Homeಮುಖಪುಟಕಟ್ಟಡ ಕಾರ್ಮಿರ ಹಣದಲ್ಲಿಆಹಾರ-ಧಾನ್ಯ ವಿತರಿಸಿ ಪ್ರಚಾರ ಪಡೆಯುತ್ತಿರುವ ಬಿಜೆಪಿ ಶಾಸಕರು

ಕಟ್ಟಡ ಕಾರ್ಮಿರ ಹಣದಲ್ಲಿಆಹಾರ-ಧಾನ್ಯ ವಿತರಿಸಿ ಪ್ರಚಾರ ಪಡೆಯುತ್ತಿರುವ ಬಿಜೆಪಿ ಶಾಸಕರು

ಸಂಕಟದಿಂದ ಹೇಗೆ ಪಾರಾಗುವುದೆಂದು ಇಡೀ ಜಗತ್ತು ಚಿಂತಿಸುತ್ತಿದ್ದರೆ, ಬಿಜೆಪಿಯ ಕೆಲ ನಾಯಕರುಗಳು ಸರಕಾರದ ಪರಿಹಾರ ಸಾಮಗ್ರಿ ಮೇಲೆ ತಮ್ಮ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ.

- Advertisement -
- Advertisement -

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ತತ್ತರಿಸಿಹೋಗಿರುವ ವಲಸೆ ಮತ್ತು ಕಟ್ಟಡಕಾರ್ಮಿಕರಿಗೆ ಆಹಾರ-ಧಾನ್ಯ ಹಂಚುವ ಕಾರ್ಯ ಭರ್ಜರಿ ಪ್ರಚಾರದೊಂದಿಗೆ ನಡೆಯುತ್ತಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರು ಉಳಿಸಿರುವ ಹಣದಲ್ಲೇ ಆಹಾರ-ಧಾನ್ಯಗಳನ್ನು ಖರೀದಿಸಿ ಬಿಜೆಪಿ ಶಾಸಕರು ಅಕ್ಕಿ ಪಾಕೆಟ್‌ಗಳ ಮೇಲೆ ತಮ್ಮ ಪೋಟೋಗಳನ್ನು ಹಾಕಿಕೊಂಡು ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯ ಮತ್ತು ಊಟವನ್ನು ವಿತರಿಸುತ್ತಿರುವುದು ಜೋರಾಗಿ ನಡೆಯುತ್ತಿದೆ. ಹಣ ಕಟ್ಟಡ ಕಾರ್ಮಿಕರದ್ದು, ಪ್ರಚಾರ ಪಡೆಯುತ್ತಿರುವುದು ಮಾತ್ರ ಬಿಜೆಪಿ ಶಾಸಕರು. ಆಹಾರಧಾನ್ಯಗಳನ್ನು ವಿತರಿಸುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ಮುಖ್ಯಮಂತ್ರಿಗಳು ಮತ್ತು ಪ್ರಧಾನಿಗಳ ಮಾತನ್ನು ಬಿಜೆಪಿ ಶಾಸಕರೇ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಕಲ್ಯಾಣ ಮಂಡಳಿಯ ಹಣವನ್ನು ಕಟ್ಟಡ ಕಾರ್ಮಿಕರಿಗೆ ಬಿಟ್ಟು ಇತರ ಉದ್ದೇಶಕ್ಕೆ ಬಳಸಿಕೊಳ್ಳಬಾರದೆಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಆದರೂ ಕೇಂದ್ರ ಸರ್ಕಾರ ಕಲ್ಯಾಣ ಮಂಡಳಿಯಿಂದ 3 ಸಾವಿರ ಕೋಟಿ ರೂಪಾಯಿ ಹಣ ಬಳಕೆ ಮಾಡಿಕೊಂಡಿದೆ. ಹೀಗೆ ಹಣ ಬಳಕೆ ಮಾಡಿಕೊಳ್ಳುವ ಮೊದಲು ಕಲ್ಯಾಣ ಮಂಡಳಿಯ ಸಭೆ ಕರೆಯಬೇಕು. ಆದರೆ ಕಾರ್ಮಿಕರು, ಮಾಲಿಕರು ಮತ್ತು ಸರ್ಕಾರದ ಪ್ರತಿನಿಧಿಗಳು ಈ ಮಂಡಳಿಯಲ್ಲಿದ್ದರೂ ಸಭೆಯನ್ನೇ ಕರೆದಿಲ್ಲ. ಜೊತೆಗೆ ಸಲಹಾ ಮಂಡಳಿಯ ಸಭೆಯನ್ನು ಕರೆಯದೆ ಹಣ ಬಳಸಿಕೊಳ್ಳಲಾಗಿದೆ. ಈ ಮೂಲಕ ಸುಪ್ರೀಂಕೋರ್ಟ್ ಆದೇಶ ಮತ್ತು ಕಲ್ಯಾಣ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ರಾಜ್ಯ ಸರ್ಕಾರ 150 ಕೋಟಿ ರೂಪಾಯಿಗಳನ್ನು ಕಲ್ಯಾಣ ಮಂಡಳಿಯಿಂದ ತೆಗೆದುಕೊಂಡಿದೆ. ಐಎಎಸ್ ಅಧಿಕಾರಿ ಮಣಿವಣ್ಣನ್ ಉಸ್ತುವಾರಿಯಲ್ಲಿ ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೆ ಆಹಾರಧಾನ್ಯಗಳನ್ನು ಟ್ರೇಡ್ ಯೂನಿಯನ್ ಗಳ ಮೂಲಕ ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ತಂದು ಶಾಸಕರೇ ವಿತರಿಸುವಂತೆ ನೋಡಿಕೊಂಡರು. ಪರಿಣಾಮ ಶಾಸಕ ಅರವಿಂದ ಲಿಂಬಾವಳಿ ಮತ್ತು ಬಿಜೆಪಿ ಕಾರ್ಪೋರೇಟರ್‌ಗಳು ತಮ್ಮ ಪೋಟೋಗಳನ್ನು ಅಕ್ಕಿ ಪಾಕೇಟ್‌ಗಳ ಮೇಲೆ ಮುದ್ರಿಸಿ ವಲಸೆ-ಕಟ್ಟಡ ಕಾರ್ಮಿಕರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ.

