Homeಚಳವಳಿ#NotFairModiJi ಟ್ವಿಟ್ಟರ್‌ನಲ್ಲಿ ಟ್ರೆಂಡ್: ’ಇದು ಸರಿಯಲ್ಲ ಮೋದಿಜಿ’ ಎಂದ ನೆಟ್ಟಿಗರು...

#NotFairModiJi ಟ್ವಿಟ್ಟರ್‌ನಲ್ಲಿ ಟ್ರೆಂಡ್: ’ಇದು ಸರಿಯಲ್ಲ ಮೋದಿಜಿ’ ಎಂದ ನೆಟ್ಟಿಗರು…

- Advertisement -
- Advertisement -

ಪ್ರವಾಹ ಪೀಡಿತ ರಾಜ್ಯಗಳಿಗೆ ಕೇಂದ್ರದಿಂದ ಪರಿಹಾರ ಹಣ ನೀಡಿಲ್ಲ. ಪಿಎಂಸಿ ಬ್ಯಾಂಕಿನಿಂದ ಅನ್ಯಾಯ.. ಕಾಶ್ಮೀರದಲ್ಲಿ ಕರ್ಫ್ಯೂ ಮುಂದುವರೆದಿದೆ. ಆದರೆ ಪ್ರಧಾನಿ ಮೋದಿ ಈ ವಿಚಾರಗಳಿಗೆ ಏನು ಮಾಡುತ್ತಿಲ್ಲ ಎಂದು ಆರೋಪಿಸಿ ’ಇದು ಸರಿಯಲ್ಲ ಮೋದಿಜಿ’ ಎಂದು ನೆಟ್ಟಿಗರು ಗುಡುಗಿದ್ದಾರೆ.

#NotFairModiJi ಟ್ವಿಟ್ಟರ್‌ನಲ್ಲಿ ಟ್ರೆಂಡ್ ಮಾಡುವ ಮೂಲಕ ಹೊಸ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಇದು ಭಾರತದಲ್ಲೇ ಟ್ರೆಂಡ್ ಆಗಿದ್ದು ಸಾಕಷ್ಟು ಜನ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಮೋದಿ ಜಿ ರಾಷ್ಟ್ರದ ದುಃಖವನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಫ್ಯಾಸಿಸ್ಟ್ ಸರ್ಕಾರವು “ಭಾರತದಲ್ಲಿ ಎಲ್ಲವೂ ಒಳ್ಳೆಯದು” ಎಂದು ಹೇಳಿದಾಗ ಅವರ ಮಾತುಗಳನ್ನು ಮರುಪರಿಶೀಲಿಸಬೇಕಿದೆ. ಮೋದಿಯವರ ಅಜಾಗರೂಕ ನಿರ್ಧಾರಗಳಿಂದಾಗಿ ಇಡೀ ರಾಷ್ಟ್ರವು ಅಘೋಷಿತ ತುರ್ತು ಪರಿಸ್ಥಿತಿಯಿಂದ ಬಳಲುತ್ತಿದೆ. ಇನ್ನೂ ತಡವಾಗುವ ಮುನ್ನ ಎಚ್ಚರಗೊಳ್ಳೋಣ ಎಂದು ಕುಶಾಗ್ರ ಸಕ್ಸೇನಾರವರು ಟ್ವೀಟ್ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಗಳ ಪ್ರಚಾರಕ್ಕಾಗಿ 17 ಬಾರೀ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ.
ಲೋಕಸಭಾ ಚುನಾವಣೆಗಳಲ್ಲಿ 14 ಬಾರೀ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ.

ಆದರೆ ಪ್ರವಾಹ ಉಂಟಾದಾಗ ಜನರನ್ನು ನೋಡಲು ಸಮಯ ಮತ್ತು ಹಣವಿಲ್ಲ.

ಹೇಡಿ 25 ಸಂಸದರು ಮತ್ತು 105 ಶಾಸಕರು ಮೌನವಾಗಿದ್ದಾರೆ.

