Homeಚಳವಳಿನುಡಿನಮನ: ಪಟ್ಟಾಭಿಯವರದು ನ್ಯಾಯಕ್ಕಾಗಿ ನಡೆಸಿದ ರಾಜಿರಹಿತ ಹೋರಾಟ

ನುಡಿನಮನ: ಪಟ್ಟಾಭಿಯವರದು ನ್ಯಾಯಕ್ಕಾಗಿ ನಡೆಸಿದ ರಾಜಿರಹಿತ ಹೋರಾಟ

ಅವರದು ನ್ಯಾಯಕ್ಕಾಗಿ ನಡೆಸಿದ ರಾಜಿರಹಿತ ಹೋರಾಟ. ಅವರು ಹೆಸರಿಗಾಗಿ, ದುಡ್ಡಿಗಾಗಿ ಆಸೆ ಪಟ್ಟವರಲ್ಲ. ನನ್ನ ನೆಚ್ಚಿನ ಗೆಳೆಯನ ಈ ಸ್ವಭಾವದ ಬಗ್ಗೆ ನನಗೆ ಹೆಮ್ಮೆ ಇದೆ.

- Advertisement -
- Advertisement -

1-1-2023ರಂದು ಪಟ್ಟಾಭಿರಾಮ ಸೋಮಯಾಜಿ ನಮ್ಮೆಲ್ಲರನ್ನು ಅಗಲಿ ಕಾಲವಾಗಿದ್ದಾರೆ. ನೆಚ್ಚಿನ ಗೆಳೆಯನಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ.

ಹೊಸೂರು ಪಟ್ಟಾಭಿರಾಮ ಸೋಮಯಾಜಿ ನನ್ನ ದೀರ್ಘಕಾಲದ ಸ್ನೇಹಿತ. 1978ರಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಅವರು ಇಂಗ್ಲಿಷ್ ಸಾಹಿತ್ಯದ ಬಿ.ಎ. ವಿದ್ಯಾರ್ಥಿ. ನಾನು ಬಿ.ಕಾಂ.ವಿದ್ಯಾರ್ಥಿ. ನಾನು ಕಾಮರ್ಸ್ ಕಲಿಯುತ್ತಿದ್ದರೂ ನನ್ನ ನಿಜವಾದ ಆಸಕ್ತಿ ಇದ್ದದ್ದು ಸಾಹಿತ್ಯದಲ್ಲಿ. ಕಾಲೇಜಿನ ಭಿತ್ತಿ ಪತ್ರಿಕೆಗೆ ನಾವಿಬ್ಬರೂ ಬರೆಯುತ್ತಿದ್ದೆವು. ಹಾಗಾಗಿ ಸಮಾನ ಆಸಕ್ತರಾಗಿದ್ದ ನಾವು ಗೆಳೆಯರಾದೆವು.