ನಾನುಗೌರಿ.ಕಾಂ ಜೊತೆ ದೂರವಾಣಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಬೆಂಗಳೂರು ನಗರದಲ್ಲಿರುವ ಮುನಿರತ್ನಂ, ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ, ಮಾಜಿ ಶಾಸಕ ಎನ್.ಎಸ್.ಕೃಷ್ಣಯ್ಯ ಸೇರಿದಂತೆ ಬಿಜೆಪಿ ಶಾಸಕರು ಮತ್ತು ಕಾರ್ಪೋರೇಟರ್‌ಗಳು ಕಟ್ಟಡ ಕಾರ್ಮಿಕರಿಗೆ ಆಹಾರಧಾನ್ಯಗಳ ವಿತರಣೆ ಮಾಡುವಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 20ಲಕ್ಷಕ್ಕೂ ಹೆಚ್ಚು ಮಂದಿ ಕಟ್ಟಡ ಮತ್ತು ವಲಸೆ ಕಾರ್ಮಿಕರಿದ್ದು ಪ್ರತಿಯೊಬ್ಬ ಕಾರ್ಮಿಕನಿಗೆ 750 ರೂ ಮೌಲ್ಯದ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ. ಆಹಾರ ಧಾನ್ಯಗಳನ್ನು ವಿತರಿಸುವುದಕ್ಕಾಗಿಯೇ 75 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು ಕಾರ್ಮಿಕರ ಹಣವನ್ನು
ಲೂಟಿ ಮಾಡಲಾಗುತ್ತಿದೆ ಎಂದಿದ್ದಾರೆ.

