Homeಮುಖಪುಟಡಿಎಲ್‌ ಅವಧಿ ಮುಗಿಯುತ್ತಿದ್ದರೆ ಚಿಂತೆ ಬೇಡ: ಸೆಪ್ಟಂಬರ್‌ವರೆಗಿದೆ ವಿಸ್ತರಣೆ

ಡಿಎಲ್‌ ಅವಧಿ ಮುಗಿಯುತ್ತಿದ್ದರೆ ಚಿಂತೆ ಬೇಡ: ಸೆಪ್ಟಂಬರ್‌ವರೆಗಿದೆ ವಿಸ್ತರಣೆ

- Advertisement -
- Advertisement -

ಲಾಕ್‌ಡೌನ್ ಹಂತದಲ್ಲಿ ಅಧಿಕೃತ ದಾಖಲೆಗಳ ನವೀಕರಣ ಮತ್ತು ವಿಸ್ತರಣೆಯಲ್ಲಿನ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಪರವಾನಗಿ, (ಡಿಎಲ್) ನೋಂದಣಿ ಅಥವಾ ಫಿಟ್‌ನೆಸ್ ಪ್ರಮಾಣಪತ್ರದಂತಹ ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಸಿಂಧುತ್ವವನ್ನು ಸರ್ಕಾರ ಈ ವರ್ಷ ಸೆಪ್ಟೆಂಬರ್ ಅಂತ್ಯದವರೆಗೂ ವಿಸ್ತರಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಈ ಕುರಿತು ಅಧಿಕೃತ ಸಂವಹನ ನಡೆಸಿದೆ.

ಈ ಕುರಿತು ಸಚಿವ ನಿತಿನ್ ಗಡ್ಕರಿ ಅವರ ತಿಳಿಸಿದ್ದು, ಈ ವರ್ಷದ ಸೆಪ್ಟೆಂಬರ್ ವರೆಗೆ ಮೋಟಾರು ವಾಹನ ದಾಖಲೆಗಳ ಸಿಂಧುತ್ವ ದಿನಾಂಕಕ್ಕೆ ವಿಸ್ತರಣೆ ನೀಡುವ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ ಎಂದು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಮೊದಲು ಮಾರ್ಚ್‌ 30ರಂದು ಫಿಟ್‌ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ನೋಂದಣಿ ಅಥವಾ ಯಾವುದೇ ಮೋಟಾರು ವಾಹನ ಸಂಬಂಧಿತ ದಾಖಲೆಯ ಮಾನ್ಯತೆಯನ್ನು ಜೂನ್ 30 ರವರೆಗೆ ಮಾನ್ಯವಾಗಿ ಪರಿಗಣಿಸಲು ಸೂಚಿಸಲಾಗಿತ್ತು.

ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಲಾಕ್‌ಡೌನ್ ನಿಬಂಧನೆಗಳನ್ನು ಗಣನೀಯವಾಗಿ ಸರಾಗಗೊಳಿಸಲಾಗಿದ್ದರೂ, ನವೀಕರಣ ಮಾಡಿಸಲು ಜನರಿಗೆ ಹೆಚ್ಚಿನ ಸಮಯದ ಅಗತ್ಯವಿರುವುದರಿಂದ ವಿಸ್ತರಣೆ ಮಾಡಲಾಗಿದೆ.

ಕರ್ನಾಟಕದಲ್ಲಿ ಇನ್ನು ಮುಂದೆ ಎಲ್‌ಎಲ್‌ಆರ್‌ ಮತ್ತು ಡಿಎಲ್‌ಗಳಿಗಾಗಿ ಆರ್‌ಟಿಓ ಕಚೇರಿಗೆ ತೆರಳಬೇಕಾಗಿಲ್ಲ, ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಘೋಷಿಸಿದ್ದಾರೆ.

ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಆನ್‌ಲೈನ್‌ನಲ್ಲಿಯೇ ಎಲ್‌ಎಲ್‌ಆರ್‌ ಪರೀಕ್ಷೆ ಬರೆದು ಪಾಸಾದವರು ಎಲ್‌ಎಲ್‌ಆರ್‌ ಕಾಪಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರಾಯೋಗಿಕ ಪರೀಕ್ಷಾ ದಿನಾಂಕದಂದು ಮಾತ್ರ ಆರ್‌ಟಿಓ ಕಚೇರಿಗೆ ಬಂದರೆ ಸಾಕು. ಮನಗೆ ಡಿಎಲ್‌ ಕಳಿಸಿಕೊಡಲಾಗುವುದು. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...