ಕೊಲೆ ಪ್ರಕರಣವೊಂದರಲ್ಲಿ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು ಧಾರವಾಡದ ಮನೆಯಿಂದ ಸಿಬಿಐ ವಶಕ್ಕೆ ಪಡೆದಿದೆ. 2016ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ವಿನಯ್ ಕುಲಕರ್ಣಿ, ಧಾರವಾಡ ಕ್ಷೇತ್ರದಿಂದ ಶಾಲಕರಾಗಿ ಆಯ್ಕೆಯಾಗಿದ್ದರು. 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲರ್ಣಿಯವರನ್ನು ಬಂಧಿಸಿದ್ದು, ಈ ಪ್ರಕರಣವನ್ನು ಸಿಎಂ ಯಡಿಯೂರಪ್ಪ 2019ರ ಸೆಪ್ಟೆಂಬರ್ 7ರಂದು ಸಿಬಿಐ ವಿಚಾರಣೆಗೆ ಶಿಫಾರಸು ಮಾಡಿದ್ದರು. ಅದೇ ತಿಂಗಳ 28ರಿಂದಲೇ ಸಿಬಿಐ ವಿಚಾರಣೆ ಆರಂಭಿಸಿತ್ತು.
ಇದನ್ನೂ ಓದಿ: ವಿಜಯವಾಡದಲ್ಲಿ ತಲೆಯೆತ್ತಲಿದೆ 125 ಅಡಿಯ ಅಂಬೇಡ್ಕರ್ ಕಂಚಿನ ಪ್ರತಿಮೆ!
ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ
ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ
ಧಾರವಾಡ ನಿವಾಸದಲ್ಲಿ ವಿನಯ್ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ#VinayKulkarni #CBI #Yogeshgowda
— oneindiakannada (@OneindiaKannada) November 5, 2020
ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಮಾಜಿ ಸಚಿವರನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ, ಧಾರವಾಡದ ಉಪನಗರ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೇ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು
ಠಾಣೆ ಮುಂದೆ ಜಮಾಯಿಸುತ್ತಿದ್ದಾರೆ.
ಸಿಬಿಐ ತನಿಖೆ ಆರಂಗೊಳ್ಳುತ್ತಿದ್ದಂತೆಯೇ ಬಸವರಾಜ ಮುತಗಿ ನಗರದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಪೊಲೀಸ್ ತನಿಖೆಯ ಪ್ರಮುಖ ಆರೋಪಿ ಸುಪ್ರಿಂಕೋರ್ಟ‌್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರಿಂಕೋರ್ಟ್‌ನಿಂದ ತಡೆಯಾಜ್ಞೆ ತೆರವುಗೊಂಡ ಬಳಿಕ ಫೆ. 25ರಿಂದ ತನಿಖೆ ಪುನಃ ಆರಂಭಗೊಂಡಿತ್ತು.
ಇದನ್ನೂ ಓದಿ: ಪಾಕ್: ಉದ್ರೇಕಿತರಿಂದ ಹಿಂದೂಗಳ ಮೇಲೆ ದಾಳಿ; ದೊಡ್ಡ ಅಪಾಯ ತಡೆದ ಮುಸ್ಲಿಂ ಕುಟುಂಬಗಳು!