Homeಮುಖಪುಟ8 ದಿನ ಕಳೆದರೂ ಪತ್ತೆಯಾಗದ ನೌಕಾಪಡೆ ಯೋಧ; 'ನನ್ನ ಮಗ ಎಲ್ಲಿದ್ದಾನೆ..?' ಎಂದು ಕಣ್ಣೀರಿಡುತ್ತಿರುವ ಹೆತ್ತವರು

8 ದಿನ ಕಳೆದರೂ ಪತ್ತೆಯಾಗದ ನೌಕಾಪಡೆ ಯೋಧ; ‘ನನ್ನ ಮಗ ಎಲ್ಲಿದ್ದಾನೆ..?’ ಎಂದು ಕಣ್ಣೀರಿಡುತ್ತಿರುವ ಹೆತ್ತವರು

- Advertisement -
- Advertisement -

ಕರ್ತವ್ಯನಿರತರಾಗಿದ್ದಾಗಲೇ ನಿಗೂಢವಾಗಿ ನಾಪತ್ತೆಯಾಗಿರುವ ಭಾರತೀಯ ನೌಕಾಪಡೆ ಯೋಧ ಸಾಹಿಲ್ ವರ್ಮಾ ಕಣ್ಮರೆಯಾಗಿ ಎಂಟು ದಿನಗಳು ಕಳೆಯುತ್ತಿದ್ದು, ಹಲವಾರು ಹಡಗುಗಳು ಮತ್ತು ವಿಮಾನಗಳನ್ನು ಒಳಗೊಂಡ ಬೃಹತ್ ನೌಕಾಪಡೆಯ ಕಾರ್ಯಚರಣೆ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ. ಇಲಾಖೆಯ ಉತ್ತರಗಳಿಂದ ಹತಾಶರಾಗಿರುವವರ್ಮಾ ಅವರ ಪೋಷಕರು, ‘ನನ್ನ ಮಗ ಎಲ್ಲಿದ್ದಾನೆ?’ ಎಂದು ದುಃಖದಿಂದ ಕಣ್ಣೀರಿಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾರತೀಯ ನೌಕಾಪಡೆಯಿಂದ ಸಮುದ್ರ ನೌಕೆಯಲ್ಲಿ ನಿಯೋಜನೆಗೊಂಡಿದ್ದ ಸಾಹಿಲ್ ವರ್ಮಾ ಎಂಬ ಯೋಧ ಫೆಬ್ರವರಿ 27ರಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನೌಕಾಪಡೆಯು ತಕ್ಷಣವೇ ಹಡಗುಗಳು ಮತ್ತು ವಿಮಾನಗಳೊಂದಿಗೆ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎನ್ನಲಾಗಿದೆ.

ವರ್ಮಾ ಅವರ ಪೋಷಕರಾಧ ಸುಬಾಷ್ ಚಂದರ್ ಮತ್ತು ರಾಮ ಕುಮಾರಿ, ಜಮ್ಮುವಿನ ಘೌ ಮನ್ಹಾಸನ್ ಪ್ರದೇಶದಲ್ಲಿ ನೆಲೆಸಿದ್ದಾರೆ. ತಮ್ಮ ಮಗನ ನಿಗೂಢ ನಾಪತ್ತೆ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಒತ್ತಾಯಿದ್ದಾರೆ. ಕಾಣೆಯಾಗಿರುವ ತಮ್ಮ ಮಗನನ್ನು ಸುರಕ್ಷಿತವಾಗಿ ಹಿಂದಿರುಗಿಸಲು ಕುಟುಂಬವು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೇರಿದಂತೆ ಭಾರತ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಂದ ತುರ್ತು ಮಧ್ಯಸ್ಥಿಕೆಯನ್ನು ಕೋರಿದ್ದಾರೆ.

ಕಣ್ಮರೆಯಾಗಿರುವ ಯೋಧ ಸಾಹಿಲ್ ವರ್ಮಾ ಪೋಷಕರು

ನೌಕಾಪಡೆಯ ಹಡಗಿನಿಂದ ಸೈನಿಕನು ಯಾವುದೇ ಕುರುಹು ಇಲ್ಲದೆ ಕಣ್ಮರೆಯಾಗಬಹುದೆ ಎಂದು ಚಂದರ್ ಆಶ್ಚರ್ಯ ವ್ಯಕ್ತಪಡಿಸಿದರು. ‘ಯೋಧನೊಬ್ಬ ತನ್ನ ನೌಕಾ ಹಡಗಿನಿಂದ ನಾಪತ್ತೆಯಾಗಿದ್ದು, ಪತ್ತೆಯಾಗದಿರುವುದು ಆಶ್ಚರ್ಯಕರವಾಗಿದೆ. ಹಡಗಿನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸಮುದ್ರಕ್ಕೆ ಬಿದ್ದವರು ಯಾರೂ ಕಂಡುಬಂದಿಲ್ಲ ಎಂದು ನನಗೆ ತಿಳಿಸಲಾಗಿದೆ. ಹಾಗಾದರೆ ನನ್ನ ಮಗ ಎಲ್ಲಿದ್ದಾನೆ?’ ಚಂದರ್ ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಮಗ ನಾಪತ್ತೆಯಾದ ಎಂಟು ದಿನಗಳವರೆಗೆ ಘಟನೆಯ ಬಗ್ಗೆ ಕತ್ತಲಲ್ಲಿಯೇ ಉಳಿದಿರುವ ಕುಟುಂಬವು ನ್ಯಾಯಕ್ಕಾಗಿ ಒತ್ತಾಯಿಸುತ್ತಿದೆ. ‘ನಮ್ಮ ಮಗ ಹಡಗಿನಲ್ಲಿ ಎರಡು ದಿನಗಳ ಮೊದಲು ನಾಪತ್ತೆಯಾಗಿದ್ದಾರೆ ಎಂದು ನಮಗೆ ಫೆಬ್ರವರಿ 29 ರಂದು ಕರೆ ಬಂದಿತು… ನಾವು ಭಾನುವಾರ (ಫೆಬ್ರವರಿ 25) ಕೊನೆಯದಾಗಿ ಅವರೊಂದಿಗೆ ಮಾತನಾಡಿದ್ದೇವೆ ಮತ್ತು ಅವನಿಗೆ ಏನಾಯಿತು (ಬಗ್ಗೆ) ಏನೂ ತಿಳಿದಿಲ್ಲ’ ಎಂದು ಚಂದರ್ ಹೇಳಿದರು.

