Homeಮುಖಪುಟಸ್ವದೇಶಿ ಬಳಸುವಂತೆ ಘೋಷಿಸಿ ತಾನೇ ಟಿಕ್‌ಟಾಕ್‌‌ ಖಾತೆ ತೆರೆದ ಮೋದಿ ಸರ್ಕಾರ

ಸ್ವದೇಶಿ ಬಳಸುವಂತೆ ಘೋಷಿಸಿ ತಾನೇ ಟಿಕ್‌ಟಾಕ್‌‌ ಖಾತೆ ತೆರೆದ ಮೋದಿ ಸರ್ಕಾರ

- Advertisement -
- Advertisement -

ಭಾರತದಲ್ಲಿ ಬಿಜೆಪಿಯ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಚೀನಾ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವಂತೆ ಕರೆಕೊಡುತ್ತಲೇ ಇದ್ದಾರೆ. ಭಾರತ-ಚೀನಾ ಗಡಿಯಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ. ಆ ಕಾರಣಕ್ಕಾಗಿ ಈಗ ಮತ್ತೆ ಟಿಕ್‌ಟಾಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಚೀನೀ ಆಪ್ಗಳನ್ನು ಬಹಿಷ್ಕರಿಸುವಂತೆ ಅಭಿಯಾನವನ್ನೆ ನಡೆಸಲಾಗಿದೆ.

ಆದರೆ ಈಗ ಸ್ವತಃ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವೇ @mygovindia ಯೂಸರ್‌‌ ಐಡಿ ಇರುವ ಅಧಿಕೃತ ಟಿಕ್‌ಟಾಕ್‌ ಖಾತೆಯನ್ನು ತೆರೆದಿದ್ದು, ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದ ಬಿಜಿಪಿ ಅಭಿಮಾನಿಗಳು ಆಘಾತಕ್ಕಳಗಾಗಿದ್ದಾರೆ.

ಹೆಚ್ಚು ಸಾಮಾಜಿಕ ಜಾಲತಾಣ ಬಳಕೆದಾರರು ಟಿಕ್‌ಟಾಕ್‌ ಬಳಸುತ್ತಿರುವುದರಿಂದಾಗಿ, ಅದರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಕೊರೊನಾ ವೈರಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಟಿಕ್‌ಟಾಕ್‌ ಖಾತೆ ರಚಿಸಿದೆ ಎಂದು ಹೇಳಲಾಗಿದೆ.


ಓದಿ: ಕೇರಳ ಗರ್ಭಿಣಿ ಆನೆಯ ಸಾವಿನ ಹೆಸರಲ್ಲಿ ಬಲಪಂಥೀಯರು ಹರಡಿದ್ದ ಎರಡು ದೊಡ್ಡ ಸುಳ್ಳುಗಳು


ಟಿಕ್‌ಟಾಕ್‌ನ ಪ್ರೊಫೈಲ್‌ “Citizen engagement platform of Government of India” (ನಾಗರಿಕರನ್ನು ಸಂಪರ್ಕಿಸುವ ಭಾರತ ಸರ್ಕಾರ ಸಾಮಾಜಿಕ ವೇದಿಕೆ) ಎಂದು ಅದು ಹೇಳಿಕೊಂಡಿದೆ.

ಟಿಕ್‌ಟಾಕ್‌ನಲ್ಲಿನ @mygovindia ಖಾತೆಯು ಸುಮಾರು 909.1 ಸಾವಿರ ಅನುಯಾಯಿಗಳನ್ನು ಹೊಂದಿದ್ದು, 6.5 ಮಿಲಿಯನ್ ಲೈಕ್‌ಗಳನ್ನು ಪಡೆದಿದೆ. ಅಲ್ಲದೆ ಅದು ಬೇರೆ ಯಾವುದೇ ಇತರ ಖಾತೆಗಳನ್ನು ಫಾಲೋ ಮಾಡುತ್ತಿಲ್ಲ. ಇಲ್ಲಿಯವರೆಗೂ ಆ ಖಾತೆಯಲ್ಲಿ ಯೋಗ, ಕೊರೊನಾ ಸೋಂಕು ಕುರಿತ ಜಾಗೃತಿ ಹಾಗೂ ಸರ್ಕಾರದ ಸಾಧನೆಗಳನ್ನು ಒಳಗೊಂಡ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲಾಗಿದೆ.

