Homeಮುಖಪುಟಮುಂಬೈ: ಮುಸ್ಲಿಂ ಬಾಲಕನೊಂದಿಗೆ ಬಾಲಕಿ ಸುತ್ತಾಡಲು ಹೋಗಿದ್ದಕ್ಕೆ ‘ಜೈ ಶ್ರೀ ರಾಮ್’ ಘೋಷಣೆ ಕೂಗಿ ಇಬ್ಬರನ್ನೂ...

ಮುಂಬೈ: ಮುಸ್ಲಿಂ ಬಾಲಕನೊಂದಿಗೆ ಬಾಲಕಿ ಸುತ್ತಾಡಲು ಹೋಗಿದ್ದಕ್ಕೆ ‘ಜೈ ಶ್ರೀ ರಾಮ್’ ಘೋಷಣೆ ಕೂಗಿ ಇಬ್ಬರನ್ನೂ ಥಳಿಸಿದ ಗುಂಪು

- Advertisement -
- Advertisement -

ಮುಸ್ಲಿಂ ಬಾಲಕನೊಬ್ಬ ಹಿಂದೂ ಬಾಲಕಿಯೊಂದಿಗೆ ಹೊರಗಡೆ ಸುತ್ತಾಡಲು ಹೋಗಿದ್ದನೆಂದು ಪುರುಷರ ಗುಂಪೊಂದು ಆತನನ್ನು ಥಳಿಸಿರುವ ಘಟನೆ ಮುಂಬೈನ ಬಾಂದ್ರಾ ಟರ್ಮಿನಸ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಈ ದಾಳಿ ಜುಲೈನಲ್ಲಿ ನಡೆದಿದ್ದು, ಆದರೆ ಮಂಗಳವಾರ ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಪುರುಷರ ಗುಂಪು ”ಜೈ ಶ್ರೀ ರಾಮ್” ಮತ್ತು ”ಲವ್ ಜಿಹಾದ್ ನಿಲ್ಲಿಸಿ” ಎಂದು ಕೂಗುತ್ತಾ ಮುಸ್ಲಿಂ ಬಾಲಕನನ್ನು ರೈಲ್ವೇ ನಿಲ್ದಾಣದ ಹೊರಗೆ ಎಳೆದೊಯ್ದು ಹೊಡೆಯುವುದನ್ನು ಕಾಣಬಹುದು.

ಈ ವಿಡಿಯೋದಲ್ಲಿ ತನ್ನನ್ನು ಥಳಿಸಬೇಡಿ ಎಂದು ಬಾಲಕಿ ಹಲ್ಲೆಕೋರರ ಬಳಿ ಬೇಡಿಕೊಳ್ಳುತ್ತಿರುವುದನ್ನು ನೋಡಬಹುದು.

“ಲವ್ ಜಿಹಾದ್” ಎಂಬುದು ಹಿಂದುತ್ವ ವಿರೋಧಿಯ ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಪರಿವರ್ತಿಸುವ ಸಲುವಾಗಿ ಪ್ರೀತಿ-ಪ್ರೇಮ ಎಂದು ಬಲೆಗೆ ಬೀಲಿಸಿಕೊಳ್ಳುತ್ತಾರೆ ಎನ್ನುವುದು ಪುರುಷರ ಗುಂಪು ಆರೋಪವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ದೀಕ್ಷಿತ್ ಗೆಡಮ್ ಅವರು, ”ಜುಲೈ 21ರಂದು ಈ ಘಟನೆ  ನಡೆದಿದೆ. ನಾವು ಈ ವೀಡಿಯೊವನ್ನು ಮಂಗಳವಾರವಷ್ಟೇ ನೋಡಿದ್ದೇವೆ. ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿರುವುದರಿಂದ ನಾವು ಅದನ್ನು ಪರಿಶೀಲಿಸಲು GRP [ಸರ್ಕಾರಿ ರೈಲ್ವೆ ಪೊಲೀಸ್]ಗೆ ಸೂಚಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಘಟನೆಯು ರೈಲ್ವೇ ಪೊಲೀಸರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಪೊಲೀಸ್ ಉಪ ಆಯುಕ್ತ ಸಂದೀಪ್ ಭಾಜಿಭಾಕ್ರೆ ಮಾತನಾಡಿ, ”ವೈರಲ್ ಆದ ವೀಡಿಯೊಗಳ ಬಗ್ಗೆ ಮಂಗಳವಾರ ತಮ್ಮ ತಂಡಕ್ಕೆ ಸೂಚನೆ ನೀಡಲಾಗಿದೆ. ನಾವು ಈ ಪ್ರಕರಣವನ್ನು ದಾಖಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೆ, ಯಾವುದೇ ಎಫ್‌ಐಆರ್ [ಪ್ರಥಮ ಮಾಹಿತಿ ವರದಿ] ದಾಖಲಾಗಿಲ್ಲ” ಎಂದು ತಿಳಿಸಿದ್ದಾರೆ.