ಮೋದಿ ಹೆಸರಿನಲ್ಲಿ ಮತ ಚಲಾಯಿಸಿದ ಭಕ್ತರಿಗೆ ರಾಷ್ಟ್ರೀಯ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟಲಾಗಿದೆ

ಸ್ವಂತ ಸಮಾಧಿಯನ್ನು ಅಗೆಯುವುದು ಭಕ್ತರಿಂದ ಕಲಿಯಬೇಕು ಎಂದು ಹೇಮಂತ್ ಕೃಷ್ಣೇಗೌಡ ಟ್ವೀಟ್ ಮಾಡಿದ್ದಾರೆ.

ನವರಾತ್ರಿಯ ಐದನೇ ದಿ‌‌ನ‌ ಇಂದು. ಕಳೆದ ಬಾರಿ ಮೋದಿ ಪ್ರಧಾನಿಯಾಗಬೇಕೆಂದು ನಾವೆಲ್ಲರೂ ಒಂಭತ್ತು ದಿನಗಳ ಕಾಲ ಉಪವಾಸ ಮಾಡಿದ್ದೆವು. ಈ ಬಾರಿ ವೃಷಭಾವತಿ ಸ್ವಚ್ಛವಾಗಲೆಂದು ನಾವು ಉಪವಾಸವಿದ್ದೇವೆ ಎಂದು ಚಕ್ರವರ್ತಿ ಸೂಲಿಬೆಲೆ ಬರೆಯುವ ಮೂಲಕ ಪರೋಕ್ಷವಾಗಿ ಮೋದಿ ವಿರುದ್ಧದ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಪ್ರೀತಿಯ ನರೇಂದ್ರ ಮೋದಿಜಿ,
ಕರ್ನಾಟಕದ ಜನರ ಬಗ್ಗೆ ದುರಹಂಕಾರಿ ಹೇಳಿಕೆ ನೀಡಿದ ಡಿ.ವಿ.ಸದಾನಂದಗೌಡರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಅಲ್ಲಿ ಭಾರೀ ಪ್ರವಾಹದ ನಂತರ ಲಕ್ಷಾಂತರ ಜನರು ಬಳಲುತ್ತಿದ್ದಾರೆ. ನಾವು ನೆರವು ಕೇಳಿದ್ದೇವೆ ಅಷ್ಟೇ. ನಾವು ಯಾರ ಆಸ್ತಿಯನ್ನು ಕೇಳುತ್ತಿಲ್ಲ ಎಂದು ಶ್ವೇತಾ ಡಿ.ಜಿಯವರು ಕಿಡಿಕಾರಿದ್ದಾರೆ.

ರೈತರು ಕಾರ್ಮಿಕರ ಕಷ್ಟದ ಕುರಿತು ಅಮಿತ್ ಪಾಂಡೆಯವರು ವಿಡಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಸರ್ಕಾರವನ್ನು ಸ್ತುತಿಸಿದರೆ ನೀವು ರಾಷ್ಟ್ರೀಯವಾದಿಗಳಾಗುತ್ತೀರಿ. ಸರ್ಕಾರವನ್ನು ಪ್ರಶ್ನಿಸಿದರೆ (ಅಥವಾ ಪ್ರವಾಹ ಪರಿಹಾರಕ್ಕಾಗಿ ಸಹ ಕೇಳಿ) ನಿಮ್ಮನ್ನು ರಾಷ್ಟ್ರ ವಿರೋಧಿ ಮತ್ತು ದೇಶ್ರೋಹಿ ಎಂದು ಕರೆಯಲಾಗುತ್ತದೆ. ಇದು ಪ್ರಸ್ತುತ ಸನ್ನಿವೇಶದ ಕಹಿ ಸತ್ಯ. ಎಂದು ಶೌರ್ಯ ಡಿ ಜೋಷಿ ಬೇಸರ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಯ್‌ ಬರೇಲಿ, ಅಮೇಥಿ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ: ರಾಹುಲ್‌ ಗಾಂಧಿ, ಕಿಶೋರಿ ಲಾಲ್‌...

0
ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದ ರಾಯ್‌ ಬರೇಲಿ ಕ್ಷೇತ್ರದಿಂದ ಮತ್ತು ಅಮೇಥಿ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದ್ದು, ಉತ್ತರಪ್ರದೇಶದ ರಾಯ್‌...