ಉಡುಪಿಯ ಸಗ್ರಿ ಗುಡ್ಡೆಯಲ್ಲಿರುವ ಆ ಕಾಲೇಜಿನ ಹತ್ತಿರವೇ ನನ್ನ ಮನೆ ಇತ್ತು. ಕುಂದಾಪುರದ ನೀಲಾವರದ ಹತ್ತಿರದ ಹೊಸೂರು ಎನ್ನುವ ಹಳ್ಳಿಯ ಪಟ್ಟಾಭಿ, ಉಡುಪಿಯ ಕುಂಜಿಬೆಟ್ಟು ಎನ್ನುವಲ್ಲಿ ಸಣ್ಣ ಬಾಡಿಗೆ ಮನೆಯ ಮಹಡಿಯಲ್ಲಿ ಸ್ವಂತ ಅಡಿಗೆ ಮಾಡಿಕೊಂಡು ವಾಸಿಸುತ್ತಿದ್ದರು. ನಾವಿಬ್ಬರೂ ಪರಸ್ಪರರ ಮನೆಗೆ ಹೋಗಿ ಸಾಹಿತ್ಯದ ಬಗ್ಗೆ ತುಂಬಾ ಚರ್ಚಿಸುತ್ತಿದ್ದೆವು. ಕಾಲೇಜಿನ ಸುತ್ತಲೂ ಇರುವ ಮಾವಿನ ಮರಗಳ ಕೆಳಗೆ ಕೂತು ಕನ್ನಡ ಸಾಹಿತ್ಯದ ಗಿರೀಶ್ ಕಾರ್ನಾಡ್, ಅನಂತಮೂರ್ತಿ, ಶಿವರಾಮ ಕಾರಂತರ ಬರಹಗಳ ಬಗ್ಗೆ ಮತ್ತು ಇಂಗ್ಲಿಷ್ ಸಾಹಿತ್ಯದ Murder in the Cathedral, The Outsider, Dostovsky ಬರಹಗಳ ಬಗ್ಗೆ ಆಗ ಚಾಲ್ತಿಯಲ್ಲಿದ್ದ ನವ್ಯ ಸಾಹಿತ್ಯದ ಬಗ್ಗೆ ತುಂಬಾ ಚರ್ಚಿಸುತ್ತಿದ್ದೆವು.

ಪಟ್ಟಾಭಿಯ ಜೊತೆ ಕಳೆದ ಆ ಮೂರು ವರ್ಷ ನನ್ನ ಜೀವನದ ಅರ್ಥಪೂರ್ಣ ವರ್ಷಗಳು!!! ಅವರು ನನಗೆ ಇಂಗ್ಲಿಷ್ ಸಾಹಿತ್ಯದ ಬಗ್ಗೆ ತುಂಬಾ ಒಳನೋಟ ನೀಡಿದ್ದರಿಂದ ಮುಂದೆ ನಾನು ಇಂಗ್ಲಿಷ್ ಸಾಹಿತ್ಯದಲ್ಲೇ ಎಂ.ಎ. ಮಾಡಲು ಪ್ರೇರಣೆ ಸಿಕ್ಕಿತು.

ಕಾಲೇಜಿನ ಭಿತ್ತಿ ಪತ್ರಿಕೆ Sagri centinal ಮತ್ತು ವಾರ್ಷಿಕ ಸಂಚಿಕೆಗಳಲ್ಲಿ ಅವರ ಪ್ರಬುದ್ಧ ಲೇಖನಗಳು ಪ್ರಕಟವಾಗುತ್ತಿದ್ದವು. ಇಡೀ ಕಾಲೇಜಿನಲ್ಲಿ ಅವರು ಒಳ್ಳೆಯ ಬರಹಗಾರ ಎಂದು ಗುರುತಿಸಲ್ಪಟ್ಟಿದ್ದರು. ಕಾಲೇಜಿನ ಪ್ರಾಂಶುಪಾಲ ದಿವಂಗತ ಪ್ರೊ. ಕು.ಶಿ. ಹರಿದಾಸ ಭಟ್, ಪ್ರಾಧ್ಯಾಪಕರಾದ ಕೃಷ್ಣಪ್ಪ, ಎನ್.ಟಿ. ಭಟ್, ರಾಮ ಭಟ್, ಶ್ರೀನಿವಾಸ ಭಟ್ ಮುಂತಾದವರ ಮೆಚ್ಚಿನ ವಿದ್ಯಾರ್ಥಿ ಇವರಾಗಿದ್ದರು. ಮುಂದೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಬಿ.ಎ. ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದರು.

ಆನಂತರ ಅವರು ಮೈಸೂರಿಗೆ ಹೋಗಿ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮಾಡಿದರು. ಅಲ್ಲಿ ಅವರು ಡಾ.ಯು.ಆರ್. ಅನಂತಮೂರ್ತಿಯವರ ಅಚ್ಚುಮೆಚ್ಚಿನ ವಿದ್ಯಾರ್ಥಿ ಆದರು. ಆ ಸಮಯದಲ್ಲಿ ಅನಂತಮೂರ್ತಿಯವರು ನಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಆಗ ನಮ್ಮ ಕನ್ನಡ ಪ್ರಾಧ್ಯಾಪಕ ಶಿವಸ್ವಾಮಿಯವರು ತಮ್ಮ ಹಳೇ ವಿದ್ಯಾರ್ಥಿ ಪಟ್ಟಾಭಿ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ ಅನಂತಮೂರ್ತಿಯವರು He is one of my best students ಎಂದು ಹೇಳಿದ್ದರು!!!

