Homeಮುಖಪುಟಲೋಕಸಭೆ ಚುನಾವಣೆ: 'ಮೋದಿ ಅಲೆ ಇಲ್ಲ, ಭ್ರಮೆಯಲ್ಲಿರಬೇಡಿ' ಎಂದ ಬಿಜೆಪಿ ಅಭ್ಯರ್ಥಿ

ಲೋಕಸಭೆ ಚುನಾವಣೆ: ‘ಮೋದಿ ಅಲೆ ಇಲ್ಲ, ಭ್ರಮೆಯಲ್ಲಿರಬೇಡಿ’ ಎಂದ ಬಿಜೆಪಿ ಅಭ್ಯರ್ಥಿ

- Advertisement -
- Advertisement -

ಲೋಕಸಭೆ ಚುನಾವಣೆ ವೇಳೆ ಯಾವುದೇ ಮೋದಿ ಅಲೆ ಇಲ್ಲ ಎಂದು ಪ್ರತಿಪಕ್ಷಗಳ ನಾಯಕರು ಹಲವು ಬಾರಿ ಹೇಳಿದ್ದರು, ಇದೀಗ ಅಮರಾವತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಅವರು ದೇಶದಲ್ಲಿ ‘ಮೋದಿ ಅಲೆ ಇಲ್ಲ, ಮೋದಿ ಅಲೆ ಇದೆ ಎಂಬ ಭ್ರಮೆಯಲ್ಲಿರಬೇಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳಿರುವ ವಿಡಿಯೋ ವೈರಲ್‌ ಆಗಿದೆ.

ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ತಮ್ಮ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಈಗ ಮೋದಿ ಅಲೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸಭೆಗೆ ಮಾಧ್ಯಮದವರಿಗೆ ಅವಕಾಶ ನೀಡಿರಲಿಲ್ಲ. ಆದರೆ ಆಕೆ ಹೇಳಿಕೆ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ನಾವು ಈ ಚುನಾವಣೆಯನ್ನು ಗ್ರಾಮ ಪಂಚಾಯಿತಿ ಚುನಾವಣೆಯಂತೆ ಎದುರಿಸಬೇಕಾಗುತ್ತದೆ. ಮಧ್ಯಾಹ್ನದ ವೇಳೆಗೆ ಎಲ್ಲ ಮತದಾರರನ್ನು ಬೂತ್‌ಗೆ ಕರೆತಂದು ಮತ ಹಾಕುವಂತೆ ಹೇಳಬೇಕು. ಮೋದಿ ಅಲೆ ಇದೆ ಎಂಬ ಭ್ರಮೆಯಲ್ಲಿ ಉಳಿಯಬೇಡಿ. ಕಳೆದ ಚುನಾವಣೆಯಲ್ಲಿ, ಮೋದಿ ಅಲೆಯ ನಡುವೆಯೂ, ನಾನು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೇನೆ ಎಂದು ನವನೀತ್ ರಾಣಾ ಅವರು ಹೇಳಿದ್ದಾರೆ.

ನವನೀತ್ ರಾಣಾ 2019ರಲ್ಲಿ ಎನ್‌ಸಿಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಅಮರಾವತಿಯಿಂದ ಕಣಕ್ಕಿಳಿದು ಗೆಲುವನ್ನು ಸಾಧಿಸಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ನವನೀತ್ ರಾಣಾ ಅವರ ಹೇಳಿಕೆ ವೈರಲ್‌ ಆಗುತ್ತಿದ್ದಂತೆ ಪ್ರತಿಪಕ್ಷಗಳಾದ ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಶಿವಸೇನೆ (ಉದ್ಧವ್‌ ಬಣ) ತಕ್ಷಣವೇ ಪ್ರತಿಕ್ರಿಯಿಸಿದ್ದು, ನವನೀತ್ ರಾಣಾ ಸತ್ಯವನ್ನು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಆಕೆಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎನ್‌ಸಿಪಿ ಮುಖ್ಯ ವಕ್ತಾರ ಮಹೇಶ್ ತಾಪಸೆ, ರಾಣಾ ಹೇಳಿದ್ದೆಲ್ಲವೂ ಸತ್ಯ, ಮೋದಿ ಅಲೆ ಇಲ್ಲ ಎಂದು ಬಿಜೆಪಿಗೆ ತಿಳಿದಿದೆ. ಪಕ್ಷವು ಒಬ್ಬರ ನಂತರ ಒಬ್ಬರಂತೆ ವಿರೋಧ ಪಕ್ಷದ ನಾಯಕರನ್ನು ಸೆಳೆಯುವಾಗ ಇದು ಬಹಿರಂಗವಾಗಿದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ನಾಯಕರನ್ನೂ ಅದು ಆಮದು ಮಾಡಿಕೊಂಡಿದೆ. ಬಿಜೆಪಿಯಲ್ಲಿ ಭಯದ ವಾತಾವರಣವಿದ್ದು, ಅವರು ಗ್ರಾಮ ಪಂಚಾಯಿತಿ ಚುನಾವಣೆಯಂತೆ ಚುನಾವಣೆ ಎದುರಿಸಲು ತಮ್ಮ ಕಾರ್ಯಕರ್ತರಲ್ಲಿ ಕೇಳಿಕೊಳ್ಳುತ್ತಿದ್ದಾರೆ ಎಂದು  ಹೇಳಿದ್ದಾರೆ.

ಶಿವಸೇನೆ (ಯುಬಿಟಿ) ವಕ್ತಾರ ಸಂಜಯ್ ರಾವುತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೋದಿ ಅಲೆಯನ್ನು ಮರೆತುಬಿಡಿ, ನರೇಂದ್ರ ಮೋದಿ ಅವರು ತಮ್ಮ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗುತ್ತದೆಯೇ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಐರ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿಯಿಂದ ವಿಪಕ್ಷಗಳ ಟೀಕೆ: ರಾಜತಾಂತ್ರಿಕ ಅಧಿಕಾರಿಯ ನಿಲುವಿಗೆ ವ್ಯಾಪಕ ವಿರೋಧ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...