Homeಕರ್ನಾಟಕಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

- Advertisement -
- Advertisement -

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ ವೇದಿಕೆಯ ಒಡನಾಡಿಗಳಾದ ನಾನು, ಪ್ರವೀಣ್ ಶೆಟ್ಟಿ, ವಿಕ್ಟರ್ ಡಿಸಿಲ್ವ, ಗುಲಾಬಿ ಬಿಳಿಮಲೆ, ಶಬೀರ್, ಡಾ.ವಾಸುದೇವ ಬೆಳ್ಳೆ ಮೋಹನ್ ಜೊತೆ ಒಂದು ಚಹಾ ಕುಡಿದು ಒಂದಷ್ಟು ಹರಟೋಣ ಎಂದು ಹೋದೆವು. ಅಲ್ಲಿ ನಾವೆಲ್ಲಾ ಒಂದಷ್ಟು ಹೊತ್ತು ಮಾತನಾಡಿ ಅಲ್ಲಿಂದ ಮಂಗಳೂರಿನ ಬಿಜೈಯಲ್ಲಿರುವ ವೇದಿಕೆಯ ಅಧ್ಯಕ್ಷರೂ ಆಗಿದ್ದ, ಪ್ರಸಿದ್ಧ ಲೇಖಕ, ಹಿರಿಯ ಚೇತನ ಸುರೇಶ್ ಭಟ್ ಬಾಕ್ರಬೈಲ್ ಅವರ ಮನೆಗೂ ಹೋಗಿ ಒಂದಷ್ಟು ಹೊತ್ತು ಇದ್ದು ಮಾತನಾಡಿಸಿಕೊಂಡು ಬಂದೆವು.

ನಮ್ಮ ಭೇಟಿಯ ಫೋಟೋವನ್ನು ನಾನು ಪಜೀರಿನ ಹೈದ ಎಂಬ ನನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದೆ. ಇದನ್ನು ನೋಡಿ ಮಾಜಿ ಆರೆಸ್ಸೆಸ್ಸೂ, ಹಾಲಿ ಕಾಂಗ್ರೆಸ್ಸೂ ಆಗಿರುವ ಸುಳ್ಯದ ಲಕ್ಷ್ಮೀಶ ಗಬ್ಲಡ್ಕ ಎಂಬವರಿಗೆ ಉರಿಯೆದ್ದಿದೆ. ಅವರು ಪ್ರಸ್ತುತ ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ ಸದಸ್ಯರೂ ಹೌದು. ಅವರು ನನ್ನ ಎಫ್.ಬಿ.ವಾಲ್‌ಗೆ ಬಂದು ಸುರೇಶ್ ಭಟ್ ಮತ್ತು ಗೌರಿಲಂಕೇಶರೇ ಜಿಲ್ಲೆಯಲ್ಲಿ ಕೋಮು ಬೆಂಕಿ ಹತ್ತಿಕೊಳ್ಳಲು ಕಾರಣ ಎಂದು ಕಾಮೆಂಟ್ ಮಾಡಿದರು. ಗೌರಿಯಕ್ಕ ಮತ್ತು ಭಟ್ರ ಅತ್ಯಂತ ಆಪ್ತ ಬಳಗದವನಾದ ನನಗೆ ಸಹಜವಾಗಿಯೇ ಸಿಟ್ಟು ಬಂದಿತ್ತು. ಆದರೂ ಅತ್ಯಂತ ಶಾಂತವಾಗಿಯೇ ಪ್ರತಿಕ್ರಿಯಿಸಿದ್ದೆ. ಆದರೆ ಲಕ್ಷ್ಮೀಶರು ತನ್ನ ಮೊಂಡು ವಾದವನ್ನು ಮುಂದುವರಿಸಿ ಪದೇ ಪದೇ ಸುಳ್ಳಾರೋಪ ಮಾಡಿದರು.