ಮೈಸೂರಿನಲ್ಲಿ ಪಟ್ಟಾಭಿ ಬೌದ್ಧಿಕವಾಗಿ ತುಂಬಾ ಬೆಳೆದರು. ಮಹಾ ನಿಷ್ಠುರವಾದಿ ದಿವಂಗತ ಪ್ರೊಫೆಸರ್ ಬಿ. ದಾಮೋದರ ರಾವ್ ಕೂಡಾ ಅವರ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸಿದರು. ಅನಂತಮೂರ್ತಿಯವರಂತೂ ಇವರನ್ನು ತಮ್ಮ ಅಂತರಂಗದ ಶಿಷ್ಯನನ್ನಾಗಿ ಸ್ವೀಕರಿಸಿ, ತನ್ನ ಮಗನಂತೆಯೇ ನೋಡಿಕೊಂಡರು. ಇವರು ಅವರ ಮನೆ ‘ಅಭಯ’ಕ್ಕೆ ಯಾವಾಗಲೂ ಹೋಗುತ್ತಿದ್ದರು.

ನಾನು ಆಗ ಬೆಂಗಳೂರಿನಲ್ಲಿ ಸಿ.ಎ. ಮಾಡುತ್ತಿದ್ದೆ. ನನಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಪಟ್ಟಾಭಿಯ ಬೆಂಬಲದಿಂದ ನಾನು ಸಿ.ಎ ಅರ್ಧಕ್ಕೆ ಬಿಟ್ಟು ಮೈಸೂರಿಗೆ ಹೋಗಿ, ಡಿಪ್ಲೊಮ ಇನ್ ಇಂಗ್ಲಿಷ್‌ಗೆ ಸೇರಿದೆ. ಆಗ ನಾನು ವಾಸಿಸಲು ತೊಡಗಿದ್ದು ಪಟ್ಟಾಭಿಯ ಪುಟ್ಟ ಬಾಡಿಗೆ ರೂಮ್‌ನಲ್ಲಿ. ಅವರ ಸಹಾಯದಿಂದಲೇ ನಾನು ಹಾಲೆಂಡ್‌ನ ಯಾನ್ ಬ್ರೋವರ್ ಜೊತೆ ದುಭಾಷಿಯಾಗಿ ಕೆಲಸಕ್ಕೆ ಸೇರಿ… ಮುಂದೆ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮಾಡಿ… ಲೆಕ್ಚರರ್ ಆಗಿ… ಅದೊಂದು ದೊಡ್ಡ ಕಥೆ. ಹಾಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಪಟ್ಟಾಭಿಗೆ ನಾನು ಚಿರ ಋಣಿ!!!