ವರ್ಮಾ ಅವರ ಪತ್ತೆಗೆ ಉನ್ನತ ಮಟ್ಟದ ತನಿಖಾ ಮಂಡಳಿಯನ್ನು ಆರಂಭಿಸಲಾಗಿದೆ ಎಂದು ಮುಂಬೈ ಪ್ರಧಾನ ಕಚೇರಿಯ ಪಶ್ಚಿಮ ನೌಕಾ ಕಮಾಂಡ್ ತಿಳಿಸಿದೆ. ‘ದುರಾದೃಷ್ಟಕರ ಘಟನೆಯಲ್ಲಿ, ಫೆಬ್ರವರಿ 27, 2024 ರಿಂದ ನಿಯೋಜನೆಯಲ್ಲಿರುವ ಭಾರತೀಯ ನೌಕಾ ನೌಕೆಯಿಂದ (ಎ) ಸೀಮನ್ II, ಸಾಹಿಲ್ ವರ್ಮಾ ಸಮುದ್ರದಲ್ಲಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ನೌಕಾಪಡೆಯು ತಕ್ಷಣವೇ ಹಡಗುಗಳು ಮತ್ತು ವಿಮಾನಗಳೊಂದಿಗೆ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, ಹುಡುಕಾಟ ಇನ್ನೂ ಚಾಲ್ತಿಯಲ್ಲಿದೆ’ ಇದೆ ಎಂದು ಶನಿವಾರದ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದೆ.

‘ಮಾಹಿತಿಯನ್ನು ಮರೆಮಾಚಲಾಗುತ್ತಿದೆ’ ಎಂದು ವರ್ಮಾ ಅವರ ತಾಯಿ ರಮಾ ಕುಮಾರಿ ಅವರು ಆರೋಪಿಸಿದ್ದು, ಶಂಕೆ ವ್ಯಕ್ತಪಡಿಸಿದ್ದಾರೆ.

‘ಹಡಗಿನಲ್ಲಿ 400 ಜನರಿದ್ದರು ಮತ್ತು ನನ್ನ ಮಗ ಮಾತ್ರ ನಾಪತ್ತೆಯಾಗಿದ್ದಾನೆ. ನನ್ನ ಪ್ರಾರ್ಥನೆ ಮತ್ತು ಬೇಡಿಕೆಗಳು ನನ್ನ ಮಗ ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿ ಹಿಂದಿರುಗಲಿ’ ಎಂದು ಅವರು ಹೇಳಿದರು.

ನಾಪತ್ತೆಯಾದ ಸೀಮನ್‌ನ ತಾಯಿಯ ಚಿಕ್ಕಪ್ಪ ಗೌತಮ್, ಹಡಗು ಮತ್ತೆ ನೌಕಾಯಾನ ಮಾಡುವ ಮೊದಲು ಒಂದು ದಿನ ಬೇಸ್‌ಗೆ ಮರಳಿದೆ ಎಂದು ಹೇಳಿದ್ದಾರೆ. ‘ಮತ್ತೆ ಹೊರಡುವ ಮೊದಲು ಹಡಗು ಒಂದು ದಿನ ಬೇಸ್‌ಗೆ ಮರಳಿದೆ ಎಂದು ನಾವು ಕೇಳಿದ್ದೇವೆ. ಅವನು ಹಡಗಿನಿಂದ ನಾಪತ್ತೆಯಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

‘ಘಟನೆ ನಡೆದ 24 ಗಂಟೆಯೊಳಗೆ ಕುಟುಂಬದವರಿಗೆ ಮಾಹಿತಿ ನೀಡಿ, ತನಿಖಾ ಮಂಡಳಿಗೆ ಆದೇಶ ನೀಡಬೇಕಿತ್ತು. ಆದರೆ ಈ ಎರಡೂ ಘಟನೆಗಳು ಎರಡು ದಿನಗಳ ನಂತರ ಸಂಭವಿಸಿದವು’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ‘ನನ್ನ ಇಎನ್‌ಟಿ ಕ್ಲಿನಿಕ್ ಕೂಡ ನನ್ನ ವಾಪಸಾತಿಗಾಗಿ ಕಾಯುತ್ತಿದೆ..’ ರಾಜಕೀಯ ನಿವೃತ್ತಿ ಘೋಷಿಸಿ ಡಾ. ಹರ್ಷವರ್ಧನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...