cenima

ವಿ4 ಸ್ಟ್ರೀಮ್‌ ಓಟಿಟಿಯು ಕನ್ನಡ ಚಲನಚಿತ್ರವನ್ನು ತುಳು ಭಾಷೆಗೆ ಡಬ್ಬಿಂಗ್ ಮಾಡುವ ಮೂಲಕ ಸಿನಿ ಪ್ರೇಕ್ಷರನ್ನು ಮನರಂಜಿಸಿದೆ. ಇದೀಗ ಮೊಟ್ಟ ಮೊದಲ ಬಾರಿಗೆ ಕೊಂಕಣಿ ಭಾಷೆಯ ‘ನಶೀಬಾಚೊ ಖೆಳ್’ ಎನ್ನುವ ಸಿನಿಮಾವನ್ನು ‘ನಸೀಬ್ ಏರೆಗುಂಡು ಏರೆಗಿಜ್ಜಿ’ ಹೆಸರಲ್ಲಿ ಡಬ್‌ ಮಾಡಲಾಗಿದ್ದು, ಮೋಂತಿ ಫೆಸ್ಟ್‌ನ ದಿನದಂದು (ಸೆ.8ರಂದು) ವಿ4 ಸ್ಟ್ರೀಮ್‌ನಲ್ಲಿ ತೆರೆ ಕಾಣಲಿದೆ. ಕರ್ನಾಟಕದ ಮೊಟ್ಟ ಮೊದಲ ಓಟಿಟಿ ಪ್ಲಾಟ್ ಫಾಮ್ ವಿ4ಸ್ಟ್ರೀಮ್ ಪ್ರಯೋಗ ಕುತೂಹಲ ಮೂಡಿಸಿದೆ.

ಸುಮಾರು 35 ವರ್ಷಗಳ ಹಿಂದೆ ಹೆನ್ರಿ ಡಿ ಸಿಲ್ವರವರು ರಚಿಸಿದ ಕಾಜಾರಾಚೆ ಉತಾರ್ ಎಂಬ ನಾಟಕದ ಮೂಲ ಕಥೆಯನ್ನಾಧರಿಸಿ ಮತ್ತು ಇದನ್ನು ಆಧುನಿಕತೆಗುಣವಾಗಿ ಚಲನಚಿತ್ರವಾಗಿ ತೆರೆಗೆ ತರಲಾಗಿದೆ. ಕ್ಯಾಮ್ ಫಿಲ್ಮ್ ಅರ್ಪಿಸುವ, ಪ್ರೆಸ್ಟಸ್ ಎಂಟರ್ ಪ್ರೈಸಸ್ ಲಾಂಭನದಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಹೆನ್ರಿ ಡಿಸಿಲ್ವ ನಿರ್ಮಿಸಿದ್ದಾರೆ. ಹ್ಯಾರಿ ಫರ್ನಾಂಡೀಸ್ ನಿರ್ದೇಶಿಸಿದ ನಶೀಬಾಚೊ ಖೆಳ್ ಕೊಂಕಣಿ ಚಲನಚಿತ್ರವು ನಸೀಬ್ ಏರೆಗುಂಡು ಏರೆಗಿಜ್ಜಿ ತುಳುವಿಗೆ ಡಬ್ಬಿಂಗ್ ಮಾಡಲಾಗಿದ್ದು ಬುಧವಾರ ತೆರೆಕಾಣಲಿದೆ.