ರೂಮಿನಲ್ಲಿ ಒಟ್ಟಿಗೆ ಇದ್ದಾಗ ಅವರು ನನಗೂ ಪಾಠ ಮಾಡಿದ್ದಾರೆ. ಒಮ್ಮೆ ಷೇಕ್ಸ್‌ಪಿಯರ್‌ನ ಸಾನೆಟ್ The Expense of Spirit in the waste of Shame, is lust in action…. ಎನ್ನುವ ಸಾನೆಟನ್ನು ಅದ್ಭುತವಾಗಿ ಪಾಠ ಮಾಡಿದ್ದರು. ಅನಂತಮೂರ್ತಿಯವರ ಸಂಪಾದಕತ್ವದ ‘ರುಜುವಾತು’ ಪತ್ರಿಕೆಯ ಕೆಲಸವನ್ನು ಪಟ್ಟಾಭಿ ಇಷ್ಟಪಟ್ಟು ಮಾಡುತ್ತಿದ್ದರು. ಅವರ ಜೊತೆ ಮೀನಾ ಮೈಸೂರು ಮತ್ತು ಸರ್ವಮಂಗಳ ಇರುತ್ತಿದ್ದರು. ಪಟ್ಟಾಭಿಯವರಿಗೆ ಎಂ.ಎ.ಯಲ್ಲಿ ಪ್ರಥಮ ಸ್ಥಾನ ಬರಬೇಕಾಗಿತ್ತು. ಆದರೆ ಜಾತಿ ರಾಜಕಾರಣದಿಂದಾಗಿ ಅದು ಕೈ ತಪ್ಪಿ ಹೋಯಿತು. ಎಂ.ಜಿ.ಎಂ. ಕಾಲೇಜಿನವರು ಅವರನ್ನು ತಾವಾಗಿಯೇ ಉಪನ್ಯಾಸಕ ಹುದ್ದೆಗೆ ಆಹ್ವಾನಿಸಿದ್ದರು. ಆದರೆ ಪಟ್ಟಾಭಿ ಮೈಸೂರಿನಲ್ಲೇ ಉಳಿದರು.

ನಂತರ ಪಟ್ಟಾಭಿ ತಮ್ಮ ಉಪನ್ಯಾಸಕ ವೃತ್ತಿಯನ್ನು ಶುರು ಮಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಸೇರಿದರು. ಈ ನಡುವೆ ಅವರು ಹಲವು ಹೋರಾಟಗಳಲ್ಲಿ ಭಾಗವಹಿಸಿ ಒಳ್ಳೆಯ ಹೆಸರು ಗಳಿಸಿದ್ದರು. ಅವರದು ನ್ಯಾಯಕ್ಕಾಗಿ ನಡೆಸಿದ ರಾಜಿರಹಿತ ಹೋರಾಟ. ಅವರು ಹೆಸರಿಗಾಗಿ, ದುಡ್ಡಿಗಾಗಿ ಆಸೆ ಪಟ್ಟವರಲ್ಲ. ನನ್ನ ನೆಚ್ಚಿನ ಗೆಳೆಯನ ಈ ಸ್ವಭಾವದ ಬಗ್ಗೆ ನನಗೆ ಹೆಮ್ಮೆ ಇದೆ.

ಪಟ್ಟಾಭಿಯವರ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳು ತುಂಬಾ ಚೆನ್ನಾಗಿತ್ತು. ಅವರು ಇತ್ತೀಚೆಗೆ ವಾಟ್ಸ್ಆ್ಯಪ್ ಕವನಗಳನ್ನು ಬರೆಯುತ್ತಾ ಇದ್ದರು. ಅವು ತುಂಬಾ ಅರ್ಥಪೂರ್ಣವಾಗಿರುತ್ತಿದ್ದವು. ಪಟ್ಟಾಭಿಯವರ ಮಾತೃಭಾಷೆ ಕುಂದಾಪ್ರ ಕನ್ನಡ. ಆ ಭಾಷಾ ಪ್ರಭೇದದಲ್ಲೂ ಅವರು ಒಳ್ಳೆಯ ಕವನಗಳನ್ನು ರಚಿಸಿದ್ದಾರೆ. ಪಟ್ಟಾಭಿ ಅದ್ಭುತ ಭಾಷಣಕಾರರು. ಸಾವಿರಾರು ಜನ ಸೇರಿದ್ದ ಸಭೆಗಳಲ್ಲಿ ಅವರು ನಿರ್ಭೀತಿಯಿಂದ ನಿರರ್ಗಳವಾಗಿ ಭಾಷಣ ಮಾಡಿದ್ದನ್ನು ನಾನು ನೋಡಿದ್ದೇನೆ. ಇಂಗ್ಲಿಷ್ ಭಾಷೆಯ ಸೆಮಿನಾರ್‌ಗಳಲ್ಲೂ ಅವರು ಮಿಂಚಿದ್ದನ್ನು ನಾನು ಕಂಡಿದ್ದೇನೆ.

