HomeಮುಖಪುಟNCERT ಪಠ್ಯ ಕಡಿತಗೊಳಿಸಿ, ಸುಳ್ಳು ಇತಿಹಾಸ ಹರಡಲು ದಾರಿ ಮಾಡಿಕೊಟ್ಟಿದೆ: ಇತಿಹಾಸಕಾರರ ಕಳವಳ

NCERT ಪಠ್ಯ ಕಡಿತಗೊಳಿಸಿ, ಸುಳ್ಳು ಇತಿಹಾಸ ಹರಡಲು ದಾರಿ ಮಾಡಿಕೊಟ್ಟಿದೆ: ಇತಿಹಾಸಕಾರರ ಕಳವಳ

- Advertisement -
- Advertisement -

ಸಿಬಿಎಸ್‌ಇ ವಿದ್ಯಾರ್ಥಿಗಳ ಇತಿಹಾಸ ಪುಸ್ತಕಗಳಿಂದ ಕೆಲವು ವಿಷಯಗಳನ್ನು ಕೈಬಿಡಲು ಎನ್‌ಸಿಇಆರ್‌ಟಿ ನಿರ್ಧರಿಸಿದೆ. ಈ ಕ್ರಮದ ಬಗ್ಗೆ ಇತಿಹಾಸಕಾರರು ಕಳವಳ ವ್ಯಕ್ತಪಡಿಸಿದೆ.

ಶುಕ್ರವಾರ ಇತಿಹಾಸಕಾರರ ಗುಂಪು ತಮ್ಮ ಹೇಳಿಕೆಯಲ್ಲಿ, ಎನ್‌ಸಿಇಆರ್‌ಟಿಯವರು ವಿಶೇಷವಾಗಿ 12 ನೇ ತರಗತಿಯ ಪಠ್ಯದಲ್ಲಿನ ಕೆಲವು ವಿಷಯಗಳನ್ನು ಕೈಬಿಡುತ್ತಿರುವ ನಿರ್ಧಾರದ ಬಗ್ಗೆ ನಾವು ಆತಂಕ ಎನಿಸಿದೆ. ಈ ಬಗ್ಗೆ ಅವರು ಕಾಳಜಿವಹಿಸಬೇಕು ಎಂದು ಹೇಳಿದ್ದಾರೆ.

ಈ ಹೇಳಿಕೆಗೆ ರೋಮಿಲಾ ಥಾಪರ್, ಜಯತಿ ಗೋಷ್, ಮೃದುಲಾ ಮುಖರ್ಜಿ, ಅಪೂರ್ವನಾದ, ಇರ್ಫಾನ್ ಹಬೀಬ್ ಮತ್ತು ಉಪಿಂದರ್ ಸಿಂಗ್ ಸೇರಿ ಹಲವರು ಸಹಿ ಹಾಕಿದ್ದಾರೆ.

”ಸಾಂಕ್ರಾಮಿಕ ಕೋವಿಡ್‌ನಿಂದ ಹೇರಲಾಗಿದ್ದ ಲಾಕ್‌ಡೌನ್‌ ನೆಪ ಹೇಳಿ ಪಠ್ಯಕ್ರಮದ ಹೊರೆಯನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ ಎಂದು ಎನ್‌ಸಿಇಆರ್‌ಟಿ ವಾದಿಸಿತ್ತು. ಮೊಘಲ್ ಸಾಮ್ರಾಜ್ಯದ ಇತಿಹಾಸ, ಗುಜರಾತ್‌ನಲ್ಲಿ ನಡೆದ 2002ರ ಕೋಮು ಗಲಭೆಗಳಂತಹ ವಿಷಯಗಳನ್ನು ಕೈಬಿಡುವ ವಿವಾದಾತ್ಮಕ ಪ್ರಕ್ರಿಯೆಯನ್ನು ಪ್ರಾರಂಭಿಸಿತು. 6 ರಿಂದ 12 ನೇ ತರಗತಿಯ ಸಮಾಜ ವಿಜ್ಞಾನ, ಇತಿಹಾಸ ಮತ್ತು ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಿಂದ ಕೆಲವು ಪ್ರಮುಖ ಪಾಠಗಳನ್ನು ಕೈಬಿಡಲಾಗುತ್ತಿದೆ” ಎಂದು ಇತಿಹಾಸಕಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