ಗೌರಿ ಲಂಕೇಶ್ ಮತ್ತು ಸುರೇಶ್ ಭಟ್ ಮೇಲೆ ಇಂತಹ ಸುಳ್ಳಾರೋಪ ಹೊರಿಸಿದ ಈ ವ್ಯಕ್ತಿ ನಾವು ಮಂಗಳೂರಿನ ಬೀದಿಯಲ್ಲಿ ನಿಂತು ಎಲ್ಲಾ ವಿಧದ ರಿಸ್ಕ್ ಮೈ ಮೇಲೆಳೆದುಕೊಂಡು ಸಂಘ ಪರಿವಾರದ ಕೋಮುವಾದದ ವಿರುದ್ಧ ಶರಂಪರ ಹೋರಾಡುತ್ತಿದ್ದ ಕಾಲದಲ್ಲಿ ಜಿಲ್ಲೆಯ ವಿವಿದೆಡೆ ಕೋಮು ಬೆಂಕಿಗೆ ಹೊತ್ತಿಸುವಂತಹ ಬೆಂಕಿ ಭಾಷಣ ಮಾಡುತ್ತಿದ್ದವರು. ಸುರೇಶ್ ಭಟ್ರ ಮೇಲಿನ ಲಕ್ಷ್ಮೀಶರ ಕೋಪಕ್ಕೆ ಕಾರಣ ಸುರೇಶ್ ಭಟ್ ಮತ್ತು ಲಕ್ಷ್ಮೀಶ ಇಬ್ಬರೂ ಬ್ರಾಹ್ಮಣ ಜಾತಿಯ ಹವ್ಯಕ ಪಂಗಡಕ್ಕೆ ಸೇರಿದವರು. ಹವ್ಯಕ ಪಂಗಡದ ಹೊಸನಗರ ರಾಮಚಂದ್ರಾಪುರ ಮಠದ ಸ್ವಾಮಿಯ ಅವ್ಯವಹಾರ, ಪುತ್ತೂರಿನ ಮಹಿಳೆಯೊಬ್ಬರಿಗೆ ನೀಡಿದ ಲೈಂಗಿಕ ಕಿರುಕುಳ ಇವುಗಳನ್ನು ವಿರೋಧಿಸಿ ಸುರೇಶ್ ಭಟ್ ನಿರಂತರವಾಗಿ ಬರೆದಿದ್ದರು. ತನ್ನ ಜಾತಿಯ ಸ್ವಾಮಿಯೊಬ್ಬನಿಗೆ ಸ್ವತಃ ಜಾತಿ ಬಾಂಧವರೇ ಆದ ಸುರೇಶ್ ಭಟ್ ಯಕ್ಕಾ ಮಕ್ಕಾ ಉಗಿದು ಬರೆದ ಸಿಟ್ಟು ಲಕ್ಷ್ಮೀಶರಿಗೆ ಈಗಲೂ ಇದೆ. ಆ ಕಾರಣವನ್ನೇ ಮುಂದಿಟ್ಟುಕೊಂಡು ಭಟ್ರನ್ನು ನಿಂದಿಸಲು ಈತ ನೆಪ ಕಂಡುಕೊಂಡಿದ್ದಾರೆ.

ಸುರೇಶ್ ಭಟ್ ಮತ್ತು ಗೌರಿಯಕ್ಕ ನಾಸ್ತಿಕರಾಗಿದ್ದರೂ, ಅವರು ಯಾವುದೇ ಧರ್ಮ ಜಾತಿಯನ್ನು ನಿಂದಿಸುವ ಕೆಲಸವನ್ನು ಯಾವತ್ತೂ ಮಾಡಿಲ್ಲ. ಜಾತಿಯ ಹೆಸರಿನ ಅಸಮಾನತೆ ಶೋಷಣೆಗಳ ವಿರುದ್ಧ ಜವಾಬ್ದಾರಿಯುತ ನಾಗರಿಕರಾಗಿ ಧ್ವನಿಯೆತ್ತಿದ್ದಾರಷ್ಟೆ. ಹಾಗೆ ನೋಡಿದರೆ ನಮ್ಮ ಕೋಮು ಸೌಹಾರ್ದ ವೇದಿಕೆಯಲ್ಲಿ ಆಸ್ತಿಕ ಹಿಂದೂಗಳೂ ಇದ್ದರು. ನನಗೆ ತಿಳಿದ ಪ್ರಕಾರ ಗೌರಿಯಕ್ಕನ ಕಚೇರಿಯ ಸಿಬ್ಬಂದಿಯೊಬ್ಬರು ಅಯ್ಯಪ್ಪ ವೃತ ಆಚರಿಸಿ ಮಾಲೆ ಧರಿಸಿ ಕಚೇರಿಗೆ ಬರುತ್ತಿದ್ದರು. ಗೌರಿಯಕ್ಕನಿಗೆ ವಿಶ್ವಾಸವಿರಲಿಲ್ಲವಾದರೂ, ಅವರ ವಿಶ್ವಾಸವನ್ನು ಗೌರವಿಸುತ್ತಿದ್ದರು. ಹಿಂದೂ ಹೆಸರಿಟ್ಟ ಮಾತ್ರಕ್ಕೆ ಆತ ಹಿಂದೂ ಧರ್ಮವನ್ನು ಫಾಲೋ ಮಾಡಲೇಬೇಕೆಂದಿದೆಯೇ..? ಮುಸ್ಲಿಮ್ ಹೆಸರಿಟ್ಟ ಮಾತ್ರಕ್ಕೆ ಆತ ಇಸ್ಲಾಮ್ ಧರ್ಮವನ್ನು ಫಾಲೋ ಮಾಡುತ್ತಾನೆನ್ನಲಾಗುತ್ತದೆಯೇ..? ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಂ ಹೆಸರಿರುವವರಲ್ಲಿ ನಾಸ್ತಿಕರ ಸಂಖ್ಯೆ ಕಡಿಮೆಯಿರಬಹುದು. ಆದರೆ ಧರ್ಮವನ್ನು ಫಾಲೋ ಮಾಡದವರು ಧಾರಾಳವಾಗಿದ್ದಾರೆ.