ವಿ4 ಸ್ಟುಡಿಯೋದಲ್ಲಿ ಈ ಚಿತ್ರದ ಡಬ್ಬಿಂಗ್ ಮಾಡಲಾಗಿದೆ. ನಟ ಸ್ವರಾಜ್ ಶೆಟ್ಟಿ, ನಿರೀಕ್ಷಾ ಶೆಟ್ಟಿ, ಶೈಲಶ್ರೀ ಅವರು ಕಂಠದಾನ ಮಾಡಿದ್ದಾರೆ. ಹಾಸ್ಯದಲ್ಲಿ ಜಗದೀಶ್ ಆಡ್ಯಾರ್ ಸಾಥ್ ನೀಡಿದ್ದಾರೆ. ಹಿನ್ನೆಲೆ ಗಾಯನದಲ್ಲಿ ವಿದ್ಯಾ ಸುವರ್ಣ, ವೈಷ್ಣವಿ ಕಿಣಿ, ಪ್ರಶಾಂತ್ ಕಂಕನಾಡಿ, ವಿನೋದ್ ಕೋಕಿಲಾ ಅವರು ಕಂಠ ಸಿರಿಯಲ್ಲಿ ಅದ್ಭುತವಾಗಿ ಹಾಡುಗಳು ಮೂಡಿ ಬಂದಿದೆ. ವಿನೋದ್ ರಾಜ್ ಕೋಕಿಲ ಅವರು ಸಂಗೀತ ನೀಡಿದ್ದಾರೆ. ರಂಜಿತ್ ಕದ್ರಿ, ಆಶ್ವಿನ್ ಬಂಟ್ವಾಳ್ ಅವರು ಸಾಹಿತ್ಯ ಒದಗಿಸಿದ್ದಾರೆ. ವಿನೋದ್ ರಾಜ್ ಕೋಕಿಲ್ ಅವರು ಆ ದೃಶ್ಯಕ್ಕೆ ತಕ್ಕಂತೆ ಹೊಸ ಹಾಡುಗಳನ್ನು ಸಂಯೋಜಿಸಿ ತುಳು ಸಿನಿಮಾಕ್ಕೆ ಹೊಸ ನಾಂದಿ ಹಾಡಿದ್ದಾರೆ. ಗೂಗಲ್ ಫ್ಲೇಸ್ಟೋರ್‌ನಿಂದ ವಿ4 ಆಪ್ ಡೌನ್ ಲೋಡ್ ಮಾಡಿಕೊಂಡು ಸಿನಿಮಾ ನೋಡಬಹುದು ಎಂದು ವಿ4 ಸ್ಟುಡಿಯೋ ತಿಳಿಸಿದೆ.

***

ಈ ಸಿನಿಮಾ 2006ರಲ್ಲಿ ನಶೀಬಾಚೋ ಖೆಳ್ ಎಂಬುದಾಗಿ ಕೊಂಕಣಿಯಲ್ಲಿ ತೆರೆ ಕಂಡಿದೆ. ಕೊಂಕಣಿಯಲ್ಲಿ 2 ಲಕ್ಷ ಕೊಂಕಣಿಗರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಕೆನಡಾ, ಅಮೆರಿಕಾ, ಆಸ್ಟ್ರೇಲಿಯಾ, ಲಂಡನ್, ಇಸ್ರೇಲ್ ಮೊದಲಾದ ದೇಶಗಳಲ್ಲಿ ಸಿನಿಮಾ ತೆರೆ ಕಂಡಿದೆ. ಈಗ ತುಳುವಿಗೆ ಈ ಸಿನಿಮಾ ಡಬ್ ಆಗಿ ನಸೀಬ್ ಏರೆಗುಂಡು ಏರೆಗಿಜ್ಜಿ ಹೆಸರಿನಲ್ಲಿ ತೆರೆಕಾಣುತ್ತಿದೆ. ಹಾರಿ ಫೆರ್ನಾಂಡಿಸ್ ನಿರ್ದೇಶಿಸಿದ ಈ ಚಲನಚಿತ್ರವನ್ನು ಶಕ್ತಿನಗರದ ಕಲಾಂಗಣ, ಬಲ್ಮಠ, ಬೊಂದೇಲ್. ಉಡುಪಿ ಜಿಲ್ಲೆಯ ಬಾರ್ಕೂರ್, ಸಾಸ್ತಾನದಲ್ಲಿ ಚಿತ್ರೀಕರಿಸಲಾಗಿದೆ. ಉತ್ತಮ ಹಾಸ್ಯ ಮತ್ತು ಉತ್ತಮ ಕಥಾಹಂದರವನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ಎಲ್ಬೆನ್ ಮಸ್ಕರೇಸನ್, ಎಸ್ತೇರ್ ನೊರೊನ್ಹಾ, ರಂಜಿತ ಊವಿಸ್ ಸಾಸ್ತಾನ, ಪ್ರಿನ್ಸ್ ಜಾಕೋಬ್ ಗೋವಾ, ಸ್ಟೇನಿ ಅಲ್ಬಾಂಸ್, ಸುಜಾತ ಅಂದ್ರಾದೆ, ಗ್ಯಾಲ್ವಿನ್ ಫೆರ್ನಾಂಡಿಸ್ ಮೊದಲಾದರು ಈ ಚಿತ್ರದಲ್ಲಿ ನಟಿಸಿದ್ದಾರೆ.
– ಹೆನ್ರಿ ಡಿ’ಸಿಲ್ವ, ನಿರ್ಮಾಪಕರು

