Homeಕರ್ನಾಟಕಮುಟ್ಟಿನ ಬೆಳಕು : ಸತ್ಯಾ ಎಸ್

ಮುಟ್ಟಿನ ಬೆಳಕು : ಸತ್ಯಾ ಎಸ್

- Advertisement -
- Advertisement -

‘ಮುಟ್ಟಿನಿಂದ ಹುಟ್ಟು’ ಎನ್ನುವ ಸರಳ ಸತ್ಯ ಎಲ್ಲರಿಗೂ ಬೆಳಕಿನಷ್ಟು ನಿಚ್ಚಳವಾಗಿದ್ದರೂ, ಮುಟ್ಟನ್ನು ಮೈಲಿಗೆ ಎನ್ನುವಷ್ಟು ದ್ರಾಷ್ಟ್ಯ ಮನುಷ್ಯ ಕುಲವನ್ನು ಕಾಡುತ್ತಿರುವುದು ಗಂಭೀರವಾದ ವಿಷಯ. ತನ್ನ ಹುಟ್ಟಿಗೆ ಕಾರಣವಾದ, ನೈಸರ್ಗಿಕವಾದ, ವೈಜ್ಞಾನಿಕವಾದ ಕ್ರಿಯೆಯನ್ನೇ ಮನುಷ್ಯ ತನ್ನ ಅಹಂಕಾರ, ಅಧಿಕಾರ ಲಾಲಸೆ, ದೊಡ್ಡಸ್ತಿಕೆಯ ಅಸ್ತ್ರವಾಗಿ ಬಳಸುತ್ತಿರುವುದು ಮನುಷ್ಯ ಕುಲ ಇನ್ನೂ ಎಷ್ಟೊಂದು ಅವೈಜ್ಞಾನಿಕವಾಗಿ, ಅವೈಚಾರಿಕಾಗಿ ಹಾಗೂ ಅನೈಸರ್ಗಿಕವಾಗಿ ಆಲೋಚಿಸುತ್ತಿದೆ, ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಅಪ್ರಜಾಸತ್ತಾತ್ಮಕವಾದ ದಸರಾ ಆಚರಣೆಯನ್ನು ಉದ್ಘಾಟಿಸಿದ ಪುರೋಗಾಮಿ ಚಿಂತನೆಯ ಲೇಖಕ ಎಸ್ ಎಲ್ ಬೈರಪ್ಪನವರು ಮುಟ್ಟಾಗುವ ಹೆಂಗಸರು ದೇವಸ್ಥಾನಕ್ಕೆ ಹೋಗುವಂತಿಲ್ಲ, ಆಫೀಸಿಗೆ ಹೋಗಬಹುದು ಎನ್ನುವ ಮೂಲಕ ಬಹುಪಾಲು ಮನುಷ್ಯರ ಹಿಮ್ಮುಖದ ಚಲನೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ಹೆಣ್ಣನ್ನು ನಿಯಂತ್ರಿಸುವ ಮತ್ತು ಬಳಸಿಕೊಳ್ಳುವ ಪಿತೃಪ್ರಧಾನ ಹಾಗೂ ಪಾಳೇಗಾರಿ ಮನೋಭಾವವನ್ನು ಯಾವ ಹಿಂಜರಿಕೆ, ಸಂಕೋಚವಿಲ್ಲದೆ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನ ನೀಲಾಂಚಲದಲ್ಲಿರುವ, ಫಲವಂತಿಕೆಯ ಸ್ವರೂಪ ಎಂದು ಹೆಸರಾದ ದೇವಸ್ಥಾನ, ಕಾಮಾಕ್ಯ ದೇವಿಯ ದೇವಸ್ಥಾನ. ಗರ್ಭಾಶಯ ಆಕೃತಿಯ ಗರ್ಭಗೃಹ, ಯೋನಿ ರೂಪದ ದೇವತೆ ಮತ್ತು ನಸುಗೆಂಪು ಬಣ್ಣದ ಯೋನಿಯಿಂದ ಸ್ರವಿಸುವ ನೀರು- ಇವು ಆ ದೇವಾಲಯದ ಮುಖ್ಯಾಂಶಗಳು. ತಮ್ಮ ಒಂದೊಂದು ಕಾದಂಬರಿಗೂ ವರ್ಷಾನುಗಟ್ಟಲೆ ಸಂಶೋಧನೆ ಮಾಡಿ ಅಪಾರ ಖಚಿತತೆಯಿಂದ ಸಾಹಿತ್ಯ ಕೃತಿಗಳನ್ನು ರಚಿಸುವ ಬೈರಪ್ಪನವರು, ಈ ಕಾಮಾಕ್ಯ ದೇವಸ್ಥಾನಕ್ಕೂ ಹೋಗಿಬಂದಿದ್ದಾರೆ. ಹಾಗಿದ್ದ ಮೇಲೆ, ಮುಟ್ಟಿನ ಕುರಿತು ಇವರು ಯಾವ ರೀತಿಯ ಅನುಸಂಧಾನ ನಡೆಸಿದ್ದಾರೆ? ಎಂದು ಅಚ್ಚರಿಯಾಗುತ್ತದೆ.