ಭಾರತದಂತಹ ಧರ್ಮ ನಿರಪೇಕ್ಷ ದೇಶದಲ್ಲಿ ಎಲ್ಲರಿಗೂ ಅವರವರ ಇಷ್ಟದಂತೆ ಬದುಕುವ ಹಕ್ಕಿದೆ.ಆ ಹಕ್ಕನ್ನು ಪ್ರಶ್ನಿಸುವುದು ಕೂಡಾ ಅಪರಾಧವಾಗುತ್ತದೆ. ಆದರೆ ಧರ್ಮ ಮತ್ತು ಜಾತಿಯ ಹೆಸರಲ್ಲಿ ನಡೆಯುವ ಅಮಾನವೀಯ ವಿಚಾರಗಳನ್ನು,_ತಾರತಮ್ಯಗಳನ್ನು, ಶೋಷಣೆಗಳನ್ನು ಪ್ರಶ್ನಿಸಲೇಬೇಕು..ಸ್ವತಃ ನಾನೇ ದೆಹಲಿಯ ಶಾಹಿ ಇಮಾಂ ಬುಖಾರಿಯ ಐಲುಗಳು ಮತ್ತು ಜಾಮಾ ಮಸೀದಿಯ ಆಸ್ತಿಗಳ ದುರ್ಬಳಕೆಗಳ ವಿರುದ್ಧ ಉಗಿದು ಬರೆದಿದ್ದನ್ನೂ ಗೌರಿಯಕ್ಕ ಪ್ರಕಟಿಸಿದ್ದರು. ಗೌರಿಯಕ್ಕ ರಾಜಕೀಯ ಮತ್ತು ಧಾರ್ಮಿಕ ಶೋಷಣೆಯ ಕಡು ವಿರೋಧಿಯಾಗಿದ್ದರು. ಅವರೂ ಈಗಿನ ಮಾರಿಕೊಂಡ ಮಾಧ್ಯಮಗಳಂತೆ ಪತ್ರಿಕೆ ನಡೆಸುತ್ತಿದ್ದರೆ, ಕೋಮುವಾದವನ್ನು ವಿರೋಧಿಸಿ ಬೀದಿಗಿಳಿಯದೇ ಎ‌.ಸಿ ರೂಮಲ್ಲಿ ಕೂತು ಬರೆಯುತ್ತಿದ್ದರೆ ಅವರು ಬೀದಿಯಲ್ಲಿ ಬಿದ್ದು ಕೊನೆಯುಸಿರೆಳೆಯಬೇಕಾಗಿ ಬರುತ್ತಿರಲಿಲ್ಲ.

