Homeಮುಖಪುಟದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ...

ದೇಶಪ್ರೇಮದ ಆಯಾಮಗಳನ್ನರಸುತ್ತ ಈ ಬಾರಿಯ ನಾವು-ನಮ್ಮಲ್ಲಿ ಗಂಗಾವತಿಯಲ್ಲಿ…

’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ "ದೇಶಪ್ರೇಮದ ಆಯಾಮಗಳು"ಎಂಬುವಲ್ಲಿಗೆ ಬಂದು ನಿಂತಿದೆ.

- Advertisement -
- Advertisement -

ಯುವ ಬರಹಗಾರರು, ಸಾಹಿತಿಗಳು, ಚಿಂತಕರು ಒಂದೆಡೆ ಸೇರಿ ಸಮಕಾಲೀನ ಸಮಾಜಕ್ಕೆ ಮುಖಾಮುಖಿಯಾಗುತ್ತ ತಮ್ಮ ಓದು-ಬರಹವನ್ನು ತಾವೇ ಓರೆಗೆ ಹಚ್ಚುವ ವಿಭಿನ್ನ ಕಾರ್ಯಕ್ರಮ-ಕಮ್ಮಟವೇ ನಾವು-ನಮ್ಮಲ್ಲಿ. 2002ರಿಂದ ಆರಂಭವಾಗಿ ಹಲವು ಪುಟ್ಟ ಹೆಜ್ಜೆಗಳ ದಿಟ್ಟ ಪಯಣ ನಡೆಸುತ್ತಿರುವ ನಾವು-ನಮ್ಮಲ್ಲಿ ಕಮ್ಮಟವು ಈ ಬಾರಿ ಗಂಗಾವತಿಯಲ್ಲಿ ಜರುಗಲಿದೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಜರುಗುವ ನಾವು ನಮ್ಮಲ್ಲಿ ಬಳಗ ಪ್ರತಿವರ್ಷವೂ ಹಿಗ್ಗುತ್ತಲೇ ಇದೆ.  ಸಾಹಿತಿ-ಬರಹಗಾರರಿಗೆ ಮಾತ್ರ ಸೀಮಿತವಾಗದಿರುವುದು, ಸಮಕಾಲೀನತೆಗೆ ತೆರೆದುಕೊಂಡಿರುವುದು ಮತ್ತು ಎಲ್ಲಾ ಜೀವಪರರನ್ನು ಮುಕ್ತವಾಗಿ ಅಪ್ಪಿಕೊಳ್ಳುವುದು ಇದಕ್ಕೆ ಬಹುಮುಖ್ಯ ಕಾರಣವಾಗಿದೆ.

ನಾವು ನಮ್ಮ ಬರಹಗಳ ಆಚೆಗೂ ’ವರ್ತಮಾನ ಕರ್ನಾಟಕ’ಕ್ಕೆ ಸ್ಪಂದಿಸಬೇಕೆನ್ನುವ ತುಡಿತದಿಂದ 2010ರಿಂದ ಆರಂಭಗೊಂಡ ವಿಸ್ತಾರತೆ ಈ ಬಾರಿಯ ಗಂಗಾವತಿ ಕಾರ್ಯಕ್ರಮದ ಪರಿಕಲ್ಪನೆಯಾದ “ದೇಶಪ್ರೇಮದ ಆಯಾಮಗಳು”ಎಂಬುವಲ್ಲಿಗೆ ಬಂದು ನಿಂತಿದೆ.