ಸಂಕಟದಿಂದ ಹೇಗೆ ಪಾರಾಗುವುದೆಂದು ಇಡೀ ಜಗತ್ತು ಚಿಂತಿಸುತ್ತಿದ್ದರೆ, ಬಿಜೆಪಿಯ ಕೆಲ ನಾಯಕರುಗಳು ಸರಕಾರದ ಪರಿಹಾರ ಸಾಮಗ್ರಿ ಮೇಲೆ ತಮ್ಮ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ. ಇದೇನು ಜನಸಾಮಾನ್ಯರಿಗೆ ಸರಕಾರ ನೀಡುವ ಪರಿಹಾರ ಸಾಮಗ್ರಿಯೋ? ಬಿಜೆಪಿ ಪಕ್ಷದ ಕೊಡುಗೆಯೋ? ಅಥವಾ ಲಿಂಬಾವಳಿಯವರ ವೈಯಕ್ತಿಕ ದಾನವೋ? ಅಥವಾ ಲಜ್ಜೆಗೇಡಿ ರಾಜಕಾರಣವೋ? ಪ್ರಧಾನಿ ಮೋದಿ ಮತ್ತು ಸನ್ಮಾನ್ಯ ಯಡಿಯೂರಪ್ಪ ಉತ್ತರ ಹೇಳುವರೇ? ಒಂದು ಸಮುದಾಯವನ್ನು ಕೊರೋನ ಮಹಾಮಾರಿಗೆ ಸಮೀಕರಿಸುವವರ ಬಗ್ಗೆ ದಿವ್ಯ ಮೌನ ತಳೆದ ಪ್ರಧಾನಿಗಳು ಬಡ ಕಾರ್ಮಿಕರ ಪರಿಹಾರ ಸಾಮಗ್ರಿಯನ್ನು ಕೆಲ ಪ್ರಚಾರಪ್ರಿಯರು ತಮ್ಮ ಫೋಟೋ ಸ್ಟಿಕರ್ ಅಂಟಿಸಿ ನೀಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆಯೇ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಲಸೆ ಮತ್ತು ಕಟ್ಟಡ ಕಾರ್ಮಿಕರಿಗೆ ಊಟದ ವ್ಯವಸ್ಥೆ ನೋಡಿಕೊಳ್ಳಲು ಇಸ್ಕಾನ್ ಸಂಸ್ಥೆಗೆ ವಹಿಸಿದೆ. ಮಾಳವಿಕ ನೇತೃತ್ವದಲ್ಲಿ ಕೋವಿಡ್ ವಾರಿಯರ್ ಫೋರ್ಸ್ ರಚನೆ ಮಾಡಿದೆ. ಇದು ಅದಮ್ಯಚೇತನ ಸಂಸ್ಥೆಯೊಂದಿಗೆ ಸೇರಿಕೊಂಡು ಇದೇ ಕಲ್ಯಾಣ ಮಂಡಳಿಯ ಹಣದಲ್ಲಿ ಊಟ ವಿತರಿಸುತ್ತಿದೆ. ಸೇವಾ ಆರ್‌ಎಸ್ಎಸ್ ಹೆಸರಿನಲ್ಲೂ ಊಟ ವಿತರಣೆ ಮಾಡುತ್ತಿದೆ. ಒಂದು ಕೇಂದ್ರದಲ್ಲಿ ಆಹಾರ ತಯಾರಿಸಿ ಒಂದು ಊಟಕ್ಕೆ 24 ರೂಪಾಯಿಯಂತೆ ಸರ್ಕಾರದಿಂದ ಹಣ ಪಡೆಯುತ್ತವೆ ಈ ಸಂಸ್ಥೆಗಳು. ಮೊದಲು 300 ಗ್ರಾ ಕೊಡುತ್ತಿದ್ದರು. ಈಗ ಅದು 200 ಗ್ರಾಂಗೆ ಇಳಿದಿದೆ. ಇದರಿಂದ ಕಟ್ಟಡ ಕಾರ್ಮಿಕರ ಹೊಟ್ಟೆ ತುಂಬುವುದಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ರಾತ್ರಿ ವೇಳೆ ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೆ ಕೊಡುವ ಊಟ ಕಳಪೆಯಾಗಿದೆ. ಒಂದುಕಡೆ ಊಟ ತಯಾರಿಸಿ ಬೆಂಗಳೂರಿನ 24 ಕಲ್ಯಾಣ ಮಂಟಪಗಳಲ್ಲಿ ಅನ್ನವನ್ನು ತಂದು ಸುರಿಯುವ ವ್ಯವಸ್ಥೆ ಇರುವುದರಿಂದ ಸ್ವಚ್ಛತೆ ಕಾಣುತ್ತಿಲ್ಲ. ಕಲ್ಯಾಣ ಮಂಟಪದ ಆವರಣದಲ್ಲಿ ಸುರಿದ ಅನ್ನವನ್ನು ಡಬ್ಬಿಗಳಿಗೆ ತುಂಬಿಕೊಡಲಾಗುತ್ತಿದೆ. ಆಹಾರಧಾನ್ಯವನ್ನು ಕೊಡುವ ನೆಪದಲ್ಲಿ ಕಲ್ಯಾಣ ಮಂಡಳಿಯಿಂದ ಬಿಡುಗಡೆಯಾಗಿರುವ ಹಣ ಸದ್ಬಳಕೆಯಾಗುತ್ತಿಲ್ಲ ಎಂಬ ಆರೋಪವಿದೆ..

ಬೆಂಗಳೂರಿನಿಂದ ನಡೆದುನಡೆದು ಗ್ರಾಮ ಸೇರುವ ಹೊತ್ತಿಗೆ ವಲಸೆ ಕಾರ್ಮಿಕ ಮಹಿಳೆ ಗಂಗಮ್ಮ ಮೃತಪಟ್ಟರು. ಕಟ್ಟಡ ಕಾರ್ಮಿಕರು ಮೃತಪಟ್ಟರೆ ಕಲ್ಯಾಣ ಮಂಡಳಿಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲು ಅವಕಾಶವಿದೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಕೇವಲ 3 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದ್ದಾರೆ. ಗಂಗಮ್ಮಳ ಸಾವನ್ನು ಕೆಲಸ ಮಾಡುವ ಸಂದರ್ಭದಲ್ಲೇ ನಡೆದಿದೆ ಎಂದು ಪರಿಗಣಿಸಿ ಆಕೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ನೀಡಬೇಕಿದೆ ಎಂಬ ಒತ್ತಾಯವೂ ಕೇಳಿಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...