ಅವರು ಸಾಹಿತ್ಯ ಕೃತಿಗಳನ್ನು ವಿಶ್ಲೇಷಣೆ ಮಾಡುವ ವಿಧಾನದಲ್ಲಿ ಅವರದೇ ಛಾಫು ಮೂಡಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಇನ್ನೂ ಬಹಳಷ್ಟು ಕೆಲಸ ಮಾಡಲಿಕ್ಕಿತ್ತು. ನೆನಪಿನಿಂದ ಹೇಳುವುದಾದರೆ… ಪಟ್ಟಾಭಿ ಡಿಗ್ರಿಯಲ್ಲಿ ಇದ್ದಾಗ ಪ್ರಿನ್ಸಿಪಾಲ್ ಪ್ರೊ. ಕು.ಶಿ.ಹರಿದಾಸ ಭಟ್ ನಿವೃತ್ತರಾದರು. ಅವರ ಬಗ್ಗೆ ಆ ಸಂದರ್ಭದಲ್ಲಿ ಪಟ್ಟಾಭಿ ಒಂದು ಒಳ್ಳೆಯ ಲೇಖನ ಬರೆದಿದ್ದರು.

ಮೈಸೂರಿನಲ್ಲಿ ಇದ್ದಾಗ ಯಲ್ಲಿ “what shall we ever do!?” ಎನ್ನುವ ಕರ್ಕೆಗಾಡ್ ಮೇಲೆ ಪ್ರಬುದ್ಧ ಲೇಖನ ಬರೆದಿದ್ದರು. ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಪಟ್ಟು ‘ರಾಮಲಲ್ಲಾ’ ಮೇಲೆ ತುಂಬಾ ಒಳನೋಟದ ಲೇಖನ ಬರೆದಿದ್ದರು. ‘ರುಜುವಾತು’ನಲ್ಲಿ ಬೇಂದ್ರೆ ಅವರ ಕವನ ‘ಹುಬ್ಬಳಿಯಾಂವ’ ಮೇಲೆ ‘ಪದ್ಯ ಬಗೆವ ಬಗೆ’ ಶೀರ್ಷಿಕೆಯಡಿ ರಚನಾತ್ಮಕ ವಿಶ್ಲೇಷಣೆ ಮಾಡಿದ್ದರು.

ಇಂಗ್ಲಿಷ್ ಲೇಖಕ ಡಿ.ಎಚ್. ಲಾರೆನ್ಸನ ಕಾದಂಬರಿಗಳ ಬಗ್ಗೆ ಒಳನೋಟಗಳುಳ್ಳ ಅದ್ಭುತ ಭಾಷಣ ಮಾಡಿದ್ದನ್ನು ನಾನು ಕೇಳಿದ್ದೇನೆ. ಐಚ್ಛಿಕ ಇಂಗ್ಲಿಷ್‌ನ ವಿದ್ಯಾರ್ಥಿಗಳು ಇಂಗ್ಲಿಷ್ ಸಾಹಿತ್ಯದ ಮೇಲಿನ ಅವರ ಪಾಠಗಳನ್ನು ಹೊಗಳಿದ್ದನ್ನೂ ಕೇಳಿದ್ದೇನೆ.

  • ಡಾ. ಎಸ್. ಹಯವದನ ಉಪಾಧ್ಯಾಯ, ಪ್ರಾಧ್ಯಾಪಕರು, ಕುಂದಾಪುರ.

(ಈ ಲೇಖನ ಮೊದಲು ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

ಇದನ್ನೂ ಓದಿ: ನುಡಿನಮನ: ಹೋರಾಟದ ಸಂಗಾತಿ ಪಟ್ಟಾಭಿಯವರ ನೆನಪುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...