ದೇವನೂರು ಮಹಾದೇವ, ಭಾನುಮುಷ್ತಾಕ್, ಯು.ಆರ್.ಅನಂತಮೂರ್ತಿ, ಜಿ.ರಾಜಶೇಖರ್, ಫಣಿರಾಜ್, ಕೆ.ಟಿ.ಶಿವಪ್ರಸಾದ್‌, ಎಚ್‌.ನಾಗವೇಣಿ, ಹೆಚ್.ಎಸ್.ರಾಘವೇಂದ್ರರಾವ್, ಆಶಾದೇವಿ, ಓ.ಎಲ್.ನಾಗಭೂಷಣಸ್ವಾಮಿ, ವಿನಯಾ, ರಹಮತ್ ತರೀಕೆರೆ, ದಿನೇಶ್ ಅಮಿನ್ ಮಟ್ಟು, ಸುಗತ ಶ್ರೀನಿವಾಸರಾಜು, ಜಿ.ಎನ್.ದೇವಿ, ಅಜಿತ್ ಪಿಳ್ಳೆ, ಜಿ.ರಾಜಶೇಖರ್, ಫಣಿರಾಜು, ಕೆ.ನೀಲಾ, ಕೆ.ರಾಮಯ್ಯ, ರಾಜೇಂದ್ರ ಚೆನ್ನಿ ಒಳಗೊಂಡಂತೆ ಕರ್ನಾಟಕದ ಬಹುಪಾಲು ಹಿರಿ ಕಿರಿ ಬರಹಗಾರ್ತಿ ಬರಹಗಾರರು ನಾವುನಮ್ಮಲ್ಲಿ ಬಳಗದ ಬೆನ್ನಿಗಿರುವುದು ಕಾಲದ ಎಚ್ಚರವನ್ನು ಕಾಯ್ದುಕೊಳ್ಳಲು ನೆರವಾಗಿದೆ.

ಸ್ವಾತಂತ್ರ್ಯ ಚಳವಳಿಯ ಕಾಲ ಮತ್ತು ನಂತರದಲ್ಲಿ ಭಾರತೀಯರೆಲ್ಲರೂ ಒಂದು ಎಂಬ ಬೆಸುಗೆಗೆ ಕೆಲಸ ಮಾಡಿದ ದೇಶಪ್ರೇಮ ಎಂಬ ಪದವೀಗ ಜಾತಿ, ಧರ್ಮ, ಬಣ್ಣ, ಪ್ರದೇಶ, ಲಿಂಗದ ಆಧಾರದಲ್ಲಿ ಜನರನ್ನು ವಿಭಜಿಸಲು ಬಳಕೆಯಾಗುತ್ತಿರುವುದು ದುರಂತದ ಸಂಗತಿ. ಹಾಗಾಗಿ ನಿಜವಾದ ದೇಶಪ್ರೇಮವೆಂದರೇನು, ಅದರ ವಿವಿಧ ಆಯಾಮಗಳೇನು, ದೇಶಪ್ರೇಮದ ಅಪವ್ಯಾಖ್ಯಾನವನ್ನು ತಡೆಯಲು ನಾವು ಮಾಡಬೇಕಾದುದ್ದೇನು ಎಂಬುದರ ಮುಕ್ತ ಆರೋಗ್ಯಕರ ಚರ್ಚೆಗೆ ಈ ಬಾರಿಯ ನಾವು ನಮ್ಮಲ್ಲಿ ವೇದಿಕೆ ಸಿದ್ದಗೊಂಡಿದೆ.