2013-18ರ ಸಿದ್ಧರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದುದರಲ್ಲಿ ಗೌರಿ ಲಂಕೇಶ್ ಮತ್ತು ಕೋಮು ಸೌಹಾರ್ದ ವೇದಿಕೆಯ ಪ್ರಯತ್ನವೂ ಇತ್ತು. ನಾವು 2013ರ‌‌ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬೀದಿಗಿಳಿದು ದುಡಿದಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರಿಯಕ್ಕನಿಗೆ ಆಪ್ತರಿದ್ದರು. ಗೌರಿಯಕ್ಕ ಬಯಸುತ್ತಿದ್ದರೆ ಆ ದಿನಗಳಲ್ಲಿ ತನ್ನ ಆರ್ಥಿಕ ಸಂಕಷ್ಟಕ್ಕೆ ಪ್ರಭುತ್ವದಿಂದ ನೆರವು ಪಡೆಯಬಹುದಿತ್ತು. ಯಾವುದಾದರೂ ಆಯಕಟ್ಟಿನ ಅಧಿಕಾರದ ಹುದ್ದೆಯಲ್ಲಿ ಕೂರಬಹುದಿತ್ತು. ಗೌರಿಯಕ್ಕ ಸಮ ಸಮಾಜದ ನಿರ್ಮಾಣಕ್ಕಾಗಿ ಕೊನೆಯುಸಿರಿನವರೆಗೂ ಹೋರಾಡಿದರು. ಪತ್ರಿಕೆಯನ್ನು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವ ಅಸ್ತ್ರವಾಗಿ ಬಳಸಿದರು. ಇಂತಹ ಗೌರಿಯಕ್ಕ ಏನೆಂದು ಅವರ ಸಂಗಾತಿಗಳಾದ ನಮಗೆ ಈ ಬೆಂಕಿ ಭಾಷಣಕಾರರಿಂದ ಅರಿಯಬೇಕೇ..?

ಲಕ್ಷ್ಮೀಶ ಗಬ್ಲಡ್ಕರನ್ನು ಆರೆಸ್ಸೆಸ್ ಮತ್ತು ಬಿಜೆಪಿ ಬಳಸುತ್ತದೆಯೇ ಹೊರತು, ಲಾಭ ಮಾಡಿಕೊಳ್ಳುವ ಅವಕಾಶ ನೀಡುವುದಿಲ್ಲ ಎಂದರಿವಾದಾಗ ಕಾಂಗ್ರೆಸ್‌ಗೆ ಹಾರಿದ್ದಾರೆಯೇ ಹೊರತು, ಸಮ ಸಮಾಜದ ಆಶಯಕ್ಕಾಗಿಯೋ, ಸಂವಿಧಾನದ ರಕ್ಷಣೆಗಾಗಿಯೋ ಅವರು ನಿಷ್ಠೆ ಬದಲಾಯಿಸಿದ್ದಲ್ಲ. ಕಾಂಗ್ರೆಸ್‌ ಸೇರಿದ್ದರೂ ಗಬ್ಲಡ್ಕರ ಮನಸ್ಥಿತಿ ಬದಲಾಗಿದೆಯೆಂದು ನನಗನಿಸುವುದಿಲ್ಲ.

ಇನ್ನು ಸುರೇಶ್ ಭಟ್‌ರ ಜೊತೆ ಹತ್ತು ವರ್ಷಗಳ ಕಾಲ ಓರ್ವ ಕಿರಿಯ ಸಂಗಾತಿಯಾಗಿ ಕೆಲಸ ಮಾಡಿದವ ನಾನು. ಅವರ ಅಧ್ಯಕ್ಷತೆಯ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಸಮಿತಿಯಲ್ಲಿ ನಾಲ್ಕು ವರ್ಷಗಳ ಕಾಲ ಕಾರ್ಯದರ್ಶಿಯಾಗಿ ದುಡಿದವ ನಾನು. ಭಟ್ರು ಹೇಗೆಂದು ನಿನ್ನೆ ಮೊನ್ನೆವರೆಗೆ ದ್ವೇಷ ಭಾಷಣ ಮಾಡಿಕೊಂಡಿದ್ದ ಗಬ್ಲಡ್ಕರಿಂದ ನಾನು ಕಲಿಯಬೇಕೇ..? ಇದೇ ಗಬ್ಲಡ್ಕ ದ್ವೇಷ ಭಾಷಣ ಮಾಡುತ್ತಿದ್ದ ಕಾಲದಲ್ಲಿ ಅಂತಹದ್ದರ ದಾಖಲೀಕರಣ ಮಾಡ್ಕೊಂಡು ವರದಿ ತಯಾರಿಸುತ್ತಿದ್ದ ಹಿರಿ ಜೀವ ಸುರೇಶ್ ಭಟ್.

ಭಟ್ರು ಮೂಲತಃ ಓರ್ವ ಇಂಜಿನಿಯರ್ ದೇಶ ವಿದೇಶದ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ದುಡಿದು ನಿವೃತ್ತರಾದವರು. ಅವರಿಗೂ ಎಲ್ಲರಂತೆಯೇ ಆರಾಮವಾಗಿ ನಿವೃತ್ತ ಜೀವನ ಕಳೆಯಬಹುದಿತ್ತು.ಇಬ್ಬರು ಮಕ್ಕಳು ಒಳ್ಳೊಳೆಯ ಉದ್ಯೋಗದಲ್ಲಿದ್ದಾರೆ. ಆದರೆ ಭಟ್ರದ್ದು ಅನ್ಯಾಯಕ್ಕೆ ಕಣ್ಮುಚ್ಚುವ ಜಾಯಮಾನವಲ್ಲ. 2005ರ ಬಳಿಕವೇ ಭಟ್ರು ಲೇಖನಿ ಕೈಗೆತ್ತಿಕೊಂಡದ್ದು.ಅಲ್ಲಿಂದಾರಂಭಿಸಿದ ಭಟ್ರು 2020ರವರೆಗೆ ನಿರಂತರವಾಗಿ ಅನ್ಯಾಯದ ವಿರುದ್ಧ, ಅಕ್ರಮದ ವಿರುದ್ಧ, ಕೋಮುವಾದ, ಜಾತಿವಾದದ ವಿರುದ್ಧ ಬೀದಿಯಲ್ಲಿ ನಿಂತು ಹೋರಾಡಿದರು,ಬರೆದರು.. ಅವರು ವೈಯಕ್ತಿಕವಾಗಿ ನಾಸ್ತಿಕರಾದರೂ ಯಾರದೇ ವಿಶ್ವಾಸಗಳನ್ನು ಪ್ರಶ್ನಿಸಲಿಲ್ಲ, ಎಲ್ಲರನ್ನೂ ಗೌರವಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸಂಘರ್ಷಗಳ ಕುರಿತಂತೆ ಅಧ್ಯಯನ ಮಾಡಲು ದೇಶ ವಿದೇಶದ ಪತ್ರಕರ್ತರಿಗೆ ಸಿಗುವ ಅತ್ಯಂತ ನಂಬಿಕಸ್ಥ ಸಂಪನ್ಮೂಲ ಭಟ್ರೊಬ್ಬರೇ ಆಗಿದ್ದಾರೆ. ಅವರಲ್ಲಿರುವಷ್ಟು ದಾಖಲೆ ಇಡೀ ರಾಜ್ಯದಲ್ಲಿ ಇನ್ನೊಬ್ಬರ ಕೈಯಲ್ಲಿರಲಿಕ್ಕಿಲ್ಲ. ಭಟ್ರು ಆಧಾರವಿಲ್ಲದೇ ಒಂದೇ ಒಂದು ಮಾತು ಆಡುವುದಿಲ್ಲ, ಒಂದೇ ಒಂದು ಗೆರೆ ಬರೆಯುವುದಿಲ್ಲ. ಹತ್ತು ಹಲವು ಅನ್ಯಾಯಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು‌. ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ 2013ರಲ್ಲಿ ಸಂಘ ಪರಿವಾರದ ಹುಡುಗನೊಬ್ಬ ಸೆಗಣಿ ಎರಚಿದಾಗ ಭಟ್ರ ಜೊತೆಗಿದ್ದ ನಾನು, ಇಸ್ಮಾಯಿಲ್ ಕರ್ವೇಲ್ ಆ ಹುಡುಗನನ್ನು ಹಿಡಿದೆವು. ಅವನಿಗೆ ನಾವು ನಾಲ್ಕು ಬಾರಿಸಿದಾಗ ಭಟ್ರೇ ಸ್ವತಃ ಬಂದು ಅವನಿಗೆ ಹೊಡೆಯದಂತೆ ನಮ್ಮನ್ನು ತಡೆದಿದ್ದರು. ಸಂತನಂತೆ ಬದುಕುವ ಭಟ್ರಿಗೆ ಈಗ ಎಂಬತ್ತರ ಹರೆಯ. ಸದ್ಯ ಸ್ವಲ್ಪ ಆರೋಗ್ಯದ ಸಮಸ್ಯೆಯಿಂದ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಅವರ ಅಧ್ಯಯನಕ್ಕೇನೂ ಚ್ಯುತಿಯಾಗಲಿಲ್ಲ. ಮೊನ್ನೆ ಮೋಹನ್ ಜೊತೆ ಮಾತನಾಡುವಾಗಲೂ ಭಟ್ರ ಮಾತುಗಳು ನಾಡಿನ ನೆಮ್ಮದಿಯನ್ನೇ ಕನಸುತ್ತಿದ್ದವು.

