Homeಮುಖಪುಟ‘ನಾನು ಮತ್ತೆ ಗೆದ್ದರೆ ಮುಸ್ಲಿಮರು ತಿಲಕ ಧರಿಸುವರು’- ಯುಪಿ ಬಿಜೆಪಿ ಶಾಸಕನಿಂದ ಕೋಮು ಪ್ರಚೋದನೆ

‘ನಾನು ಮತ್ತೆ ಗೆದ್ದರೆ ಮುಸ್ಲಿಮರು ತಿಲಕ ಧರಿಸುವರು’- ಯುಪಿ ಬಿಜೆಪಿ ಶಾಸಕನಿಂದ ಕೋಮು ಪ್ರಚೋದನೆ

- Advertisement -
- Advertisement -

ಲಕ್ನೋ: ದೇಶದ ಕೋಮು ಸಾಮರಸ್ಯ ಕೆಡಿಸುವ ಉದ್ದೇಶದಿಂದ ಮಾಡಿರುವ ಭಾಷಣವನ್ನು ಉತ್ತರಪ್ರದೇಶದ ಬಿಜೆಪಿ ಶಾಸಕರೊಬ್ಬರು ಮಾಡಿಕೊಂಡಿದ್ದಲ್ಲದೆ ಅದನ್ನು ಸಮರ್ಥಿಸಿಕೊಂಡಿದ್ದಾರೆ.

ಶಾಸಕ ರಾಘವೇಂದ್ರ ಸಿಂಗ್ ಮಾತನಾಡಿರುವ ವಿಡಿಯೊ ವೈರಲ್ ಆಗಿದ್ದು, “ನಾನು ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರು ತಿಲಕ ಧರಿಸಬೇಕಾಗುತ್ತದೆ” ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಕೋಮು ಪ್ರಚೋದನೆಗೆ ರಾಘವೇಂದ್ರ ಸಿಂಗ್ ಯತ್ನಿಸಿದ್ದಾರೆ.

ಪೂರ್ವ ಯುಪಿಯ ಡೊಮರಿಯಾಗಂಜ್‌ನ ಶಾಸಕ ತಮ್ಮ ಭಾಷಣವನ್ನು ಸಮರ್ಥಿಸಿಕೊಂಡಿದ್ದು, “ಇಸ್ಲಾಮಿಕ್ ಭಯೋತ್ಪಾದನೆ”ಯನ್ನು ವಿರೋಧಿಸಿ ಮಾಡಿದ ಭಾಷಣವೆಂದು ಹೇಳಿಕೊಂಡಿದ್ದಾರೆ.

“ಇಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಇದ್ದಾಗ, ಹಿಂದೂಗಳು ಟೋಪಿಗಳನ್ನು ಧರಿಸುವಂತೆ ಒತ್ತಾಯಿಸಲಾಯಿತು. ನಾನು ಷರತ್ತು ವಿಧಿಸಿದೆ. ನಾನು ಹಿಂದೂ ಹೆಮ್ಮೆಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧನಿದ್ದೇನೆ. ನನ್ನ ಪ್ರಕಾರ ಮುಸ್ಲಿಮರು ನನ್ನನ್ನು ಸೋಲಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರೆ, ನಾನು ಮೌನವಾಗಿರುವುದಿಲ್ಲ” ಎಂದು ರಾಘವೇಂದ್ರ ಸಿಂಗ್ ವಿಡಿಯೋದಲ್ಲಿ ಪ್ರಚೋದಿಸಿದ್ದಾರೆ.

ಸಿಂಗ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಚಿಸಿದ ಬಲಪಂಥೀಯ ಗುಂಪಿನ ಹಿಂದೂ ಯುವ ವಾಹಿನಿಯ ಯುಪಿ ಉಸ್ತುವಾರಿಯಾಗಿರುವುದು ಉಲ್ಲೇಖನೀಯ. “ಸಿಂಗ್‌ ಮಾಡಿರುವ ಪ್ರಚೋದನಕಾರಿ ಭಾಷಣ ವೈರಲ್ ಆದ ಬೆನ್ನಲ್ಲೇ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಯುಪಿ ಪೊಲೀಸರು ಹೇಳಿದ್ದಾರೆ.

“ನಾನು ಮತ್ತೆ ಶಾಸಕನಾದರೆ, ಟೋಪಿಗಳನ್ನು ತ್ಯಜಿಸಿ ಮಿಯಾನ್ ಲಾ‌ಗ್‌‌ಗಳು (ಮುಸ್ಲಿಮರಿಗೆ ಅವಹೇಳನಕಾರಿಯಾಗಿ ಬಳಸಲಾಗುವ ಪದ) ತಿಲಕವನ್ನು ಧರಿಸುವರು” ಎಂದು ಸಿಂಗ್ ಹೇಳಿದ್ದಾರೆ.

“ಮೊದಲ ಬಾರಿಗೆ ಇಷ್ಟು ಹಿಂದೂಗಳು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ದೊಮರಿಯಾಗಂಜ್‌ನಲ್ಲಿ ‘ಸಲಾಮ್’ ಇದೆಯೇ ಅಥವಾ ‘ಜೈ ಶ್ರೀ ರಾಮ್’ ಇದೆಯೇ?” ಎಂದು ಸಿಂಗ್ ಪ್ರಚೋದಿಸಿದ್ದಾರೆ.

2017ರಲ್ಲಿ ಸಿಂಗ್‌ ಅವರು ಡೊಮರಿಯಾಗಂಜ್ ಕ್ಷೇತ್ರದಿಂದ ಸುಮಾರು 200 ಮತಗಳ ಅಂತರದಿಂದ ಗೆದ್ದಿದ್ದರು. ವಿವಿಧ ಸಮುದಾಯಗಳನ್ನು ಹೊಂದಿರುವ ಡೊಮರಿಯಾಗಂಜ್ ಕ್ಷೇತ್ರದ ಚುನಾವಣೆಯು ಆರನೇ ಹಂತದಲ್ಲಿ ನಡೆಯಲಿದೆ.

ಪೂರ್ವ ಯುಪಿಯಲ್ಲಿ ಹಲವಾರು ಬಿಜೆಪಿ ನಾಯಕರು ಮತದಾನಕ್ಕೂ ಮುನ್ನ ಧ್ರುವೀಕರಣದ ಮಾತುಗಳನ್ನು ಆಡಿದ್ದಾರೆ. ಕಳೆದ ತಿಂಗಳು ಬಿಜೆಪಿಯು ಅನೇಕ ಹಿಂದುಳಿದ ವರ್ಗಗಳ ನಾಯಕರನ್ನು ಕಳೆದುಕೊಂಡಿದೆ. ಪಕ್ಷ ತೊರೆದ ಹಿಂದುಳಿದ ವರ್ಗಗಳ ನಾಯಕರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಯುಪಿಯಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.


ಇದನ್ನೂ ಓದಿರಿ: ಉತ್ತರ ಪ್ರದೇಶ: ಹತ್ರಾಸ್ ಅತ್ಯಾಚಾರ ಪ್ರಕರಣ ಚುನಾವಣೆಯನ್ನು ಪ್ರಭಾವಿಸುವುದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...