Homeಕರ್ನಾಟಕಲೂಟಿ ಹೊಡೆಯಲು ರಾಷ್ಟ್ರೀಯ ಹೆದ್ದಾರಿ ‌ಪ್ರಾಧಿಕಾರ ಸಜ್ಜು: ಟೋಲ್ ಹೆಚ್ಚಳಕ್ಕೆ ಜೆಡಿಎಸ್ ಕಿಡಿ

ಲೂಟಿ ಹೊಡೆಯಲು ರಾಷ್ಟ್ರೀಯ ಹೆದ್ದಾರಿ ‌ಪ್ರಾಧಿಕಾರ ಸಜ್ಜು: ಟೋಲ್ ಹೆಚ್ಚಳಕ್ಕೆ ಜೆಡಿಎಸ್ ಕಿಡಿ

- Advertisement -
- Advertisement -

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಹೆಚ್ಚಳಕ್ಕೆ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಲೂಟಿ ಹೊಡೆಯಲು ರಾಷ್ಟ್ರೀಯ ಹೆದ್ದಾರಿ ‌ಪ್ರಾಧಿಕಾರ ಸಜ್ಜಾಗಿದೆ ಎಂದು ಕಿಡಿಕಾರಿದೆ.

ಈ ಕುರಿತು ಪಕ್ಷದ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿದ್ದು, “ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಉದ್ಘಾಟನೆ ಆಗಿ ಕೇವಲ ಹದಿನೇಳು ದಿನವೂ ಆಗಿಲ್ಲ, ಆಗಲೇ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಕಾರು, ಜೀಪು, ವ್ಯಾನುಗಳ ಏಕಮುಖ ಸಂಚಾರಕ್ಕೆ ಈ ಹಿಂದೆ ಇದ್ದ 135 ರೂ. ಶುಲ್ಕವನ್ನು‌ 165 ರೂ.ಗಳಿಗೆ ಏರಿಸಲಾಗಿದೆ. ಲೂಟಿ ಹೊಡೆಯಲು ರಾಷ್ಟ್ರೀಯ ಹೆದ್ದಾರಿ ‌ಪ್ರಾಧಿಕಾರ ಸಜ್ಜಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಈ ಎಕ್ಸ್‌ಪ್ರೆಸ್‌ ಹೆದ್ದಾರಿ ಜಗತ್ತಿನ ಅತಿ ದೊಡ್ಡ ಸಾಧನೆ ಎಂದು ಬೀಗುತ್ತಿದ್ದ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಈ ರೀತಿ ಮನಬಂದಂತೆ ಟೋಲ್ ಶುಲ್ಕ ಹೆಚ್ಚಳದ ಬಗ್ಗೆ ಮಾತೇ ಆಡುವುದಿಲ್ಲ. ಜನರ ತೆರಿಗೆ ಹಣದಲ್ಲಿ ರಸ್ತೆ ನಿರ್ಮಿಸಿ, ಜನರಿಂದಲೇ ಮಿತಿ ಇಲ್ಲದೆ ಟೋಲ್ ಶುಲ್ಕ ಪೀಕುವ ಕೊಳಕು ರಾಜಕಾರಣವಿದು ಎಂದು ಜೆಡಿಎಸ್ ಹೇಳಿದೆ.

ಜನಸಾಮಾನ್ಯರು ಬಳಸುವ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವಾಗ ಎಲ್ಲ ಲಘು ಹಾಗೂ ಭಾರಿ ವಾಹನಗಳ ಟೋಲ್ ಶುಲ್ಕ ಹೆಚ್ಚಿಸುವುದು ಯಾವ ಸೀಮೆಯ ನಿರ್ಧಾರ? ಮತ್ತೊಮ್ಮೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಲಿದೆ. ಇದು ಜನದ್ರೋಹಿಯಾದ ನಡೆ. ಈ ಡಬಲ್ ಎಂಜಿನ್ ಬಿಜೆಪಿ ಸರ್ಕಾರಕ್ಕೆ ಜನರ ಶಾಪ ತಟ್ಟದೆ ಬಿಡದು ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೋಲ್ ಹೆಚ್ಚಳದ ಕುರಿತು ಟ್ರೋಲ್‌ಗಳು ಆರಂಭವಾಗಿವೆ. “ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹದಿನೇಳೇ ದಿನಕ್ಕೆ ಟೋಲ್ ದರ ಹೆಚ್ಚಳ..! ಇದಲ್ಲವೇ ನಿಜವಾದ ಬದಲಾವಣೆಯ ಸಾಧನೆ ಅನ್ನೋದು..? ವಾವ್ ಮೋದೀಜೀ ವಾವ್..!” ಎಂದು ದೀಪು ಗೌಡ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಮೈಸೂರು-ಬೆಂಗಳೂರು ರೋಡ್ ಮಾಡಿರೋದು ಜನರ ಅನುಕೂಲಕ್ಕಾಗಿ ಅನ್ನೋದು ಶುದ್ಧ ಸುಳ್ಳು, ಜನರಿಂದ ಸುಲಿಗೆ ಮಾಡೋದಷ್ಟೇ ಈ ಬಿಜೆಪಿ ಸರ್ಕಾರದ ಉದ್ದೇಶ. ರಸ್ತೆ ಉದ್ಘಾಟನೆಯಾದ 17 ದಿನದಲ್ಲಿ ಟೋಲ್ ಹೆಚ್ಚಳ ಮಾಡಿದ್ದಾರೆ ಅಂದರೇ ಇದು ಸುಲಿಗೆ ಅಲ್ಲದೇ ಇನ್ನೇನೂ ಅಲ್ಲ ಎಂದು ಪ್ರತಾಪ್ ಕಣಗಲ್ ಹೇಳಿದ್ದಾರೆ.

Service ರೋಡ್ ಕೊಡದೆ ಹೀಗೆ ಹಗಲು ದರೋಡೆ ನಡೆಸುತ್ತ ಇರೋದು ಎಷ್ಟು ಸರಿ ಎಂದು ಕೃಷ್ಣರವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ಹೊರೆ: 15 ದಿನಗಳಲ್ಲೇ ಬೆಂಗಳೂರು-ಮೈಸೂರು ರಸ್ತೆ ಟೋಲ್ ದರ ಹೆಚ್ಚಳ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಹಿಂಸೆಗೆ ಪ್ರಚೋದಿಸುವ, ಮುಸ್ಲಿಮರ ವಿರುದ್ಧದ ಜಾಹೀರಾತುಗಳನ್ನು ಅನುಮೋದಿಸಿದ್ದ ಮೆಟಾ: ವರದಿ

0
ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ, ಈ ಮಧ್ಯೆ ತಪ್ಪು ಮಾಹಿತಿಯನ್ನು ಹರಡುವ ಸುದ್ದಿಗಳು,  ವೀಡಿಯೊಗಳು ದೇಶದ ಸಾಮರಸ್ಯಕ್ಕೆ ಪ್ರಮುಖ ಬೆದರಿಕೆಯಾಗಿ ಹೊರಹೊಮ್ಮಿವೆ. 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಹಲವಾರು...