Homeಮುಖಪುಟಡಿಸೆಂಬರ್‌ 1 ರಿಂದ ರಿಲಯನ್ಸ್ ಜಿಯೋ ಕರೆ, ಡೇಟಾ ಶುಲ್ಕ ಶೇ.21 ರಷ್ಟು ಹೆಚ್ಚಳ

ಡಿಸೆಂಬರ್‌ 1 ರಿಂದ ರಿಲಯನ್ಸ್ ಜಿಯೋ ಕರೆ, ಡೇಟಾ ಶುಲ್ಕ ಶೇ.21 ರಷ್ಟು ಹೆಚ್ಚಳ

- Advertisement -
- Advertisement -

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಇತ್ತಿಚೆಗೆ ಹೊಸ ದರವನ್ನು ನಿಗದಿಗೊಳಿಸಿದ ಬಳಿಕ, ಭಾರತದ ಅತಿದೊಡ್ಡ ಮೊಬೈಲ್ ಆಪರೇಟರ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕೂಡ ಮುಂದಿನ ತಿಂಗಳಿನಿಂದ ತನ್ನ ಪ್ರಿಪೇಯ್ಡ್ ದರಗಳಲ್ಲಿ ಶೇಕಡಾ 21 ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

ಡಿಸೆಂಬರ್‌ 1 ರಿಂದ ಪರಿಷ್ಕೃತ ದರಗಳು ಜಾರಿಯಾಗಲಿವೆ. ಜಿಯೋ ಫೋನ್ ಯೋಜನೆ, ಅನಿಯಮಿತ ಯೋಜನೆಗಳು ಮತ್ತು ಡೇಟಾ ಯೋಜನೆಗಳನ್ನು ಶೇಕಡಾ 19.6 ರಿಂದ 21.3 ರ ವರೆಗೆ ಹೆಚ್ಚಿಸಲಾಗಿದೆ.

“ಸುಸ್ಥಿರ ಟೆಲಿಕಾಂ ಉದ್ಯಮವನ್ನು ಮತ್ತಷ್ಟು ಬಲಪಡಿಸುವ ಅದರ ಬದ್ಧತೆಗೆ ಅನುಗುಣವಾಗಿ, ಜಿಯೋ ಇಂದು ತನ್ನ ಹೊಸ ಅನಿಯಮಿತ ಯೋಜನೆಗಳನ್ನು ಪ್ರಕಟಿಸಿದೆ. ಈ ಹೊಸ ಯೋಜನೆಗಳು ಉದ್ಯಮದಲ್ಲಿ ಉತ್ತಮ ಮೌಲ್ಯವನ್ನು ಒದಗಿಸುತ್ತವೆ” ಎಂದು ರಿಲಯನ್ಸ್ ಜಿಯೋ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಹಸಿದಾಗ ತಿನ್ನುವುದು ರೊಟ್ಟಿಯನ್ನೇ ವಿನಃ ಜಿಯೋ ಸಿಮ್‌‌ನಲ್ಲ: ಸಿಮರ್ ಬಲ್ ಸಿಂಗ್

ಅನಿಯಮಿತ ಪ್ಲಾನ್ ವಿಭಾಗದಲ್ಲಿ, ಜಿಯೋ ತನ್ನ ಅಗ್ಗದ ಪ್ಲಾನ್‌ನ ಬೆಲೆಯನ್ನು 28 ದಿನಗಳ ಮಾನ್ಯತೆಯೊಂದಿಗೆ ರೂ.129 ರಿಂದ ರೂ. 155 ಕ್ಕೆ ಹೆಚ್ಚಿಸಿದೆ. 84 ದಿನಗಳ ವ್ಯಾಲಿಡಿಟಿಯ ಪ್ರಸ್ತುತ 329 ಇದ್ದು, ಅದು 395 ರೂಪಾಯಿಗೆ ಏರಿಕೆಯಾಗಲಿದೆ. 84 ದಿನಗಳ ವ್ಯಾಲಿಡಿಟಿಯೊಂದಿಗೆ ದೈನಂದಿನ 1.5 GB ದೈನಂದಿನ ಡೇಟಾ ಬಳಕೆಯನ್ನು ನೀಡುವ ಪ್ಲ್ಯಾನ್ 555 ಇದದ್ದು, 666 ರೂಪಾಯಿಗಳಿಗೆ ಏರಿಕೆಯಾಗಲಿದೆ.

ಇನ್ನೂ 28 ದಿನಗಳ ವ್ಯಾಲಿಡಿಟಿ ಯೋಜನೆಯು ಜಿಯೋಫೋನ್ ಬಳಕೆದಾರರಿಗೆ ರೂ 91ಗೆ ಏರಿಕೆಯಾಗಲಿದೆ. ದರಗಳ ಹೆಚ್ಚಳದ ಹೊರತಾಗಿಯೂ, ಜಿಯೋ ಪ್ಲಾನ್‌ಗಳ ಬೆಲೆಯನ್ನು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳಿಗಿಂತ ಕಡಿಮೆ ಇರಿಸಿದ್ದು, ಉದ್ಯಮದಲ್ಲಿ ಬೆಲೆ ಸ್ಪರ್ಧೆಯನ್ನು ಮುಂದುವರೆಸುವ ನಿರೀಕ್ಷೆಯಿದೆ.

ವಿವಾದಿತ ಕೃಷಿ ಕಾನೂನುಗಳು ಜಾರಿಯಾದಾಗ ರಿಲಯನ್ಸ್ ಕಂಪನಿಗೆ ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಕಂಟ್ರ್ಯಾಕ್ಟ್ ಫಾರ್ಮಿಂಗ್ ಮಾಡಲು ಅನುಕೂಲವಾಗುವ ರೀತಿಯಲ್ಲಿ ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ರೈತ ಸಂಘಟನೆಗಳು ಆರೋಪ ಮಾಡಿದ್ದವು. ಇದರಿಂದ ಬಾಯ್ಕಾಟ್ ಜಿಯೋ ಅಭೀಯಾನ ಆರಂಭವಾಗಿತ್ತು. ಬಳಿಕ 2020 ರ ಡಿಸೆಂಬರ್‌ನಲ್ಲಿ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋನ ವೈರ್‌ಲೆಸ್ ಚಂದಾದಾರರ ಸಂಖ್ಯೆ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಭಾರೀ ಕುಸಿತ ಕಂಡಿತ್ತು. ಇಂದಿಗೂ ಪಂಜಾಬಿನಲ್ಲ ರಿಲಯನ್ಸ್ ಕಂಪನಿಗೆ ಸೇರುವ ಯಾವುದೇ ಅಂಗಡಿ ಮುಂಗಟ್ಟು, ಪೆಟ್ರೋಲ್‌ ಬಂಕ್‌ ಪಂಜಾಬಿನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಎಲ್ಲಾ ಕಡೆ ರೈತರು ಮುತ್ತಿಗೆ ಹಾಕಿದ್ದಾರೆ.


ಇದನ್ನೂ ಓದಿ: ರೈತ ಹೋರಾಟದ ಬಿಸಿ: ಪಂಜಾಬ್, ಹರಿಯಾಣಗಳಲ್ಲಿ ಜಿಯೋ ಚಂದಾದಾರರ ಗಣನೀಯ ಕುಸಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...