Homeಮುಖಪುಟಉತ್ತರಪ್ರದೇಶ: ಮುಸ್ಲಿಂ ಯುವಕನ ಸ್ಕೂಟರ್‌ನಲ್ಲಿ ಪಿಸ್ತೂಲ್‌ ಇಟ್ಟು ಬೆದರಿಸಿ ಹಣ ವಸೂಲಿ: ಪೊಲೀಸರ ವಿರುದ್ಧ ಆರೋಪ

ಉತ್ತರಪ್ರದೇಶ: ಮುಸ್ಲಿಂ ಯುವಕನ ಸ್ಕೂಟರ್‌ನಲ್ಲಿ ಪಿಸ್ತೂಲ್‌ ಇಟ್ಟು ಬೆದರಿಸಿ ಹಣ ವಸೂಲಿ: ಪೊಲೀಸರ ವಿರುದ್ಧ ಆರೋಪ

- Advertisement -
- Advertisement -

ಉತ್ತರಪ್ರದೇಶದ ಮೀರತ್‌ನಲ್ಲಿ ಮುಸ್ಲಿಂ ಪ್ಲಂಬರ್ ಒಬ್ಬರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿ ಪೊಲೀಸರು ಕಂಟ್ರಿಮೇಡ್ ಪಿಸ್ತೂಲ್‌ನ್ನು ಹಾಕಿ ಬಳಿಕ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಫಿರೋಜ್‌ ಎಂಬವರು ಈ ಕುರಿತು ಹೇಳಿಕೆಯನ್ನು ನೀಡಿದ್ದು, ಬುಧವಾರ ರಾತ್ರಿ, ಮೂವರು ಪೊಲೀಸರು ಕಾರಿನಲ್ಲಿ ಮನೆಗೆ ಬಂದು ನನ್ನ ಹೆಸರನ್ನು ಕರೆದರು. ಮನೆಯಲ್ಲಿ ನಾನು ಇರದ ಕಾರಣ ತಾಯಿ ಹೊರಗೆ ಬಂದರು. ಪೊಲೀಸರು ನನಗೆ  ವಿಚಾರಿಸಿ ಸ್ಕೂಟರ್‌ನ ಕೀಗಳನ್ನು ಕೇಳಿದ್ದಾರೆ. ಬಳಿಕ ಮೂವರು ಪೊಲೀಸರು ತನ್ನ ಸ್ಕೂಟರ್‌ನ ಸೀಟನ್ನು ಎತ್ತಿ ಒಳಗೆ ಪಿಸ್ತೂಲ್ ಹಾಕಿದ್ದಾರೆ ಎಂದು ಫಿರೋಜ್ ಆರೋಪಿಸಿದ್ದಾರೆ. ಬಳಿಕ ಪೊಲೀಸರು ಸ್ಕೂಟರ್‌ನ ಒಳಗೆ ಪಿಸ್ತೂಲ್ ಇರುವ ವಿಡಿಯೋ ಮಾಡಿ ಸ್ಕೂಟರ್‌ನೊಂದಿಗೆ ತೆರಳಿದ್ದಾರೆ ಎಂದು ಫಿರೋಜ್‌ ಆರೋಪಿಸಿದ್ದಾರೆ.

ಬಳಿಕ ಪೊಲೀಸರು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ಆತ ಹೇಳಿಕೊಂಡಿದ್ದು, ಚರ್ಚೆಯ ಬಳಿಕ 50,00 ಲಂಚ ನೀಡಿ  ತನ್ನ ಸ್ಕೂಟರ್ ವಾಪಸ್ ಪಡೆದಿರುವುದಾಗಿ ಫಿರೋಜ್‌ ಹೇಳಿದ್ದಾರೆ.

ಆದರೆ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ರೋಹಿತ್ ಸಿಂಗ್ ಸಜ್ವಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರಕರಣದ ಕುರಿತು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಪ್ಲಂಬರ್ ಆಗಿರುವ ಫಿರೋಜ್ ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ. ಪ್ರಕರಣದಲ್ಲಿ ಕರ್ತವ್ಯ ಲೋಪಕ್ಕೆ ಸಂಬಂಧಿಸಿ ಹೆಡ್ ಕಾನ್‌ಸ್ಟೆಬಲ್ ಚೌಬೆ ಸಿಂಗ್, ಕಾನ್ಸ್‌ಟೇಬಲ್ ಓಂವೀರ್ ಸಿಂಗ್ ಮತ್ತು ಅನಿಲ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು  ಹೇಳಿದ್ದಾರೆ.

ಅಮಾನತುಗೊಂಡ ಪೊಲೀಸರು ಶಸ್ತ್ರಾಸ್ತ್ರ ರಿಕವರಿ ಬಗ್ಗೆ ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಅವರ ವಿರುದ್ಧ ಆರೋಪಿಸಲಾಗಿದೆ. ಆದರೆ ಅವರು ಫಿಸ್ತೂಲ್ ಇಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಫಿರೋಜ್ ಅವರು ಮಾಡಿದ ಪೊಲೀಸರ ಮೇಲಿನ ಲಂಚದ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್‌ಎಸ್‌ಪಿ ಹೇಳಿದರು.

ಕೆಲವು ದಿನಗಳ ಹಿಂದೆ, ಮೀರತ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ತಮ್ಮ ಮಗನ ಬಳಿ ಬಂದೂಕು ಇಟ್ಟು ಸುಳ್ಳು ಕೇಸ್‌ ಹಾಕಿ ಬಂಧಿಸಿದ್ದಾರೆ ಎಂದು ಕುಟುಂಬವೊಂದು ಆರೋಪಿಸಿತ್ತು. ತಮ್ಮ ಆರೋಪಕ್ಕೆ ಸಾಕ್ಷಿಯಾಗಿ ಕುಟುಂಬ ಸಿಸಿಟಿವಿ ದೃಶ್ಯಗಳನ್ನು ಕೂಡ ಹಂಚಿಕೊಂಡಿತ್ತು.

ಅಶೋಕ್ ತ್ಯಾಗಿ ಎಂಬವರ ಮನೆಯಲ್ಲಿ ಅಕ್ರಮ ಆಯುಧವನ್ನು ಪೊಲೀಸರೇ ತಂದು ಹಾಕಿ ತಮ್ಮ ಮಗ ಅಂಕಿತ್‌ನನ್ನು ಬಂಧಿಸಿದ್ದಾರೆ ಎಂದು ತ್ಯಾಗಿ ಪತ್ನಿ ರಾಖಿ ಆರೋಪಿಸಿದ್ದರು. ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿತ್ತು.

ಇದನ್ನು ಓದಿ: ‘ಜೈಶ್ರೀರಾಮ್’ ಘೋಷಣೆ ಕೂಗುವಂತೆ ಆಗ್ರಹಿಸಿ ಯುವಕನ ಮೇಲೆ ಹಲ್ಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...