ಎಪ್ಪತ್ತರ ದಶಕದ ಎರಡನೇ ಭಾಗದಲ್ಲಿ ಸ್ಯಾನಿಟರಿ ಪ್ಯಾಡ್‍ಗಳು ಚಲಾವಣೆಗೆ ಬಂದಾಗ ಮಹಿಳೆಯರ ನಡುವೆ ಮುಟ್ಟು ಮೌನ ಮುರಿದು ‘ಗುಸುಗುಸು’ ಮಾತಿನ ಅಂಗಳಕ್ಕೆ ಬಂದು ನಿಂತಿತ್ತು. ಸ್ಯಾನಿಟರಿ ಪ್ಯಾಡ್‍ಗಳ ಜಾಹಿರಾತು ಟಿವಿ ಪರದೆಯಲ್ಲಿ ಮೂಡತೊಡಗಿದಾಗ ಗಂಡಸರೂ ಈ ಕುರಿತು ಗುಸುಗುಸು ಮಾಡತೊಡಗಿದರು. ಸ್ಯಾನಿಟರಿ ಪ್ಯಾಡ್ ಕಂಪೆನಿಗಳು ತಮ್ಮ ಮಾರುಕಟ್ಟೆಯ ವಿಸ್ತರಣೆಗಾಗಿ ಹದಿವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಋತುಸ್ರಾವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ಆರಂಭಿಸಿದವು. ಹೀಗೆ ಮಾರುಕಟ್ಟೆಯ ಕಾರಣ ಮುಟ್ಟಿನ ಮಾತು ಕೌಟುಂಬಿಕ ಮತ್ತು ಸಾಮಾಜಿಕ ಸ್ಥಳಗಳಲ್ಲಿ ವಿಸ್ತರಣೆಯಾಯಿತು. ಆದರೆ ಸಾಂಸ್ಕøತಿಕವಾಗಿ ಮುಟ್ಟು ಯಾವತ್ತಿಗೂ ಮುಕ್ತವಾಗಿ ಹಾಗೂ ಗುಪ್ತವಾಗಿ ಮಾತಿನಲ್ಲಿ, ಚರ್ಚೆಯಲ್ಲಿ, ಆಚರಣೆಯಲ್ಲಿ ಹಾಗೂ ವಿಜೃಂಭಣೆಯಲ್ಲಿ ವಸ್ತುವಾಗಿದ್ದುಕೊಂಡೇ ಇದೆ.

ಇತ್ತೀಚೆಗೆ ಶಬರಿಮಲೆ ನಿಮಿತ್ತ ಮುಟ್ಟು ಸಾರ್ವಜನಿಕ ಚರ್ಚೆಗೆ ಹೆಚ್ಚೆಚ್ಚು ತೆರೆದುಕೊಂಡು, ಮುಟ್ಟನ್ನು ಗಲೀಜು ಎಂದು ಜರೆಯುವವರ ಮನಸ್ಸಿನ ಕೊಳಕನ್ನೆಲ್ಲ ಹೊರಗೆ ಚೆಲ್ಲುತ್ತಿದೆ. 2015ರ ನವೆಂಬರ್‌ನಲ್ಲಿ ಶಬರಿಮಲೆ ದೇವಸ್ಥಾನದ ಮುಖ್ಯಸ್ಥ ಗೋಪಾಲಕೃಷ್ಣನ್, ದೇವಸ್ಥಾನಕ್ಕೆ ಬರುವ ಮಹಿಳೆಯರನ್ನು ಸ್ಕ್ಯಾನ್ ಮಾಡುವ ಯಂತ್ರ ಸ್ಥಾಪಿಸುವ ಕುರಿತು ಮಾತನಾಡಿದಾಗ, ಸಿಟ್ಟಿಗೆದ್ದ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಕಿತಾ ಅರೋರಾ ‘ಹ್ಯಾಪಿ ಟು ಬ್ಲೀಡ್’ ಎಂಬ ಆಂದೋಲನವನ್ನೇ ಹುಟ್ಟು ಹಾಕಿದರು. ಸ್ಯಾನಿಟರಿ ಪ್ಯಾಡ್‍ಗಳನ್ನು ಹಿಡಿದುಕೊಂಡ ಯುವತಿಯರು ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿ, ಮುಟ್ಟಿಗೆ ಸಂಬಂಧಿಸಿದ ಮೂಢ ಆಚರಣೆಗಳು ಹಾಗೂ ವಿಧಿ ನಿಷೇಧಗಳನ್ನು ವಿರೋಧಿಸಿದರು.

