Homeಮುಖಪುಟವಿಶ್ವಸಂಸ್ಥೆಯ ಸಭೆಯಲ್ಲಿ ನಿತ್ಯಾನಂದನ ''ಕೈಲಾಸ'' ದೇಶದ ಪ್ರತಿನಿಧಿ ಭಾಗಿ: ಭಾರತದ ವಿರುದ್ಧ ಆರೋಪ

ವಿಶ್ವಸಂಸ್ಥೆಯ ಸಭೆಯಲ್ಲಿ ನಿತ್ಯಾನಂದನ ”ಕೈಲಾಸ” ದೇಶದ ಪ್ರತಿನಿಧಿ ಭಾಗಿ: ಭಾರತದ ವಿರುದ್ಧ ಆರೋಪ

- Advertisement -
- Advertisement -

ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿ (CESCR) ಸಭೆಯಲ್ಲಿ “ಕೈಲಾಸ” ದೇಶದ “ಶಾಶ್ವತ ರಾಯಭಾರಿ”ಯಾಗಿ ವಿಜಯಪ್ರಿಯಾ ನಿತ್ಯಾನಂದ ಎಂಬ ಮಹಿಳೆ ಪ್ರತಿನಿಧಿಸಿದ್ದಾರೆ.

ಭಾರತದಲ್ಲಿ ಕೆಲದಿನಗಳ ಹಿಂದೆ ಸ್ವಯಂ-ಘೋಷಿತ ದೇವಮಾನವ ನಿತ್ಯಾನಂದ ಅತ್ಯಾಚಾರ ಪ್ರಕರಣದಲ್ಲಿ ಕುಖ್ಯಾತಿ ಗಳಿಸಿದ್ದನು. ಆತ ದೇಶಬಿಟ್ಟು ಹೋದ ಬಳಿಕ “ಕೈಲಾಸ” ಎನ್ನುವ ದೇಶವನ್ನು ಸ್ಥಾಪನೆ ಮಾಡಿಕೊಂಡಿದ್ದನು. ಇತ್ತಿಚೆಗೆ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಆ ದೇಶದ ಪ್ರತಿನಿಧಿಯೊಬ್ಬರು ಭಾಗವಹಿಸಿದ್ದರು. ಅವರು ”ನಿತ್ಯಾನಂದ, ಭಾರತದಿಂದ ಹಿಂಸೆಗೆ ಒಳಗಾಗಿದ್ದಾರೆ” ಎಂದು ಆರೋಪ ಮಾಡಿದ್ದಾರೆ.

ಸಭೆಯಲ್ಲಿ ಆ ಮಹಿಳೆ ತನ್ನ ಸರದಿ ಬಂದಾಗ, ”ಕೈಲಾಸ- ಹಿಂದೂಗಳಿಗೆ ಮೊದಲ ಸಾರ್ವಭೌಮ ದೇಶವಾಗಿದೆ. ಇದನ್ನು ನಿತ್ಯಾನಂದ ಪರಮಶಿವಂ ಅವರು ಸ್ಥಾಪಿಸಿದ್ದಾರೆ. ನಿತ್ಯಾನಂದ ಪರಮಶಿವಂ ಅವರು ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರು ಆಗಿದ್ದಾರೆ. ಪ್ರಬುದ್ಧ ಹಿಂದೂ ನಾಗರಿಕತೆ ಮತ್ತು ಆದಿ ಶೈವ ಸ್ಥಳೀಯ ಕೃಷಿ ಬುಡಕಟ್ಟು ಜನಾಂಗವನ್ನು ಒಳಗೊಂಡಂತೆ 10,000 ಹಿಂದೂ ಸಂಪ್ರದಾಯಗಳನ್ನು ಈ ದೇಶ ಒಳಗೊಂಡಿದೆ” ಎಂದು ಕೈಲಾಸ ದೇಶದ ಪರಿಚಯವನ್ನು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ’ರಿಸರ್ವ್ ಬ್ಯಾಂಕ್ ಆಫ್‌ ಕೈಲಾಸ’ದ ಕರೆನ್ಸಿ ಬಿಡುಗಡೆ ಮಾಡಿದ ನಿತ್ಯಾನಂದ!