ಆಗಸ್ಟ್‌ ಆರಂಭದಲ್ಲಿ ನಡೆಯಬೇಕಿದ್ದ ಈ ಬಾರಿಯ ನಾವು ನಮ್ಮಲ್ಲಿ ಕಾರ್ಯಕ್ರಮ ಕರ್ನಾಟಕಕ್ಕೆ ಅಪ್ಪಳಿಸಿದ ಪ್ರವಾಹ ಕಾರಣಕ್ಕೆ ಮೂಂದೂಡಿ ಈಗ ನವೆಂಬರ್‌ 16-17ರ ಶನಿವಾರ-ಭಾನುವಾರಕ್ಕೆ ನಿಗಧಿಯಾಗಿದೆ. ಗಂಗಾವತಿಯ ಐಎಂಎ ಸಭಾಂಗಣದಲ್ಲಿ ನಡೆಯುವ ನಾವು-ನಮ್ಮಲ್ಲಿ ಕಮ್ಮಟವನ್ನು ನವೆಂಬರ್‌ 16ರ ಶನಿವಾರ ಬೆಳಿಗ್ಗೆ 10:30ಕ್ಕೆ ಹಿರಿಯ ಚಿಂತಕರು ಮತ್ತು ಹೋರಾಟಗಾರರಾದ ಜಿ.ರಾಮಕೃಷ್ಣರವರು ಉದ್ಘಾಟಿಸಲಿದ್ದಾರೆ. ಹೋರಾಟಗಾರ್ತಿ, ಚಿಂತಕಿ ಕೆ.ನೀಲಾರವರು ಉದ್ಘಾಟನಾ ಗೋಷ್ಟಿಯ ಅಧ್ಯಕ್ಷತೆ ವಹಿಸಲಿದ್ದು, ಶೈಲಜಾ ಹಿರೇಮಠ, ಜೆ.ಭಾರದ್ವಾಜ್‌, ಸಿ.ಎಚ್‌ ನಾರಿನಾಳ್‌ ಉಪಸ್ಥಿತರಿರುತ್ತಾರೆ.

ಮಧ್ಯಾಹ್ನ 2 ಗಂಟೆಗೆ “ಭಾರತೀಯತೆಯ ವ್ಯಾಖ್ಯಾನಗಳು” ಗೋಷ್ಠಿ ಜರುಗಲಿದ್ದು ಚಿಂತಕರಾದ ಶಿವಸುಂದರ್‌ ಮತ್ತು ಅಂಕಣಕಾರರಾದ ಎ.ನಾರಾಯಣರವರು ಮಾತನಾಡಲಿದ್ದಾರೆ. ಡಾ.ಪ್ರಕಾಶ್‌ ಬಡವನಹಳ್ಳಿ ಮತ್ತು ಡಾ.ನರಸಿಂಹಮೂರ್ತಿ ಹಳೇಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ. ಸಂಜೆ 4ಗಂಟೆಗೆ ಅರ್ಹನಿಶಿ ಪ್ರಕಾಶನ ಹೊರತಂದಿರುವ ನಾಗರಾಜ ಕೋರಿಯವರ “ತನುಬಿಂದಿಗೆ” ಕಥಾಸಂಕಲನ ಬಿಡುಗಡೆಯಾಗಲಿದೆ. ಯುವ ಲೇಖಕರಾದ ಚಿದಾನಂದಸಾಲಿ ಪುಸ್ತಕ ಬಿಡುಗಡೆ ಮಾಡಲಿದ್ದು ಅಮರೇಶ ನುಗಡೋಣಿಯವರು ಅಧ್ಯಕ್ಷೀಯ ನುಡಿಗಳನ್ನಾಡಲಿದ್ದಾರೆ.

ಸಂಜೆ 5:30ಕ್ಕೆ ಎಲ್ಲರ ಮೆಚ್ಚಿನ ಕವಿಗೋಷ್ಠಿ ನಡೆಯಲಿದ್ದು ಗಜಲ್‌ ಕವಿ ಆರಿಫ್‌ ರಾಜಾ ಆಶಯ ಮಾತುಗಳನ್ನಾಡಿದರೆ, ಹಿರಿಯ ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿಯವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಮತ್ತು ಮುಖ್ಯವಾಗಿ ಹೈದರಾಬಾದ್‌ ಕರ್ನಾಟಕದ ಯುವಕವಿಗಳು ಕವನ ವಾಚಿಸಲು ಸಿದ್ದರಿದ್ದಾರೆ. ಅಲ್ಲಿಗೆ ಮೊದಲ ದಿನ ಕಮ್ಮಟ ಕೊನೆಗೊಳ್ಳಲಿದೆ.