***

ವಿ4 ಸ್ಟೀಮ್‌ನ ಓಟಿಟಿ ಆರಂಭಗೊಂಡ ಬಳಿಕ ಈಗಾಗಲೇ 8 ಕನ್ನಡ ಸಿನಿಮಾಗಳನ್ನು ತುಳು ಭಾಷೆಗೆ ಡಬ್ಬಿಂಗ್ ಮಾಡಲಾಗಿದೆ. ಪಂಚತಂತ್ರ, ಪೆನ್ಸಿಲ್‌ಬಾಕ್ಸ್, ರುದ್ರಾಕ್ಷಿಪುರ, ಅಭಿಸಾರಿಕೆ, ರಂಗೋಲು, ನಮ್ ಗಣಿ ಬಿ.ಕಾಂ ಪಾಸ್, ಬೀರ್‌ಬಲ್. ಈ ಎಲ್ಲ ಚಿತ್ರಗಳು ಒಟಿಟಿಯಲ್ಲಿ ಹೆಸರು ಮಾಡಿದ ಚಿತ್ರಗಳು. ಇದನ್ನು ತುಳುವಿಗೆ ಡಬ್ ಮಾಡಲಾಗಿದೆ. ಅದಲ್ಲದೆ ಎಲ್.ಎಸ್. ಮೀಡಿಯಾ ಪ್ರೊಡಕ್ಷನ್‌ನಲ್ಲಿ ಮೂಡಿಬರಲಿರುವ ಐದು ಚಿತ್ರಗಳಲ್ಲಿ ಎರಡು ಕನ್ನಡ ಮತ್ತು ಎರಡು ತುಳು ಚಲನಚಿತ್ರ ನಿರ್ಮಾಣ ಹಂತದಲ್ಲಿವೆ. ಈಗಾಗಲೇ ಟು&ಮಿ ಚಿತ್ರ ವಿ4ಸ್ಟೀಮ್‌ನ ಓಟಿಟಿ ತೆರೆ ಕಂಡು ಯಶಸ್ಸನ್ನು ಕಂಡಿದೆ. ಈ ವರ್ಷದಲ್ಲಿ ಹನ್ನೆರಡಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗಲಿವೆ.

-ಲಕ್ಷ್ಮಣ್ ಕುಂದರ್, ವಿ4 ನ್ಯೂಸ್ ಆಡಳಿತ ನಿರ್ದೇಶಕರು

***

ಮೊಟ್ಟ ಮೊದಲ ಬಾರಿಗೆ ತುಳುವಿನಲ್ಲಿ ಕೊಂಕಣಿ ಚಿತ್ರವನ್ನು ಡಬ್ಬಿಂಗ್ ಮಾಡಲಾಗಿದೆ. ಚಿತ್ರದಲ್ಲಿ ಕಾಮಿಡಿ ಇರುವುದರಿಂದ ಸಿನಿ ಪ್ರೇಕ್ಷಕರು ಪ್ರೋತ್ಸಾಹಿಸುವುದು ಗ್ಯಾರಂಟಿ. ಉತ್ತಮ ಹ್ಯಾಸ ಹಾಗೂ ಉತ್ತಮ ಕಥಾ ಹಂದರವನ್ನು ಒಳಗೊಂಡಿರುವ ಈ ಸಿನಿಮಾ ಅತ್ಯುತ್ತಮವಾಗಿ ಮೂಡಿ ಬಂದಿದೆ.

-ವಿನೋದ್ ರಾಜ್ ಕೋಕಿಲ, ಸಂಗೀತ ನಿರ್ದೇಶಕ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here