”ಆ ಬಾಲಕ ಹಾಗೂ ಬಾಲಕಿ ಇಬ್ಬರೂ ಅಪ್ರಾಪ್ತರಾಗಿದ್ದು, ಬಾಂದ್ರಾ ಟರ್ಮಿನಸ್‌ನಿಂದ ಸುಮಾರು 60 ಕಿಲೋಮೀಟರ್ ರಸ್ತೆಯ ಮೂಲಕ ಥಾಣೆ ಜಿಲ್ಲೆಯ ಅಂಬರನಾಥ್ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ” ಎಂದು ಭಜಿಭಾಕ್ರೆ ಸ್ಕ್ರಾಲ್‌ಗೆ ತಿಳಿಸಿದ್ದಾರೆ.

”ಅಂಬರನಾಥ್‌ನಲ್ಲಿ ಮುಸ್ಲಿಂ ಬಾಲಕನ ವಿರುದ್ಧವೇ ಸೆಕ್ಷನ್ 363 (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನನ್ನು ಬಾಂದ್ರಾವರೆಗೂ ಆ ಗುಂಪು ಬೆನ್ನಟ್ಟಿಬಂದಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಪುರುಷರ ಗುಂಪು ಮೊದಲು ಬಾಲಕನ ಮೇಲೆ ಹಲ್ಲೆ ನಡೆಸಿ ನಂತರ ಬಾಂದ್ರಾದ ನಿರ್ಮಲ್ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ರೈಲ್ವೆ ಪೊಲೀಸರು ಆರೋಪಿಗಳನ್ನು ಗುರುತಿಸಿ ವಿಚಾರಣೆ ನಡೆಸಬೇಕಿದೆ. ಸ್ಥಳೀಯ ಶಾಸಕ ಮತ್ತು ಮುಂಬೈ ಯುವ ಕಾಂಗ್ರೆಸ್ ಅಧ್ಯಕ್ಷ ಜೀಶಾನ್ ಸಿದ್ದಿಕ್ ಅವರು ಸೂಕ್ತ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಸಮಾಜವಾದಿ ಪಕ್ಷದ ಭಿವಾಂಡಿ (ಪೂರ್ವ) ಶಾಸಕ ರೈಸ್ ಶೇಖ್ ಕೂಡ ವಿಡಿಯೋವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

”ಬಾಂದ್ರಾ ಟರ್ಮಿನಸ್‌ನಲ್ಲಿ ನಡೆದ ಭಯಾನಕ ಘಟನೆಯಿಂದ ವಿಚಲಿತನಾಗಿದ್ದೇನೆ. ಹಿಂಸೆ ಮತ್ತು ದ್ವೇಷಕ್ಕೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ. ಧರ್ಮ ಅಥವಾ ಇನ್ನಾವುದೇ ನೆಪವನ್ನು ಆಧರಿಸಿದ ಇಂತಹ ಹಿಂಸಾಚಾರಗಳು ಒಪ್ಪುವಂತವಲ್ಲ” ಎಂದು ಶಾಸಕ ರೈಸ್ ಶೇಖ್ ಹೇಳಿದ್ದಾರೆ.

ಇದನ್ನೂ ಓದಿ: ಬುರ್ಖಾಧಾರಿ ಮಹಿಳೆಗೆ ಗನ್ ತೋರಿಸಿ “ಹಿಂದೂ ದೇವತೆ”ಯ ಹೆಸರು ಕೂಗುವಂತೆ ಆಗ್ರಹಿಸಿದ್ದ RPF ಪೇದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಎಎಪಿಯನ್ನು ಹತ್ತಿಕ್ಕಲು ಬಿಜೆಪಿ ಆಪರೇಷನ್ ಜಾದು ಆರಂಭಿಸಿದೆ..’; ಅರವಿಂದ್ ಕೇಜ್ರಿವಾಲ್

0
"ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕರೊಂದಿಗೆ ಇಂದು ಬಿಜೆಪಿ ಕೇಂದ್ರ ಕಚೇರಿಗೆ ಯೋಜಿತ...