Homeಮುಖಪುಟಹೊಸ ವರ್ಷಾಚರಣೆ; ಬೆಂಗಳೂರಿನಾದ್ಯಂತ ಸಂಚಾರ ಮಾರ್ಗದಲ್ಲಿ ಹಲವು ಬದಲಾವಣೆ

ಹೊಸ ವರ್ಷಾಚರಣೆ; ಬೆಂಗಳೂರಿನಾದ್ಯಂತ ಸಂಚಾರ ಮಾರ್ಗದಲ್ಲಿ ಹಲವು ಬದಲಾವಣೆ

- Advertisement -
- Advertisement -

ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗಿದ್ದು, ಇಂದು ರಾತ್ರಿ ನಗರದ ಅನೇಕ ಸ್ಥಳಗಳು ಅದ್ಧೂರಿ ಆಚರಣೆಗೆ ಸಜ್ಜಾಗಿವೆ. ಹೊಸ ವರ್ಷದ ರಾತ್ರಿಯಂದು ಕೆಲ ಪ್ರದೇಶಗಳಲ್ಲಿ ಹೆಚ್ಚಿನ ಜನರು ಸೇರುತ್ತಾರೆ. ಮುಖ್ಯವಾಗಿ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಮತ್ತು ಇಂದಿರಾನಗರದಂತಹ ಪ್ರದೇಶಗಳಲ್ಲಿನ ಸಂಭ್ರಮಾಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಬೆಂಗಳೂರು ಪೊಲೀಸರು ಸಜ್ಜಾಗಿದ್ದಾರೆ.

ನಗರದಾದ್ಯಂತ ಇರುವ ಪ್ರಮುಖ ಫ್ಲೈಓವರ್‌ಗಳನ್ನು ಭಾನುವಾರ ರಾತ್ರಿ 11 ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಮುಚ್ಚಲಾಗುತ್ತದೆ. ಹೆಣ್ಣೂರು ಮೇಲ್ಸೇತುವೆ, ಐಟಿಸಿ ಮೇಲ್ಸೇತುವೆ, ಬಾಣಸವಾಡಿ ಮುಖ್ಯರಸ್ತೆ ಮೇಲ್ಸೇತುವೆ, ಲಿಂಗರಾಜಪುರ ಮೇಲ್ಸೇತುವೆ, ಹೆಣ್ಣೂರು ಮುಖ್ಯರಸ್ತೆ ಮೇಲ್ಸೇತುವೆ, ದೊಮ್ಮಲೂರು ಮೇಲ್ಸೇತುವೆ, ನಾಗವಾರ ಫ್ಲೈಓವರ್, ಮೇಡಹಳ್ಳಿ ಫ್ಲೈಓವರ್, ಓಎಂ ರಸ್ತೆ ಮೇಲ್ಸೇತುವೆ, ದೇವರಬೀಸನಹಳ್ಳಿ ಮೇಲ್ಸೇತುವೆ, ಮಹದೇವಪುರ ಮೇಲ್ಸೇತುವೆ, ಮಹದೇವಪುರ ಮೇಲ್ಸೇತುವೆ, ಕೆಆರ್ ಮಾರ್ಕೆಟ್ ಮೇಲ್ಸೇತುವೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

ವೈಟ್‌ಫಿಲ್ಡ್‌ನಲ್ಲಿರುವ ಫೀನಿಕ್ಸ್ ಮಾಲಿಗೆ ಭೇಟಿ ನೀಡುವ ಜನರು ಕ್ಯಾಬ್‌ಗಳನ್ನು ಮೀಸಲಾದ ಪಿಕ್ ಅಪ್ ಮತ್ತು ಡ್ರಾಪ್ ಪಾಯಿಂಟ್‌ಗಳನ್ನು ಹೊರತುಪಡಿಸಿ ಬೇರೆಡೆ ನಿಲ್ಲಿಸುವುದಕ್ಕೆ ಅನುಮತಿ ಇಲ್ಲ ಎಂಬುದನ್ನು ಗಮನಿಸಬೇಕು. ಫೀನಿಕ್ಸ್ ಮಾಲ್‌ಗೆ ಬರುವವರಿಗೆ ಐಟಿಪಿಎಲ್ ಮುಖ್ಯರಸ್ತೆಯ ಬೆಸ್ಕಾಂ ಕಚೇರಿ ಬಳಿ ಡ್ರಾಪ್ ಪಾಯಿಂಟ್, ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣದ ಬಳಿ ಪಿಕ್ ಅಪ್ ಪಾಯಿಂಟ್. ಇಂದಿರಾನಗರಕ್ಕೆ ಬರುವವರಿಗೆ ಇಂದಿರಾನಗರ 100 ಅಡಿ ರಸ್ತೆಯಲ್ಲಿ 17ನೇ ಮುಖ್ಯರಸ್ತೆ ಜಂಕ್ಷನ್ ಬಳಿ ಡ್ರಾಪ್ ಪಾಯಿಂಟ್, ಇಂದಿರಾನಗರ 100 ಅಡಿ ರಸ್ತೆಯ ಬಿಎಂ ಶ್ರೀ ಜಂಕ್ಷನ್ ಬಳಿ ಪಿಕ್ ಅಪ್ ಪಾಯಿಂಟ್ ಗುರುತಿಸಲಾಗಿದೆ.

ಕೆಲ ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧ:

ಇಂದಿರಾನಗರ 100 ಅಡಿ ರಸ್ತೆ ಹಳೆ ಮದ್ರಾಸ್ ರಸ್ತೆ ಜಂಕ್ಷನ್‌ನಿಂದ ದೊಮ್ಮಲೂರು ಫ್ಲೈಓವರ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ. ಇಂದಿರಾನಗರ 12ನೇ ಮುಖ್ಯರಸ್ತೆ 80 ಅಡಿ ರಸ್ತೆಯಿಂದ ಇಂದಿರಾನಗರ ಡಬಲ್ ರೋಡ್ ಜಂಕ್ಷನ್ ವರೆಗೆ ರಸ್ತೆಯ ಎರಡೂ ಬದಿ. ಐಟಿಪಿಎಲ್ ಮುಖ್ಯರಸ್ತೆ ಬಿ.ನಾರಾಯಣಪುರ ಶೆಲ್ ಪೆಟ್ರೋಲ್ ಬಂಕ್ ನಿಂದ ಗರುಡಾಚಾರ್ಪಾಳ್ಯ ಡೆಕಾಥ್ಲಾನ್ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಇವುಗಳ ಹೊರತಾಗಿ ಹೊಸ ವರ್ಷದ ರಾತ್ರಿ ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಪ್ರದೇಶಗಳಿಗೆ ವಾಹನಗಳನ್ನು ನಿರ್ಬಂಧಿಸಲಾಗಿದೆ. ಬೆಂಗಳೂರು ಪೊಲೀಸರು ನಗರದ ಎಲ್ಲ ಪ್ರಮುಖ ಸ್ಥಳಗಳಲ್ಲಿ ನೈಟ್ ವಿಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾವುದೇ ರೀತಿಯ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಲು ಜನರಿಗೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ; ಲೈಂಗಿಕ ಕಿರುಕುಳಕ್ಕೆ ಪ್ರತಿರೋಧ; ದಲಿತ ಯುವತಿಯನ್ನು ಬಿಸಿ ಎಣ್ಣೆಗೆ ತಳ್ಳಿದ ದುರುಳರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...