2017ರಲ್ಲಿ ಸ್ಯಾನಿಟರಿ ಪ್ಯಾಡ್‍ಗಳ ಮೇಲೆ ಶೇ.12ರಷ್ಟು ತೆರಿಗೆ ಹೇರುವ ಕೇಂದ್ರ ಸರ್ಕಾರದ ಮೂರ್ಖ ಕ್ರಮವು ‘ರಕ್ತಕ್ಕೆ ತೆರಿಗೆ’ ಎಂಬ ತೆರಿಗೆ ವಿರೋಧಿ ಚಳವಳಿಯನ್ನು ಹುಟ್ಟುಹಾಕಿತು; 2018ರಲ್ಲಿ ತೆರಿಗೆ ರದ್ಧತಿಗೆ ಕಾರಣವಾಯಿತು. 2018ರ ಸೆಪ್ಟೆಂಬರ್‍ನಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಎಲ್ಲ ಮಹಿಳೆಯರಿಗೂ ಮುಕ್ತ ಅವಕಾಶ ಕೊಡಬೇಕು ಎನ್ನುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೆಣ್ಣನ್ನು ಕುರಿತಾಗಿ ಈ ದೇಶಕ್ಕೆ ಇರುವ ಕೊಳಕು ನಿಲುವುಗಳನ್ನೆಲ್ಲ ಬೀದಿಗೆ ಚೆಲ್ಲಿತು. ಹೆಣ್ಣಿನಿಂದಲೇ ಹುಟ್ಟಿದ ದೇವರು ಹೆಣ್ಣಿನಿಂದಲೇ ಅಪವಿತ್ರನಾಗುತ್ತಾನೆ ಎನ್ನುವ ಭಕ್ತ ಗಣದ ಕುರುಡುತನವು ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಯನ್ನೂ ಅನಾವರಣಗೊಳಿಸಿತು.

ಆದರೆ, ಈ ಕಾರಣಗಳು ಮುಟ್ಟಿನ ಕುರಿತಾದ ಚರ್ಚೆಯನ್ನು ಹೆಚ್ಚಿಸಿವೆ. ಜನರಲ್ಲಿ ಈ ಕುರಿತ ತಿಳಿವಳಿಕೆಯು ಹೆಚ್ಚಾಗುತ್ತಾ ಬಂದಿದೆ. ಮುಟ್ಟಿನ ಸಂದರ್ಭದ ಅಗತ್ಯಗಳ ಕುರಿತು, ಆರೋಗ್ಯದ ಕುರಿತು ಸಾಕಷ್ಟು ಧನಾತ್ಮಕ ಚಿಂತನೆಗಳು, ಬೆಳವಣಿಗೆಗಳು ನಡೆದಿವೆ. ಬರಹಗಾರರು, ಕಾರ್ಯಕರ್ತರು, ಸಂಘಟನೆಗಳು ಮುಟ್ಟಿನ ಕುರಿತು ಆರೋಗ್ಯಕರವಾಗಿ ಸ್ಪಂದಿಸಿದ್ದಾರೆ. ಸ್ವತಂತ್ರ ಯುಟ್ಯೂಬ್ ಚಾನೆಲ್‍ಗಳು ‘ಮುಟ್ಟು ಎಂದರೇನು’ ಎಂಬ ಸಾರ್ವಜನಿಕ ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ನಡೆಸಿವೆ. ಮಂಗಳೂರಿನ ಶ್ರೀನಿವಾಸ ಕಾರ್ಕಳ ಅವರು ದಶಕಕ್ಕೂ ಹಿಂದೆಯೇ ‘ಮುಟ್ಟು ಮುಟ್ಟೇಂದೇಕೆ ಹೀಯಾಳಿಸುವಿರಿ?/ಮುಟ್ಟಿನಿಂದಲ್ಲವೇ ನಮ್ಮೆಲ್ಲ ಹುಟ್ಟು/ ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು..’ ಎಂದು ಬರೆದ ಹಾಡು ಅಸಂಖ್ಯಾತ ಮಹಿಳಾ ತರಬೇತಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಮುಟ್ಟಿನ ಕುರಿತಾದ ಮುಜುಗರವನ್ನು ಹೊಡೆದೋಡಿಸಿದೆ.

ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಯುವ ಜೋಡಿಯೊಂದು ಮುಟ್ಟಿನ ಕುರಿತು ತಿಳಿವಳಿಕೆ ಹೆಚ್ಚಿಸಲು ತಮ್ಮ ಕೆಲಸಕ್ಕೆ ತಿಲಾಂಜಲಿ ಕೊಟ್ಟು ಸಖೀಭವ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ, ‘ಸುಸ್ಥಿರ ಮುಟ್ಟಿನ ಆರೋಗ್ಯ’ ಕುರಿತು ಆಂದೋಲನವನ್ನೇ ನಡೆಸಿದೆ. ಈ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿರುವ ಜ್ಯೋತಿ ಇಟ್ನಾಳ್ ಮುಟ್ಟಿನ ಆಚರಣೆಗಳು ಹಾಗೂ ವಿಧಿ ನಿಷೇಧಗಳ ಕುರಿತಾಗಿಯೇ ಪಿಎಚ್‍ಡಿ ಸಂಶೋಧನೆಗೆ ಕೈಹಾಕಿದ್ದಾರೆ.

ಕಳೆದ ವರ್ಷ ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿದ್ದ ಕೇರಳದಲ್ಲಿ ಮುಟ್ಟಾದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‍ನ ಬದಲಿಗೆ ಮುಟ್ಟಿನ ಬಟ್ಟಲುಗಳನ್ನು ಒದಗಿಸುವ ಕ್ರಾಂತಿಕಾರಿ ಕ್ರಮವನ್ನು ಅನುಸರಿಸಲಾಯಿತು. ಇದೇ ಮಾರ್ಗವನ್ನು ಅನುಸರಿಸಿ ಕಳೆದ ತಿಂಗಳು ಕರ್ನಾಟಕದ ಪ್ರವಾಹದ ಸಂದರ್ಭದಲ್ಲಿ ಶಿವಲೀಲಾ, ಸಂಜ್ಯೋತಿ, ದೀಪಾ ಮತ್ತು ಜ್ಯೋತಿಯವರ ಮುಂದಾಳತ್ವದಲ್ಲಿ ಸಾವಿರಾರು ಮುಟ್ಟಿನ ಬಟ್ಟಲುಗಳು ಪ್ರವಾಹಸಂತ್ರಸ್ತ ಮಹಿಳೆಯರಿಗೆ ಉಚಿತವಾಗಿ ವಿತರಿಸಿ, ಅದರ ಬಳಕೆಯ ಕುರಿತು ತಿಳಿಸಿಕೊಡಲಾಗಿದೆ. ಮುಟ್ಟಿನ ಕುರಿತು ವೈಜ್ಞಾನಿಕ ಮಾಹಿತಿ, ಆಚರಣೆಗಳು ಇತ್ಯಾದಿಗಳ ಜೊತೆಗೆ, ಗಂಡಸರು ಮುಟ್ಟನ್ನು ಎದುರುಗೊಂಡ ಬಗೆಯೂ ಸಾರ್ವಜನಿಕ ಚರ್ಚೆಯ ವಲಯ ಪ್ರವೇಶಿಸಿರುವದು ಅತ್ಯಂತ ಆರೋಗ್ಯಕರ ಬೆಳವಣಿಗೆಯಾಗಿದೆ.

ಹೀಗೆ ಒಂದು ಕಡೆ ಮುಟ್ಟಿನ ಕುರಿತಾದ ಸಂಕುಚಿತತೆಯ ನೆರಳಿನಲ್ಲೇ ಮುಟ್ಟಿನ ಕುರಿತಾದ ಅರಿವು ಹೆಚ್ಚಿಸುವ ಬೆಳಕು ಮೂಡುತ್ತಿರುವುದು ಗಮನಾರ್ಹ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅದ್ಭುತವಾದ ಲೇಖನ. ಈ ಲೇಖನವನ್ನು “ಡಾಬಸ್ ಪೇಟೆ ವಾಯ್ಸ್” ಕನ್ನಡ ಮಾಸಪತ್ರಿಕೆಯ ನವೆಂಬರ್ ಸಂಚಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...