Homeಮುಖಪುಟಅವಿಶ್ವಾಸ ನಿರ್ಣಯ: INDIA ಪ್ರಶ್ನೆಗಳಿಗೆ ಇಂದು ಉತ್ತರ ನೀಡಲಿದ್ದಾರೆ ಪ್ರಧಾನಿ ಮೋದಿ

ಅವಿಶ್ವಾಸ ನಿರ್ಣಯ: INDIA ಪ್ರಶ್ನೆಗಳಿಗೆ ಇಂದು ಉತ್ತರ ನೀಡಲಿದ್ದಾರೆ ಪ್ರಧಾನಿ ಮೋದಿ

- Advertisement -
- Advertisement -

ವಿರೋಧ ಪಕ್ಷಗಳ ಒಕ್ಕೂಟ INDIA ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಮಂಗಳವಾರದಿಂದ ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗಳು ಆರಂಭವಾಗಿವೆ. ಪ್ರಧಾನಿ ಮೋದಿ ಇಂದು ಉತ್ತರ ನೀಡಲಿದ್ದಾರೆ.

ಜುಲೈ 26ರಂದು ಮಣಿಪುರ ಹಿಂಸಾಚಾರದ ವಿಷಯದ ಬಗ್ಗೆ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದವು, ಅದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದ್ದರು. ಮಂಗಳವಾರದಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಮಸೂದೆಯ ಮೇಲಿನ ಚರ್ಚೆಯನ್ನು ಆರಂಭಿಸಿದರು. ಇದನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಒಪ್ಪಿಕೊಂಡಿದ್ದಾರೆ.

ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಉತ್ತರ ನೀಡಲು ಪ್ರಧಾನಿ ಮೋದಿ ಅವರು ಇಂದು ಸದನಕ್ಕೆ ಹಾಜರಾಗಿ, ನಿರ್ಣಯದ ಕುರಿತು ಮಾತನಾಡಲಿದ್ದಾರೆ ಎಂದು ಕೇಂದ್ರ ಸಚಿವರು ಕೆಳಮನೆಗೆ ತಿಳಿಸಿದ್ದಾರೆ.

ಎರಡನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿದ್ದಾರೆ. ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವ ಕುರಿತು 2018ರಲ್ಲಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು.

ರಾಹುಲ್ ಗಾಂಧಿ, ವಿವಿಧ ಪಕ್ಷಗಳ ಸಂಸದರು, ಮಣಿಪುರಕ್ಕೆ ಹೋದರು. ಕೇಂದ್ರ ಗೃಹ ಸಚಿವರು, ರಾಜ್ಯ ಗೃಹ ಸಚಿವರೂ ಅಲ್ಲಿಗೆ ಹೋಗಿದ್ದರು, ಆದರೆ ದೇಶದ ಪ್ರಧಾನಿಯಾಗಿರುವ ಮೋದಿ ಏಕೆ ಮಣಿಪುರಕ್ಕೆ ಹೋಗಲಿಲ್ಲ? ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಮಣಿಪುರದ ಬಗ್ಗೆ ಮಾತನಾಡಲು ಮೋದಿ ಅವರು 80 ದಿನಗಳನ್ನು ಏಕೆ ತೆಗೆದುಕೊಂಡರು? ಎನ್ನುವುದು ಪ್ರತಿಪಕ್ಷಗಳ ಎರಡನೇ ಪ್ರಶ್ನೆಯಾಗಿದೆ.

ಗುಜರಾತಿನಲ್ಲಿ ನೀವು ರಾಜಕೀಯ ಮಾಡಬೇಕಾದಾಗ ನೀವು ಎರಡು ಬಾರಿ ಸಿಎಂ ಬದಲಾಯಿಸಿದ್ದೀರಿ. ಉತ್ತರಾಖಂಡದಲ್ಲಿ ಚುನಾವಣೆ ನಡೆದಾಗ ಹಲವು ಬಾರಿ ಸಿಎಂ ಬದಲಾಯಿಸಿದ್ದೀರಿ. ತ್ರಿಪುರಾದಲ್ಲಿ ಚುನಾವಣೆ ಹತ್ತಿರವಾದಾಗ ಅಲ್ಲಿಯೂ ಸಿಎಂ ಬದಲಾಯಿಸಿದ್ದೀರಿ. ಮಣಿಪುರ ಸಿಎಂಗೆ ನೀವೇಕೆ ಆಶೀರ್ವಾದ ಮಾಡುತ್ತಿದ್ದೀರಿ? ಅವರನ್ನೇಕೆ ಸಿಎಂ ಸ್ಥಾನದಿಂದ ಕಿತ್ತುಹಾಕಿಲ್ಲ? ಎಂದು ಪ್ರತಿಪಕ್ಷಗಳು ಮೋದಿ ಅವರನ್ನು ಪ್ರಶ್ನಿಸಿವೆ.

ಇದನ್ನೂ ಓದಿ: ಮಣಿಪುರ ವಿಚಾರದಲ್ಲಿ ರಾಹುಲ್ ಹೃದಯದಿಂದ ಮಾತನಾಡಿದರೆ, ಶಾ ರಾಜಕೀಯವಾಗಿ ಮಾತನಾಡಿದ್ದಾರೆ: ಟಿಎಂಸಿ ಸಂಸದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read