@mygovindia ಟಿಕ್‌ಟಾಕ್‌ ಖಾತೆಯನ್ನು ಪರಿಶೀಲಿಸಿ, ಬಳಕೆದಾರರ ಹೆಸರಿನೊಂದಿಗೆ ನೀಲಿ ಟಿಕ್‌ ಅನ್ನು ಟಿಕ್‌ಟಾಕ್‌ ನೀಡಿದೆ.

ಸರ್ಕಾರವು ಭಾರತೀಯರಿಗೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರಾರಂಭಿಸಿ ಎಂದು ‘ಆತ್ಮಾ ನಿರ್ಭರ್’ ಆಗಲು ಕರೆಕೊಟ್ಟಿರುವ ಸಂದರ್ಭದಲ್ಲಿ ಈ ಸುದ್ದಿ ವಿಶೇಷವಾಗಿ ಜನರನ್ನು ಆಘಾತಕ್ಕೀಡು ಮಾಡಿದೆ.

ಅಲ್ಲದೆ, ಚೀನಾದ ಟಿಕ್‌ಟಾಕ್‌ ಬದಲಾಗಿ, ಭಾರತದ ಮಿತ್ರೋನ್‌ ಆಪ್‌ ಬಳಸುವಂತೆ ಕರೆಕೊಡಲಾಗಿತ್ತು. ಮಿತ್ರೋನ್‌ ಅಪ್ಲಿಕೇಷನ್‌ ಕೂಡ ಹೆಚ್ಚು ಡೌನ್‌ಲೋಡ್‌ ಆಗಿತ್ತು. ಆದರೆ, ಮಿತ್ರೋನ್‌ ಅಪ್ಲಿಕೇಷನ್ ಅನ್ನು ಪಾಕಿಸ್ಥಾನದ ಟಿಕ್‌ಟಿಕ್‌ ಆಪ್‌ನ ರೂಪಾಂತರವಾಗಿದ್ದು, ಅದೂ ಕೂಡ ಸ್ವದೇಶಿ ಅಲ್ಲ ಎಂದು ಫ್ಯಾಕ್‌ಚೆಕ್‌ ಹಾಗೂ ವಿವಿಧ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಅನೇಕ ಬಳಕೆದಾರರು ಸರ್ಕಾರದ ಬೂಟಾಟಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಟಿಕ್‌ಟಾಕ್ ಖಾತೆಯನ್ನು ಅಳಿಸಲು ಟ್ವಿಟರ್‌ನಲ್ಲಿ ಒತ್ತಾಯಿಸಿದ್ದಾರೆ. ಜೊತೆಗೆ ಟ್ವಿಟ್ಟರಿನಲ್ಲಿ ಹಲವಾರು ನೆಟ್ಟಿಗರು ಕೇಂದ್ರ ಸರ್ಕಾರವನ್ನು ವ್ಯಂಗ್ಯವಾಡಿದ್ದಾರೆ.


ಓದಿ: ಮೋದಿ ಆತ್ಮನಿರ್ಭರತೆ V/S ಸ್ವದೇಶಿ, ಸ್ವಾವಲಂಬನೆ, ಸ್ವಾಭಿಮಾನ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ-2024: ಕುಗ್ಗಿದ ಮೋದಿ ವರ್ಚಸ್ಸು; ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವಲೋಕನ…

0
2014 ಮತ್ತು 2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 2024ರಲ್ಲಿ ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಈ ಬಾರಿ ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ, ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ, ಜನರಲ್ಲಿ ಮೋದಿ...