ನವೆಂಬರ್‌ 17ರ ಭಾನುವಾರ ಬೆಳಿಗ್ಗೆ 9:30ಕ್ಕೆ ಎರಡನೇ ದಿನ ಕಮ್ಮಟ ಆರಂಭವಾಗಲಿದ್ದು ಮೊದಲ ಗೋಷ್ಠಿ “ಈ ಹೊತ್ತಿನ ಚುನಾವಣಾ ಬಿಕ್ಕಟ್ಟುಗಳು” ಕುರಿತು ನಡೆಯಲಿದೆ. ಬಸವತತ್ವದ ಶಾಸಕ ಎಂದೇ ಖ್ಯಾತರಾದ ಬಸವಕಲ್ಯಾಣದ ಶಾಸಕರಾದ ಬಿ.ನಾರಾಯಣ್‌ರಾವ್‌ ಮತ್ತು ಹೋರಾಟಗಾರರಾದ ಸಿದ್ದನಗೌಡ ಪಾಟೀಲ್‌ರವರು ಮಾತನಾಡಲಿದ್ದು, ನಯನಾ ಮೋಟಮ್ಮ ಮತ್ತು ಲಿಂಗರಾಜ ಹಟ್ಟಿಯವರು ಪ್ರತಿಕ್ರಿಯೆ ನೀಡಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ಪ್ರಜಾಪ್ರಭುತ್ವ: ಆಶಯ ಮತ್ತು ಕನಸು ಗೋಷ್ಟಿ ನಡೆಯಲಿದ್ದು ಆರ್‌.ಪ್ರತಿಭಾ, ಅಶ್ವಿನಿ ಮದನಕರ, ಕೊಟ್ರಪ್ಪ ಹಿರೇಮಾಗಡಿಯವರು ಮಾತನಾಡಲಿದ್ದಾರೆ. ಹೈದರಾಬಾದ್‌ ಕರ್ನಾಟಕ ಹೋರಾಟಗಾರ ರಝಾಕ್‌ ಉಸ್ತಾದ್‌ರವರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೊನೆಯದಾಗಿ ಮಧ್ಯಾಹ್ನ 3;30ಕ್ಕೆ ಸಮಾರೋಪ ಗೋಷ್ಠಿ ಜರುಗಲಿದ್ದು ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು ಸಮಾರೋಪ ಮಾತುಗಳನ್ನಾಡಲಿದ್ದು, ವಿಜಯಪುರ ಅಕ್ಕಮಹಾದೇವಿ ವಿ.ವಿಯ ಉಪಕುಲಪತಿಗಳಾದ ಡಾ.ಸಬೀಹಾರವರು ಗೋಷ್ಠಿಯ ಅಧ್ಯಕ್ಷೀಯ ಮಾತಗಳನ್ನಾಡಲಿದ್ದಾರೆ. ಡಾ.ಶಿವಕುಮಾರ ಮಾಲಿಪಾಟೀಲ್‌, ಸಂಗಮೇಶ ಸುಗ್ರೀವ ಮತ್ತು ಮಹಾಲಕ್ಷ್ಮಿ ಕೇಸರಹಟ್ಟಿಯವರು ಉಪಸ್ಥಿತರಿರುತ್ತಾರೆ.

ಒಟ್ಟಿನಲ್ಲಿ ಎರಡು ದಿನಗಳ ಕಾಲ ಸಮಾನ ಆಶಯದ ಮನಸ್ಸುಗಳು ಸಮಾಜದ ಕರೆಗೆ ಕಿವಿಯಾಗುವ, ದನಿಯಾಗುವ ಮಹತ್ವಪೂರ್ಣ ಕಾರ್ಯಕ್ರಮ ಇದಾಗಲಿದ್ದು ಭಾಗವಹಿಸಲು ಆಸಕ್ತಿಯುಳ್ಳವರು ನಾವು ನಮ್ಮಲ್ಲಿ ಬಳಗದ ಜಾಜಿ ದೇವೆಂದ್ರಪ್ಪ 9481662735 ಮತ್ತು ಟಿ.ಎಂ ಉಷಾರಾಣಿ: 9036550365 ಇವರನ್ನು ಸಂಪರ್ಕಿಸಬಹುದಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...