Homeಮುಖಪುಟಜುಲೈ 1ರಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿ?

ಜುಲೈ 1ರಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿ?

- Advertisement -
- Advertisement -

ಇತ್ತೀಚೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಜುಲೈ 1ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಣೆಯನ್ನು ಹೊರಡಿಸಿದೆ.

ನೂತನ ಕಾನೂನು ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯಿದೆಯನ್ನು ಬದಲಿಸುತ್ತದೆ. ನೂತನ ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಈ ಕಾಯ್ದೆಯು ಜುಲೈ 1ರಿಂದ ಕಾನೂನಾಗಿ ಜಾರಿಗೆ ಬರಲಿದೆ.

ಹೊಸ ಕಾನೂನುಗಳ ಪ್ರಕಾರ, ಶೂನ್ಯ-ಎಫ್‌ಐಆರ್, ಇ-ಎಫ್‌ಐಆರ್, ಚಾರ್ಜ್‌ಶೀಟ್‌ನಂತಹ ಪ್ರಕ್ರಿಯೆಗಳು ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ ಮತ್ತು ಸಂತ್ರಸ್ತರಿಗೆ ಡಿಜಿಟಲ್ ರೂಪದಲ್ಲಿ ಮಾಹಿತಿಯನ್ನು ಒದಗಿಸಲಾಗುತ್ತದೆ.
ಸಂಸತ್ತಿನಲ್ಲಿ ಮೂರು ವಿಧೇಯಕಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿಕ್ಷೆಯನ್ನು ನೀಡುವ ಬದಲು ನ್ಯಾಯವನ್ನು ತಲುಪಿಸುವತ್ತ ಗಮನಹರಿಸುವುದಾಗಿ ಹೇಳಿದ್ದರು.

ಹೊಸ ಕಾನೂನುಗಳು ಜಾರಿಗೆ ಬರುವ ಮೊದಲು, ಭಾರತೀಯ ದಂಡ ಸಂಹಿತೆಯಿಂದ ಭಾರತೀಯ ನ್ಯಾಯ ಸಂಹಿತೆಗೆ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಕಾನೂನಿನಲ್ಲಿ ಐಪಿಸಿ ಅಡಿಯಲ್ಲಿ ಕೆಲವು ಸೆಕ್ಷನ್‌ಗಳ ಸಂಖ್ಯೆಗಳನ್ನು ಬದಲಾಯಿಸಲಾಗಿದೆ.

IPC ಅಡಿಯಲ್ಲಿ ಸೆಕ್ಷನ್ 302 ಕೊಲೆಯ ಶಿಕ್ಷೆಗೆ ಸಂಬಂಧಿಸಿದೆ. ಈಗ ಕೊಲೆಯು ಸೆಕ್ಷನ್ 101ರ ಅಡಿಯಲ್ಲಿ ಬರುತ್ತದೆ. ಇದಲ್ಲದೆ ಹೊಸ ಕಾನೂನಿನ ಅಡಿಯಲ್ಲಿ ಸೆಕ್ಷನ್ 302 ದರೋಡೆಗೆ ಸಂಬಂಧಿಸಿದೆ.
ಐಪಿಸಿಯ ಸೆಕ್ಷನ್ 420 ವಂಚನೆಯ ಅಪರಾಧವಾಗಿದೆ, ಆದರೆ ಹೊಸ ಕಾನೂನಿನಲ್ಲಿ ವಂಚನೆಯು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 316ರ ಅಡಿಯಲ್ಲಿ ಬರುತ್ತದೆ.

ಅಕ್ರಮ ಸಭೆಗೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 144ನ್ನು ಈಗ ಸೆಕ್ಷನ್ 187 ಎಂದು ಕರೆಯಲಾಗುವುದು.
ಅಂತೆಯೇ IPCಯ ಸೆಕ್ಷನ್ 121, ಯುದ್ಧ, ಅಥವಾ ಯುದ್ಧಕ್ಕೆ ಸಂಚು ಅಥವಾ ಭಾರತ ಸರ್ಕಾರದ ವಿರುದ್ಧ ಯುದ್ಧವನ್ನು ನಡೆಸಲು ಪ್ರೇರೇಪಿಸುವುದನ್ನು ಈಗ ಅದನ್ನು ಸೆಕ್ಷನ್ 146ರಡಿಯಲ್ಲಿ ಸೇರಿಸಲಾಗಿದೆ. ಮಾನನಷ್ಟಕ್ಕೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 499 ಈಗ ಹೊಸ ಕಾನೂನಿನ ಸೆಕ್ಷನ್ 354ರಡಿಯಲ್ಲಿ ಒಳಗೊಂಡಿದೆ.