”ಕೋವಿಡ್‌ ಮುಗಿದ ಬಳಿಕ ಈಗ ಶಾಲೆಗಳು ಆರಂಭವಾದ ಬಳಿಕವೂ ಇತಿಹಾಸದ ಪಠ್ಯವನ್ನು ಕೈಬಿಟ್ಟಿರುವುನ್ನು ಮುಂದುವರೆಸಿವೆ. ಈಗ ಪುನಃ ಮೊದಲಿನಿಂತೆ ಸಂಪೂರ್ಣ ವಿಷಯಗಳನ್ನು ಪಠ್ಯದಲ್ಲಿ ಸೇರಿಸಲಾಗಿಲ್ಲ” ಎಂದು ಅವರು ಹೇಳಿದರು.

”ಇತಿಹಾಸದ ಪಾಠಗಳನ್ನು ಕೈ ಬಿಡುವ ಮೂಲಕ, ಹುಸಿ ಇತಿಹಾಸಗಳಿಗೆ, ವಿಶೇಷವಾಗಿ ಕೋಮು ಮತ್ತು ಜಾತಿಯ ವೈವಿಧ್ಯತೆಯ ಹಿಡಿತವನ್ನು ಪ್ರಚಾರಪಡಿಸಲು ಸಿದ್ದವಾಗಿದೆ. ಪಠ್ಯದಲ್ಲಿ ನೈಜ ಇತಿಹಾಸ ಕೈಬಿಟ್ಟಿರುವುದರಿಂದ ಇಂದು ವಾಟ್ಸಾಪ್ ಮತ್ತು ಇತರ ಮೂಲಗಳಿಂದ ಸುಳ್ಳು ಇತಿಹಾಸಗಳು ವ್ಯಾಪಕವಾಗಿ ಹರಡಲಾಗುತ್ತಿದೆ. ಶಿಕ್ಷಣದಲ್ಲಿ ರಾಜಕೀಯ ಬೆರಸಬಾರದು” ಎಂದು ಇತಿಹಾಸಕಾರರು ಹೇಳಿದ್ದಾರೆ.

ಈ ಬಗ್ಗೆ ಎನ್‌ಸಿಇಆರ್‌ಟಿ ಪ್ರತಿಕ್ರಿಯಿಸಿದ್ದು, ”ಐತಿಹಾಸಿಕ ಸತ್ಯಗಳನ್ನು ಹತ್ತಿಕ್ಕುವ ಪ್ರಕ್ರಿಯೆ ಆಗಿಲ್ಲ. ಇದು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಪಠ್ಯ ಕೈಬಿಡಲಾಗಿದೆ ಮತ್ತು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ” ಎಂದು ಹೇಳಿದೆ.

”ಕಳೆದ ವರ್ಷವೂ ನಾವು ವಿವರಿಸಿದಂತೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಲಿಕೆಯ ವಿಚಾರದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ.ಆ ವಿದ್ಯಾರ್ಥಿಗಳಿಗೆ ಸಹಾಯವಾಗುವುಂತೆ ಮಾಡುವುದು ನಮ್ಮ ಜವಾಬ್ದಾರಿ ಎಂದು ಭಾವಿಸಲಾಗಿದೆ. ಪಠ್ಯಪುಸ್ತಕಗಳಲ್ಲಿನ ವಿಷಯದ ಹೊರೆ ಕಡಿಮೆ ಮಾಡಬೇಕು” ಎಂದು ಎನ್‌ಸಿಇಆರ್‌ಟಿಯ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಮಂಗಳವಾರ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ನಿರ್ದಿಷ್ಟ ಸಿದ್ಧಾಂತಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಇತಿಹಾಸಕಾರರ ಆರೋಪಗಳನ್ನು ದಿನೇಶ್ ಪ್ರಸಾದ್ ಸಕ್ಲಾನಿ ನಿರಾಕರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...