ಈ ಕೈಲಾಸ ದೇಶವು ಈಕ್ವೆಡಾರ್‌ನ ಕರಾವಳಿಯಲ್ಲಿದೆ ಎಂದು ವರದಿಯಾಗಿದೆ. ಕೈಲಾಸ ತನ್ನದೇ ಆದ ಪಾಸ್‌ಪೋರ್ಟ್, ಧ್ವಜ ಮತ್ತು “ರಿಸರ್ವ್ ಬ್ಯಾಂಕ್ ಆಫ್ ಕೈಲಾಸ” ಎಂಬ ಬ್ಯಾಂಕ್ ಕೂಡ ಹೊಂದಿದೆ ಎಂದು ಹೇಳಲಾಗುತ್ತದೆ. ನಿತ್ಯಾನಂದ ಡಿಸೆಂಬರ್ 2020 ರಲ್ಲಿ ತಮ್ಮ ದೇಶಕ್ಕೆ ವಿಮಾನಗಳನ್ನು ಸಹ ಘೋಷಿಸಿದರು.

”ಕೈಲಾಸ” ಭೂಮಿಯ ಮೇಲಿನ ಶ್ರೇಷ್ಠ ಹಿಂದೂ ರಾಷ್ಟ್ರ. ”ತಮ್ಮದೇ ದೇಶಗಳಲ್ಲಿ ಹಿಂದೂ ಧರ್ಮವನ್ನು ಅಧಿಕೃತವಾಗಿ ಆಚರಿಸುವ ಹಕ್ಕನ್ನು ಕಳೆದುಕೊಂಡ ಹಿಂದೂಗಳಿಂದ ಸೃಷ್ಟಿಸಲ್ಪಟ್ಟ ಗಡಿಗಳಿಲ್ಲದ ರಾಷ್ಟ್ರ” ಎಂದು ಕೈಲಾಸ್‌ದ ವೆಬ್‌ಸೈಟ್‌ನಲ್ಲಿ ವಿವರಿಸಲಾಗಿದೆ.

ಈ ಕೈಲಾಸ ದೇಶದ ಸ್ಥಾಪಕ ನಿತ್ಯಾನಂದ, ಅತ್ಯಾಚಾರ, ಚಿತ್ರಹಿಂಸೆ, ಅಪಹರಣ, ಮತ್ತು ಮಕ್ಕಳ ಅಕ್ರಮ ಬಂಧನ (IPC) ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಅಷ್ಟೇ ಅಲ್ಲದೇ 400,000 ಡಾಲರ್ ವಂಚನೆ ಪ್ರಕರಣದಲ್ಲಿ ಆತನನ್ನು ಫ್ರೆಂಚ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. 2019ರಲ್ಲಿ ನಿತ್ಯಾನಂದ ಭಾರತದಿಂದ ಪಲಾಯನಗೈದಿದ್ದರು.

2020 ರ ಜನವರಿಯಲ್ಲಿ ವಿವಾದಾತ್ಮಕ ಸ್ವಯಂ-ಘೋಷಿತ ದೇವಮಾನವನ ಬಗ್ಗೆ ಮಾಹಿತಿ ಕೋರಿ ಇಂಟರ್ಪೋಲ್, ಬ್ಲೂ ಕಾರ್ನರ್ ನೋಟಿಸ್ ನೀಡಿತು. (ಅಪರಾಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಅದರ ಸದಸ್ಯ ರಾಷ್ಟ್ರಗಳಿಂದ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ಅಂತರಾಷ್ಟ್ರೀಯ ಪೊಲೀಸ್ ಸಹಕಾರ ಸಂಸ್ಥೆ ಬ್ಲೂ ಕಾರ್ನರ್ ನೋಟೀಸ್ ಅನ್ನು ನೀಡುತ್ತದೆ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...