IPC ಅಡಿಯಲ್ಲಿ ಅತ್ಯಾಚಾರದ ಶಿಕ್ಷೆಗೆ ಸಂಬಂಧಿಸಿದ ಸೆಕ್ಷನ್ 376, ಈಗ ಸೆಕ್ಷನ್ 63 ಆಗಿದೆ. ಹೊಸ ಕಾನೂನಿನ ಅಡಿಯಲ್ಲಿ ಸೆಕ್ಷನ್ 64 ಈ ಕುರಿತ ಶಿಕ್ಷೆಯ ಬಗ್ಗೆ ಹೇಳುತ್ತದೆ, ಆದರೆ ಸೆಕ್ಷನ್ 70 ಸಾಮೂಹಿಕ ಅತ್ಯಾಚಾರದ ಅಪರಾಧಕ್ಕೆ ಸಂಬಂಧಿಸಿದೆ. ಆರೋಪಿಗಳು ದಂಡ ಸಂಹಿತೆಯ ಉದಾರ ನಿಬಂಧನೆಗಳ ಲಾಭವನ್ನು ಪಡೆದುಕೊಳ್ಳುವುದನ್ನು ತಡೆಯಲು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳ ಕುರಿತು ನಿಬಂಧನೆಗಳನ್ನು ಪೋಕ್ಸೊ ಕಾಯ್ದೆಯೊಂದಿಗೆ ಸೇರಿಸಲಾಗಿದೆ. ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆಯನ್ನು ಕಡ್ಡಾಯಗೊಳಿಸಲಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ದೇಶದ್ರೋಹದ ಬಗ್ಗೆ ವ್ಯವಹರಿಸುವ ಐಪಿಸಿಯ ಸೆಕ್ಷನ್ 124-ಎಯನ್ನು ಈಗ ಹೊಸ ಕಾನೂನಿನ ಅಡಿಯಲ್ಲಿ ಸೆಕ್ಷನ್ 150 ಎಂದು ಕರೆಯಲಾಗುತ್ತದೆ.

ಭಾರತದ ಹೊರಗೆ ತಲೆಮರೆಸಿಕೊಂಡಿರುವ ಆರೋಪಿ ಇಲ್ಲಿರಬೇಕಿಲ್ಲ. ವ್ಯಕ್ತಿಯು 90 ದಿನಗಳಲ್ಲಿ ನ್ಯಾಯಾಲಯದ ಎದುರು ಹಾಜರಾಗದಿದ್ದರೆ ಆತನ ಅನುಪಸ್ಥಿತಿಯ ಹೊರತಾಗಿಯೂ ವಿಚಾರಣೆಯು ಮುಂದುವರಿಯುತ್ತದೆ. ಕಾನೂನು ಕ್ರಮವನ್ನು ಜರುಗಿಸಲು ಪಬ್ಲಿಕ್ ಪ್ರಾಸಿಕ್ಯೂಟರನ್ನು ನೇಮಿಸಲಾಗುತ್ತಿದೆ.

ಮೂರು ಕಾನೂನುಗಳು ಕಳೆದ ವರ್ಷ ಡಿಸೆಂಬರ್ 21ರಂದು ಸಂಸತ್ತಿನ ಅನುಮೋದನೆಯನ್ನು ಪಡೆದಿದೆ.  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 25ರಂದು ನೂತನ ಕಾನೂನಿಗೆ ಒಪ್ಪಿಗೆಯನ್ನು ನೀಡಿದ್ದರು.  ಜುಲೈ 1ರಿಂದ ಇದು ಜಾರಿಗೆ ಬರಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಇದೀಗ ಪ್ರಕಟನೆಯನ್ನು ಹೊರಡಿಸಿದೆ.

ಇದನ್ನು ಓದಿ: ಗಾಝಾದಲ್ಲಿ ಮಾನವೀಯ ನೆರವು ಕಾರ್ಯಚರಣೆ: ಸಂಕಷ್ಟದಲ್ಲಿರುವ UN ಏಜೆನ್ಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ: ಕೆನಡಾದಲ್ಲಿ ಶಂಕಿತ ಮೂವರು ಭಾರತೀಯರ ಬಂಧನ

0
ಸಿಖ್‌ ಪ್ರತ್ಯೇಕತವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಮೂವರು ಭಾರತೀಯರನ್ನು ಕೆನಡಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಕೆನಡಾದಲ್ಲಿ ಕೆಲ ತಿಂಗಳ ಹಿಂದೆಯೇ ಈ ಶಂಕಿತರನ್ನು ಪೊಲೀಸರು ಗುರುತಿಸಿದ್ದು,...