ ರೌಡಿಗಳ ಮೊರೆ ಹೋಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

“ಚುನಾವಣೆ ಎದುರಿಸಲು ಬಿಜೆಪಿ ರೌಡಿಗಳ ಮೊರೆ ಹೋಗುತ್ತಿದೆ. ರೌಡಿ ಶೀಟರ್ ಫೈಟರ್ ರವಿಗೆ ಮೋದಿ ಕೈಮುಗಿಯುತ್ತಾರೆ, ರೌಡಿ ಫಯಾಜ್‌ನೊಂದಿಗೆ ಕಾಗೇರಿ ಗುಪ್ತ ಸಭೆ ನಡೆಸುತ್ತಾರೆ. ರೌಡಿಗಳನ್ನು ಬಿಜೆಪಿಯ ಸೋಕಾಲ್ಡ್ ಸಜ್ಜನರು ಅಪ್ಪಿ ಮುದ್ದಾಡುತ್ತಿರುವುದೇಕೆ? #BJPRowdyMorcha ಕ್ಕೆ ಸೇರಿಸಿಕೊಳ್ಳಲು ನಡೆಸಿದ ಓಲೈಕೆ ಸಭೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಫಯಾಜ್‌ ಚೌಟಿ ಅಪಹರಣ, ಹಣ ವಂಚನೆ ಮತ್ತು ದರೋಡೆ ಸೇರಿದಂತೆ 17ಕ್ಕೂ ಹೆಚ್ಚು ಪ್ರಕರಣ ಎದುರಿಸುತ್ತಿದ್ದಾನೆ. ಆತನನ್ನು ಪಕ್ಕದಲ್ಲೇ ಕುಳಿಸಿಕೊಂಡು ಕಾಗೇರಿಯವರು ಆತನ ಬೆಂಬಲಿಗರೊಂದಿಗೆ ತಮ್ಮ ಕಚೇರಿಯಲ್ಲಿ 5 ದಿನಗಳ ಹಿಂದೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಚುನಾವಣಾ ಸಮಯದಲ್ಲಿ ರೌಡಿಗಳೊಂದಿಗೆ ಸಭೆ ನಡೆಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.

ಮಂಡ್ಯದ ನಾಗಮಂಗಲದಲ್ಲಿ ರೌಡಿ ಶೀಟರ್ ಆಗಿದ್ದ ಫೈಟರ್ ರವಿ ಬಿಜೆಪಿ ಸೇರಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೈ ಮುಗಿಯುತ್ತಿರುವ ಫೋಟೊ ವೈರಲ್ ಆಗಿತ್ತು. ಇನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸೈಲೆಂಟ್ ಸುನೀಲ್ ಬಿಜೆಪಿ ಸೇರಲು ಕಸರತ್ತು ನಡೆಸುತ್ತಿದ್ದಾರೆ. ಹಾಗಾಗಿ ಬಿಜೆಪಿ ರೌಡಿ ಮೋರ್ಚಾ ಎಂದು ಪ್ರತಿಪಕ್ಷಗಳು ಲೇವಡಿ ಮಾಡುತ್ತಿವೆ.

ಇದನ್ನೂ ಓದಿ: ಮಾಜಿ ರೌಡಿ ಶೀಟರ್‌ಗೆ ನಮಸ್ಕರಿಸುವುದೂ ಸಂಸ್ಕಾರವಂತಲ್ಲಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...