Homeಮುಖಪುಟನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರು ಬದಲಾವಣೆ: ಕಾಂಗ್ರೆಸ್ ಆಕ್ಷೇಪ

ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರು ಬದಲಾವಣೆ: ಕಾಂಗ್ರೆಸ್ ಆಕ್ಷೇಪ

- Advertisement -
- Advertisement -

ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವನ್ನು ಅಧಿಕೃತವಾಗಿ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಕೇಂದ್ರ ಸರಕಾರ ಮರುನಾಮಕರಣ ಮಾಡುವ ಮೂಲಕ ನೆಹರುವಿನ ಪರಂಪರೆಯನ್ನು ಮಾನಹಾನಿ ಮಾಡುವ, ನಾಶಮಾಡುವ ಮತ್ತು ಬದಲಾಯಿಸುವ ಏಕೈಕ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ನಿರಂತರ ದಾಳಿಯ ಹೊರತಾಗಿಯೂ, ಜವಾಹರಲಾಲ್ ನೆಹರು ಅವರ ಪರಂಪರೆಯು ಜಗತ್ತಿಗೆ ಕಾಣಿಸುತ್ತದೆ ಮತ್ತು ಅವರು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸಿದೆ.

X ನಲ್ಲಿ (ಟ್ವಿಟ್ಟರ್) ನಲ್ಲಿ ಈ ಕುರಿತು  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದು, ಇಂದಿನಿಂದ ಐಕಾನಿಕ್ ಸಂಸ್ಥೆಯು ಹೊಸ ಹೆಸರನ್ನು ಪಡೆಯುತ್ತದೆ. ವಿಶ್ವಪ್ರಸಿದ್ಧ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ (NMML), ಪ್ರಧಾನಿಗಳ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವಾಗುತ್ತದೆ (PMML) ಆಗುತ್ತದೆ ಎಂದು ಹೇಳಿದ್ದಾರೆ.

ಮೋದಿಗೆ ಭಯ ಆವರಿಸಿದೆ.ಅವರು ಅಭದ್ರತೆಯನ್ನು ಹೊಂದಿದ್ದಾರೆ. ಅವರು ನೆಹರೂ  ಪರಂಪರೆಯನ್ನು  ವಿರೂಪಗೊಳಿಸುವ, ಮಾನಹಾನಿ ಮಾಡುವ ಮತ್ತು ನಾಶಮಾಡುವ ಏಕೈಕ ಅಜೆಂಡಾವನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೋದಿ Nನ್ನು ಅಳಿಸಿಹಾಕಿ  ಬದಲಿಗೆ Pನ್ನು ಹಾಕಿದ್ದಾರೆ. ಆP ನಿಜವಾಗಿಯೂ ಸಣ್ಣತನ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಆದರೆ ಸ್ವಾತಂತ್ರ್ಯ ಚಳವಳಿಯಲ್ಲಿ ನೆಹರೂ ಅವರ ದೈತ್ಯ ಕೊಡುಗೆಗಳನ್ನು ಮತ್ತು ಪ್ರಜಾಪ್ರಭುತ್ವ, ಜಾತ್ಯತೀತ, ವೈಜ್ಞಾನಿಕ ಮತ್ತು ಉದಾರವಾದಿ ಅಡಿಪಾಯಗಳನ್ನು  ನಿರ್ಮಿಸುವಲ್ಲಿ ಅವರ ಅತ್ಯುನ್ನತ ಸಾಧನೆಗಳನ್ನು ಎಂದಿಗೂ ಮೋದಿಗೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.ಇವುಗಳೆಲ್ಲವೂ ಈಗ ಮೋದಿ ಮತ್ತು ಅವರ ಡೋಲು ಬಾರಿಸುವವರಿಂದ ಆಕ್ರಮಣಕ್ಕ ಒಳಗಾಗಿವೆ  ಎಂದು ರಮೇಶ್ ಹೇಳಿದ್ದಾರೆ.

ಇದನ್ನು ಓದಿ: ಬುರ್ಖಾಧಾರಿ ಮಹಿಳೆಗೆ ಗನ್ ತೋರಿಸಿ “ಹಿಂದೂ ದೇವತೆ”ಯ ಹೆಸರು ಕೂಗುವಂತೆ ಆಗ್ರಹಿಸಿದ್ದ RPF ಪೇದೆ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read