ಗೌರಿ ಲಂಕೇಶ್ ಮತ್ತು ಭಟ್ರು ಆರೆಸ್ಸೆಸ್ಸಿನ ಕಡು ವಿರೋಧಿಗಳಾಗಿದ್ದರು. ಇವರಿಬ್ಬರೂ ಹಿಂದಿನಿಂದಲೂ ಹಿಂದೂ ಧರ್ಮ ಮತ್ತು ಹಿಂದೂತ್ವದ ನಡುವಿನ ಗೆರೆಯನ್ನು ಪ್ರತ್ಯೇಕಿಸುತ್ತಾ ಬಂದವರು. ಹಿಂದೂತ್ವ ಎನ್ನುವುದು ದ್ವೇಷ ಬಿತ್ತುವ ರಾಜಕೀಯ ಅಜೆಂಡಾ ಎಂದು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸುತ್ತಿದ್ದ ಗೌರಿಯಕ್ಕ ಮತ್ತು ಭಟ್ರು ಹಿಂದೂತ್ವವಾದಿಗಳಿಗೆ ನುಂಗಲಾರದ ಬಿಸಿ ತುಪ್ಪವೂ ಆಗಿದ್ದರು. ಹಿಂದೂತ್ವ ಸಿದ್ದಾಂತದ ಪ್ರಬಲ ಪ್ರತಿಪಾದಕರಾದ ಗಬ್ಲಡ್ಕ ಬದಲಿಸಿದ್ದು ಪಕ್ಷವನ್ನೇ ಹೊರತು, ಸಿದ್ಧಾಂತವನ್ನಲ್ಲ ಎನ್ನುವುದಕ್ಕೆ ಅವರು ನನ್ನ ಫೇಸ್‌ಬುಕ್ ಪೋಸ್ಟ್‌ಗೆ ಹಾಕಿದ ಕಾಮೆಂಟ್‌ಗಳೇ ಸಾಕ್ಷಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...

SIR | ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸರ್ಕಾರಿ ಸೌಲಭ್ಯ: ಸಿಎಂ

ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳು ಹಾಗೂ ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಕಡ್ಡಾಯವಾಗಿ...

SIR, ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು 23 ವಿಪಕ್ಷಗಳಿಂದ ಸಿಜೆಐಗೆ ಜಂಟಿ ಪತ್ರ

ಭಾರತೀಯ ಚುನಾವಣಾ ಆಯೋಗವು (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹಾಗೂ ಇತರ ಚುನಾವಣೆ ಸಂಬಂಧಿತ ವಿಷಯಗಳ ವಿರುದ್ಧ ಇಂಡಿಯಾ ಮೈತ್ರಿಕೂಟದ ಹೊರಗಿರುವ ದ್ರಾವಿಡ ಮುನ್ನೇತ್ರ ಕಳಗಂ...

SIR: ಮತದಾರರ ಅನುಕೂಲಕ್ಕಾಗಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರದ ಆದೇಶ

ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಕಾರ್ಯವು ಜೂನ್ 30ರಿಂದ (ಇಂದಿನಿಂದ) ಅಧಿಕೃತವಾಗಿ ಆರಂಭವಾಗಿದೆ. ಜುಲೈ 29ರವರೆಗೆ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ...

SIR: ಕೇಂದ್ರ ಸರ್ಕಾರದ SIRಗೆ ಕೌಂಟರ್‌, ಮಹತ್ವದ ಆದೇಶಗಳನ್ನು ಹೊರಡಿಸಿದ ಕರ್ನಾಟಕ ಸರ್ಕಾರ

ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದವು. ಸುಪ್ರೀಂ ಕೋರ್ಟ್‌ ಆ ಪ್ರಕ್ರಿಯೆಯನ್ನು ಮಾನ್ಯ ಮಾಡಿತ್ತು. ಕರ್ನಾಟಕದಲ್ಲಿ ನಾಳೆಯಿಂದ (ಜೂನ್.30)‌...

ರಾಮಮಂದಿರದ ದೇಣಿಗೆ ಕಳ್ಳತನ: ಆರೋಪಿಗಳ ಪರ ಯಾವುದೇ ವಕೀಲರು ವಾದಿಸುವಂತಿಲ್ಲ , ವಾದಿಸಿದರೆ ರೂ. 5ಲಕ್ಷ ದಂಡ

ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪರವಾಗಿ ಯಾವುದೇ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಸಂಘದ ಈ ತೀರ್ಮಾನವನ್ನು...